For Quick Alerts
  ALLOW NOTIFICATIONS  
  For Daily Alerts

  ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆಯ ಸಂಪೂರ್ಣ ಮಾಹಿತಿ ಇಲ್ಲಿದೆ!

  |

  ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆ ಸುದ್ದಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಪ್ರತಿ ನಿತ್ಯ ಇವರ ಮದುವೆ ಕುರಿತಾಗಿ ಒಂದಲ್ಲಾ ಒಂದು ವಿಚಾರಗಳು ಹೊರ ಬರುತ್ತಲಿವೆ. ಡಿಸೆಂಬರ್‌ನಲ್ಲಿ ಈ ಜೋಡಿ ಮದುವೆ ಆಗಲಿದೆ ಎನ್ನುವುದು ಬಹುತೇಕ ಖಚಿತ ಆಗಿದೆ.

  ಕತ್ರಿನಾ- ವಿಕ್ಕಿ ಮದುವೆಯಲ್ಲಿ ಮೊಬೈಲ್ ನಿಷೇಧವಾಗಿದೆ, ಅವರ ಮದುವೆಗೆ ಬರುವ ಗೆಸ್ಟ್ ಲಿಸ್ಟ್ ಫೈನಲ್ ಆಗಿದೆ, ಮೆಹಂದಿ, ಹಳದಿ ಕಾರ್ಯಕ್ರಮದ ಬಗ್ಗೆಯೂ ಸಾಕಷ್ಟು ಸುದ್ದಿಗಳು ಹರಿದಾಡುತ್ತಲಿವೆ.

  ಮದುವೆಗಾಗಿ ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಕತ್ರಿನಾ ಮತ್ತು ವಿಕ್ಕಿ ಕೌಶಲ್. ಈ ಜೋಡಿಯ ಮದುವೆ ಸಂಭ್ರಮ ಹೇಗೆ ಇರಲಿದೆ. ಸದ್ಯ ಏನೆಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಎನ್ನುವ ವಿವರ ಇಲ್ಲಿದೆ ಮುಂದೆ ಓದಿ...

  ಡಿಸೆಂಬರ್‌ನಲ್ಲಿ ಮದುವೆ ಆಗಲಿರುವ ಕತ್ರಿನಾ ಮತ್ತು ವಿಕ್ಕಿ!

  ಡಿಸೆಂಬರ್‌ನಲ್ಲಿ ಮದುವೆ ಆಗಲಿರುವ ಕತ್ರಿನಾ ಮತ್ತು ವಿಕ್ಕಿ!

  ಸದ್ಯ ಬಾಲಿವುಡ್‌ನಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡುತ್ತಿರುವುದು ಕತ್ರಿನಾ ಮತ್ತು ವಿಕ್ಕಿ ಕೌಶಲ್ ಮದುವೆ ಸುದ್ದಿ. ಗಾಸಿಪ್ ರೂಪದಲ್ಲಿಯೇ ಈ ಮದುವೆ ಸುದ್ದಿ ಹರಿದಾಡುತ್ತಲಿದ್ದರು, ಹೆಚ್ಚೆಚ್ಚು ಮಾಹಿತಿ ಹೊರ ಬೀಳುತ್ತಲಿದೆ. ಡಿಸೆಂಬರ್ ಮೊದಲ ವಾರದಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನಡೆಯಲಿದೆ ಎನ್ನುತ್ತಿವೆ ಬಾಲಿವುಡ್ ಮೂಲಗಳು. ಡಿಸೆಂಬರ್ 7 ಮತ್ತು 9ರಂದು ಈ ಜೋಡಿಯ ಮದುವೆ ನೆರವೇರಲಿದೆ.

  ರಾಜಸ್ಥಾನದ ಅರಮನೆಯಂತಹ ಹೋಟೆಲ್‌ನಲ್ಲಿ ಮದುವೆ!

  ರಾಜಸ್ಥಾನದ ಅರಮನೆಯಂತಹ ಹೋಟೆಲ್‌ನಲ್ಲಿ ಮದುವೆ!

  ಬಾಲಿವುಡ್‌ನ ಈ ತಾರ ಜೋಡಿಯ ಮದುವೆ ರಾಜಸ್ಥಾನದಲ್ಲಿ ನೆರವೇರಲಿದೆ ಎನ್ನಲಾಗಿದೆ. ರಾಜಸ್ಥಾನದಲ್ಲಿ ಅರಮನೆಯಂತಿರುವ ರಾಜಸ್ಥಾನದ 'ಸಿಕ್ಸ್ ಸೆನ್ಸ್ ಪೋರ್ಟ್ ಬರ್ವಾರ್' ಹೋಟೆಲ್‌ನಲ್ಲಿ ಮದುವೆ ಆಯೋಜನೆಗೆ ಸಕಲ ಸಿದ್ದತೆ ನಡೆದಿದೆಯಂತೆ. ಅಷ್ಟೇ ಅಲ್ಲ ಮದುವೆಗಾಗಿ ಬರುವ ಅತಿಥಿಗಳಿಗಾಗಿ ರಾಜಸ್ಥಾನದಲ್ಲಿ 45 ಹೋಟೆಲ್‌ಗಳನ್ನು ಬುಕ್ ಮಾಡಲಾಗಿದೆಯಂತೆ.

  ಸುಪ್ರಸಿದ್ಧ ಡಿಸೈನರ್‌ಗಳಿಂದ ಮದುವೆಯ ಉಡುಪು ವಿನ್ಯಾಸ!

  ಸುಪ್ರಸಿದ್ಧ ಡಿಸೈನರ್‌ಗಳಿಂದ ಮದುವೆಯ ಉಡುಪು ವಿನ್ಯಾಸ!

  ಸಿನಿಮಾ ತಾರೆಯರ ಮದುವೆ ಅಂದರೆ ಅದರಲ್ಲೂ ಬಾಲಿವುಡ್ ತಾರ ಜೋಡಿಯ ಮದುವೆ ಅಂದರೆ ಅವರ ಕಾಸ್ಟ್ಯೂಂ ಬಗ್ಗೆ ಎಲ್ಲರಿಗೂ ಹೆಚ್ಚಿನ ಕುತೂಹಲ ಇದ್ದೇ ಇರುತ್ತದೆ. ಕತ್ರಿನಾ ಮತ್ತು ವಿಕ್ಕಿ ಕೌಶಲ್ ಕೂಡ ಪ್ರಸಿದ್ಧ ವಸ್ತ್ರ ವಿನ್ಯಾಸಕರಿಂದ ಮದುವೆ ಉಡುಪುಗಳನ್ನು ತಯಾರಿ ಮಾಡಿಸುತ್ತಿದ್ದಾರೆ. ಸಂಗೀತ ಕಾರ್ಯಕ್ರಮಕ್ಕೆ ಕತ್ರಿನಾ 'ಮನೀಶ್ ಮಲ್ಹೋತ್ರ' ವಿನ್ಯಾಸದ ಲೆಹೆಂಗ ತೊಡಲಿದ್ದಾರೆ. 'ಅಬು ಜೈನ್ ಮತ್ತು ಸಂದೀಪ್ ಕೊಸ್ಲ' ಅವರು ಕತ್ರಿನಾ ಮೆಹೆಂದಿಗೆ ಕಾಸ್ಟ್ಯೂಂ ಡಿಸೈನ್ ಮಾಡಲಿದ್ದಾರೆ. ಇನ್ನು ಮದುವೆಗೆ 'ಸಬ್ಯ ಸಾಚಿ' ವಿನ್ಯಾಸ ಮಾಡಲಿರುವ ಲೆಹೆಂಗ ತೊಡಲಿದ್ದಾರೆ ಕತ್ರಿನಾ. ಹಾಗೆ ವಿಕ್ಕಿ ಕೌಶಲ್ ಮದುವೆಗೆ 'ಸಬ್ಯ ಸಾಚಿ' ವಸ್ತ್ರ ವಿನ್ಯಾಸ ಮಾಡಲಿದ್ದಾರೆ. 'ಕುನಾಲ್ ರಾವಲ್' ಮತ್ತು 'ರಾಘವೇಂದ್ರ ರಾಥೋರ್' ಕೂಡ ವಿಕ್ಕಿ ಕೌಶಲ್‌ಗೆ ವಸ್ತ್ರ ವಿನ್ಯಾಸ ಮಾಡಲಿದ್ದಾರೆ.

  ಮದುವೆ ಬಳಿಕ ಮುಂಬೈನಲ್ಲಿ ಆರತಕ್ಷತೆ!

  ಮದುವೆ ಬಳಿಕ ಮುಂಬೈನಲ್ಲಿ ಆರತಕ್ಷತೆ!

  ರಾಜಸ್ಥಾನದಲ್ಲಿ ಈ ಜೋಡಿ ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆ ಆಗಲಿದೆ. ರಾಜಸ್ಥಾನಕ್ಕೆ ನಿಯಮಿತ ಜನರಿಗೆ ಆಹ್ವಾನ ನೀಡಲಾಗಿದೆಯಂತೆ. ಹಾಗಾಗಿ ಮದುವೆಯ ಬಳಿಕ ಈ ಜೋಡಿ ಮುಂಬೈನಲ್ಲಿ ಅದ್ದೂರಿ ಆರತಕ್ಷತೆ ಮಾಡಿಕೊಳ್ಳಲಿದೆ. ಬಾಲಿವುಡ್‌ನ ಸಿನಿಮಾ ಮಂದಿಗಾಗಿ ಮುಂಬೈನಲ್ಲಿ ಆರತಕ್ಷತೆ ಹಮ್ಮಿಕೊಳ್ಳಲಾಗುವುದು.

  ಕತ್ರಿನಾ-ವಿಕ್ಕಿ ಮದುವೆಗೆ ಯಾರೆಲ್ಲಾ ಬರ್ತಾರೆ?

  ಕತ್ರಿನಾ-ವಿಕ್ಕಿ ಮದುವೆಗೆ ಯಾರೆಲ್ಲಾ ಬರ್ತಾರೆ?

  ಇನ್ನು ಈ ತಾರ ಜೋಡಿ ಮದುವೆಗೆ ಕೆಲವೇ ಕೆಲವು ಮುಖ್ಯ ಅತಿಥಿಗಳು ಭಾಗಿ ಆಗಲಿದ್ದಾರೆ. ಮದುವೆಯಲ್ಲಿ ಭಾಗಿ ಆಗಲಿರುವ ಅತಿಥಿಗಳ ಪಟ್ಟಿ ಹೊರ ಬಿದ್ದಿದೆ. ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ಫರಾ ಖಾನ್, ಕರಣ್ ಜೋಹರ್, ಶಶಾಂಕ್ ಖೈತಾನ್, ಝೋಯಾ ಅಖ್ತರ್, ಸಲ್ಮಾನ್ ಖಾನ್, ಶಾರುಖ್ ಖಾನ್ ಅವರು ಕತ್ರಿನಾ ವಿಕ್ಕಿ ಕೌಶಲ್ ಮದುವೆಯಲ್ಲಿ ಭಾಗಿ ಆಗುವುದು ಪಕ್ಕ ಆಗಿದೆ ಎನ್ನಲಾಗಿದೆ.

  ಸದ್ಯಕ್ಕೆ ಕತ್ರಿನಾ ಮತ್ತು ವಿಕ್ಕಿ ಮದುವೆ ವಿಚಾರವಾಗಿ ಇಷ್ಟೆಲ್ಲಾ ಸುದ್ದಿಗಳು ಹರಿದಾಡುತ್ತಲಿವೆ. ಆದರೆ ಮದುವೆ ಬಗ್ಗೆ ಇಬ್ಬರೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹಾಗಂತ ಇದೆಲ್ಲಾ ಸುಳ್ಳು ಅಂತಲೂ ಹೇಳುತ್ತಲಿಲ್ಲ. ಹಾಗಾಗಿ ಡಿಸೆಂಬರ್ 7ರ ವರೆಗೂ ಕಾಯಲೇ ಬೇಕಾಗಿದೆ.

  English summary
  Know All About Katrina Kaif and Vicky Kaushal wedding Ensembles, here is full details,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X