ಕಾಕ್‌ಟೇಲ್ ಚೆಲುವೆ ಕೃತಿ ಸನೋನ್‌ಗೆ ಕೈ ಕೊಟ್ಟ ಧೋನಿ ಅತ್ಯಾಪ್ತ ? ವೈರಲ್ ಫೋಟೊ ಹಿಂದಿನ ಅಸಲಿ ಸತ್ಯವೇನು ?

ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟಿಕೊಳ್ತಾವೆ. ಹಾಗಂತೆ.. ಹೀಗಂತೆ .. ಎಂಬ ಅಂತೆ ಕಂತೆ ಸಂತೆಯಲ್ಲಿ ಹಲವಾರು ಸುದ್ದಿಗಳು ಸದ್ದು ಮಾಡುತ್ತಾವೆ.

ಹೀಗೆ ಸದ್ದು ಮಾಡುವ ಸುದ್ದಿಗಳಲ್ಲಿ ಅರ್ಧ ಸತ್ಯವಾದರೆ ಉಳಿದಿದೆಲ್ಲವೂ ಮಿಥ್ಯ ಆಗಿರುತ್ತಾವೆ. ಇನ್ನು ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಬ್ರೇಕಪ್ಪು ಲವ್ವು.. ಡವ್ವು.. ಕಡಿಮೆ ಇಲ್ಲ. ಹೀಗಾಗಿ ಹಲವರು ಹಬ್ಬಿರುವ ಸುದ್ದಿಗಳನ್ನು ನಿಜಾ ಎಂದುಕೊಳ್ಳುತ್ತಾರೆ. ಸದ್ಯ ''ಕಾಕ್‌ಟೇಲ್ 2'' ನಟಿ ಕೃತಿ ಸನೋನ್ ಅವರ ವೈಯಕ್ತಿಕ ಬದುಕಿನ ವಿಚಾರದಲ್ಲಿ ಇದೇ ಆಗಿದೆ.

Kriti Sanon and Kabir Bahia Part Ways The Real Story Behind That Viral Photo

ಹೌದು, ಕೃತಿ ಸನೋನ್.. ''ಹೀರೋಂಪತಿ'' ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ಚೆಲುವೆ. ಮೊದಲ ಚಿತ್ರದಲ್ಲಿಯೇ ತನ್ನ ಅಂದ ಚೆಂದದಿಂದ ಕಣ್ಮನ ಸೆಳೆದ ಕೃತಿ ಸನೋನ್ ಆ ನಂತರ ಚಿತ್ರರಂಗದಲ್ಲಿ ಒಂದೊಂದೆ ಮೆಟ್ಟಿಲೇರಿದರು.

ಇನ್ನೂ.. ಹಿಂದಿ ಉದ್ಯಮದಲ್ಲಿ ಲವ್ವು-ನೋವು ಎರಡು ತುಂಬಾ ಮಾಮೂಲು. ಇದಕ್ಕೆ ಕೈಗನ್ನಡಿ ಎಂಬಂತೆ ವೃತ್ತಿಯ ಆರಂಭದಲ್ಲಿಯೇ ತನ್ನ ಮೊದಲ ಚಿತ್ರ ''ಹೀರೋಪಂತಿ''ಯ ಹೀರೋ ಟೈಗರ್ ಶ್ರಾಫ್ ಜೊತೆ ಕೃತಿ ಹೆಸರು ಕೇಳಿ ಬಂದಿತ್ತು.

ಆ ನಂತರ ಸುರಸುಂದರಾಂಗ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕೃತಿ ಸನೋನ್ ಪ್ರೀತಿ ಮಾಡುತ್ತಿದ್ದಾರೆ ಎಂದು ಬಾಲಿವುಡ್‌ ಮಾತನಾಡಿಕೊಂಡಿತ್ತು. ಆದರೆ ಅಷ್ಟರಲ್ಲಿ ಸುಶಾಂತ್ ಸಿಂಗ್ ರಜಪೂತ್ ನೇಣಿಗೆ ಕೊರಳೊಡ್ಡಿದರು. ಬಾರದ ಲೋಕಕ್ಕೆ ತೆರಳಿದರು. ಸುಶಾಂತ್ ಸಿಂಗ್ ರಜಪೂತ್ ಅವರ ಹಠಾತ್ ಅಗಲಿಕೆಯಿಂದ ಕೃತಿ ದಿಗ್ಬ್ರಾಂತರಾಗಿದ್ದರು. ಸುಶಾಂತ್ ನೆನೆದು ಅನೇಕ ಬಾರಿ ಕಣ್ಣೀರು ಕೂಡ ಹಾಕಿದ್ದರು.

ಈ ಕಾರಣಕ್ಕೆ ನಿಜವಾಗಿಯೂ ಕೃತಿ ಮತ್ತು ಸುಶಾಂತ್ ಪರಸ್ಪರ ಪ್ರೀತಿ ಮಾಡುತ್ತಿದ್ದರು ಎಂದು ಎಲ್ಲರು ಅಂದುಕೊಂಡರು. ಸುಶಾಂತ್ ಸಿಂಗ್ ರಜಪೂತ್ ಅಗಲಿಕೆಯ ನಂತರ ಕೃತಿ ಸನೋನ್ ಹೆಸರು ಪ್ರಭಾಸ್ ಸೇರಿ ಇನ್ನೂ ಮೂರು ನಾಲ್ಕು ಜನರ ಜೊತೆ ಕೇಳಿ ಬಂತು.

Kriti Sanon and Kabir Bahia Part Ways The Real Story Behind That Viral Photo

ಆದರೆ ಆ ಸುದ್ದಿಗಳೆಲ್ಲ ಅಂತೆ-ಸಂತೆಯಲ್ಲಿಯೇ ಮಾಯವಾದವು. ಈ ಕಾರಣಕ್ಕೆ ಕೃತಿ ಸದ್ಯಕ್ಕೆ ಏಕಾಂಗಿಯಾಗಿರಬಹುದು ಎಂದು ಹಲವರು ಅಂದುಕೊಂಡಿದ್ದರು. ಆದರೆ ಅಷ್ಟರಲ್ಲೇ ಕೃತಿ ಸನೋನ್ ಯುಕೆ ಮೂಲದ ಉದ್ಯಮಿ ಕಬೀರ್ ಬಹಿಯಾ ಜೊತೆ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ ಎನ್ನುವ ಸುದ್ದಿ ಹೊರ ಬಿತ್ತು.

ಇದಕ್ಕೆ ಪೂರಕವಾಗಿ ಕೃತಿ ಸನೋನ್ ಮತ್ತು ಕಬೀರ್ ಬಹಿಯಾ ಹಲವು ಬಾರಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದರು. ಮ್ಯಾಚಿಂಗ್ ಡ್ರೆಸ್ ಹಾಕಿಕೊಂಡು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ದುಬೈನಲ್ಲಿ ಕಬೀರ್ ಅವರ ಮನೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕೃತಿ ಭಾಗಿಯಾದರು. ಕಬೀರ್ ಅವರ ಕುಟುಂಬದ ಸದಸ್ಯರ ಜೊತೆ ಖುಷಿ ಖುಷಿಯಾಗಿ ಕಾಲವನ್ನು ಕಳೆದರು.

ಇಷ್ಟೇ ಅಲ್ಲ ಲಂಡನ್‌ನಲ್ಲಿ ಕೈ ಕೈ ಹಿಡಿದು ಇಬ್ಬರು ಸುತ್ತಾಡಿದ್ದರು. ಲಂಡನ್‌ನ ಬೀದಿಗಳಲ್ಲಿ ಜಗದ ಪರಿವೆ ಇಲ್ಲವೆಂಬಂತೆ ಬಿಂದಾಸ್ ಆಗಿ ಓಡಾಡಿದ್ದರು. ಗ್ರೀಸ್‌ನಲ್ಲಿ ಜೊತೆಯಾಗಿ ಬರ್ತ್‌ಡೇ ಆಚರಿಸಿಕೊಂಡಿದ್ದರು. ಇದೆಲ್ಲದರಿಂದ ಇಬ್ಬರ ಲವ್ ಸ್ಟೋರಿಗೆ ಇದಕ್ಕಿಂತ ಸಾಕ್ಷಿ ಬೇಕಾ ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗಿತ್ತು. ಆದರೆ ಈಗ ಇವರ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಹಬ್ಬಿದೆ.ಇದಕ್ಕೆ ಕಾರಣವಾಗಿದ್ದು ಒಂದು ಫೋಟೊ.

ಹೌದು, ಅಸಲಿಗೆ ಕಬೀರ್ ಬಹಿಯಾ ಅವರ ಭಾವಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಈ ಫೋಟೊದಲ್ಲಿ ಯುವತಿಯೊಬ್ಬರ ಜೊತೆ ಕಬೀರ್ ಕಾಣಿಸಿಕೊಂಡಿದ್ದಾರೆ. ಇಬ್ಬರಲ್ಲಿ ತುಂಬಾನೇ ಆತ್ಮೀಯತೆ ಇದೆ. ಹೀಗಾಗಿಯೇ ಹಲವರು ಕೃತಿ ಮತ್ತು ಕಬೀರ್ ಲವ್ ಸ್ಟೋರಿ ಅಂತ್ಯವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ರೆಡ್ಡಿಟ್ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಈ ಕುರಿತು ಚರ್ಚೆ ಮಾಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಈ ಫೋಟೊ ಹಿಂದಿನ ಸತ್ಯವೇ ಬೇರೆ.

Kriti Sanon and Kabir Bahia Part Ways The Real Story Behind That Viral Photo

ಕಬೀರ್ ಬಹಿಯಾ ಅವರ ಆಪ್ತ ಮೂಲ ಈ ವೈರಲ್ ಫೋಟೊ ಮತ್ತು ಅದರ ಸುತ್ತ ಮುತ್ತ ಕೇಳಿ ಬರುತ್ತಿರುವ ಸುದ್ದಿಗಳಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ದು ಕಬೀರ್ ಮತ್ತು ಆ ಹುಡುಗಿಯ ನಡುವೆ ಇರುವುದು ಪ್ರೇಮ ಸಂಬಂಧ ಅಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದೆ. ಸಂಬಂಧವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದೆ.

ಕಬೀರ್ ಜೊತೆ ಕಾಣಿಸಿಕೊಂಡ ಆ ಯುವತಿ ಅವರ ಬಾಲ್ಯದ ಗೆಳತಿ, ಕುಟುಂಬಕ್ಕೆ ಆಕೆ ತುಂಬಾನೇ ಆಪ್ತಳು ಎಂದು ಹೇಳಿರುವ ಕಬೀರ್ ಅವರ ಆಪ್ತ ಮೂಲ ಆ ಹುಡುಗಿಯನ್ನು ಕಬೀರ್ ತಮ್ಮ ಸಹೋದರಿಯಂತೆ ಕಾಣುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ಹೇಳಿದೆ. ಸತ್ಯಾಸತ್ಯತೆ ಪರಿಶೀಲಿಸದೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಕಥೆಯನ್ನು ಹೆಣೆಯುವುದಕ್ಕೆ ಬೇಸರವನ್ನು ಕೂಡ ವ್ಯಕ್ತಪಡಿಸಿದೆ.

ಅಂದ್ಹಾಗೇ ಕೃತಿ ಸನೋನ್ ಹೃದಯ ಗೆದ್ದಿರುವ ಈ ಕಬೀರ್ ಬಹಿಯಾ ಮತ್ತು ಭಾರತ ತಂಡದ ಮಾಜಿ ಕ್ರಿಕೆಟ್ ಪ್ಲೇಯರ್ ಮತ್ತು ಕ್ಯಾಪ್ಟನ್ ಎಂ.ಎಸ್.ಧೋನಿ ನಡುವೆ ಗಳಸ್ಯ ಕಂಠಸ್ಯ ಸ್ನೇಹ ಇದೆ.

ಕೇವಲ ಎಂ.ಎಸ್.ಧೋನಿ ಮಾತ್ರ ಅಲ್ಲ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯಗೆ ಕೂಡ ಕಬೀರ್ ಬಹಿಯಾಗೆ ಅತ್ಯಾಪ್ತರು. ಇನ್ನೂ ಕ್ರೀಡೆ ಅಂದರೆ ಇವರಿಗೆ ಅಚ್ಚು ಮೆಚ್ಚು. ಯುಕೆ ಅಲ್ಲಿ ಸೌತ್ ಹಾಲ್ ಟ್ರಾವೆಲ್ಸ್‌ ಹೆಸರಿನಲ್ಲಿ ಟ್ರಾವೆಲ್ ಏಜೆನ್ಸಿ ಹೊಂದಿರುವ ಕಬೀರ್ ಅವರ ತಂದೆ ಕುಲ್ಜಿಂದರ್ ಬಹಿಯಾ ಯುಕೆ ಅಲ್ಲಿರುವ ಕೋಟ್ಯಾಧಿಪತಿಗಳಲ್ಲಿ ಒಬ್ಬರು. ಒಂದು ಮೂಲದ ಪ್ರಕಾರ ಇವರ ಒಟ್ಟು ಆಸ್ತಿ 4000 ಕೋಟಿ.

ಇನ್ನುಳಿದಂತೆ ಕಬೀರ್ ಅವರ ವಯಸ್ಸು ಕೇವಲ 26. ಆದರೆ ಕೃತಿಗೆ ಈಗ 35ರ ಹರೆಯ. ಈ ಕಾರಣಕ್ಕೆ ತಮಗಿಂತ ಒಂಬತ್ತು ವರ್ಷ ಚಿಕ್ಕವನ ಜೊತೆ ಸಪ್ತಪದಿಯನ್ನು ಕೃತಿ ತುಳಿಯುತ್ತಾರಾ ಎನ್ನುವ ಪ್ರಶ್ನೆ ಕೂಡ ಸದ್ಯ ಅನೇಕರಲ್ಲಿದೆ. ಈ ಪ್ರಶ್ನೆಗೆ ಅಧಿಕೃತವಾದ ಉತ್ತರ ಶೀಘ್ರವೇ ಸಿಗುವ ಸಾಧ್ಯತೆ ಇದೆ.

English summary
Are Kriti Sanon and Kabir Bahia calling it quits? Here is the real truth behind the viral photos of Kabir with another girl that have fans shocked.
Read more about: rumours kriti sanon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X