For Quick Alerts
  ALLOW NOTIFICATIONS  
  For Daily Alerts

  ಲಿಪ್ ಕಿಸ್ ಮಾಡಲು ನಿರಾಕರಿಸಿ ಅಮಿತಾಬ್ ಸಿನಿಮಾದಿಂದ ಹೊರಬಂದ 'ಗೂಗ್ಲಿ' ಬೆಡಗಿ

  |

  ಗೂಗ್ಲಿ ಖ್ಯಾತಿಯ ನಟಿ ಕೃತಿ ಕರಬಂಧ ಇತ್ತೀಚಿಗೆ ಸಾಕಷ್ಟು ವಿಚಾರಗಳ ಮೂಲಕ ಸದ್ದು ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಲವಲ್ಲಿ ಬಿದ್ದಿರುವುದಾಗಿ ಒಪ್ಪಿಕೊಂಡಿದ್ದ ಕೃತಿ ಈಗ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸದ್ಯ ಬಾಲಿವುಡ್ ನಲ್ಲಿ ನೆಲೆಯೂರಿರುವ ಕೃತಿ, ಅಮಿತಾಬ್ ಬಚ್ಚನ್ ಜೊತೆ 'ಚೆಹ್ರೆ' ಸಿನಿಮಾದಲ್ಲಿ ಅಭಿನಯಸುತ್ತಿದ್ದರು. ಒಂದೆರಡು ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಕೃತಿ ದಿಢೀರನೆ ಚಿತ್ರದಿಂದ ಹೊರಬಂದಿದ್ದಾರೆ. ಈ ಬಗ್ಗೆ ಚಿತ್ರತಂಡವೆ ಅಧಿಕೃತವಾಗಿ ಬಹಿರಂಗ ಪಡಿಸಿದೆ.

  ಬಿಗ್ ಬಿ ಅಮಿತಾಬ್ ಜೊತೆ ಅಭಿನಯಿಸಲು ನಟಿಮಣಿಯರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಒಂದು ಫ್ರೇಮ್ ನಲ್ಲಾದರು ಅಮಿತಾಬ್ ಜೊತೆ ಕಾಣಿಸಿಕೊಳ್ಳಬೇಕು ಎನ್ನುವ ಕನಸಿರುತ್ತೆ. ಆದರೆ ಕೃತಿ ಸಿಕ್ಕ ಅವಕಾಶವನ್ನು ಗಾಳಿಗೆ ತೂರಿ ಬಂದಿದ್ದಾರೆ. 'ಚೆಹ್ರೆ' ಸಿನಿಮಾದಲ್ಲಿ ಅಮಿತಾಬ್ ಜೊತೆ ನಟ ಇಮ್ರಾನ್ ಹಶ್ಮಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

  'ಪುಲ್ಕಿತ್ ಜೊತೆ ಡೇಟಿಂಗ್ ನಲ್ಲಿದ್ದೀನಿ' ಎಂದು ಬಹಿರಂಗ ಪಡಿಸಿದ 'ಗೂಗ್ಲಿ' ಸುಂದರಿ

  ಅಂದ್ಹಾಗೆ ಕೃತಿ ದಿಢೀರನೆ ಚಿತ್ರದಿಂದ ಹೊರಬರಲು ಕಾರಣವೇನು ಎನ್ನುವ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ದರ್ಪದ ಕಾರಣ ಕೃತಿ ಚಿತ್ರದಿಂದ ಹೊರನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಸಲಿ ಕಾರಣ ಬೇರೆ ಎನ್ನುತ್ತಿವೆ ಮೂಲಗಳು.

  ಬಾಲಿವುಡ್ ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ 'ಚೆಹ್ರೆ' ಸಿನಿಮಾದಲ್ಲಿ ಲಿಪ್ ಲಾಕ್ ಮತ್ತು ಇಂಟಿಮೇಟ್ ದೃಶ್ಯಗಳಿವೆಯಂತೆ. ಹಾಗಾಗಿ ಚಿತ್ರದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾದ ಕಥೆ ಹೇಳುವ ಮೊದಲು ನಿರ್ದೇಶಕರು ಇಂತಹ ದೃಶ್ಯಗಳು ಇದೆ ಎಂದು ಹೇಳಲಿರಲಿಲ್ಲವಂತೆ. ಎರಡು ದಿನ ಚಿತ್ರೀಕರಣ ಮಾಡಿದ ನಂತರ ನಿರ್ದೇಶಕರು ಇಂಟಿಮೇಟ್ ದೃಶ್ಯ ಮಾಡುವಂತೆ ಹೇಳಿದ್ದಾರಂತೆ. ಕೃತಿ ಇದನ್ನು ನಿರಾಕರಿಸದ ಕಾರಣ ನಿರ್ದೇಶಕ ಮತ್ತು ಕೃತಿಯ ನಡುವೆ ಸಾಕಷ್ಟು ಮಾತುಕತೆ ನಡೆದು ನಂತರ ಚಿತ್ರದಿಂದನೆ ಹೊರಬಂದಿದ್ದಾರೆ.

  Kriti Kharbanda Out From Amitabh Bachchan And Emraan Hashmi Starrer Chehre Film

  'ಚೆಹ್ರೆ' ನಿರ್ದೇಶಕ ರೂಮಿ ಜಾಫ್ರಿ ಸಾರಥ್ಯದಲ್ಲಿ ಮೂಡಿಬರುತ್ತಿರವ ಸಿನಿಮಾ. ಚಿತ್ರದಲ್ಲಿ ಅಮಿತಾಬ್ ವಕೀಲ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಮ್ರಾನ್ ಹಶ್ಮಿ ದೊಡ್ಡ ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ಏಪ್ರಿಲ್ 24ಕ್ಕೆ ತೆರೆಗೆ ಬರುತ್ತಿದೆ.

  English summary
  Actress Kriti Kharbanda walk out from Amitabh bachchan and Emraan hashmi starrer chehre film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X