twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಲ್ಲಿ 2ನೇ ವಾರಕ್ಕೆ 250 ಶೋ ಕಳೆದುಕೊಂಡ ಕ್ರಾಂತಿ, ಪಠಾಣ್‌ಗೆ ಹೆಚ್ಚು ಶೋ; ಕನ್ನಡಿಗರ ಆಕ್ರೋಶ!

    |

    2023ರ ಮೊದಲ ತಿಂಗಳು ಮುಕ್ತಾಯಗೊಂಡಿದ್ದು, ಇದೀಗ ಎರಡನೇ ತಿಂಗಳ ಮೊದಲ ಶುಕ್ರವಾರವೂ ಸಹ ಬಂದಿದೆ. ಇನ್ನು ಕಳೆದ ವರ್ಷದ ಹಾಗೆ ಜನವರಿ ತಿಂಗಳಿನಲ್ಲಿಯೂ ಸಹ ದಕ್ಷಿಣ ಭಾರತದ ಚಿತ್ರಗಳು ನೂರು, ಇನ್ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸಿ ವರ್ಷದ ಬಾಕ್ಸ್ ಆಫೀಸ್ ಸಕ್ಸಸ್ ಅನ್ನು ಆರಂಭಿಸಿದ್ದವು.

    ಹೌದು, ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡಿದ್ದ ತೆಲುಗು ಹಾಗೂ ತಮಿಳಿನ ಸ್ಟಾರ್ ಚಿತ್ರಗಳೆಲ್ಲಾ ನೂರು ಕೋಟಿ ಕ್ಲಬ್ ಸೇರುವ ಮೂಲಕ ಭರ್ಜರಿಯಾಗಿ ವರ್ಷವನ್ನು ಆರಂಭಿಸಿದ್ದವು. ಇದರ ಬಳಿಕ ಜನವರಿ ಅಂತಿಮ ವಾರದಲ್ಲಿ ಹಿಂದಿಯ ದಿಗ್ಗಜ ಸ್ಟಾರ್ ನಟ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಹಾಗೂ ಕನ್ನಡದ ದಿಗ್ಗಜ ಸ್ಟಾರ್ ನಟ ದರ್ಶನ್ ನಟನೆಯ ಕ್ರಾಂತಿ ಚಿತ್ರ ತೆರೆಗೆ ಬಂದು ಒಳ್ಳೆಯ ಆರಂಭವನ್ನು ಪಡೆದುಕೊಂಡವು.

    ಪಠಾಣ್ ಚಿತ್ರ ಬಿಡುಗಡೆಯಾದ ಮರುದಿನ ಕ್ರಾಂತಿ ಚಿತ್ರ ಬಿಡುಗಡೆಯಾಯಿತು. ಹೀಗಾಗಿ ಎಲ್ಲಾ ಭಾಷೆಯ ಚಿತ್ರಗಳನ್ನೂ ಸಹ ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿ, ಅದರಲ್ಲಿಯೂ ವಿಶೇಷವಾಗಿ ಬೆಂಗಳೂರಿನಲ್ಲಿ ಈ ಎರಡೂ ಚಿತ್ರಗಳ ನಡುವೆ ಕಲೆಕ್ಷನ್ ಹಾಗೂ ಶೋಗಳ ವಿಚಾರವಾಗಿ ಪೈಪೋಟಿ ಸಹಜವಾಗಿ ಏರ್ಪಟ್ಟಿತ್ತು. ಕ್ರಾಂತಿ ಸಿನಿಮಾ ಮೊದಲ ವಾರ ಒಳ್ಳೆಯ ಗಳಿಕೆ ಮಾಡಿದ್ದು, ವೀಕ್ಷಕರು ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ ಎಂದು ದರ್ಶನ್ ನಿನ್ನೆಯಷ್ಟೇ ( ಫೆಬ್ರವರಿ 2 ) ನಡೆದ ಕ್ರಾಂತಿ ಸಕ್ಸಸ್ ಮೀಟ್‌ನಲ್ಲಿ ಹೇಳಿಕೆ ನೀಡಿದ್ದರು. ಇಷ್ಟು ಚೆನ್ನಾಗಿ ಪ್ರದರ್ಶನಗೊಳ್ಳುತ್ತಿರುವ ಕ್ರಾಂತಿ ಚಿತ್ರಕ ಎರಡನೇ ವಾರಕ್ಕೆ ಕಾಲಿಟ್ಟ ದಿನವೇ ದೊಡ್ಡ ಮಟ್ಟದ ಶೋಗಳನ್ನು ಬೆಂಗಳೂರು ಪ್ರಾಂತ್ಯದಲ್ಲಿ ಕಳೆದುಕೊಂಡಿದ್ದು, ಸಿನಿ ರಸಿಕರ ಬೇಸರಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಕ್ರಾಂತಿ ಚಿತ್ರಕ್ಕಿಂತ ಪಠಾಣ್ ಚಿತ್ರಕ್ಕೆ ಹೆಚ್ಚು ಪ್ರದರ್ಶನಗಳು ಸಿಕ್ಕಿರುವುದು ಆಕ್ರೋಶಕ್ಕೂ ಸಹ ಕಾರಣವಾಗಿದೆ. ಹಾಗಿದ್ದರೆ ಇಂದು ( ಫೆಬ್ರವರಿ 3 ) ಬೆಂಗಳೂರಿನಲ್ಲಿ ಕ್ರಾಂತಿ ಚಿತ್ರ ಹಾಗೂ ಪಠಾಣ್ ಚಿತ್ರ ಪಡೆದುಕೊಂಡಿರುವ ಶೋಗಳ ಸಂಖ್ಯೆ ಎಷ್ಟು ಎಂಬ ಮಾಹಿತಿ ಈ ಕೆಳಕಂಡಂತಿದೆ ಓದಿ..

    ಶೋಗಳ ಹಂಚಿಕೆ ಹೀಗಿದೆ

    ಶೋಗಳ ಹಂಚಿಕೆ ಹೀಗಿದೆ

    ಸಿನಿಮಾಗಳಿಗೆ ಹೆಚ್ಚು ಕಲೆಕ್ಷನ್ ತಂದುಕೊಡುವ ಬೆಂಗಳೂರಿನಲ್ಲಿ ಇಂದು ( ಫೆಬ್ರವರಿ 3 ) ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರಕ್ಕೆ 474 ಶೋಗಳು ಸಿಕ್ಕಿದ್ದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಚಿತ್ರಕ್ಕೆ 230 ಪ್ರದರ್ಶನಗಳು ಸಿಕ್ಕಿವೆ. ಈ ಮೂಲಕ ಕಳೆದ ವಾರ 480 ಪ್ರದರರ್ಶನಗಳನ್ನು ಹೊದಿದ್ದ ಕ್ರಾಂತಿ ಚಿತ್ರ ಎರಡನೇ ವಾರಕ್ಕೆ 250 ಪ್ರದರ್ಶನಗಳನ್ನು ಕಳೆದುಕೊಂಡಿದೆ. ಹಿಂದಿ ಚಿತ್ರಕ್ಕೆ ಇಂದಿಗೂ ಒಳ್ಳೆ ಸಂಖ್ಯೆಯ ಪ್ರದರ್ಶನ ನೀಡಲಾಗಿದ್ದು, ಕನ್ನಡ ಚಿತ್ರಕ್ಕೆ ತೀರಿ ಕಡಿಮೆ ಪ್ರದರ್ಶನ ನೀಡಿದ್ದು, ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

    ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ ಟಾಪ್ 5 ಚಿತ್ರಗಳು

    ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ ಟಾಪ್ 5 ಚಿತ್ರಗಳು

    ಇಂದು ( ಫೆಬ್ರವರಿ 3 ) ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡಿರುವ ಚಿತ್ರಗಳ ಟಾಪ್ 5 ಪಟ್ಟಿ ಇಲ್ಲಿದೆ..

    1. ಪಠಾಣ್ - 474 ಪ್ರದರ್ಶನಗಳು

    2. ಕ್ರಾಂತಿ - 230 ಪ್ರದರ್ಶನಗಳು

    3. ಮೈಕೆಲ್ - 155 ಪ್ರದರ್ಶನಗಳು

    4. ದ ವುಮೆನ್ ಕಿಂಗ್ - 104 ಪ್ರದರ್ಶನಗಳು

    5. ರನ್ ಬೇಬಿ ರನ್ - 75 ಪ್ರದರ್ಶನಗಳು

    ನೂರು ಕೋಟಿ ಸಂಭ್ರಮಾಚರಣೆ ಮಾಡಿದ ಕ್ರಾಂತಿ

    ನೂರು ಕೋಟಿ ಸಂಭ್ರಮಾಚರಣೆ ಮಾಡಿದ ಕ್ರಾಂತಿ

    ಇನ್ನು ಕ್ರಾಂತಿ ಚಿತ್ರತಂಡ ನಿನ್ನೆ ( ಫೆಬ್ರವರಿ 2 ) ಚಿತ್ರದ ಗೆಲುವನ್ನು ಸಂಭ್ರಮಿಸಿದೆ. ಸಕ್ಸಸ್ ಮೀಟ್ ಕರೆಯುವ ಮೂಲಕ ಚಿತ್ರತಂಡ ತಮ್ಮ ಚಿತ್ರ ಗೆದ್ದಿದೆ ಎಂಬುದನ್ನು ತಿಳಿಸಿದೆ. ತಂಡದ ಸದಸ್ಯರೆಲ್ಲಾ ಸೇರಿ ನೂರು ಕೋಟಿ ಎಂದು ಬರೆಯಲಾಗಿದ್ದ ಕೇಕ್ ಕತ್ತರಿಸಿ ಆಚರಣೆ ಮಾಡಿದ್ದಾರೆ. ಈ ಮೂಲಕ ಚಿತ್ರ ನೂರು ಕೋಟಿ ಕ್ಲಬ್ ಸೇರಿದೆ ಎಂಬುದನ್ನು ಚಿತ್ರತಂಡ ಪರೋಕ್ಷವಾಗಿ ಹೇಳಿಕೊಂಡಿದೆ.

    English summary
    Kranti lost 250 shows in Bangalore on second week while Pathaan got more shows. Read on
    Friday, February 3, 2023, 13:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X