twitter
    For Quick Alerts
    ALLOW NOTIFICATIONS  
    For Daily Alerts

    RRR ಭಾರತದ ಅತಿ ಕೆಟ್ಟ ಸಿನಿಮಾ, ರಾಜಮೌಳಿಗೆ ನಿರ್ದೇಶನ ಬರಲ್ಲ: KRK ವಿಮರ್ಶೆ

    |

    ನಿನ್ನೆಯಷ್ಟೆ (ಮಾರ್ಚ್ 25) ರಂದು ಬಿಡುಗಡೆ ಆಗಿರುವ 'RRR' ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ದೇಶದಾದ್ಯಂತ ಕೇಳಿ ಬರುತ್ತಿವೆ. ಜನ ಸಾಮಾನ್ಯರು ಹಾಗೂ ಸಿನಿವಿಮರ್ಶಕರೂ ಈ ಸಿನಿಮಾವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಆದರೆ ಕೆಲವರು ಈ ಸಿನಿಮಾವನ್ನು ಅತಿ ಕೆಟ್ಟ ಸಿನಿಮಾ ಎಂದಿದ್ದು ಅದರಲ್ಲಿ ಕೆಆರ್ ಖಾನ್ ಸಹ ಒಬ್ಬರು

    ನಟ, ವಿಮರ್ಶಕ ಕೆ.ಆರ್.ಖಾನ್ 'RRR' ಸಿನಿಮಾವನ್ನು ಮೊದಲ ದಿನವೇ ನೋಡಿ ವಿಮರ್ಶೆ ಮಾಡಿದ್ದು, 'ಇಂಥಹಾ ಕೆಟ್ಟ ಸಿನಿಮಾವನ್ನು ನನ್ನ ಜೀವನಮಾನದಲ್ಲಿ ನೋಡಿಲ್ಲ' ಎಂದಿದ್ದಾರೆ.

    ''ಸಿನಿಮಾದ ಚಿತ್ರಕತೆ ಬಹಳ ಕೆಟ್ಟದಾಗಿದೆ. ಇಡೀ ಸಿನಿಮಾದಲ್ಲಿ ಒಂದೇ ಒಂದು ದೃಶ್ಯ ಕೂಡ ನೋಡುವ ರೀತಿ ಇಲ್ಲ. ಅತ್ಯಂತ ಕೆಟ್ಟ ಚಿತ್ರಕತೆಯನ್ನು ರಾಜಮೌಳಿ ಬರೆದಿದ್ದಾರೆ. ಈ ಸಿನಿಮಾದ ಚಿತ್ರಕತೆಯನ್ನು ನಾನು ಚಿತ್ರಕತೆ ಅಲ್ಲ ಬದಲಿಗೆ 'ಕಾಮಿಡಿ' ಎಂದು ಕರೆಯುತ್ತೇನೆ'' ಎಂದಿದ್ದಾರೆ ಕೆ.ಆರ್.ಖಾನ್.

    ''ಸಿನಿಮಾದ ಆರಂಭದಲ್ಲಿ ಒಂದು ದೃಶ್ಯವಿದೆ. ಅದರಲ್ಲಿ ಒಂದೆರಡು ಲಕ್ಷ ಜನ ಬ್ರಿಟೀಶರ ವಿರುದ್ಧ ಪ್ರತಿಭಟನೆ ಮಾಡುತ್ತಿರುತ್ತಾರೆ. ಅದರಲ್ಲಿ ಒಬ್ಬನನ್ನು ಬಂಧಿಸುವಂತೆ ಬ್ರಿಟೀಷ್ ಅಧಿಕಾರಿ ಹೇಳುತ್ತಲೇ ರಾಮ್ ಚರಣ್ ಆ ದೊಡ್ಡ ಗುಂಪಿನ ಮೇಲೆ ಬಿದ್ದು ಫೈಟ್ ಮಾಡಿ ಒಬ್ಬನನ್ನು ಅರೆಸ್ಟ್ ಮಾಡುತ್ತಾನೆ. ವಿಶ್ವದ ಅತಿ ದೊಡ್ಡ ವೀರ ಸಿಖಂದರ್ ಆಗಿದ್ದ ಎನ್ನಲಾಗುತ್ತದೆ. ಆದರೆ ಆತ ಕೂಡ ಈ ರೀತಿಯ ಹುಚ್ಚು ಸಾಹಸ ಮಾಡಲಾರ. ಆದರೆ ರಾಜಮೌಳಿ ಸಿನಿಮಾದಲ್ಲಿ ಇದೆಲ್ಲ ಸಾಧ್ಯವಾಗಿಬಿಡುತ್ತದೆ'' ಎಂದು ವ್ಯಂಗ್ಯವಾಡಿದ್ದಾರೆ ಕೆ.ಆರ್.ಖಾನ್.

    RRR Movie Review: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವRRR Movie Review: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವ

    ''ಸಿನಿಮಾದ ಮತ್ತೊಬ್ಬ ಹೀರೋ ಜೂ ಎನ್‌ಟಿಆರ್, ಹುಲಿ ಜೊತೆ ಫೈಟ್ ಮಾಡುತ್ತಾರೆ. ಜೂ ಎನ್‌ಟಿಆರ್ ಘರ್ಜನೆ ಕೇಳಿ ಆ ಹುಲಿಯೂ ಹೆದರಿಬಿಡುತ್ತದೆ. ನಿಜ ಜೀವನದಲ್ಲಿ ಇದು ಸಾಧ್ಯವಿಲ್ಲ ಆದರೆ ರಾಜಮೌಳಿ ಸಿನಿಮಾದಲ್ಲಿ ಸಾಧ್ಯ. ಈ ಸಿನಿಮಾದಲ್ಲಿ ಹಲವು ದೃಶ್ಯಗಳಲ್ಲಿ ನಾಯಕ ನಟರನ್ನು ಹೊಡೆದು ಬಿಸಾಡಲಾಗಿರುತ್ತದೆ. ನಿಜ ನೀಜವನದಲ್ಲಿ ಮುರಿದ ಮೂಳೆ ಸರಿ ಹೋಗಲು ಒಂದೆರಡು ವರ್ಷ ಬೇಕಾಗುತ್ತದೆ. ಆದರೆ ರಾಜಮೌಳಿ ಸಿನಿಮಾಗಳಲ್ಲಿ ಹತ್ತು ನಿಮಿಷಕ್ಕೆ ಎಲ್ಲವೂ ಸರಿ ಹೋಗಿ ಕೈ ಕಾಲು ಮುರಿದುಕೊಂಡವರು ನೆಕ್ಸ್ಟ್‌ ದೃಶ್ಯದಲ್ಲಿಯೇ ಫೈಟ್ ಮಾಡುತ್ತಿರುತ್ತಾರೆ. ಇಂಥಹಾ ನಂಬಲಸಾಧ್ಯ ದೃಶ್ಯಗಳು ರಾಜಮೌಳಿ ಸಿನಿಮಾದಲ್ಲಿ ಮಾತ್ರ ಇರಲು ಸಾಧ್ಯ'' ಎಂದಿದ್ದಾರೆ ಕೆಆರ್‌ಕೆ.

    ಬಹಳ ಕೆಟ್ಟದಾಗಿವೆ ಸಿನಿಮಾದ ಡೈಲಾಗ್‌ಗಳು: ಕೆಆರ್‌ಕೆ

    ಬಹಳ ಕೆಟ್ಟದಾಗಿವೆ ಸಿನಿಮಾದ ಡೈಲಾಗ್‌ಗಳು: ಕೆಆರ್‌ಕೆ

    ''ಸಿನಿಮಾದ ಡೈಲಾಗ್‌ಗಳಂತೂ ಬಹಳ ಕೆಟ್ಟದಾಗಿದೆ. ಬ್ರಿಟೀಷರ ಕಾಲದ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ಬಹಳಷ್ಟು ಜನ ಬ್ರಿಟೀಷರಿದ್ದಾರೆ ಹಾಗಾಗಿ ಬಹುತೇಕ ಸಂಭಾಷಣೆ ಇಂಗ್ಲೀಷ್‌ನಲ್ಲಿದೆ. ಸಿನಿಮಾದ ಒಟ್ಟು ಸಂಭಾಷಣೆಯ 40% ಇಂಗ್ಲೀಷ್‌ನಲ್ಲಿಯೇ ಇದೆ. ಸಿನಿಮಾ ಇಬ್ಬರು ನಾಯಕ ನಟರಿಗೆ ಹಿಂದಿ ಬರೊಲ್ಲ ಆದರೂ ಅವರೇ ಹಿಂದಿಯಲ್ಲಿ ಡಬ್ ಮಾಡಿದ್ದಾರೆ. ಹಾಗಾಗಿ ಅವರ ಡೈಲಾಗ್ ಬಹಳ ಕೆಟ್ಟದಾಗಿ ಕೇಳುತ್ತದೆ. ಇನ್ನು ಸಂಗೀತ ಸಹ ತೆಲುಗು ಸಂಗೀತ ಇದ್ದಹಾಗೆ ಇದೆ. ಇದು ಬಾಲಿವುಡ್‌ ಮಂದಿಗೆ ಬಹಳ ಕೆಟ್ಟ ಸಂಗೀತ ಎನಿಸುತ್ತದೆ. ಸಿನಿಮಾದ ಡೈರೆಕ್ಷನ್ ಅಂತೂ ಬಹಳ ಕೆಟ್ಟದಾಗಿದೆ.'' ಎಂದಿದ್ದಾರೆ ಕೆಆರ್‌ಕೆ.

    RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'RRR Twitter Review: ಟ್ವಿಟರ್‌ನಲ್ಲೂ ಬೆಂಕಿ ಹಚ್ಚಿದ ರಾಜಮೌಳಿ 'RRR'

    ಆಕ್ಷನ್ ದೃಶ್ಯಗಳು ಹಾಸ್ಯ ದೃಶ್ಯಗಳಂತಿವೆ: KRK

    ಆಕ್ಷನ್ ದೃಶ್ಯಗಳು ಹಾಸ್ಯ ದೃಶ್ಯಗಳಂತಿವೆ: KRK

    ''ಈ ಸಿನಿಮಾ ಒಂದು ಆಕ್ಷನ್ ಸಿನಿಮಾ. ಆದರೆ ಸಿನಿಮಾದ ಆಕ್ಷನ್ ದೃಶ್ಯಗಳನ್ನು ನೋಡಿದರೆ ನಗು ಬರುತ್ತದೆ. ತೆರೆಯ ಮೇಲೆ ಆಕ್ಷನ್ ನಡೆಯುತ್ತಿರುತ್ತದೆ, ಅದನ್ನು ನೋಡುತ್ತಿರುವ ಪ್ರೇಕ್ಷಕರು ಕುರ್ಚಿ ಮೇಲೆ ಕುಳಿತು ನಗುತ್ತಿರುತ್ತಾರೆ. ಅಂಥಹಾ ಆಕ್ಷನ್ ಈ ಸಿನಿಮಾದಲ್ಲಿದೆ. ರಾಜಮೌಳಿ ಮಾಡಿರುವುದು ನಿರ್ದೇಶಕನವೇ ಅಲ್ಲ. ಒಬ್ಬ ಸ್ಪಾಟ್‌ಬಾಯ್‌ ಮಾಡಬಹುದಾದ ಸಿನಿಮಾ ಮಾಡಿದ್ದಾರೆ. ರಾಜಮೌಳಿ ತನ್ನನ್ನು ತಾನು ಡೈರೆಕ್ಟರ್ ಎನ್ನುತ್ತಾರೆ. ಆದರೆ ಇಂಥಹಾ ಕೆಟ್ಟ ಸಿನಿಮಾ ಮಾಡಿದ್ದಾರೆ. ಹಾಗಾಗಿ ನಾನು ರಾಜಮೌಳಿಯನ್ನು ರಾಜಮೌಳಿ ಎನ್ನುವ ಬದಲಾಗಿ ರಾಜ'ಮೂಲಿ' ಎಂದು ಕರೆಯಲು ಇಷ್ಟಪಡುತ್ತೇನೆ. 600 ಕೋಟಿ ರುಪಾಯಿ ಖರ್ಚು ಮಾಡಿ ಇಷ್ಟು ಕೆಟ್ಟ ಸಿನಿಮಾ ಮಾಡಿರುವುದು ಡೈರೆಕ್ಷನ್ ಅಲ್ಲ ಬದಲಿಗೆ ಇದು ಅಪರಾಧ. ಇಂಥಹಾ ಕೆಟ್ಟ ಸಿನಿಮಾ ಮಾಡಿದ್ದಕ್ಕೆ ರಾಜಮೌಳಿಗೆ ಕನಿಷ್ಟ ಆರು ವರ್ಷ ಕಾರಾಗೃಹ ಶಿಕ್ಷೆ ಆಗಬೇಕು'' ಎಂದಿದ್ದಾರೆ ಕೆ.ಆರ್‌.ಕೆ.

    ಹೀರೋಗಳು ಅತ್ಯಂತ ಕೆಟ್ಟದಾಗಿದ್ದಾರೆ: KRK

    ಹೀರೋಗಳು ಅತ್ಯಂತ ಕೆಟ್ಟದಾಗಿದ್ದಾರೆ: KRK

    ''ನಟನೆ ಬಗ್ಗೆ ಮಾತನಾಡುವುದಾದರೆ, ಅಜಯ್ ದೇವಗನ್‌ರದ್ದು ಎರಡು ಸೀನ್ ಇದೆ. ಆಲಿಯಾ ಭಟ್‌ರ ಹೆಸರಿಗಿಂತಲೂ ಅವರ ದೃಶ್ಯಗಳು ಚಿಕ್ಕದಾಗಿದೆ. ಇವರಿಬ್ಬರ ದೃಶ್ಯಗಳೇ ಬಹಳ ಚಿಕ್ಕದಾಗಿವೆ ಹಾಗಾಗಿ ನಾನು ಇವರಿಬ್ಬರ ನಟನೆ ಬಗ್ಗೆ ಮಾತನಾಡುವುದಿಲ್ಲ. ಇನ್ನು ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ಸಿನಿಮಾದ ಮೂರು ಗಂಟೆ ಆಕ್ಷನ್‌ನಲ್ಲಿ ಬ್ಯುಸಿಯಾಗಿದ್ದರು ಹಾಗಾಗಿ ಅವರಿಗೆ ನಟನೆ ಮಾಡಲು ಆಗಿಯೇ ಇಲ್ಲ. ಅಷ್ಟೆ ಅಲ್ಲ ಅವರಿಬ್ಬರು ಕುಳ್ಳಗಿದ್ದಾರೆ. ನೋಡಲು ಕರಡಿ ರೀತಿ ಬಹಳ ಕೆಟ್ಟದಾಗಿದ್ದಾರೆ. ಹಿಂದಿ ಸೂಪರ್ ಸ್ಟಾರ್‌ಗಳಿಗೆ ಹೋಲಿಸಿದರೆ ನೋಡಲು ಬಹಳ ಕೆಟ್ಟದಾಗಿ ಕಾಣುತ್ತಾರೆ'' ಎಂದಿದ್ದಾರೆ ಕೆ.ಆರ್‌.ಕೆ.

    RRR First Half Review: RRR ಮೊದಲಾರ್ಧ ಭರಪೂರ ಆಕ್ಷನ್ ಮಸ್ತ್ ಕಾಮಿಡಿRRR First Half Review: RRR ಮೊದಲಾರ್ಧ ಭರಪೂರ ಆಕ್ಷನ್ ಮಸ್ತ್ ಕಾಮಿಡಿ

    ಸಿನಿಮಾದಲ್ಲಿ ಒಂದಂಶವೂ ಚೆನ್ನಾಗಿಲ್ಲ: KRK

    ಸಿನಿಮಾದಲ್ಲಿ ಒಂದಂಶವೂ ಚೆನ್ನಾಗಿಲ್ಲ: KRK

    ''ಒಟ್ಟಿನಲ್ಲಿ 'RRR' ಸಿನಿಮಾ ಬಹಳ ಕೆಟ್ಟ ಸಿನಿಮಾ, ಇಡೀ ಸಿನಿಮಾದಲ್ಲಿ ನೋಡಲು ಒಂದಂಶವೂ ಚೆನ್ನಾಗಿಲ್ಲ. ನಿಮಗೆ ನಿಮ್ಮ ಮೆದುಳನ್ನು ಆಮ್ಲೇಟ್ ಮಾಡಿಕೊಳ್ಳಬೇಕು ಎಂದೆನಿಸಿದರೆ, ಬದುಕಿದ್ದಾಗಲೆ ಸತ್ತ ನಂತರದ ಅನುಭವ ಬೇಕೆಂದರೆ, 600 ಕೋಟಿ ಖರ್ಚು ಮಾಡಿ ಭಾರತದ ಅತಿ ಕೆಟ್ಟ ಸಿನಿಮಾ ಹೇಗೆ ಮಾಡಬಹುದು ಎಂಬುದು ತಿಳಿದುಕೊಳ್ಳಬೇಕೆನಿಸಿದರೆ ಮಾತ್ರ ಈ ಸಿನಿಮಾ ನೋಡಲು ಹೋಗಿ, ನಿಮ್ಮ ಸಮಯ, ಹಣ, ಶ್ರಮ ವ್ಯರ್ಥ ಮಾಡಿಕೊಂಡು ಸಿನಿಮಾ ನೋಡಿ. ನಾನು ಈ ಸಿನಿಮಾಗೆ ಸೊನ್ನೆ ಸ್ಟಾರ್ ಕೊಡುತ್ತೇನೆ. ಏಕೆಂದರೆ ಈ ಸಿನಿಮಾ 600 ಕೋಟಿ ರುಪಾಯಿಗೆ ಬೆಂಕಿ ಇಟ್ಟಿದೆ'' ಎಂದಿದ್ದಾರೆ ಕೆ.ಆರ್‌.ಖಾನ್. ಇವರ ಈ ವಿಮರ್ಶೆಗೆ ಹಲವರು ಆಕ್ರೋಶ ಹೊರಹಾಕಿದ್ದಾರೆ. ಈತನಿಗೆ ಸಿನಿಮಾ ನೋಡಲು ಬರುವುದಿಲ್ಲ ಎಂದಿದ್ದಾರೆ. ಕೆಆರ್‌ಕೆ ಇದು ಮೊದಲಲ್ಲ ಹಲವು ದಕ್ಷಿಣ ಭಾರತದ ಸಿನಿಮಾಗಳಿಗೆ ಹೀಗೆ ಬಹಳ ಕೆಟ್ಟ ವಿಮರ್ಶೆ ನೀಡಿದ್ದಾರೆ.

    English summary
    Actor and movie critic KR Khan reviewed RRR movie and said This is the worst movie of India. He also said Rajamouli did not know how to direct a movie.
    Saturday, March 26, 2022, 17:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X