ಬಾಲಿವುಡ್ ನಟಿ ಕೃತಿ ಸನೊನ್‌ಗೆ ಕೊರೊನಾ ನೆಗಿಟಿವ್

ಬಾಲಿವುಡ್ ನಟಿ ಕೃತಿ ಸನೊನ್‌ಗೆ ಕೊರೊನಾ ನೆಗಿಟಿವ್ ಬಂದಿದೆ. ಡಿಸೆಂಬರ್ 9 ರಂದು ನಟಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದೀಗ, ಕೊವಿಡ್ ನೆಗಿಟಿವ್ ಬಂದಿದೆ ಎಂದು ಸ್ವತಃ ನಟಿ ಹೇಳಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ನಟಿ ಕೃತಿ ಸನೊನ್ ನನ್ನ ಬಗ್ಗೆ ಕಾಳಜಿ ವಹಿಸಿದ ಅಭಿಮಾನಿಗಳಿಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

''ಅಂತಿಮವಾಗಿ ನಾನು COVID-19 ಗಾಗಿ ನೆಗಿಟಿವ್ ಪರೀಕ್ಷಿಸಿದ್ದೇನೆ ಎಂದು ಎಲ್ಲರಿಗೂ ತಿಳಿಸಲು ಸಂತೋಷವಾಗಿದೆ. ನನ್ನ ಬಗ್ಗೆ ಕಾಳಜಿ ವಹಿಸಿದ ಮುಂಬೈ ಪಾಲಿಗೆ, ವೈದ್ಯರು ಹಾಗು ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದ'' ಎಂದು ತಿಳಿಸಿದ್ದಾರೆ.

Kriti sanon tested Negative for COVID-19

ಕಳೆದ ವಾರ ರಾಜ್ ಕುಮಾರ್ ರಾವ್ ನಾಯಕನಾಗಿ ನಟಿಸುತ್ತಿರುವ ಹಿಂದಿ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಚಂಡೀಗಢದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ನಟಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು.

ನಂತರ ಚಂಡೀಗಢದಿಂದ ಮುಂಬೈಗೆ ಬಂದ ನಟಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಸಹ ನೀಡಿದ್ದರು.

'ನನಗೆ ಕೊರೊನಾ ಪಾಸಿಟಿವ್ ಬಂದಿರುವುದು ನಿಜ. ನಾನು ಚೆನ್ನಾಗಿದ್ದೇನಿ. ಬಿಎಂಸಿ ಮತ್ತು ನನ್ನ ವೈದ್ಯರ ಸಲಹೆಯಂತೆ ನಾನು ಕ್ವಾರಂಟೈನ್ ಆಗಿದ್ದೇನೆ. ಭಯ ಪಡಬೇಕಾಗಿಲ್ಲ. ವಿಶ್ರಾಂತಿ ಪಡೆದು ಮತ್ತೆ ಚಿತ್ರೀಕರಣಕ್ಕೆ ಹೊರಡುತ್ತೇನೆ. ಎಲ್ಲರ ವಿಶ್ ಗಳನ್ನು ಓದುತ್ತಿದ್ದೇನೆ. ಎಲ್ಲರೂ ಸುರಕ್ಷಿತವಾಗಿರಿ. ಕೊರೊನಾ ಇನ್ನೂ ಹೋಗಿಲ್ಲ.' ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.

ಮತ್ತೊಂದೆಡೆ ನಟ ವರುಣ್ ಧವನ್ ಹಾಗೂ ನಟಿ ನೀತು ಕಪೂರ್ ಗೂ ಕೊರೊನಾ ತಗುಲಿತ್ತು. ಅವರು ಸಹ ಮುಂಬೈಗೆ ಬಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

More from Filmibeat

English summary
Bollywood Actress Kriti sanon tested Negative for COVID-19. she confirm the news in twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X