ವಿದ್ಯಾಭ್ಯಾಸಕ್ಕೆ ನೆರವಾಗಿ, ಕೈತುಂಬಾ ಹಣ ನೀಡಿದವನಿಗೆ ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿದ ಖ್ಯಾತ ನಾಯಕಿ...!
ಜೀವನದಲ್ಲಿ ಯಾವುದನ್ನೇ ಮರೆತರೂ ಭಾವನಾತ್ಮಕವಾಗಿ ಹತ್ತಿರವಾದವರು ಮೋಸ ಮಾಡಿದ ವಿಚಾರವನ್ನು ಮಾತ್ರ ಮರೆಯಲು ಸಾಧ್ಯ ಇಲ್ಲ. ಅದರಲ್ಲಿಯೂ ಪ್ರೀತಿಯಲ್ಲಿ ಮೋಸ ಹೋದರೆ ಒಮ್ಮೊಮ್ಮೆ ಕೆಲವರು ಮಾನಸಿಕ ಹತೋಟಿಯನ್ನು ಕಳೆದುಕೊಳ್ಳುತ್ತಾರೆ. ವಿಚಲಿತರಾಗುತ್ತಾರೆ. ಆದರೆ, ಮೋಸ ಮಾಡಿದವರಿಗೆ ಇದ್ಯಾವದರ ಪರಿವೆ ಇರುವುದಿಲ್ಲ.ಅವರಷ್ಟಕ್ಕೇ ಅವರು ತಮ್ಮ ಬದುಕನ್ನು ಮುಂದೂಡುತ್ತಿರುತ್ತಾರೆ. ಉದಾಹರಣೆಗೆ ಕೃತಿ ಸನೋನ್. ಹೀಗೊಂದು ಆರೋಪವನ್ನು ವ್ಯಕ್ತಿಯೊಬ್ಬರು ಮಾಡಿದ್ದಾರೆ.
ಹೌದು, ಅಸಲಿಗೆ ವಾರದ ಹಿಂದೆ ರಣ್‌ವೀರ್ ಅಲ್ಲಾಬಾಡಿಯಾ ಅವರಿಗೆ ಕೃತಿ ಸನೋನ್ ಸಂದರ್ಶನವನ್ನು ನೀಡಿದ್ದರು. ಈ ಸಂದರ್ಶನದಲ್ಲಿ ತಮ್ಮ ಬದುಕಿನ ಅನೇಕ ಪುಟಗಳನ್ನು ಕೃತಿ ತಿರುವಿ ಹಾಕಿದ್ದರು. ಇದೇ ಸಮಯದಲ್ಲಿ ರಣ್‌ವೀರ್ ಪ್ರೀತಿಯಲ್ಲಿ ನೀವು ಎಂದಾದರೂ ಮೋಸ ಹೋಗಿದ್ದೀರಾ ಎಂದು ಪ್ರಶ್ನೆಯನ್ನು ಮಾಡಿದ್ದರು. ಇದಕ್ಕೆ ಕೃತಿ ಖಂಡಿತ ಅನುಮಾನವೇ ಬೇಡ ಎನ್ನುವ ಉತ್ತರವನ್ನು ನೀಡಿದ್ದರು. ಈಗ ಈ ಸಂದರ್ಶನದ ವಿಡಿಯೋ ಕೆಳಗೆ ಕೃತಿ ಸನೋನ್ ಪ್ರೀತಿಯಲ್ಲಿ ಮೋಸ ಹೋಗಿಲ್ಲ ಬದಲಿಗೆ ಪ್ರೀತಿಯ ಹೆಸರಿನಲ್ಲಿ ಬೇರೆಯವರಿಗೆ ಮೋಸ ಮಾಡಿದ್ದಾರೆ ಎನ್ನುವ ಆರೋಪವನ್ನು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡುವ ಮೂಲಕ ಮಾಡಿದ್ದಾರೆ.

ತಮ್ಮನ್ನೂ ತಾವು ಜೆಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ಹೇಳಿಕೊಂಡಿರುವ ಈ ವ್ಯಕ್ತಿ, ಕೃತಿ ಸನೋನ್ ಕೂಡ ಇದೇ ಕಾಲೇಜ್‌ನಲ್ಲಿ ನಮ್ಮ ಜೊತೆ ಕಲಿಯುತ್ತಿದ್ದರು ಎಂದು ಹೇಳಿದ್ದಾರೆ. ಮುಂದುವರೆದು ವಿದ್ಯಾಭ್ಯಾಸದ ಸಮಯದಲ್ಲಿ ಶ್ರೀಮಂತ ಹುಡುಗನನ್ನು ಪರಿಚಯ ಮಾಡಿಕೊಂಡು ಅವನನ್ನು ಪ್ರೀತಿಸಿದ್ದ ಕೃತಿ ಹಣಕಾಸಿನ ವಿಚಾರದಲ್ಲಿ ಆ ಹುಡುಗನ ಮೇಲೆಯೇ ಕೃತಿ ಸಂಪೂರ್ಣವಾಗಿ ಅವಲಂಬಿತರಾಗಿದ್ದರು ಎಂದು ಹೇಳಿದ್ದಾರೆ.
ಆ ಹುಡುಗನ ಸಹಾಯದಿಂದನೇ ಮುಂಬೈಗೆ ಬಂದ ಕೃತಿ ಸನೋನ್ ಆ ನಂತರ ಅವನ ಜೊತೆ ಲಿವ್ ಇನ್ ಸಂಬಂಧದಲ್ಲಿ ಕೂಡ ಇದ್ದರು ಎಂದು ಹೇಳಿರುವ ಈ ವ್ಯಕ್ತಿ ಅದ್ಯಾಗೂ ಚಿತ್ರರಂಗದಲ್ಲಿ ಅವಕಾಶ ಸಿಗುತ್ತಿದ್ದಂತೆಯೇ ಕೃತಿ ತನ್ನ ವರಸೆಯನ್ನು ಬದಲಿಸಿದರು ಎಂದು ಹೇಳಿದ್ದಾರೆ. ಆ ಹುಡುಗನನ್ನು ದೂರ ಮಾಡಲು ಶುರು ಮಾಡಿದರು ಎಂದು ಹೇಳಿದ್ದಾರೆ. ಆರು ತಿಂಗಳು ಅವನ ಜೊತೆ ಅವನಿಗೆ ಮೋಸ ಮಾಡಿ ಕೃತಿ ಹೋದರು ಎಂದು ಹೇಳಿದ್ದಾರೆ.
ಸದ್ಯ ಈ ವಿಚಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾದ ಚರ್ಚೆ ನಡೆಯುತ್ತಿದೆ. ವಿಶೇಷ ಅಂದರೆ ಬಹುತೇಕರು ಕೃತಿ ಸನೋನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. 5Gಯ ಈ ಯುಗದಲ್ಲಿ ಪ್ರತಿಷ್ಠಿತ ವ್ಯಕ್ತಿಗಳ ಮೇಲೆ ಯಾರ ಬೇಕಾದರೂ ಆರೋಪ ಮಾಡಬಹುದು, ಚಾರಿತ್ರ್ಯಹರಣವನ್ನು ಮಾಡಬಹುದು ಎನ್ನುವುದಕ್ಕೆ ಇದು ಕ್ಲಾಸಿಕ್ ಎಕ್ಸಾಂಪಲ್ ಎನ್ನುತ್ತಿದ್ದಾರೆ. ಎಲ್ಲೋ ಕುಳಿತು ಹೀಗೆ ನಟಿಯ ಬಗ್ಗೆ ಮಾತನಾಡಲು ನಾಚಿಕೆಯಾಗಲ್ವಾ ಎಂದು ಆರೋಪ ಮಾಡಿರುವ ವ್ಯಕ್ತಿಗೆ ಛೀಮಾರಿಯನ್ನು ಹಾಕುತ್ತಿದ್ದಾರೆ. ಇನ್ನು ಕೆಲವರು ಆರೋಪ ಮಾಡಿರುವ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಕೃತಿ ಸನೋನ್ ಅವರಲ್ಲಿ ಆಗ್ರಹಿಸುತ್ತಿದ್ದಾರೆ.
ಅಂದ್ಹಾಗೇ ಟೈಗರ್ ಶ್ರಾಫ್ ಅಭಿನಯದ ಹೀರೋಪಂಥಿ ಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನು ಪ್ರವೇಶಿಸಿದ ಕೃತಿ ಸನೋನ್ ಸದ್ಯ ಯುಕೆ ಮೂಲದ ಉದ್ಯಮಿ ಕಬೀರ್ ಬಾಹಿಯಾ ಅವರ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ. ಮುಂದಿನ ವರ್ಷ ಮದ್ವೆ ಕೂಡ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಹಲವು ಬಾರಿ ಈ ಹಿಂದೆ ಕ್ಯಾಮರಾ ಕಣ್ಣಿನಲ್ಲಿ ಕಬೀರ್ ಜೊತೆ ಸೆರೆಯಾದ ಕೃತಿ ಹೊಸ ವರ್ಷವನ್ನು ಕೂಡ ಕಬೀರ್ ಜೊತೆಯಲ್ಲಿಯೇ ಸ್ವಾಗತಿಸಿದ್ದಾರೆ. ಇನ್ನು ಸದ್ಯ ಕೇಳಿ ಬರುತ್ತಿರುವ ಮಾತುಗಳ ಪ್ರಕಾರ ಕೃತಿ ಈ ವರ್ಷವೇ ಕಬೀರ್ ಜೊತೆ ಮದುವೆಯಾಗಲಿದ್ದಾರೆ.
I love Kriti Sanon but...
byu/TrafficGlider inBollyBlindsNGossip


Click it and Unblock the Notifications










