'ನಾವು ಇನ್ಮುಂದೆ ಒಟ್ಟಿಗೆ ಇರಲ್ಲ' ಬ್ರೇಕಪ್ ವಿಚಾರ ಬಹಿರಂಗ ಪಡಿಸಿದ ಟೈಗರ್ ಶ್ರಾಫ್ ಸಹೋದರಿ
ಸಿನಿಮಾರಂಗದಲ್ಲಿ ಲವ್, ಡೇಟಿಂಗ್, ಬ್ರೇಪಕ್ ವಿಚಾರಗಳನ್ನು ಆಗಾಗ ಕೇಳುತ್ತಿರುತ್ತೀರಿ. ಇವತ್ತು ಪ್ರೀತಿಯಲ್ಲಿದ್ದೀವಿ ಎಂದವರು ನಾಳೆ ಬ್ರೇಕಪ್ ಎಂದು ಅನೌನ್ಸ್ ಮಾಡಿ ಅಚ್ಚರಿ ಮೂಡಿಸಿರುವ ಸಾಕಷ್ಟು ಉದಾಹರಣೆಗಳಿವೆ. ಇದೀಗ ಬಾಲಿವುಡ್ ನ ಮತ್ತೊಂದು ಜೋಡಿ ಬ್ರೇಕಪ್ ವಿಚಾರವನ್ನು ಬಹಿರಂಗ ಪಡಿಸಿದೆ.
ಬಾಲಿವುಡ್ ನಟ ಟೈಗರ್ ಶ್ರಾಫ್ ಸಹೋದರಿ ಕೃಷ್ಣಾ ಶ್ರಾಫ್ ಬಾಯ್ ಫ್ರೆಂಡ್ ಜೊತೆಗಿನ ಬ್ರೇಕಪ್ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಬಿಚ್ಚಿಟ್ಟಿದ್ದಾರೆ. ಬಾಸ್ಕೆಟ್ ಬಾಲ್ ಆಟಗಾರ ಇಬಾನ್ ಹ್ಯಾಮ್ಸ್ ಜೊತೆ ಪ್ರೀತಿಯಲ್ಲಿದ್ದ ಕೃಷ್ಣಾ ಶ್ರಾಫ್ ಇದೀಗ ದೂರ ದೂರ ಆಗುತ್ತಿರುವುದಾಗಿ ಹೇಳಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂದೆ ಓದಿ..

'ರಾ' ಫೋಟೋ ಶೇರ್ ಮಾಡಿರುವ ಕೃಷ್ಣಾ
ಬ್ರೇಕಪ್ ವಿಚಾರ ಬಹಿರಂಗ ಪಡಿಸುವ ಪೋಸ್ಟ್ ಹಂಚಿಕೊಳ್ಳುವ ಮೊದಲು ಕೃಷ್ಣಾ ಶ್ರಾಫ್ ಸಖತ್ ಹಾಟ್ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಫೋಟೋಗೆ ರಾ, ಫಿಲ್ಟರ್ ಇಲ್ಲದ ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಮದುವೆ ಆಗಲು ನಿರ್ಧರಿಸಿದ್ದ ಜೋಡಿ
ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಕೃಷ್ಣಾ ಮತ್ತು ಇಬಾನ್ ಇಬ್ಬರು ಲೈವ್ ಬಂದು ಸದ್ಯದಲ್ಲೇ ಮದುವೆ ಆಗುವುದಾಗಿ ಹೇಳಿದ್ದರು. ಮದುವೆ ಆಗಿದೆಯಾ? ಎಂದು ಕೇಳಿದ ಅಭಿಮಾನಿಗಳಿಗೆ ಮದುವೆ ಆಗಿದ್ದರೆ ಇಬ್ಬರು ಉಂಗುರ ಧರಿಸುತ್ತಿದ್ದೆವು, ಅಲ್ಲವೆ? ಆದರೆ ಸದ್ಯದಲ್ಲೇ ಮದುವೆ ಪ್ಲಾನ್ ಇದೆ' ಎಂದು ಉತ್ತರ ನೀಡಿದ್ದರು. ಆದರೀಗ ಇಬ್ಬರು ಸಂಬಂಧವನ್ನು ಮುರಿದುಕೊಂಡು ಬೇರೆ ಬೇರೆಯಾಗಿ ಬದುಕಲು ನಿರ್ಧರಿಸಿರುವುದು ಅಚ್ಚರಿ ಮೂಡಿಸಿದೆ.
Recommended Video

ಹಾಟ್ ಫೋಟೋಗಳು ವೈರಲ್ ಆಗಿತ್ತು
ಕೃಷ್ಣಾ ಮತ್ತು ಇಬಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತಿಂಗಳ ಹಿಂದೆ ಹಲವಾರು ಬೀಚ್ ಫೋಟೋಗಳನ್ನು ಹಂಚಿಕೊಂಡಿದ್ದರು. ಇಬ್ಬರ ರೊಮ್ಯಾಂಟಿಕ್ ಪೋಟೋಗಳು ಫ್ಯಾನ್ ಕ್ಲಬ್ ಗಳಲ್ಲಿ ಹರಿದಾಡುತ್ತಿತ್ತು. ಇದೀಗ ಬ್ರೇಕಪ್ ವಿಚಾರ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.


Click it and Unblock the Notifications











