For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಜೊತೆ ಪ್ರೀತಿ-ಪ್ರೇಮ: ಕೊನೆಗೂ ಬಾಯ್ಬಿಟ್ಟ ಕೃತಿ ಸೆನನ್

  |

  ಅನುಷ್ಕಾ ಶೆಟ್ಟಿ ಸೇರಿ ಹಲವು ನಟಿಯರೊಟ್ಟಿಗೆ ಪ್ರಭಾಸ್ ಹೆಸರು ಕೇಳಿ ಬಂದಿತ್ತು. ಆದರೆ ಅದೆಲ್ಲವೂ ಸುಳ್ಳಾಗಿತ್ತು. ಇದೀಗ ಪ್ರಭಾಸ್ ಹೆಸರು ಬಾಲಿವುಡ್ ನಟಿ ಕೃತಿ ಸೆನನ್ ಜೊತೆ ಕೇಳಿಬರುತ್ತಿದೆ.

  'ಅದಿಪುರುಷ್' ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿರುವ ಪ್ರಭಾಸ್ ಹಾಗೂ ಕೃತಿ ಸೆನನ್ ಡೇಟಿಂಗ್ ಮಾಡುತ್ತಿದ್ದಾರೆ. ಪ್ರಭಾಸ್ ಅವರೇ ಕೃತಿ ಸೆನನ್‌ಗೆ ಪ್ರೊಪೋಸ್ ಮಾಡಿದ್ದಾರೆ ಎಂಬಿತ್ಯಾದಿ ಮಾತುಗಳು ಕೇಳಿ ಬರುತ್ತಿವೆ.

  ಅಸಲಿಗೆ ಇವರಿಬ್ಬರ ಪ್ರೇಮದ ವಿಷಯವನ್ನು ಹೊರ ಹಾಕಿದ್ದು ಸಹ ಬಾಲಿವುಡ್ ನಟ ವರುಣ್ ಧವನ್. ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ ವರುಣ್ ಧವನ್, ''ಕೃತಿ ಸೆನನ್ ಹೃದಯವನ್ನು ಕದ್ದಿರುವವನು ಈಗ ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್ ಮಾಡುತ್ತಿದ್ದಾನೆ. ಆದ ದಕ್ಷಿಣ ಭಾರತದ ನಟ'' ಎಂದೆಲ್ಲ ಸುಳಿವುಗಳನ್ನು ನೀಡಿದ್ದರು. ಆದರೆ ಇದೀಗ ತಮ್ಮ ಹಾಗೂ ಪ್ರಭಾಸ್ ಬಗೆಗಿನ ಪ್ರೇಮ ವಿಚಾರದ ಬಗ್ಗೆ ಸ್ವತಃ ಕೃತಿ ಸೆನನ್ ಮಾತನಾಡಿದ್ದಾರೆ.

  ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಕೃತಿ ಸೆನನ್, ''ಅದು ಪ್ರೀತಿಯೂ ಅಲ್ಲ, ಪ್ರಚಾರಕ್ಕಾಗಿ ಮಾಡಿದ ಸ್ಟಂಟ್ ಸಹ ಅಲ್ಲ. ನಮ್ಮ ತೋಳ (ವರುಣ್ ಧವನ್) ರಿಯಾಲಿಟಿ ಶೋನಲ್ಲಿ ಮಾತನಾಡುತ್ತಾ ತುಸು ಹೆಚ್ಚು ಎಕ್ಸೈಟ್ ಆಗಿ ಕಲ್ಪಿತ ವಿಷಯವಗಳನ್ನು ಮಾತನಾಡಿದ್ದಾರೆ. ಅವರು ತಮಾಷೆಗೆಂದು ಆಡಿದ ಮಾತುಗಳು ಗಂಭೀರ ತಿರುವು ತೆಗೆದುಕೊಂಡು ಬಿಟ್ಟಿವೆ'' ಎಂದಿದ್ದಾರೆ.

  ''ಕೆಲವು ವೆಬ್‌ಸೈಟ್‌ಗಳು, ನ್ಯೂಸ್ ಚಾನೆಲ್‌ಗಳು ನನ್ನ ಹಾಗೂ ಪ್ರಭಾಸ್ ಮದುವೆ ದಿನಾಂಕ ಘೋಷಿಸುವ ಮೊದಲು ನಾನೇ ಈ ಬಗ್ಗೆ ಸ್ಪಷ್ಟನೆ ನೀಡಿಬಿಡುತ್ತೇನೆ. ನನ್ನ ಹಾಗೂ ಪ್ರಭಾಸ್ ಪ್ರೀತಿಯ ಬಗ್ಗೆ ಹರಿದಾಡುತ್ತಿರುವ ರೂಮರ್‌ಗಳು ಸಂಪೂರ್ಣವಾಗಿ ಆಧಾರರಹಿತ. ಅವೆಲ್ಲವೂ ಸುಳ್ಳು ಸುದ್ದಿಗಳು'' ಎಂದಿದ್ದಾರೆ ಕೃತಿ ಸೆನನ್.

  ಕೃತಿ ಸೆನನ್ ಹಾಗೂ ಪ್ರಭಾಸ್ ಒಟ್ಟಿಗೆ 'ಆದಿಪುರುಷ್' ಸಿನಿಮಾದಲ್ಲಿ ನಟಿಸಿದ್ದಾರೆ. ರಾಮಾಯಣ ಕತೆ ಆಧರಿತ 'ಆದಿಪುರುಷ್' ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿಯೂ, ಕೃತಿ ಸೆನನ್ ಸೀತೆಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ಇವರಿಬ್ಬರ ನಡುವೆ ಪ್ರೀತಿ ಮೊಳೆತಿದೆ ಎಂದು ಹೇಳಲಾಗುತ್ತಿದೆ.

  ಕೃತಿ ಸೆನನ್ ನಟಿಸಿರುವ 'ಬೇಡಿಯಾ' ಸಿನಿಮಾದ ಬಿಡುಗಡೆ ಸಮಯದಲ್ಲಿ 'ಬೇಡಿಯಾ' ಸಿನಿಮಾದ ನಾಯಕ ವರುಣ್ ಧವನ್, ಕೃತಿ ಹಾಗೂ ಪ್ರಭಾಸ್ ವಿಷಯ ಬಿಚ್ಚಿಟ್ಟಿದ್ದರಿಂದ ಇದೊಂದು ಪಿಆರ್ ತಂತ್ರ ಎಂದೂ ಸಹ ಹಲವರು ಟೀಕಿಸಿದ್ದಾರೆ. ವರುಣ್ ಧವನ್ ತಮ್ಮ 'ಬೇಡಿಯಾ' ಸಿನಿಮಾದ ಬಗ್ಗೆ ಪ್ರಚಾರ ಮಾಡಲು ಪ್ರಭಾಸ್ ಹಾಗೂ ಕೃತಿ ಸೆನನ್ ಹೆಸರು ಬಳಸಿಕೊಂಡಿದ್ದಾರೆ ಎಂದಿದ್ದಾರೆ.

  English summary
  Actress Kriti Sanon opens about rumors of she dating Prabhas. She said there is no truth in that.
  Wednesday, November 30, 2022, 8:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X