2015ರಲ್ಲೇ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರಂತೆ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ!

ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಬಾಲಿವುಡ್‌ನ ಕ್ಯೂಟ್ ಕಪಲ್. ಈ ಬಾರಿಯ ಕಾಫಿ ವಿತ್ ಕಪಲ್ ಕಾರ್ಯಕ್ರಮದ ಸೀಸನ್ 8ರಲ್ಲಿ ಬರಲಿದ್ದು, ಇದರ ಪ್ರೋಮೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ಪ್ರೋಮೋದಲ್ಲಿ ಜೋಡಿ ಹಲವು ವಿಷಯಗಳನ್ನು ಬಹಿರಂಗ ಮಾಡಿದ್ದಾರೆ.

ಕಾಫಿ ವಿತ್ ಕರಣ್‌ನ 8 ನೇ ಸೀಸನ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಮುಂಬರುವ ಸೀಸನ್‌ನ ಭಾರಿ ಕುತೂಹಲ ಮೂಡಿಸುತ್ತಿದೆ. ಸೋರಿಕೆಯಾಗಿರುವ ಫ್ರೋಮೊಗಳಲ್ಲಿ ಬಾಲಿವುಡ್‌ನ ಡೈನಾಮಿಕ್ ಜೋಡಿಯಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸಕತ್ ಖುಷಿಯಾಗಿ ತಮ್ಮ ಜೀವನವನ್ನು ತೆರೆದಿಟ್ಟಿದ್ದಾರೆ. ಹಲವು ಕುತೂಹಲಕಾರಿ ವಿವರಗಳನ್ನು ಹಂಚಿಕೊಂಡಿದ್ದಾರೆ.

Koffee With Karan 8: Ranveer Singh, Deepika Padukone got secretly engaged since 2015

ಮದುವೆಗೂ ಮೂರು ವರ್ಷ ಮೊದಲೇ ನಿಶ್ಚಿತಾರ್ಥ

ಈ ಕಾಫಿ ವಿತ್ ಕರಣ್‌ನ 8 ನೇ ಸೀಸನ್ ಪ್ರೋಮೋದಲ್ಲಿ ರಣವೀರ್ ಸಿಂಗ್ ಅವರು 2018 ರಲ್ಲಿ ತಮ್ಮ ಅದ್ಧೂರಿ ವಿವಾಹಕ್ಕೂ ಮೂರು ವರ್ಷಗಳ ಮೊದಲು 2015 ರಲ್ಲಿಯೇ ದೀಪಿಕಾ ಪಡುಕೋಣೆ ಅವರೊಂದಿಗೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.

"2015 ರಲ್ಲಿ, ನಾನು ದೀಪಿಕಾ ಪಡುಕೋಣೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡೆ. ಬೇರೆ ಯಾರೂ ಅವರನ್ನು ಕಸಿದುಕೊಳ್ಳಬಾರದು ಎಂದು ಖಚಿತಪಡಿಸಿಕೊಳ್ಳಲು, ನಾನು ನನ್ನ ಮೊದಲೆ ಬುಕ್ ಮಾಡಿದ್ದೇ" ಎಂದು ಹೇಳಿದ್ದಾರೆ. ಇದಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಎಂದು ದೀಪಿಕಾ ಚುರುಕಾಗಿ ಪ್ರತಿಕ್ರಿಯಿಸಿದ್ದಾರೆ.

Koffee With Karan 8: Ranveer Singh, Deepika Padukone got secretly engaged since 2015

ಇನ್ನು, ಕರಣ್ ಜೋಹಾರ್ ಅವರು ತಮ್ಮ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ರಣವೀರ್ ಸಿಂಗ್ ಅವರ ರಾಕಿ ರಾಂಧವಾ ಪಾತ್ರದ ಬಗ್ಗೆ ದೀಪಿಕಾ ಅವರ ಅಭಿಪ್ರಾಯವನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ದೀಪಿಕಾ, "ನಾನು ರಾಕಿ ರಾಂಧವಾ ಅವರನ್ನು ಮದುವೆಯಾಗಿದ್ದೇನೆ" ಎಂದು ನಸುನಕ್ಕಿದ್ದಾರೆ.

ಇದೇ ವೇಳೆ ನಟಿ ದೀಪಿಕಾ ಪಡುಕೋಣೆ ತನ್ನ ಮುಂಬರುವ ಚಿತ್ರ ಫೈಟರ್ ಅನ್ನು ಪ್ರಚಾರ ಮಾಡಲು ಈ ಅವಕಾಶವನ್ನು ಬಳಸಿಕೊಂಡಿದ್ದಾರೆ. ಹೃತಿಕ್ ರೋಷನ್ ಅವರೊಂದಿಗೆ ನಟಿ ದೀಪಿಕಾ ಕಾಣಿಸಿಕೊಂಡಿದ್ದು, ಜನರು ಇನ್ನೂ ನೋಡದಿರುವ ಹೃತಿಕ್ ಅವರ ಅತ್ಯುತ್ತಮ ಆನ್-ಸ್ಕ್ರೀನ್ ಕೆಮಿಸ್ಟ್ರಿ ನೋಡಬಹುದು ಎಂದು ಘೋಷಿಸಿದ್ದಾರೆ. 'ಕಾಫಿ ವಿತ್ ಕರಣ್' ಸೀಸನ್ 8 ಅಕ್ಟೋಬರ್ 26 ರಂದು ಪ್ರಸಾರವಾಗಲಿದೆ.

ವಿಶ್ವಾಸಾರ್ಹ ಮೂಲದ ಪ್ರಕಾರ, ಈ ಸೀಸನ್‌ನಲ್ಲಿ ನಟಿ ಕಾಜೋಲ್ ಮತ್ತು ರಾಣಿ ಮುಖರ್ಜಿ ಒಟ್ಟಿಗೆ ಕಾಣಿಸಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ದೂರದ ಸೋದರಸಂಬಂಧಿಗಳಾದ ಇಬ್ಬರು ಶಾರುಖ್ ಖಾನ್ ಜೊತೆಗೆ 2007 ರಲ್ಲಿ ಕೊನೆಯ ಬಾರಿಗೆ ಕಾಫಿ ವಿತ್ ಕರಣ್ ಶೋನ ಸೀಸನ್ 2 ರಲ್ಲಿ ಕಾಣಿಸಿಕೊಂಡಿದ್ದರು.

More from Filmibeat

English summary
KWK8: Ranveer Singh, Deepika Padukone got secretly engaged since 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X