ಗೂಗ್ಲಿ ಚೆಲುವೆ ಕೃತಿಯ ಬಾಯ್‌ಫ್ರೆಂಡ್ ಮದುವೆ ಬಗ್ಗೆ ಹೀಗೆ ಹೇಳಿದ್ದಾರೆ
ಗೂಗ್ಲಿ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ ಕೃತಿ ಕರಬಂಧ, ಈಗ ಪ್ರೀತಿಯಲ್ಲಿದ್ದಾರೆ. ಬಾಲಿವುಡ್‌ನ ಕೆಲವು ಸಿನಿಮಾಗಳು ಹಿಂದಿಯ ಧಾರಾವಾಹಿಗಳಲ್ಲಿ ನಟಿಸಿರುವ ಪುಲ್ಕಿತ್ ಸಮರ್ಥ್ ಜೊತೆಗೆ ಕೃತಿಯ ಪ್ರೀತಿ ಜೋರು ನಡೆದಿದೆ.
ಖುಲ್ಲಂ-ಖುಲ್ಲಾ ಈ ಜೋಡಿ ಕೈ-ಕೈ ಹಿಡಿದು ಸುತ್ತುತ್ತಿದ್ದಾರೆ. ಯಾವುದೇ ಭಯಗಳಲಿಲ್ಲದೆ, ತಮ್ಮ ಪ್ರೀತಿ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ಕೃತಿ ಕರಬಂಧ ಮತ್ತು ಪುಲ್ಕಿತ್ ಸಮರ್ಥ್.
ಇದೇ ವರ್ಷ ಈ ಜೋಡಿ ಮದುವೆ ಆಗಲಿದೆ ಎಂಬ ಸುದ್ದಿ ಜೋರಾಗಿಯೇ ಹರಡಿತ್ತು. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಸುದ್ದಿಯನ್ನು ಅಲ್ಲಗಳೆದಿದ್ದಾರೆ ಕೃತಿ ಬಾಯ್‌ಫ್ರೆಂಡ್ ಪುಲ್ಕಿತ್.

'ಸಹೋದರನ ಮದುವೆ ಮುಗಿದ ನಂತರ ನಮ್ಮ ಮದುವೆ'
ಈ ವರ್ಷ ನನ್ನ ಸಹೋದರನ ಮದುವೆ ನಿಶ್ಚಯವಾಗಿತ್ತು, ಕೊರೊನಾ ಹಾಗೂ ಇತರೆ ಕಾರಣಗಳಿಂದಾಗಿ ಆತನ ಮದುವೆ ಮುಂದೂಡಲ್ಪಟ್ಟಿದೆ. ಹಾಗಾಗಿ ಆತನ ಮದುವೆ ಮುಗಿದ ನಂತರವಷ್ಟೆ ನನ್ನ-ಕೃತಿ ಮದುವೆ ಎಂದಿದ್ದಾರೆ ಪುಲ್ಕಿತ್.

ಕೆಲಸದಲ್ಲಿ ಬ್ಯುಸಿಯಾಗಿದ್ದೇವೆ: ಪುಲ್ಕಿತ್
ಸದ್ಯಕ್ಕೆ ನಾವಿಬ್ಬರೂ ನಮ್ಮ-ನಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದೇವೆ. ಹಾಗೆಯೇ ಇರುವುದಕ್ಕೆ ನಮ್ಮಿಬ್ಬರಿಗೂ ಇಷ್ಟ. ನಾವಿಬ್ಬರೂ ವೃತ್ತಿಯನ್ನು ಗೌರವಿಸುತ್ತೇವೆ, ಹಾಗಾಗಿ ಇಬ್ಬರೂ ನಮ್ಮ ವೃತ್ತಿ ಜೀವನಕ್ಕೆ ಮೊದಲ ಆದ್ಯತೆ ನೀಡಿ ನಂತರ ಮದುವೆ ಬಗ್ಗೆ ಯೊಚಿಸುತ್ತೇವೆ ಎಂದಿದ್ದಾರೆ ಪುಲ್ಕಿತ್.

ಕೊರೊನಾ ಸಮಯದಲ್ಲಿ ಒಟ್ಟಿಗಿದ್ದ ಕೃತಿ ಹಾಗೂ ಪುಲ್ಕಿತ್
ಈ ಕೊರೊನಾ ಸಮಯದಲ್ಲಿ ಪುಲ್ಕಿತ್ ಮತ್ತು ಕೃತಿ ಕರಬಂಧ ಒಟ್ಟಿಗೆ ಇದ್ದರಂತೆ. ಆ ಸಮಯದಲ್ಲಿ ಒಟ್ಟಿಗೆ ಇದ್ದದ್ದಕ್ಕೆ ಪರಸ್ಪರ ಒಬ್ಬರನ್ನೊಬ್ಬರು ಹೆಚ್ಚು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಯಿತು ಎಂದಿದ್ದಾರೆ ಪುಲ್ಕಿತ್.
Recommended Video

ದೀಪಾವಳಿಗೆ ಒಟ್ಟಿಗೆ ಇರುವುದಿಲ್ಲ ಈ ಜೋಡಿ
ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕೃತಿ ಕರಬಂಧ ಈ ಬಾರಿ ದೀಪಾವಳಿಗೆ ಪುಲ್ಕಿತ್ ಜೊತೆಗೆ ಇರುವುದಿಲ್ಲವಂತೆ. ದೀಪಾವಳಿಗೆ ಕೃತಿಗೆ ಕಾರ್ಡ್ಸ್ ಆಡುವುದು ಬಹಳ ಇಷ್ಟ. ಬಹಳ ಗಂಭೀರವಾಗಿ ಕಾರ್ಡ್ಸ್ ಆಡುತ್ತಾಳೆ, ಆದರೆ ನನಗೆ ಕಾರ್ಡ್ಸ್ ಆಡುವುದು ಇಷ್ಟವಿಲ್ಲ ಎಂದಿದ್ದಾರೆ ಪುಲ್ಕಿತ್


Click it and Unblock the Notifications











