ಆ ವಿಚಾರದಲ್ಲಿ ನಿರ್ಮಾಪಕರಿಗೆ ಮೊದಲು ನೆನಪಾಗೋದೇ ನಾಯಕಿಯರು ; ಕಿಡಿ ಕಾರಿದ ಕೃತಿ ಸನೋನ್

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪುರುಷ ಪ್ರಧಾನ ಚಿತ್ರರಂಗದಲ್ಲಿ ನಾಯಕರದ್ದೇ ಕಾರುಬಾರು ಇತ್ತು. ಸಂಭಾವನೆ ವಿಚಾರದಲ್ಲಿಯೂ ನಾಯಕಿಯರಿಗೆ ಆಗ್ತಿದ್ದಿದ್ದು ಅನ್ಯಾಯನೇ. ನಾಯಕರಿಗೆ ಕೊಡಲಾಗುತ್ತಿದ್ದ ಸಂಭಾವನೆಯ ಅರ್ಧದಷ್ಟು ಹಣ ನಾಯಕಿಗೆ ಕೊಡಲು ಹಿಂದೇಟು ಹಾಕ್ತಿದ್ದ ಕಾಲ ಅದು.

ಆದರೆ ಈಗ ಕಾಲ ಪರಿಸ್ಥಿತಿ ಬದಲಾಗಿದೆ. ನಾಯಕರಿಗೆ ಸರಿಸಮಾನವಾಗಿ ನಾಯಕಿಯರು ಕೂಡ ಸಂಭಾವನೆ ಪಡೆಯುತ್ತಿದ್ದಾರೆ. ಹಾಗಂಥ ಎಲ್ಲರಿಗೂ ಈ ಸೌಭಾಗ್ಯ ಇಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು.. ಅದೃಷ್ಟವಂತ ನಾಯಕಿಯರಿಗೆ ಮಾತ್ರ ಕೈತುಂಬಾ ಕಾಸು ಸಿಗುತ್ತೆ. ಮಿಕ್ಕಂತೆ ಉಳಿದವರ ಕೈಗೆ ಸಿಗುವುದು ಬಿಡಿಗಾಸು ಮಾತ್ರ. ಚಿತ್ರರಂಗದ ಇದೇ ಧೋರಣೆಯನ್ನು ಕೃತಿ ಸನೋನ್ ಖಂಡಿಸಿದ್ದಾರೆ.

Kriti Sanon Fires Back Why are Heroines the First Target for Cost-Cutting

ಹೌದು, ಕೃತಿ ಸನೋನ್.. ಮಹೇಶ್ ಬಾಬು ಅಭಿನಯದ ''ಒನ್: ನೇನೊಕ್ಕಡಿನೆ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಸುಂದರಿ. ಆ ನಂತರ ''ಹೀರೋಪಂತಿ'' ಚಿತ್ರದ ಮೂಲಕ ಬಾಲಿವುಡ್‌ಗೆ ಇವರು ಹಾರಿದರು. ಹಿಂದಿಯಲ್ಲಿ ಮೊದಲ ಚಿತ್ರದಲ್ಲಿಯೇ ತನ್ನ ಅಂದ ಚೆಂದದಿಂದ ಕಣ್ಮನ ಸೆಳೆದ ಕೃತಿ ಸನೋನ್ ಆ ನಂತರ ಚಿತ್ರರಂಗದಲ್ಲಿ ಒಂದೊಂದೆ ಮೆಟ್ಟಿಲೇರಿದರು.

''ಬರೇಲಿ ಕಿ ಬರ್ಫಿ''.. ''ಲುಕ್ಕಾ ಚುಪ್ಪಿ''.. ''ಹೌಸ್‌ಫುಲ್ 4''.. ''ಭೇಡಿಯಾ''.. ''ತೇರೆ ಇಷ್ಕ್ ಮೇ''.. ಇವರ ಕೆಲ ಪ್ರಮುಖ ಸಿನಿಮಾಗಳು. ''ಮಿಮಿ'' ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು ಕೃತಿ ಸನೋನ್. ಇಂದು ಕೃತಿ ಹಿಂದಿ ಉದ್ಯಮದ ಬಹುಬೇಡಿಕೆಯ ಚೆಲುವೆ. ಆದರೆ.. ಇವರಿಗೆ ಬೇಡಿಕೆ ಇದೆ. ಹಣ ಮಾತ್ರ ಕೈತುಂಬಾ ಸಿಕ್ತಿಲ್ಲ. ಹೀಗಾಗಿಯೇ ಪುರುಷ ಪ್ರಧಾನ ಚಿತ್ರರಂಗದ ಕುರಿತು ಕೃತಿ ಕಿಡಿ ಕಾರಿದ್ದಾರೆ. ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಈ ಕುರಿತು ''ಜಿಕ್ಯೂ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕೃತಿ ಸನೋನ್ ಚಿತ್ರದ ಬಜೆಟ್‌ನಲ್ಲಿ ನಾಯಕರದ್ದೇ ಪಾರುಪಥ್ಯ ಇರುತ್ತೆ ಎಂದು ಹೇಳಿದ್ಧಾರೆ. ನಿರ್ಮಾಪಕರು ಹಣ ಉಳಿಸಬೇಕು ಅಂದರೆ ಅವರಿಗೆ ಮೊದಲು ನೆನಪಾಗುವುದೇ ನಾಯಕಿಯರು ಎಂದು ಹೇಳಿರುವ ಕೃತಿ, ಸಂಭಾವನೆಯ ವಿಚಾರದಲ್ಲಿ ನಿರ್ಮಾಪಕರು ನಾಯಕಿಯರ ಜೊತೆ ತುಂಬಾ ಚೌಕಾಶಿ ಮಾಡುತ್ತಾರೆ ಎಂದು ಹೇಳಿದ್ದಾರೆ.

ಚಿತ್ರರಂಗದಲ್ಲಿ ಪುರುಷ ಪ್ರಧಾವ ವ್ಯವಸ್ಥೆ ಆಳವಾಗಿ ಬೇರೂರಿದೆ ಎಂದು ಹೇಳಿರುವ ಕೃತಿ ತಮ್ಮ ಬದುಕಿನ ಆರಂಭದ ದಿನಗಳನ್ನು ಕೂಡ ಮೆಲುಕು ಹಾಕಿದ್ದಾರೆ. ನಾನು ಬಂದ ನಂತರ ಚಿತ್ರರಂಗಕ್ಕೆ ಬಂದ ನನ್ನ ಸಹ ನಟನಿಗೆ ತಮಗಿಂತ ಉತ್ತಮವಾದ ಸೌಲಭ್ಯ ಮತ್ತು ಐಶಾರಾಮಿ ಕಾರು ನೀಡಲಾಗುತ್ತಿತ್ತು ಎಂದು ಹೇಳಿರುವ ಕೃತಿ ಸನೋನ್ ಇದು ಕಾರಿನ ವಿಷಯ ಅಲ್ಲ, ಸೌಲಭ್ಯದ ವಿಷಯ ಅಲ್ಲ ಬದಲಿಗೆ ಸಮಾನತೆಯ ವಿಷಯ ಎಂದಿದ್ದಾರೆ. ಸಮಾನ ಗೌರವ ನೀಡುವ ವಿಷಯ ಎಂದಿದ್ದಾರೆ.

Kriti Sanon Fires Back Why are Heroines the First Target for Cost-Cutting

ಇನ್ನು ಚಿತ್ರೀಕರಣದ ಸೆಟ್‌ಗಳಲ್ಲಿ ನಾಯಕ ನಟ ಕಾಯಬಾರದು ಎಂಬ ಕಾರಣಕ್ಕೆ, ನಾಯಕಿಯರು ಸಿದ್ಧರಿದ್ದಾರೆಯೇ ಎಂದು ಮೊದಲು ಪರಿಶೀಲಿಸುವ ಪ್ರವೃತ್ತಿ ಚಿತ್ರರಂಗದಲ್ಲಿ ಇದೆ ಇದು ಬದಲಾಗಬೇಕಿದೆ ಎಂದು ಹೇಳಿರುವ ಕೃತಿ ಸನೋನ್, ನಾಯಕನಿಗಾಗಿ ನಾಯಕಿಯರು ಕಾಯಬಹುದು ಆದರೆ ನಾಯಕಿಗಾಗಿ ಇಲ್ಲಿ ನಾಯಕ ಕಾಯುವಂತೆ ಇಲ್ಲ ಎಂದಿದ್ದಾರೆ. ಹೀಗೆ ಸಣ್ಣ ಪುಟ್ಟ ವಿಷಯಗಳಲ್ಲಿಯೂ ಚಿತ್ರರಂಗದಲ್ಲಿ ಲಿಂಗ ತಾರತಮ್ಯ ಎದ್ದು ಕಾಣುತ್ತೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಅಂದ್ಹಾಗೇ ಕೃತಿ ಸನೋನ್ ಈಗ ಕೇವಲ ನಾಯಕಿ ಮಾತ್ರ ಅಲ್ಲ ನಿರ್ಮಾಪಕಿ ಕೂಡ ಹೌದು. ಚಿತ್ರರಂಗದಲ್ಲಿನ ಈ ಅಸಮಾನತೆ ಹೊಗಲಾಡಿಸಲು ಎಂದೇ ಕೃತಿ ನಿರ್ಮಾಣ ಕ್ಷೇತ್ರಕ್ಕೆ ಧುಮುಕಿದ್ದಾರೆ. ''ದೋ ಪತ್ತಿ'' ಎಂಬ ಚಿತ್ರವನ್ನು ತಮ್ಮ ನಿರ್ಮಾಣ ಸಂಸ್ಥೆ ''ಬ್ಲೂ ಬಟರ್‌ಫ್ಲೈ ಫಿಲ್ಮ್ಸ್''ನಡಿ ನಿರ್ಮಾಣ ಮಾಡಿದ್ದಾರೆ. ಸದ್ಯ ಕೃತಿ ಸನೋನ್ ಅಭಿನಯದ ''ಕಾಕ್‌ಟೈಲ್ 2'' ತೆರೆಗೆ ಬರಬೇಕಿದೆ. ಈ ಚಿತ್ರ ಈ ಜೂನ್ 19ರಂದು ಬಿಡುಗಡೆಯಾಗಲಿದೆ.

English summary
There has been some struggle around money." Kriti Sanon breaks her silence on the unfair reality of Bollywood economics. Discover why top actresses are still fighting for equal pay and how producers justify cutting female salaries first.
Read more about: remuneration actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X