twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಾವಿನ ಕುರಿತು ಮೌನವಹಿಸಿದ್ದು ಏಕೆ ಎಂದು ಬಹಿರಂಗ ಪಡಿಸಿದ ಕೃತಿ ಸನೂನ್

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ ಕಳೆದ ವರ್ಷ ಬಾಲಿವುಡ್‌ನ ಹಾಟ್‌ ಟಾಪಿಕ್ ಆಗಿತ್ತು. ಸಿನಿಮಾ ಇಂಡಸ್ಟ್ರಿ, ರಾಜಕೀಯ ವಲಯ, ಸಾಮಾಜಿಕ ಜಾಲತಾಣ ಹೀಗೆ ಎಲ್ಲೆಡೆಯೂ ಸುಶಾಂತ್ ಸಾವಿನ ಪ್ರಕರಣ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಸುಶಾಂತ್ ಸಾವಿನ ಬಳಿಕ ಬಾಲಿವುಡ್ ಇಂಡಸ್ಟ್ರಿ ಎರಡು ಭಾಗವಾಯಿತು. ನೆಪೋಟಿಸಂ ವಿರುದ್ಧ ಸ್ಟಾರ್ ಕಲಾವಿದರು ತಿರುಗಿಬಿದ್ದರು. ಪ್ರಭಾವಿ ನಿರ್ಮಾಪಕ, ನಟರ ವಿರುದ್ಧ ಟೀಕೆ ವ್ಯಕ್ತವಾಯಿತು.

    ಕಂಗನಾ ರಣಾವತ್ ಬಹಿರಂಗವಾಗಿ ನೆಪೋಟಿಸಂ ಬಗ್ಗೆ ಅಸಮಾಧಾನ ಹೊರಹಾಕಿದರು. ಸುಶಾಂತ್ ಸಾವಿಗೆ ಬಾಲಿವುಡ್ ಪ್ರಭಾವಿಗಳು ಕಾರಣ ಎಂದು ಆರೋಪಿಸಿದರು. ಈ ಆರೋಪದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಒಳಗೊಳಗೆ ಬೆಂಕಿ ಹೊತ್ತಿ ಉರಿಯಿತು. ಇಂತಹ ಸಮಯದಲ್ಲಿ ನಾವು ಮಾತನಾಡದೆ ಇರುವುದು ಸೂಕ್ತ ಎಂದು ಅನೇಕರು ಮೌನವಹಿಸಿದರು. ಹೀಗೆ, ಸುಶಾಂತ್ ಸಾವಿನ ಬಳಿಕ ಮೌನವಾಗಿದ್ದವರಲ್ಲಿ ನಟಿ ಕೃತಿ ಸನೂನ್ ಸಹ ಒಬ್ಬರು. ಆ ಸಂದರ್ಭದಲ್ಲಿ ತಾನು ಏಕೆ ಮಾತನಾಡಲಿಲ್ಲ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಕೃತಿ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

    ಸುಶಾಂತ್ ಸಿಂಗ್ ಕೇಸ್: 33 ಮಂದಿ ವಿರುದ್ಧ 30 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಸುಶಾಂತ್ ಸಿಂಗ್ ಕೇಸ್: 33 ಮಂದಿ ವಿರುದ್ಧ 30 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

    ಅದರ ಸುತ್ತ ನಕಾರಾತ್ಮಕ ಶಕ್ತಿ ಇತ್ತು

    ಅದರ ಸುತ್ತ ನಕಾರಾತ್ಮಕ ಶಕ್ತಿ ಇತ್ತು

    ಖಾಸಗಿ ವೆಬ್‌ಸೈಟ್‌ವೊಂದಕ್ಕೆ ಸುಶಾಂತ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಕೃತಿ ಸನೂನ್ "ಒಂದು ಹಂತದಲ್ಲಿ ಈ ಘಟನೆ ತುಂಬ ದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿತ್ತು. ಅದರ ಸುತ್ತಲೂ ಹೆಚ್ಚು ನಕಾರಾತ್ಮಕ ಶಕ್ತಿ ಆವರಿಸಿತ್ತು. ನಾನು ಅದರ ಭಾಗವಾಗಲು ಇಷ್ಟಪಡಲಿಲ್ಲ. ಹಾಗಾಗಿ, ನಾನು ಅದರಿಂದ ದೂರವೇ ಉಳಿದೆ'' ಎಂದು ಕೃತಿ ಹೇಳಿಕೊಂಡಿದ್ದಾರೆ.

    ಗಟ್ಟಿಯಾಗಿ ಮಾತನಾಡುವ ಅಗತ್ಯವಿರಲಿಲ್ಲ

    ಗಟ್ಟಿಯಾಗಿ ಮಾತನಾಡುವ ಅಗತ್ಯವಿರಲಿಲ್ಲ

    ''ಆ ಪರಿಸ್ಥಿತಿ ಬಗ್ಗೆ ನನಗೆ ಅನಿಸಿದ್ದು ನನ್ನಲ್ಲೇ ಇರಿಸಲು ನಿರ್ಧರಿಸಿದೆ. ನಾನು ಭಾವಿಸಿದರ ಕುರಿತು ಯಾರೊಂದಿಗೂ ಚರ್ಚಿಸುವ ಅಥವಾ ಮಾತನಾಡುವ ಅಗತ್ಯವಿಲ್ಲ ಎನಿಸಿತು. ನಿಮಗೆ ಏನು ಅನಿಸುತ್ತದೆ ಅದನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಬಹುದು. ಗಟ್ಟಿಯಾಗಿ ಹೊರಗಡೆ ಮಾತನಾಡುವುದನ್ನು ಬಿಟ್ಟು ಬರವಣಿಗೆ ಮೂಲಕ ಅದನ್ನು ಹೊರ ಜಗತ್ತಿಗೆ ತಿಳಿಸುವುದೇ ಒಳ್ಳೆಯದು ಅಲ್ಲವೇ'' ಎಂದಿದ್ದಾರೆ.

    ಸುಶಾಂತ್ ಸಾವು: ಸಿಬಿಐ ವರದಿ ಬಗ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ಸುಶಾಂತ್ ಸಾವು: ಸಿಬಿಐ ವರದಿ ಬಗ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

    2020 ಬಹಳ ಕೆಟ್ಟ ವರ್ಷ

    2020 ಬಹಳ ಕೆಟ್ಟ ವರ್ಷ

    2020 ಬಹಳ ಕೆಟ್ಟ ವರ್ಷ ಎಂದು ಕೃತಿ ಸನೂನ್ ಅಭಿಪ್ರಾಯ ಪಟ್ಟಿದ್ದಾರೆ. ''2020 ತನ್ನ ಜೀವನದ ಅತ್ಯಂತ ಕೆಟ್ಟ ವರ್ಷ, ನನ್ನಿಂದ ಸಾಧ್ಯವಾದರೆ ಈ ವರ್ಷವನ್ನು ಅಳಿಸಿ ಹಾಕಿಬಿಡುತ್ತೇನೆ'' ಎಂದು ಬೇಸರ ಹೊರಹಾಕಿದ್ದಾರೆ.

    Recommended Video

    ಯಾವ ಊರಿಗೆ ಯಾವಾಗ ಬರ್ತಾರೆ ಗೊತ್ತಾ ಪವರ್ ಸ್ಟಾರ್? | Yuvarathna | Puneeth Rajkumar | Filmibeat Kannada
    ರಾಬ್ತಾ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು

    ರಾಬ್ತಾ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು

    2017ರಲ್ಲಿ ಬಿಡುಗಡೆಯಾಗಿದ್ದ ರಾಬ್ತಾ ಚಿತ್ರದಲ್ಲಿ ಕೃತಿ ಸನೂನ್ ಮತ್ತು ಸುಶಾಂತ್ ಸಿಂಗ್ ಒಟ್ಟಿಗೆ ನಟಿಸಿದ್ದರು. ದಿನೇಶ್ ವಿಜನ್ ನಿರ್ದೇಶಿಸಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಅನುಭವಿಸಿತ್ತು. ಇನ್ನು 2020ರ ಜೂನ್ 14 ರಂದು ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಇನ್ನು ಅಂತಿಮ ವರದಿ ಸಲ್ಲಿಕೆ ಮಾಡಿಲ್ಲ.

    English summary
    Raabta movie co-star Kriti sanon react on Why She Remained Silent After Sushant singh Death.
    Saturday, March 20, 2021, 12:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X