ಅದ್ಧೂರಿ, ಆಡಂಬರಕ್ಕೆ ಬ್ರೇಕ್ ; ಮಾರ್ಚ್ 11ಕ್ಕೆ ಸರಳವಾಗಿ ಮದುವೆಯಾಗಲಿದ್ದಾರೆ ಈ ನಟಿ ? ಇಬ್ಬರ ನಡುವೆ ಇದೆ 7 ವರ್ಷದ ಅಂತರ

ದೊಡ್ಡವರ ಹಾಗೂ ದುಡ್ಡಿದ್ದವರ ಕುಟುಂಬಗಳ 'ಮದುವೆ' ಮತ್ತು 'ಮನೆ' ಎರಡೂ ಈಗ ಗಂಟೆ ಗಟ್ಟಲೆ 'ಬ್ರೇಕಿಂಗ್ ನ್ಯೂಸ್' ಆಗುವ ಕಾಲ ಘಟ್ಟವಿದು. ಉಳ್ಳವರು ಮಾಡುವ ಅದ್ಧೂರಿ ಮದುವೆಯ ಕಣ್ಣು ಕೋರೈಸುವಂತಹ ಆಚರಣೆಗಳು ಬಡ-ಮಧ್ಯಮ ವರ್ಗದ ಕುಟುಂಬಗಳ ಸಾವಿರಾರು ಹೆಣ್ಣು ಮಕ್ಕಳ ಮದುವೆಯ ಸನ್ನಿವೇಶ ನರಕಗೊಳಿಸುವುದಲ್ಲದೆ, ಮದುವೆಯ ನಂತರವೂ ಅವರ ಬದುಕಿನಲ್ಲಿ ಕತ್ತಲು ಕವಿಯುವಂತೆ ಮಾಡುತ್ತವೆ.

ಇಂತಹ ಕಾಲಘಟ್ಟದಲ್ಲಿ 'ಮದುವೆ' ಎಂಬ ಮೂರಕ್ಷರದ ನಂಟಿನ ಜತೆ ಎರಡು ಜೀವ ಬೆಸೆದುಕೊಳ್ಳಲು ಅಲ್ಲಲ್ಲಿ ಕೆಲವರು ಸರಳ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ, ದೇಗುಲದಲ್ಲಿ ನಡೆಯುವ ಸರಳ ವಿವಾಹ, ರಿಜಿಸ್ಟರ್ಡ್‌ ಮದುವೆ, ಸಾಮೂಹಿಕ ವಿವಾಹ, ಗೋ ಗ್ರೀನ್‌ ಜಾಗೃತಿಯ ಪರಿಸರ ಮದುವೆಗಳು, ಹಳ್ಳಿಗಳಲ್ಲಿ ನಡೆಯುವ ಸರಳ ರೈತ ಮದುವೆಗಳು... ಹೀಗೆ ಹಲವು ರೀತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಕೇವಲ ಜನಸಾಮಾನ್ಯರು ಮಾತ್ರ ಅಲ್ಲ. ಈ ಸಾಲಿನಲ್ಲಿ ಸೆಲೆಬ್ರೆಟಿಗಳು ಕೂಡ ಇದ್ದಾರೆ ಎನ್ನುವುದೇ ಸಮಾಧಾನದ ವಿಷಯ. ಉದಾಹರಣೆಗೆ ಕೃತಿಕಾ ಕಾಮ್ರಾ ಮತ್ತು ಗೌರವ್ ಕಪೂರ್ ಅವರನ್ನೇ ತೆಗೆದುಕೊಳ್ಳಿ.

kritika-kamra-gaurav-kapur-wed-court-marriage-march-11-followed-by-grand-gala

ಹೌದು, ಕೃತಿಕಾ ಕಾಮ್ರಾ ಹಿಂದಿ ಬೆಳ್ಳಿ ತೆರೆ ಮತ್ತು ಕಿರುತೆರೆಯ ಖ್ಯಾತ ಹೆಸರು.''ಕಿತನಿ ಮೊಹಬ್ಬತ್ ಹೈ''.. ''ಕುಚ್ ತೋ ಲೋಗ್ ಕೆಹೆಂಗೆ''.. ''ರಿಪೋಟರ್ಸ್‌''.. ''ಪ್ರೇಮ್ ಯಾ ಪಹೇಲಿ''.. ಧಾರಾವಾಹಿಗಳಲ್ಲಿ ಅಭಿನಯಿಸಿರುವ ಕೃತಿಕಾ ''ಬಂಬಯಿ ಮೇರಿ ಜಾನ್''.. ''ತಾಂಡವ್''.. ''ಭೀಡ್''.. ''ಹುಶ್ ಹುಶ್''.. ''ಗ್ಯಾರಾ ಗ್ಯಾರಾ'' ಅಂತಹ ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಇನ್ನೂ ಗೌರವ್ ಕಪೂರ್ ಅವರ ಕುರಿತು ಹೆಚ್ಚಿನ ಪರಿಚಯದ ಅವಶ್ಯಕತೆ ಇಲ್ಲ. ಯಾಕೆಂದರೆ ''ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್'' ಸೇರಿ ಹಲವು ಕ್ರಿಕೆಟ್ ಚಾಟ್ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟವರು ಇವರು. ಇಷ್ಟೇ ಯಾಕೆ.. 2008 ರಿಂದ 2017 ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ''ಎಕ್ಸ್ಟ್ರಾ ಇನಿಂಗ್ಸ್ ಟಿ20'' ನಿರೂಪಣೆ ಇವರ ಸಾರಥ್ಯದಲ್ಲಿಯೇ ಮೂಡಿ ಬಂದಿತ್ತು.

ನಿರೂಪಕನಾಗಿ ಮಾತ್ರವಲ್ಲದೇ ವಿಜೆ ಮತ್ತು ಆರ್‌ಜೆ ಆಗಿ ಕೂಡ ಹೆಸರು ಮಾಡಿರುವ ಗೌರವ್ ಕಪೂರ್, ''ಡರ್ನಾ ಮನಾ ಕೈ''.. ''ಎ ವೆಡ್ನಸ್‌ ಡೇ'' .. '' ಬ್ಯಾಡ್‌ ಲಕ್ ಗೋವಿಂದ'' ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ.

ಇಂಥಾ ಗೌರವ್ ಕಪೂರ್ ಮತ್ತು ಕೃತಿಕಾ ಕಾಮ್ರಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ವಿಷಯ ಕಳೆದ ವರ್ಷಾಂತ್ಯದಲ್ಲಿ ಜಗಜ್ಜಾಹೀರಾಗಿತ್ತು. ಗೌರವ್ ಕಪೂರ್ ಮತ್ತು ಕೃತಿಕಾ ಕಾಮ್ರಾ ಅವರ ಕೆಲ ಫೋಟೊಗಳು ಕೂಡ ವೈರಲ್ ಆಗಿದ್ದವು. ಸದ್ಯ ಇವರು ಇಬ್ಬರು ಮದುವೆಯಾಗಲು ಅಣಿಯಾಗಿದ್ದಾರೆ. ಇದೇ ಮಾರ್ಚ್ 11ರಂದು ವಿವಾಹ ಬಂಧನಕ್ಕೊಳಗಾಗಲಿದ್ದಾರೆ. ವಿಶೇಷ ಅಂದರೆ ಈ ಜೋಡಿಯ ಮದುವೆ ಆಡಂಬರ ಮತ್ತು ಅದ್ಧೂರಿತನದಿಂದ ಕೂಡಿರಲ್ಲ. ಬದಲಿಗೆ ಇಬ್ಬರು ಸರಳವಾಗಿ ಮದುವೆಯಾಗುತ್ತಿದ್ದಾರೆ. ಕೆಲವೇ ಕೆಲ ಅತ್ಯಾಪ್ತರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾಗುತ್ತಿದ್ದಾರೆ.

kritika-kamra-gaurav-kapur-wed-court-marriage-march-11-followed-by-grand-gala

ಇವರಿಬ್ಬರ ಮದುವೆಯ ಈ ಸುದ್ದಿಯನ್ನು ''ಬಾಂಬೆ ಟೈಮ್ಸ್'' ಸದ್ಯ ಬ್ರೇಕ್ ಮಾಡಿದ್ದು, ಆ ಪ್ರಕಾರ ಮಾರ್ಚ್ 11 ರಂದು ಗೌರವ್ ಕಪೂರ್ ಅವರ ಮುಂಬೈನಲ್ಲಿರುವ ಮನೆಯಲ್ಲಿ ಮದುವೆ ಸಮಾರಂಭ ನಡೆಯಲಿದೆ. ಸರಳವಾಗಿ ನಡೆಯಲಿರುವ ಈ ಮದುವೆಗೆ ಕೇವಲ ಎರಡು ಮನೆಯ ಸದಸ್ಯರು ಮಾತ್ರ ಸಾಕ್ಷಿಯಾಗಲಿದ್ದು ಇಬ್ಬರು ರೆಜಿಸ್ಟರ್ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಇನ್ನು ಮರು ದಿನ ಅಂದರೆ ಮಾರ್ಚ್ 12ರಂದು ಮುಂಬೈನಲ್ಲಿಯೇ ಇಬ್ಬರು ಅದ್ಧೂರಿಯಾದ ಮದುವೆ ಪಾರ್ಟಿಯನ್ನು ಕೂಡ ಆಯೋಜಿಸಿದ್ದು, ಈ ಪಾರ್ಟಿಯಲ್ಲಿ ಬಾಲಿವುಡ್‌ನ ತಾರೆಯರು ಮತ್ತು ಕ್ರಿಕೆಟ್‌ನ ದಿಗ್ಗಜರು ಭಾಗವಹಿಸಲಿದ್ದಾರೆ. ನವ ಜೋಡಿಗೆ ಶುಭಾಶಯವನ್ನು ಕೋರಲಿದ್ದಾರೆ ಎಂದು '' ಬಾಂಬೆ ಟೈಮ್ಸ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಅಂದ್ಹಾಗೇ ಗೌರವ್ ಕಪೂರ್ ಈ ಹಿಂದೆ ಮಾಡೆಲ್ ಮತ್ತು ನಟಿ ಆಗಿ ಗುರುತಿಸಿಕೊಂಡ ಕಿರಾತ್ ಭಾಟ್ಟಲ್‌ ಅವರನ್ನು 2014ರಲ್ಲಿ ಮದುವೆಯಾಗಿದ್ದರು. ಆದರೆ 2021 ರಲ್ಲಿ ಇವರ ಸಂಬಂಧ ಮುರಿದು ಬಿತ್ತು. ಇನ್ನು ಕೃತಿಕಾ ಈ ಹಿಂದೆ ಕಿರುತೆರೆ ನಟ ಗೌರವ್ ಜೊತೆ ಸುತ್ತಾಡಿದ್ದರು. ಕರಣ್ ಕುಂದ್ರಾ ಜೊತೆ ಓಡಾಡಿದ್ದರು. ರಕುಲ್ ಪ್ರೀತ್ ಸಿಂಗ್ ಗಂಡ ಜಾಕಿ ಭಗ್ನಾನಿ ಅವರ ಜೊತೆ ಕೂಡ ಇವರ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಮದುವೆಯ ಮುದ್ರೆ ಯಾವ ಸಂಬಂಧದ ಮೇಲೂ ಬೀಳಲಿಲ್ಲ.

ಹೀಗೆ ವ್ಯೆಯಕ್ತಿಕ ಬದುಕಿನಲ್ಲಿ ಪ್ರೀತಿಯ ವಿಚಾರದಲ್ಲಿ ಸದ್ದು ಮಾಡಿರುವ ಇವರಿಬ್ಬರು ಸದ್ಯ ಜೊತೆಯಾಗಿ ಬದುಕಲು ಮುಂದಾಗಿದ್ಧಾರೆ. ಮಾರ್ಚ್‌ 11ಕ್ಕೆ ಮದುವೆಯಾಗಲು ಅಣಿಯಾಗಿದ್ದಾರೆ.

ಒಟ್ನಲ್ಲಿ ಮದುವೆ ಎಂಬುದು ಗಂಡು ಮತ್ತು ಹೆಣ್ಣು ಬದುಕಿನುದ್ದಕ್ಕೂ ಒಟ್ಟಿಗೆ ಸಾಗಬೇಕಿರುವ ದಾರಿ. ಈ ಪ್ರಯಾಣ ತುಂಬಾ ಪರಸ್ಪರ ಪ್ರೀತಿ, ನಂಬಿಕೆ, ಮತ್ತು ವಿಶ್ವಾಸಗಳೇ ಗಟ್ಟಿ ಬೇರುಗಳಾಗಬೇಕು. ಮದುವೆ ಖಾಸಗಿ ಮತ್ತು ಭಾವಾನಾತ್ಮಕ ವಿಚಾರವೇನೋ ಸರಿ. ಆದರೆ, ಅದು ಧ್ವನಿಸುವ ಸಂದೇಶ ಸಮಾಜದ ಮಟ್ಟಿಗೆ ದೊಡ್ಡದು. ಅದೇ ಕಾರಣಕ್ಕೆ ಪ್ರತಿಷ್ಠೆ, ಅಂತಸ್ತನ್ನು ಪ್ರದರ್ಶನಕ್ಕೆ ಇಡುವಂತೆ ಅದ್ಧೂರಿ ಮದುವೆಗಳು ನಡೆಯುತ್ತಿರುವ ಹೊತ್ತಲ್ಲೇ ಹೀಗೆ ನಡೆಯುವ ಸರಳ ಮದುವೆಗಳು ಮಹತ್ವ ಪಡೆದುಕೊಳ್ಳುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ.

More from Filmibeat

English summary
Actress Kritika Kamra and host Gaurav Kapur to register their marriage on March 11. Find out about their private ceremony and the grand celebration planned for the next day.
Read more about: cricket love marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X