2014ರಲ್ಲಿ ಮದುವೆ 2021ರಲ್ಲಿ ಡಿವೋರ್ಸ್ ; ಕ್ರಿಕೆಟ್ ಚತುರನ 2ನೇ ಹೆಂಡತಿಯಾಗಲು ರೆಡಿಯಾದ ನಟಿ?ಮಾರ್ಚ್‌ನಲ್ಲಿ ಮದುವೆ?
ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ವಯಸ್ಸಿನ ಗಡಿ ಇಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂತಹ ಪ್ರೀತಿಯ ಬಲೆಯಲ್ಲಿ ಚಿತ್ರರಂಗದ ಹಲವು ತಾರೆಯರು ಸಿಲುಕಿದ್ದಾರೆ. ಪ್ರೀತಿ ಎಂದರೆ ಸಂತೋಷ. ಅದರ ಮಾಯೆಯೇ ಅಂತಹದ್ದು ಎನ್ನುವ ಮಾತುಗಳನ್ನಾಡಿದ್ದಾರೆ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಂತಹ ಉದ್ಯಮಗಳಲ್ಲಿ ಕೂಡ ಹಲವು ಪ್ರೇಮಕಥೆಗಳಿವೆ. ಉದಾಹರಣೆಗೆ ''ಬಿಲ್ಲಾ''.. ''ಮ್ಯಾಕ್ಸಿಮಮ್''.. ''ಬಾಡಿಗಾರ್ಡ್''.. ಚಿತ್ರಗಳ ಚೆಲುವೆ ಹೇಜಲ್ ಕೀಚ್ ಅವರ ಜೊತೆ ಯುವರಾಜ್ ಸಿಂಗ್ ಮದುವೆಯಾಗಿದ್ದಾರೆ. ''ದಿಲ್ ದಿಯಾ ಹೈ''.. ''ದಿ ಟ್ರೈನ್''.. ''ಜಿಲ್ಲಾ ಗಾಜಿಯಾಬಾದ್''.. ನಾಯಕಿ ಗೀತಾ ಬಸ್ರಾ ಜೊತೆ ಹರ್ಭಜನ್ ಸಿಂಗ್ ಸಪ್ತಪದಿ ತುಳಿದಿದ್ದಾರೆ. ''ಚಕ್ ದೇ ಇಂಡಿಯಾ'' ಚೆಲುವೆ ಸಾಗರಿಕಾಗೆ ಜಹೀರ್ ಖಾನ್ ಶರಣಾಗಿದ್ದಾರೆ.

ಇವರಷ್ಟೇ ಅಲ್ಲ ಕೆ.ಎಲ್.ರಾಹುಲ್.. ವಿರಾಟ್ ಕೊಹ್ಲಿ.. ಒಬ್ಬರಾ.. ಇಬ್ಬರಾ.. ಹೀಗೆ ಹಲವರು ಚಿತ್ರರಂಗದ ನಾಯಕಿಯರ ಜೊತೆ ಹೊಸ ಬದುಕು ಶುರು ಮಾಡಿದ್ಧಾರೆ. ವಿಶೇಷ ಅಂದರೆ ಈ ಲವ್ ಸ್ಟೋರಿ ಕೇವಲ ಕ್ರಿಕೆಟ್ ಪಿಚ್‌ಗೆ ಮಾತ್ರ ಸೀಮಿತವಾಗಿಲ್ಲ. ಸ್ಟೂಡಿಯೋದಲ್ಲಿ ಕುಳಿತು ಕ್ರಿಕೆಟ್ ವಿಶ್ಲೇಷಣೆ ಮಾಡುವವರಿಗೆ, ಮೈದಾನದಲ್ಲಿ ನಿಂತು ನಿರೂಪಣೆ ಮಾಡುವವರಿಗೆ ಕೂಡ ಇಲ್ಲಿ ಹಲವರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಉದಾಹರಣೆಗೆ ಮಾಯಾಂತಿ ಲ್ಯಾಂಗರ್‌ಗೆ ನಮ್ಮ ಕನ್ನಡದ ಹುಡುಗ ಸ್ಟುವರ್ಟ್ ಬಿನ್ನಿ ಮನ ಸೋತರೆ ಯಾರ್ಕರ್ ಕಿಂಗ್ ಜಸ್ಮೀತ್ ಬುಮ್ರಾ ವಿಕೆಟ್ ಕಿತ್ತಿದ್ದು ಸಂಜನಾ ಗಣೇಶನ್ ಎಂಬ ಸುಂದರಿ.
ಇಂತಹ ಇತಿಹಾಸವನ್ನು ಹೊಂದಿರುವ ಈ ಕ್ರಿಕೆಟ್ ಮತ್ತು ಸಿನಿಮಾ ಇದೀಗ ಮತ್ತೊಂದು ಲವ್ ಸ್ಟೋರಿಗೆ ಸಾಕ್ಷಿಯಾಗುತ್ತಿದೆ. ಈ ಪ್ರೇಮ ಕಥೆಯ ನಾಯಕ ಮತ್ತು ನಾಯಕಿ ಬೇರೆ ಯಾರು ಅಲ್ಲ ಬದಲಿಗೆ ಕೃತಿಕಾ ಕಾಮ್ರಾ ಮತ್ತು ಗೌರವ್ ಕಪೂರ್ ಎನ್ನುವುದೇ ಈ ಕ್ಷಣದ ತಾಜಾ ಸುದ್ದಿ.
ಹೌದು, ಕೃತಿಕಾ ಕಾಮ್ರಾ ಹಿಂದಿ ಬೆಳ್ಳಿ ತೆರೆ ಮತ್ತು ಕಿರುತೆರೆಯ ಖ್ಯಾತ ಹೆಸರು.''ಕಿತನಿ ಮೊಹಬ್ಬತ್ ಹೈ''.. ''ಕುಚ್ ತೋ ಲೋಗ್ ಕೆಹೆಂಗೆ''.. ''ರಿಪೋಟರ್ಸ್''.. ''ಪ್ರೇಮ್ ಯಾ ಪಹೇಲಿ''.. ಧಾರಾವಾಹಿಗಳಲ್ಲಿ ಅಭಿನಯಿಸಿರುವ ಕೃತಿಕಾ ''ಬಂಬಯಿ ಮೇರಿ ಜಾನ್''.. ''ತಾಂಡವ್''.. ''ಭೀಡ್''.. ''ಹುಶ್ ಹುಶ್''.. ''ಗ್ಯಾರಾ ಗ್ಯಾರಾ'' ಅಂತಹ ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಇನ್ನೂ ಗೌರವ್ ಕಪೂರ್ ಅವರ ಕುರಿತು ಹೆಚ್ಚಿನ ಪರಿಚಯದ ಅವಶ್ಯಕತೆ ಇಲ್ಲ. ಯಾಕೆಂದರೆ ''ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್'' ಸೇರಿ ಹಲವು ಕ್ರಿಕೆಟ್ ಚಾಟ್ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟವರು ಇವರು. ಇಷ್ಟೇ ಯಾಕೆ.. 2008 ರಿಂದ 2017 ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ''ಎಕ್ಸ್ಟ್ರಾ ಇನಿಂಗ್ಸ್ ಟಿ20'' ನಿರೂಪಣೆ ಇವರ ಸಾರಥ್ಯದಲ್ಲಿಯೇ ಮೂಡಿ ಬಂದಿತ್ತು.

ಇಂಥಾ ಗೌರವ್ ಕಪೂರ್ ಮತ್ತು ಕೃತಿಕಾ ಕಾಮ್ರಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ವಿಷಯ ಕಳೆದ ವರ್ಷಾಂತ್ಯದಲ್ಲಿ ಜಗಜ್ಜಾಹೀರಾಗಿತ್ತು. ಗೌರವ್ ಕಪೂರ್ ಮತ್ತು ಕೃತಿಕಾ ಕಾಮ್ರಾ ಅವರ ಕೆಲ ಫೋಟೊಗಳು ಕೂಡ ವೈರಲ್ ಆಗಿದ್ದವು. ಸದ್ಯ ಇವರು ಇಬ್ಬರು ಮದುವೆಯಾಗಲು ಅಣಿಯಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಹೊರ ಬಂದಿದೆ.
ನಿಜಾ.. ಇಬ್ಬರು ಈ ಕುರಿತು ಇನ್ನೂ ಸ್ಪಷ್ಟನೆ ನೀಡಿಲ್ಲ. ಆದರೆ ಬೆಂಕಿ ಇಲ್ಲದೆ ಹೊಗೆಯಾಡಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಈ ಸುದ್ದಿಯನ್ನು ಗೌರವ್ ಕಪೂರ್ ತಂಡ ಅಲ್ಲಗೆಳೆದಿಲ್ಲ.ಕೃತಿಕಾ ಕಾಮ್ರಾ ಅವರ ಟೀಮ್ ಕೂಡ ಹಬ್ಬಿರುವ ಈ ಸುದ್ದಿ ಸುಳ್ಳು ಎಂದು ಹೇಳಿಲ್ಲ.

ಈ ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಇಬ್ಬರು ಸತಿ ಪತಿಗಳಾಗಿ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಸುದ್ದಿ ಸದ್ಯ ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿದೆ. ಮುಂಬೈನಲ್ಲಿ ಮದುವೆ ನಡೆಯಲಿದ್ದು ಆ ನಂತರ ಅತ್ಯಾಪ್ತ ಸ್ನೇಹಿತರಿಗೆ ಪ್ರತ್ಯೇಕ ಆರತಕ್ಷತೆಯ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ''ಟೈಮ್ಸ್ ಆಫ್ ಇಂಡಿಯಾ''.. ''ಇಂಡಿಯಾ ಟುಡೇ'' ಸೇರಿ ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಂದ್ಹಾಗೇ ಗೌರವ್ ಕಪೂರ್ ಈ ಹಿಂದೆ ಮಾಡೆಲ್ ಮತ್ತು ನಟಿ ಆಗಿ ಗುರುತಿಸಿಕೊಂಡ ಕಿರಾತ್ ಭಾಟ್ಟಲ್ ಅವರನ್ನು 2014ರಲ್ಲಿ ಮದುವೆಯಾಗಿದ್ದರು. ಆದರೆ 2021 ರಲ್ಲಿ ಇವರ ಸಂಬಂಧ ಮುರಿದು ಬಿತ್ತು. ಇನ್ನು ಕೃತಿಕಾ ಈ ಹಿಂದೆ ಕಿರುತೆರೆ ನಟ ಗೌರವ್ ಜೊತೆ ಸುತ್ತಾಡಿದ್ದರು. ಕರಣ್ ಕುಂದ್ರಾ ಜೊತೆ ಓಡಾಡಿದ್ದರು. ರಕುಲ್ ಪ್ರೀತ್ ಸಿಂಗ್ ಗಂಡ ಜಾಕಿ ಭಗ್ನಾನಿ ಅವರ ಜೊತೆ ಕೂಡ ಇವರ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಮದುವೆಯ ಮುದ್ರೆ ಯಾವ ಸಂಬಂಧದ ಮೇಲೂ ಬೀಳಲಿಲ್ಲ. ಈ ಬಾರಿ ಗೌರವ್ ಕಪೂರ್ ಅವರ ಜೊತೆ ಇವರ ಸಂಬಂಧದ ಕುರಿತು ತೀವೃ ಚರ್ಚೆ ನಡೆಯುತ್ತಿದೆ. ನಿಜಕ್ಕೂ ಮದುವೆಯಾಗ್ತಾರಾ..? ಲೆಟ್ಸ್ ಸೀ


Click it and Unblock the Notifications











