ಕಾಫಿ ವಿತ್ ಕರಣ್ 8: ಮದುವೆ ಬಳಿಕ ಕರಣ್ ಜೋಹರ್ ಶೋನಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ
ಬಾಲಿವುಡ್‌ನ ಕ್ಯೂಟ್ ಕಪಲ್ ಅಂದರೆ ಅದು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ. ಪತ್ನಿಯ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಲು ನಟ ರಣವೀರ್ ಸಿಂಗ್ ಯಾವ ಅವಕಾಶವನ್ನು ಬಿಟ್ಟುಕೊಡುವುದಿಲ್ಲ. ಎಲ್ಲಿ ಕಂಡರೂ ತಮ್ಮ ನಡುವಿನ ಉತ್ತಮ ಬಾಂಧವ್ಯವನ್ನು ಈ ಜೋಡಿ ಹಂಚಿಕೊಳ್ಳುತ್ತಾರೆ. ಈ ಜೋಡಿ ಈಗ ಶೋ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ಎಸ್... ಟಿವಿ ಶೋಗಳಲ್ಲಿ ಹೆಚ್ಚು ಚರ್ಚೆ, ವಿವಾದ ಮತ್ತು ಕೆಲವರ ನಡುವಿನ ಮನಸ್ತಾಪಕ್ಕೆ ಕಾರಣವಾಗಿರುವ ಕಾಫಿ ವಿತ್ ಕರಣ್ ಶೋನಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಸರ್ಕಸ್ ಸಿನಿಮಾದ ಕರೆಂಟ್ ಲಗಾ ರೇ ಹಾಡಿನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ರಣವೀರ್ ಮತ್ತು ದೀಪಿಕಾ ಇದೀಗ ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ.

ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರ ಬಹು ನಿರೀಕ್ಷಿತ ಕಾರ್ಯಕ್ರಮವಾದ ಕಾಫಿ ವಿತ್ ಕರಣ್ ಸೀಸನ್ 8 ರ ಮೊದಲ ಸಂಚಿಕೆಯಲ್ಲಿ 'ದೀಪ್‌ವೀರ್' ಮೊದಲ ಬಾರಿಗೆ ಭಾಗಿಯಾಗಲಿದ್ದಾರೆ. ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಹಲವರು ಇವರ ಶೋಗಾಗಿ ಕಾಯುತ್ತಿದ್ದಾರೆ.
ಕಾಫಿ ವಿತ್ ಕರಣ್ 8 ರ ಮೊದಲ ಸಂಚಿಕೆ
ಬಾಲಿವುಡ್‌ನ ಅತ್ಯಂತ ಸುಂದರ ಜೋಡಿ ಮದುವೆಯ ನಂತರ ಕಾಫಿ ವಿತ್ ಕರಣ್ 8 ರ ಮೊದಲ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರು ಈ ಶೋಗೆ ಬರುತ್ತಾರೆ ಎಂಬ ಸುದ್ದಿ ಈಗಾಗಲೇ ಅವರ ಅಭಿಮಾನಿಗಳಲ್ಲಿ ಭಾರೀ ಖುಷಿಗೆ ಕಾರಣವಾಗಿದೆ. ಇಬ್ಬರು ಒಟ್ಟಿಗೆ ಮಾತುಕತೆಯಾಡುತ್ತಾ ಇರುವುದನ್ನು ನೋಡಲು ಪ್ರೀತಿಯಿಂದ ಕಾಯುತ್ತಿದ್ದಾರೆ.
ಕಾಫಿ ವಿತ್ ಕರಣ್ 8 ರ ಮೊದಲ ಪ್ರೋಮೋದಲ್ಲಿ ಇಬ್ಬರು ಬರುವುದನ್ನು ಉಲ್ಲೇಖಿಸಲಾಗಿದೆ. ಈ ಬಾರಿ ಕಾರ್ಯಕ್ರಮದಲ್ಲಿ 'ಹೊಸದಾಗಿ ಮದುವೆಯಾದ ಜೋಡಿಗಳನ್ನು' ಆಹ್ವಾನಿಸಲಾಗುತ್ತದೆ ಎಂಬುದನ್ನು ಕರಣ್ ಜೋಹಾರ್ ತಿಳಿಸಿದ್ದಾರೆ. ಕಾಫಿ ವಿತ್ ಕರಣ್ 8 ಅಕ್ಟೋಬರ್ 26 ರಂದು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಬಾರಿ ಮದುವೆಯಾದ ಜೋಡಿಗಳನ್ನೇ ಆಹ್ವಾನಿಸಲಿದ್ದಾರೆ. ಹೀಗಾಗಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಬಗ್ಗೆ ಕರಣ್ ಮಾತನಾಡುತ್ತಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ವರದಿಯ ಪ್ರಕಾರ, ಸುಹಾನಾ ಖಾನ್, ಖುಷಿ ಕಪೂರ್, ಅಗಸ್ತ್ಯ ನಂದಾ ಮತ್ತು ದಿ ಆರ್ಚೀಸ್ ಗ್ಯಾಂಗ್, ಸನ್ನಿ ಡಿಯೋಲ್, ಬಾಬಿ ಡಿಯೋಲ್ ಮತ್ತು ವರುಣ್ ಧವನ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ
ವರದಿಯ ಪ್ರಕಾರ, ಸಂಜಯ್ ಲೀಲಾ ಬನ್ಸಾಲಿಯವರ ರಾಮ್ ಲೀಲಾ ಸೆಟ್‌ನಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಇನ್ನೂ, ಕಾಫಿ ವಿತ್ ಕರಣ್ ಶೂಟಿಂಗ್ ಸೆಟ್‌ಗಳಲ್ಲಿ ಇದ್ದವರು ಇಬ್ಬರು ಭಾಗಿಯಾದ ಕಾರ್ಯಕ್ರಮದ ಬಗ್ಗೆ ಉತ್ತಮ ಮಾತನಾಡಿದ್ದಾರೆ.
ಸಿಂಗಮ್ ಎಗೇನ್
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ರೋಹಿತ್ ಶೆಟ್ಟಿ ಅವರ ಸಿಂಗಮ್ ಎಗೇನ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಶಕ್ತಿ ಶೆಟ್ಟಿ ಎಂಬ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು. ಈ ಲುಕ್ ಅನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್ ಖಾನ್, ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾ 2024 ರ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಲಿದೆ.


Click it and Unblock the Notifications











