"ಒಬ್ಬ ತನ್ನ ಮರ್ಮಾಂಗ ತೋರಿಸಿದ್ದ, ತಪ್ಪು ನನ್ನದೇ ಎಂದರು"; ಸೆಲಿನಾ ಜೇಟ್ಲಿ ಪೋಸ್ಟ್

ಕೋಲ್ಕತ್ತಾದ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಸೆಲೆಬ್ರೆಟಿಗಳು ಈ ಬಗ್ಗೆ ಮೌನಮುರಿದು ಘಟನೆಯನ್ನು ಖಂಡಿಸುತ್ತಿದ್ದಾರೆ. ನಟ ಧ್ರುವ ಸರ್ಜಾ ಮಾತನಾಡಿ "ಅತ್ಯಾಚಾರಿಗಳನ್ನು ನಡು ರಸ್ತೆಯಲ್ಲಿ ಸುಟ್ಟು ಹಾಕಿದರು ಕೂಡ ಸಮಾಧಾನ ಆಗುವುದಿಲ್ಲ" ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಬಾಲಿವುಡ್ ತಾರೆಯರು ಈ ಬಗ್ಗೆ ದನಿ ಎತ್ತಿದ್ದಾರೆ. ಜೊತೆಗೆ ಕೆಲವರು ತಮಗಾದ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಖ್ಯಾತ ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು "ಏನೇ ಆದರೂ ಸಂತ್ರಸ್ತರದ್ದೇ ತಪ್ಪಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತಮ್ಮದೇ ಕಹಿ ಅನುಭವವನ್ನು ಪ್ರಸ್ತಾಪಿಸಿ ಬೇಸರ ಹೊರ ಹಾಕಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

Kolkata rape-murder case Actress Celina Jaitly recalls her personal experiences of victim blaming

ತಾವು 6ನೇ ತರಗತಿಯಲ್ಲಿದ್ದಾಗ ಕ್ಲಿಕ್ಕಿಸಿದ ಫೋಟೊ ಹಂಚಿಕೊಂಡಿರುವ ಸೆಲಿನಾ ಜೇಟ್ಲಿ ಆ ಸಮಯದಿಂದಲೇ ಹುಡುಗರು ನನಗೆ ಹಲವು ಬಾರಿ ಕಿರುಕುಳ ಕೊಟ್ಟರು ಎಂದಿದ್ದಾರೆ. ಈ ವಿಚಾರವನ್ನು ಶಿಕ್ಷಕರಿಗೆ ಹೇಳಿದರೆ ನನ್ನದೇ ತಪ್ಪು ಎನ್ನುತ್ತಿದ್ದರು ಎಂದು ಬರೆದುಕೊಂಡಿದ್ದಾರೆ. ಕೋಲ್ಕತ್ತಾದ ವೈದ್ಯೆಯ ಘಟನೆ ಪ್ರಸ್ತಾಪಿಸುತ್ತಾ ನಾನು ಕೂಡ ಕಿರುಕುಳಕ್ಕೆ ಒಳಗಾಗಿದ್ದೆ. ಒಬ್ಬ ವ್ಯಕ್ತಿ ತನ್ನ ಮರ್ಮಾಂಗವನ್ನು ತೋರಿಸಿ ಅಸಹ್ಯವಾಗಿ ವರ್ತಿಸಿದ್ದ ಎಂದು ಆ ಘಟನೆ ಬಗ್ಗೆ ಸೆಲಿನಾ ಜೇಟ್ಲಿ ಹೇಳಿದ್ದಾರೆ.

ಸೆಲಿನಾ ಜೇಟ್ಲಿ ಪೋಸ್ಟ್

"ನಾನು ಆರನೇ ತರಗತಿಯಲ್ಲಿ ಇದ್ದಾಗಲೇ ಹುಡುಗರು ನನಗೆ ಕಿರುಕುಳ ಕೊಡುತ್ತಿದ್ದರು. ಶಿಕ್ಷಕರಿಗೆ ಹೇಳಿದರೆ ಅವ್ರು ನನ್ನದೇ ತಪ್ಪು ಎನ್ನುವಂತೆ ಮಾತನಾಡುತ್ತಿದ್ದರು. ಆಗ ನಮ್ಮ ಸ್ಕೂಲ್ ಪಕ್ಕದಲ್ಲೇ ಹುಡುಗರ ಯೂನಿವರ್ಸಿಟಿ ಇತ್ತು. ಅಲ್ಲಿನ ವಿದ್ಯಾರ್ಥಿಗಳು ನಾನು ಶಾಲೆಯಿಂದ ಮನೆಗೆ ವಾಪಸ್ ಆಗುವಾಗ ನನ್ನ ರಿಕ್ಷಾ ಹಿಂಬಾಲಿಸುತ್ತಿದ್ದರು. ನಾನು ಆರಂಭದಲ್ಲಿ ಅವರನ್ನು ಗಮನಿಸದ ರೀತಿ ವರ್ತಿಸುತ್ತಿದ್ದೆ"

"ನಿಧಾನವಾಗಿ ಕೆಲ ಹುಡುಗರು ನನ್ನ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರು. ರಸ್ತೆ ಮಧ್ಯೆಯೇ ನನ್ನ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದರು. ಯಾರು ನನ್ನ ರಕ್ಷಣೆಗೆ ಬರಲಿಲ್ಲ. ಶಿಕ್ಷಕರಿಗೆ ದೂರು ಹೇಳಿದರೆ ನನ್ನದೇ ತಪ್ಪು ಎನ್ನುವಂತೆ ವಾದಿಸುತ್ತಿದ್ದರು. "ನಾನು ಮಾಡ್ರನ್ ಹುಡುಗಿ, ಬಿಗಿಯಾದ ವೆಸ್ಟರ್ನ್ ಡ್ರೆಸ್ ತೊಡುತ್ತೇನೆ. ತೆಲೆ ಎಣ್ಣೆ ಹಚ್ಚಿ ಜಡೆ ಹಾಕುತ್ತಿಲ್ಲ. ಅದು ನನ್ನ ತಪ್ಪು. ನಾನು ಆ ರೀತಿ ಇರುವುದಕ್ಕೆ ಹುಡುಗರು ಹಿಂಬಾಲಿಸುತ್ತಾರೆ" ಎನ್ನುತ್ತಿದ್ದರು"

"ಒಂದು ದಿನ ಬೆಳಗ್ಗೆ ಸ್ಕೂಲ್ ರಿಕ್ಷಾಗಾಗಿ ಕಾಯುತ್ತಾ ನಿಂತಿದ್ದೆ. ಆಗ ಒಬ್ಬ ವ್ಯಕ್ತಿ ತನ್ನ ಮರ್ಮಾಂಗ ತೋರಿಸಿ ಅಸಹ್ಯವಾಗಿ ವರ್ತಿಸಿದ. ಆ ಘಟನೆ ನನಗೆ ಬಹಳವಾಗಿ ಕಾಡಿತ್ತು. ನನ್ನದೇ ತಪ್ಪು ಎನ್ನುತ್ತಿದ್ದ ಶಿಕ್ಷಕರ ಮಾತುಗಳು ನೋವುಂಟು ಮಾಡಿತ್ತು. 11ನೇ ತರಗತಿಯಲ್ಲಿ ಓದುವಾಗಲೂ ಕಿರುಕುಳ ಅನುಭವಿಸಿದೆ. ನನ್ನ ಸ್ಕೂಟಿ ಮೇಲೆ ಅಸಭ್ಯಕರ ಹೆಸರು ಬರೆದಾಗ ಪೋಸ್ಟರ್ ಅಂಟಿಸಿದಾಗ ನಾನು ಪ್ರತಿರೋಧ ತೋರಿದ್ದೆ. ಅದಕ್ಕೆ ನನ್ನ ಸ್ಕೂಟಿ ಬ್ರೇಕ್ ವೈಯರ್ ಕತ್ತರಿಸಿದ್ದರು"

"ನನ್ನ ಹುಡುಗ ಸಹಪಾಠಿಗಳು ನನ್ನ ಮೇಲೆ ಭಯಬಿದ್ದು ಶಿಕ್ಷಕರಿಗೆ ಹೇಳಿದ್ದರು. ಆಗ ಕ್ಲಾಸ್ ಟೀಸರ್ ಕರೆದು "ನೀನು ಬಹಳ ಫಾರ್ವರ್ಡ್ ಹುಡುಗಿ ತರ ಕಾಣುತ್ತೀಯಾ. ಸ್ಕೂಟಿಯಲ್ಲಿ ಬರ್ತೀಯಾ, ಸ್ಪೆಷಲ್ ಕ್ಲಾಸ್‌ಗಳಿಗೆ ಜೀನ್ಸ್ ಧರಿಸಿ ತುಂಡು ಕೂದಲು ಓಪನ್ ಆಗಿ ಬಿಟ್ಟುಕೊಂಡು ಬರ್ತೀಯಾ. ಅದಕ್ಕೆ ನಿನ್ನ ಕ್ಯಾರೆಕ್ಟರ್ ಸರಿಯಿಲ್ಲ ಎಂದು ಹುಡುಗರು ಭಾವಿಸುತ್ತಾರೆ. ಇದು ನಿನ್ನದೇ ತಪ್ಪು ಎನ್ನುವಂತೆ ಮಾತನಾಡಿದರು"

"ಒಮ್ಮೆ ಸ್ಕೂಟಿ ಬ್ರೇಕ್ ವೈಯರ್ ಕಟ್ ಆಗಿ ನನ್ನನ್ನು ರಕ್ಷಿಸಿಕೊಳ್ಳಲು ಜಂಪ್ ಮಾಡಿ ಬಿದ್ದಿದ್ದೆ. ನನಗೆ ಬಹಳ ಪೆಟ್ಟಾಗಿತ್ತು. ಮಾನಸಿಕವಾಗಿಯೂ ಆಘಾತಕ್ಕೆ ಒಳಗಾಗಿದ್ದೆ ಆದರೆ ಅದೂ ನನ್ನದೇ ತಪ್ಪು. ದೇಶಕ್ಕಾಗಿ 2 ಯುದ್ಧದಲ್ಲಿ ಭಾಗವಹಿಸಿದ ನಮ್ಮ ತಾತ ನಿವೃತ್ತ ಕರ್ನಲ್ ಒಮ್ಮೆ ನನ್ನನ್ನು ಮನಗೆ ಕರೆದುಕೊಂಡು ಹೋಗಲು ಬಂದಿದ್ದರು. ಅವರು ಕೂಡ ಆ ಹುಡುಗರು ಕೆಟ್ಟದಾಗಿ ಮಾತನಾಡಿ ನಮ್ಮ ತಾತ ಬಗ್ಗೆಯೂ ತಮಾಷೆ ಮಾಡಿದ್ದರು. ಅದನ್ನು ಮರೆಯಲು ಸಾಧ್ಯವಿಲ್ಲ"

ಹೀಗೆ ಪರೋಕ್ಷವಾಗಿ ಏನೇ ತಪ್ಪು ನಡೆದರೂ ಮಹಿಳೆಯರದ್ದೇ ತಪ್ಪು ಎನ್ನುತ್ತಾರೆ. ನಾನು ಧರಿಸುವ ಬಟ್ಟೆ ಬಗ್ಗೆ ಮಾತನಾಡುತ್ತಾರೆ. ಹುಡುಗರ ನಡೆಯ ಬಗ್ಗೆ ಯಾರು ಮಾತಾಡಲ್ಲ. ಹೆಣ್ಣು ಮಕ್ಕಳು ಸರಿಯಾಗಿ ಇರುಬೇಕು ಎಂದು ಮಾತ್ರ ಹೇಳುತ್ತಾರೆ. ಹುಡುಗರನ್ನು ಸರಿಯಾಗಿ ಇರುವಂತೆ ಯಾಕೆ ಹೇಳಲ್ಲ ಎಂದು ಸೆಲಿನಾ ಜೇಟ್ಲಿ ಬೇಸರ ಹೊರ ಹಾಕಿದ್ದಾರೆ.

More from Filmibeat

English summary
A man flashed his private parts; Celina Jaitly post goes viral;
Read more about: celina jaitly bollywood hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X