ಬೋರ್ ಅಂತ ಹೀರೊ ಜೋಕ್: ಕೃತಿ ಸನೂನ್ ಶಾಕ್.. ಇಬ್ಬರ ಚಳಿ ಬಿಡಿಸಿದ ಪ್ರಭಾಸ್

ಡಾರ್ಲಿಂಗ್ ಪ್ರಭಾಸ್ ಹಾಗೂ ಕೃತಿ ಸನೂನ್ 'ಆದಿಪುರುಷ್' ಚಿತ್ರದಲ್ಲಿ ಶ್ರೀರಾಮ ಹಾಗೂ ಸೀತಾಮಾತೆ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನು 100 ದಿನ ಬಾಕಿಯಿದೆ. ಇದೆಲ್ಲದರ ನಡುವೆ ಪ್ರಭಾಸ್ ಹಾಗೂ ಕೃತಿ ಡೇಟಿಂಗ್ ಮಾಡ್ತಿದ್ದಾರೆ. ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ವದಂತಿ ಹರಿದಾಡಿತ್ತು. ಕೃತಿ ಸ್ಪಷ್ಟನೆ ನೀಡಿದರೂ ಯಾರು ಕೇಳಲಿಲ್ಲ.

ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಡುವೆ ಸಂಥಿಂಗ್ ಸಂಥಿಂಗ್ ನಡೀಯಿದೆ. ಇಬ್ಬರು ಮದುವೆ ಆಗುತ್ತಾರೆ ಎನ್ನುವ ಗಾಸಿಪ್ ಹಲವು ವರ್ಷಗಳಿಂದ ಕೇಳಿಬರ್ತಿದೆ. ಆದರೆ ಪ್ರಭಾಸ್ ಜೊತೆ ಕೃತಿ ಹೆಸರು ಸೇರಿಕೊಂಡಿದ್ದು ಮಾತ್ರ ವರುಣ್ ಧವನ್ ಕೊಟ್ಟ ಅದೊಂದು ಹೇಳಿಕೆಯಿಂದ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ
ಈ ಬಗ್ಗೆ ಮತ್ತೆ ಕೃತಿ ಪ್ರತಿಕ್ರಿಯಿಸಿದ್ದಾರೆ. ವರುಣ್ ಧವನ್ ಮಾಡಿದ ಜೋಕ್ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಯಿತು. ಏನು ಮಾಡೋದು ಆತ ನನ್ನ ಸ್ನೇಹಿತ. ಅವನೊಬ್ಬ ಹುಚ್ಚು ಎಂದಿದ್ದಾರೆ.

Kriti Sanon says Varun Dhawan spread the rumour that she is dating with Prabhas

ಕರಣ್ ಜೋಹರ್ ಶೋನಲ್ಲಿ ವರುಣ್‌ ಧವನ್ ಮಾತನಾಡುತ್ತಾ "ಕೃತಿ ಹೆಸರು ಬೇರೆ ವ್ಯಕ್ತಿಯ ಹೃದಯಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ" ಎಂದಿದ್ದರು. ಪ್ರಭಾಸ್- ದೀಪಿಕಾ ಜೊತೆ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ನಟಿಸ್ತಿದ್ದಾರೆ. ಹಾಗಾಗಿ ವರುಣ್ ಹೇಳಿದ್ದು ಪ್ರಭಾಸ್ ಬಗ್ಗೆನೇ ಎಂದು ಎಲ್ಲರೂ ಅಂದುಕೊಂಡರು. ಅಂದು ವರುಣ್ ಆ ರೀತಿ ಯಾಕೆ ಹೇಳಿದ್ದು ಎನ್ನುವುದನ್ನು ಇದೀಗ ಕೃತಿ ರಿವೀಲ್ ಮಾಡಿದ್ದಾರೆ. ಆ ದಿನ ನನಗೂ ಇದನ್ನು ಕೇಳಿ ಶಾಕ್ ಆಯಿತು ಎಂದಿದ್ದಾರೆ.

"ವರುಣ್‌ ಧವನ್ ಕ್ರೇಜಿಯಾಗಿ ಹೇಳಿದ ಜೋಕ್ ನಾವಿಬ್ಬರು ಸಿಕ್ಕಿ ಹಾಕಿಕೊಳ್ಳುವಂತೆ ಆಯಿತು. ವರುಣ್‌- ನಾನು ಬೇಡಿಯಾ ಪ್ರಮೋಷನ್‌ನಲ್ಲಿ ಭಾಗಿ ಆಗಿದ್ದೆವು. ಸಾಲು ಸಾಲು ಸಂದರ್ಶನ ಕೊಟ್ಟು ಆತನಿಗೆ ಬೋರ್ ಆಗಿತ್ತು. ಏನಾದರೂ ಸಂಥಿಂಗ್ ಮಾಡಬೇಕು ಎಂದ. ಏನಾದರೂ ಗಾಸಿಪ್ ಹಬ್ಬಿಸೋಣ ಎಂದ. ನನ್ನ ಜೀವನದಲ್ಲಿ ಒಬ್ಬ ಸ್ಪೆಷಲ್ ವ್ಯಕ್ತಿ ಇದ್ದಾರೆ ಎಂದು ಹೇಳ್ತೀನಿ ಎಂದ. ನಾನು ಕೂಡ ಓಕೆ ಎಂದೆ. ಅದೇ ರೀತಿ ಸಂದರ್ಶನದಲ್ಲಿ ನನ್ನ ಒಬ್ಬರು ಇದ್ದಾರೆ ಎಂದು ಹೇಳಿದ್ದ. ಅಲ್ಲಿವರೆಗೂ ಓಕೆ. ಆದರೆ ಅದರಲ್ಲಿ ಪ್ರಭಾಸ್ ಹೆಸರು ತರ್ತಾನೆ ಎಂದುಕೊಳ್ಳಿಲಿಲ್ಲ"

Kriti Sanon says Varun Dhawan spread the rumour that she is dating with Prabhas

"ಅದು ಆತ ಮಾಡಿದ ಎಡವಟ್ಟು. ಈ ರೀತಿ ಎಡವಟ್ಟು ಆಯಿತು ಎಂದು ನಾನು ಪ್ರಭಾಸ್‌ಗೆ ಹೇಳೋಣ ಎಂದು ಫೋನ್ ಮಾಡಿದ್ದೆ. ಆದರೆ ಪ್ರಭಾಸ್, ವರುಣ್ ಆ ರೀತಿ ಹೇಳಿದ್ಯಾಕೆ ಎಂದು ತಿರುಗಿಸಿ ಕೇಳಿದರು. ನನಗೂ ಗೊತ್ತಿಲ್ಲ ಎಂದು ಹೇಳಿದೆ. ಆತ ನನ್ನ ಸ್ನೇಹಿತ, ಕೊಂಚ ಹುಚ್ಚ. ಏನೇನೋ ಮಾತನಾಡುತ್ತಾನೆ ಎಂದು ಹೇಳಿದೆ. ಹೀಗೆ ವರುಣ್ ಮಾಡಿದ ಎಡವಟ್ಟಿನಿಂದ ಎಲ್ಲರೂ ನನಗೆ ಶುಭಾಶಯ ಕೋರಿ ಮೆಸೇಜ್ ಮಾಡಲು ಆರಂಭಿಸಿದರು. ಹಾಗಾಗಿ ಕೊನೆಗೆ ನಾನೇ ಸ್ಪಷ್ಟನೆ ಕೊಡಬೇಕಾಯಿತು ಎಂದು ಕೃತಿ ಸನೂನ್ ವಿವರಿಸಿದ್ದಾರೆ. ಒಟ್ನಲ್ಲಿ ಎಲ್ಲದಕ್ಕೂ ಕಾರಣ ವರುಣ್ ಎಂದು ಕೃತಿ ಹೇಳಿದ್ದಾರೆ. ಇದಕ್ಕೆ ಇಲ್ಲಿಗೆ ಬ್ರೇಕ್ ಬೀಳುತ್ತಾ ಕಾದು ನೋಡಬೇಕು.

ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಟೀಸರ್ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿನಿಮಾ ರೀವರ್ಕ್ ನಡೀತಿದೆ. ಜೂನ್ 16ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ರಾಮಾಯಣ ಕಾವ್ಯ ಆಧರಿಸಿ ಸಿನಿಮಾ ತೆರೆಗೆ ತರಲಾಗುತ್ತಿದೆ.

More from Filmibeat

English summary
Kriti Sanon says Varun Dhawan spread the rumour that she is dating with Prabhas. She addressed the rumours that she is dating Prabhas In Recent interview. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X