ಹಿರಿಯ ನಟನ ಪುತ್ರಿಯ ಬಿಕಿನಿ ಚಿತ್ರಗಳು ವೈರಲ್
ನಟ ಜಾಕಿ ಶ್ರಾಫ್ ಹಿಂದಿಯ ಹಿರಿಯ ನಟರಲ್ಲಿ ಒಬ್ಬರು. ಕನ್ನಡದಲ್ಲಿಯೂ ನಟಿಸಿರುವ ಜಾಕಿ ಶ್ರಾಫ್‌ಗೆ ಇಬ್ಬರು ಮಕ್ಕಳು ಟೈಗರ್ ಶ್ರಾಫ್ ಮತ್ತು ಕೃಷ್ಣಾ ಶ್ರಾಫ್.
ಮಗ ಟೈಗರ್ ಶ್ರಾಫ್ ಬಾಲಿವುಡ್‌ನ ಲೀಡಿಂಗ್ ಯುವನಟರಲ್ಲಿ ಒಬ್ಬರಾಗಿದ್ದರೆ ಮಗಳು ಕೃಷ್ಣಾ ಶ್ರಾಫ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಜನಪ್ರಿಯರು. ಅವರು ತಮ್ಮ ಹಾಟ್ ಅವತಾರಗಳಿಂದಾಗಿ ಆಗಾಗ್ಗೆ ಸುದ್ದಿಗೆ ಬರುತ್ತಲೇ ಇರುತ್ತಾರೆ.
ಕೆಲ ತಿಂಗಳ ಹಿಂದೆ ತಮ್ಮ ಬಾಯ್‌ಫ್ರೆಂಡ್‌ಗೆ ತಮ್ಮ ಮನೆಯ ಕಾಂಪೌಂಡ್ ಮೇಲೆ ನಿಂತು ಖುಲ್ಲಂಖುಲ್ಲಾ ಮುತ್ತಿಟ್ಟು ಸುದ್ದಿಯಾಗಿದ್ದ ಕೃಷ್ಣಾ ಈಗ ತಮ್ಮ ಬಿಕಿನಿ ಚಿತ್ರಗಳು, ವಿಡಿಯೋಗಳಿಂದ ಮತ್ತೆ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಬಿಕಿನಿ ಪ್ರಿಯೆ ಕೃಷ್ಣಾ ಶ್ರಾಫ್
ಕೃಷ್ಣಾ ಶ್ರಾಫ್ ಬಿಕಿನಿ ಧರಿಸಿ ಹಾಟ್ ಅವತಾರದಲ್ಲಿ ಕೆಲವು ವಿಡಿಯೋಗಳನ್ನು, ಚಿತ್ರಗಳನ್ನು ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗಳು, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್
ಕೃಷ್ಣಾ ಶ್ರಾಫ್, ಬಿಕಿನಿ ಧರಿಸಿ ಸೈಕಲ್ ತುಳಿಯುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಹಲವು ಫ್ಯಾನ್ ಪೇಜ್‌ಗಳು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಲವರು ವಿಡಿಯೋಕ್ಕೆ ಕೆಟ್ಟದಾಗಿಯೂ ಕಮೆಂಟ್ ಮಾಡಿದ್ದಾರೆ.

ಎಬನ್ ಹ್ಯಾಮಸ್ ಜೊತೆ ಬ್ರೇಕ್‌ಅಪ್
ಎಬನ್ ಹ್ಯಾಮಸ್ ಹೆಸರಿನ ಬಾಯ್‌ಫ್ರೆಂಡ್ ಜೊತೆ ಲಿವ್ ಇನ್ ರಿಲೇಷನ್‌ನಲ್ಲಿದ್ದರು ಕೃಷ್ಣಾ ಶ್ರಾಫ್. ಆತನೊಂದಿಗಿನ ಹಲವಾರು ಹಾಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಕಳೆದ ವರ್ಷಾಂತ್ಯದಲ್ಲಿ ಎಬನ್ ಜೊತೆ ತಾವು ಬ್ರೇಕ್‌ಅಪ್ ಮಾಡಿಕೊಂಡಿದ್ದಾಗಿ ಕೃಷ್ಣಾ ಘೋಷಿಸಿದರು. ಜೊತೆಗೆ ಇಬ್ಬರೂ ಸಹ ಇನ್‌ಸ್ಟಾಗ್ರಾಂನಲ್ಲಿದ್ದ ತಮ್ಮ ಚಿತ್ರಗಳನ್ನು ಡಿಲೀಟ್ ಮಾಡಿದ್ದರು.
Recommended Video

ಫಿಟ್‌ನೆಸ್ ಸೆಂಟರ್ ನಡೆಸುತ್ತಿರುವ ಕೃಷ್ಣಾ ಶ್ರಾಫ್
ಮಾಡೆಲ್ ಆಗಿರುವ ಕೃಷ್ಣಾ ಶ್ರಾಫ್ ಬಾಂಬೆಯ ಬ್ಯಾಂಡ್ರಾನಲ್ಲಿ ಎಂಎಂಎ ಮ್ಯಾಟ್ರಿಕ್ಸ್ ಹೆಸರಿನ ಫಿಟ್‌ನೆಸ್ ಸೆಂಟರ್ ಅನ್ನು ನಡೆಸುತ್ತಾರೆ. ಈ ದುಬಾರಿ ಫಿಟ್‌ನೆಸ್ ಸೆಂಟರ್‌ಗೆ ಹಲವಾರು ಸೆಲೆಬ್ರಿಟಿಗಳು ಸದಸ್ಯರಾಗಿದ್ದಾರೆ. ಮಾಡೆಲಿಂಗ್ ಮಾಡುವ ಕೃಷ್ಣಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.


Click it and Unblock the Notifications











