For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್: ಬಾಯ್‌ಫ್ರೆಂಡ್‌ ಕೆನ್ನೆಗೆ ಮುತ್ತಿಟ್ಟ ನಟಿ ಕೃತಿ ಕರಬಂಧ

  |

  ಬಹುಭಾಷಾ ನಟಿ ಕೃತಿ ಕರಬಂಧ ತನ್ನ ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.

  ಬಾಯ್ ಫ್ರೆಂಡ್ ಜೊತೆ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ ಗೊಗ್ಲಿ ಬೆಡಗಿ | Filmibeat Kannada

  ಕೃತಿ ಕರಬಂಧ ಗೆಳೆಯ ಪುಲ್ಕಿತ್ ಸಮರ್ಥ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷವಾಗಿ ತನ್ನ ಇನ್ಸ್ಟಾಗ್ರಾಂನಲ್ಲಿ ಸಮರ್ಥ್ ಫೋಟೋ ಶೇರ್ ಮಾಡಿರುವ ನಟಿ ''ಹ್ಯಾಪಿ ಬರ್ತಡೇ ಬೇಬಿ, ಐ ಲವ್ ಯೂ'' ಎಂದು ಕ್ಯಾಪ್ಷನ್ ಹಾಕಿದ್ದಾರೆ.

  ಬಾಯ್‌ಫ್ರೆಂಡ್ ಜೊತೆ ಮದುವೆ ಯಾವಾಗ? ಕೃತಿ ಕರಬಂಧ ಕೊಟ್ಟರು ಉತ್ತರಬಾಯ್‌ಫ್ರೆಂಡ್ ಜೊತೆ ಮದುವೆ ಯಾವಾಗ? ಕೃತಿ ಕರಬಂಧ ಕೊಟ್ಟರು ಉತ್ತರ

  ಈ ಫೋಟೋದಲ್ಲಿ ನಟ ಪುಲ್ಕಿತ್ ಸಮರ್ಥ್ ಕೆನ್ನೆಗೆ ಕೃತಿ ಕರಬಂಧ ಕಿಸ್ ಮಾಡಿದ್ದಾರೆ. ''ನೀನು ಶತಕೋಟಿಗಳಲ್ಲಿ ಒಬ್ಬರು, ನಿಮ್ಮಂತೆ ಯಾರೂ ಇಲ್ಲ, ಮತ್ತು ಎಂದಿಗೂ ಇರುವುದಿಲ್ಲ'' ಎಂದು ತನ್ನ ಬಾಯ್‌ಫ್ರೆಂಡ್‌ ಬಗ್ಗೆ ಕೃತಿ ಬರೆದುಕೊಂಡಿದ್ದಾರೆ.

  ಅಂದ್ಹಾಗೆ, ಕೃತಿ ಕರಬಂಧ ಮತ್ತು ಪುಲ್ಕಿತ್ ಸಮರ್ಥ್ ಇಬ್ಬರು ಕಳೆದ ಒಂದೂವರೆ ವರ್ಷದಿಂದ ಪ್ರೀತಿಯಲ್ಲಿದ್ದಾರೆ. 2018ರಲ್ಲಿ ತೆರೆಕಂಡ 'ವೀರ್ ಕಿ ವೆಡ್ಡಿಂಗ್' ಹಾಗೂ 2019 ರಲ್ಲಿ ಬಿಡುಗಡೆಯಾದ 'ಪಾಗಲ್‌ಪಂತಿ' ಚಿತ್ರಗಳಲ್ಲಿ ಕೃತಿ ಮತ್ತು ಪುಲ್ಕಿತ್ ಸಮರ್ಥ್ ಒಟ್ಟಿಗೆ ನಟಿಸಿದ್ದರು. ಇಲ್ಲಿಂದ ಇವರಿಬ್ಬರ ಪರಿಚಯವಾಗಿತ್ತು. ಪುಲ್ಕಿತ್ ಸಮರ್ಥ್ ಜೊತೆ ನಟಿಸಿದ್ದ 'ತೈಶ್' ಸಿನಿಮಾ 2020ರ ಅಕ್ಟೋಬರ್‌ನಲ್ಲಿ ಜೀ-5ನಲ್ಲಿ ರಿಲೀಸ್ ಆಗಿತ್ತು.

  ಸದ್ಯಕ್ಕೆ ಇವರಿಬ್ಬರ ಮದುವೆ ಬಗ್ಗೆ ಸ್ಪಷ್ಟನೆ ಇಲ್ಲ. ಈ ಕುರಿತು ಈಗಾಗಲೇ ಮಾತನಾಡಿರುವ ನಟಿ ''ಪ್ರೀತಿ ಶುರುವಾಗಿ ಒಂದೂವರೆ ವರ್ಷವಾಗಿದೆಯಷ್ಟೆ. ಮದುವೆಗೆ ಈಗಲೇ ಏನೂ ದಾವಂತ ಇಲ್ಲ. ಇಬ್ಬರೂ ನಮ್ಮ ಕರಿಯರ್‌ಗಳನ್ನು ಗೌರವಿಸುತ್ತೇವೆ. ಹಾಗಾಗಿ ಸದ್ಯಕ್ಕೆ ವೃತ್ತಿಯ ಬಗ್ಗೆ ಹೆಚ್ಚು ಗಮನ ಕೊಡಲು ನಿರ್ಧರಿಸಿದ್ದೇವೆ' ಎಂದಿದ್ದರು ಕೃತಿ.

  ಇನ್ನುಳಿದಂತೆ ತಮಿಳಿನಲ್ಲಿ 'ವಾನ್' ಮತ್ತು ಹಿಂದಿಯಲ್ಲಿ ಒಂದು ಸಿನಿಮಾ ತೆರೆಕಾಣಲು ಸಜ್ಜಾಗಿದೆ.

  English summary
  Kannada actress Kriti Kharbanda Shares Romantic Photo with Boyfriend Pulkit Samrat on his Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X