»   » ರಾತ್ರಿ ಕಳೆಯಲು ನಟಿ ಕೊಯಿನಾ ಮಿತ್ರಾಗೆ ಕರೆ, ಅಪರಿಚಿತನ ವಿರುದ್ಧ ದೂರು

ರಾತ್ರಿ ಕಳೆಯಲು ನಟಿ ಕೊಯಿನಾ ಮಿತ್ರಾಗೆ ಕರೆ, ಅಪರಿಚಿತನ ವಿರುದ್ಧ ದೂರು

Posted By:
Subscribe to Filmibeat Kannada

ಬಾಲಿವುಡ್ ನಟಿ-ಮಾಡೆಲ್ ಕೊಯಿನಾ ಮಿತ್ರಾ ರವರು ಲೈಂಗಿಕ ಕಿರುಕುಳ ನೀಡಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬನ ವಿರುದ್ಧ ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ.

ನಟಿ ಕೊಯಿನಾ ಮಿತ್ರಾ ರವರಿಗೆ ರಾತ್ರಿ ತನ್ನೊಂದಿಗೆ ಕಳೆದರೆ ಹಣ ಕೊಡುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಕರೆಮಾಡಿದ್ದನಂತೆ. ಅಲ್ಲದೇ ನಟಿ ಕಳೆದ ಒಂದು ವಾರದಿಂದ 40-50 ಕ್ಕೂ ಅಧಿಕ ಅಪರಿಚಿತ ನಂಬರ್‌ಗಳಿಂದ ಕರೆ ಬರುತ್ತಿದೆ. ದಿನಾಂಕ 29 ರ ಸಂಜೆ ಒಂದು ಅಪರಿಚಿತ ನಂಬರ್‌ನ ಕರೆ ಸ್ವೀಕರಿಸಿದಾಗ, ಕರೆ ಮಾಡಿದಾತ ರಾತ್ರಿ ತನ್ನೊಂದಿಗೆ ಕಳೆದರೆ ಹಣ ನೀಡುತ್ತೇನೆ ಎಂದು ಹೇಳಿದಲ್ಲದೇ ನಟಿಯನ್ನು ಕೆಟ್ಟ ಪದಗಳಿಂದ ಬೈದಿದ್ದಾನಂತೆ. ಈ ಹಿನ್ನೆಲೆಯಲ್ಲಿ ನಟಿ ಓಶಿವಾರಾ ಪೊಲೀಸ್ ಠಾಣೆಗೆ ತೆರಳಿ ದೂರನ್ನು ದಾಖಲಿಸಿದ್ದಾರೆ.

Koena Mitra gets lewd phone calls, files sexual harassment case

ಕೊಯಿನಾ ಮಿತ್ರಾರ ದೂರನ್ನು ಸ್ವೀಕರಿಸಿರುವ ಪೊಲೀಸರು ಕರೆಮಾಡಿದಾತನ ವಿರುದ್ಧ ಐಪಿಸಿ ಸೆಕ್ಷನ್ 509 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ರ 'ರೋಡ್' ಮಾಡೆಲ್ ಮತ್ತು ನಟಿ ಕೊಯಿನಾ ಮಿತ್ರಾ ರವರ ಮೊದಲ ಸಿನಿಮಾ. ನಂತರ ಅವರು 'ಮುಸಾಫಿರ್', 'ಅಯಾನ್', 'ಇಸಾನ್' ಮತ್ತು ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

English summary
Afters gets lewd phone calls, Bollywood actor-model Koena Mitra has registered a case of sexual harassment against a stranger in Mumbai

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada