ತನಗಿಂತ 7 ವರ್ಷ ದೊಡ್ಡವನ ಜೊತೆ ಸದ್ದಿಲ್ಲದೇ ಮನೆಯಲ್ಲೇ ಸರಳವಾಗಿ ಮದುವೆಯಾದ ನಟಿ

ಮದುವೆ ಪ್ರತಿಯೊಬ್ಬರ ಬದುಕಿನ ಮಹತ್ವದ ಕ್ಷಣ. ಅದು ಕೇವಲ ಆಚರಣೆ ಅಲ್ಲ ಬದಲಿಗೆ ಎರಡು ಹೃದಯ, ಎರಡು ಕುಟುಂಬ ಮತ್ತು ಎರಡು ಸಂಸ್ಕ್ರತಿಯ ಸಮ್ಮಿಲನ. ಮದುವೆ ಅಂದರೆ ಸಂತೋಷ.. ಆತ್ಮೀಯತೆ.. ಹೊಸ ಜೀವನದ ಆರಂಭ. ಆದರೆ ಈಗ ಬದಲಾದ ಕಾಲದಲ್ಲಿ ಮದುವೆ ಅಂದರೆ ಅದ್ದೂರಿತನ ಎನ್ನುವಂತಾಗಿದೆ. ವೇದಿಕೆಯ ಅಲಂಕಾರ, ಥೀಮ್ ಡೆಕೊರೇಷನ್, ಡಿಸೈನರ್ ಉಡುಪು, ಡೆಸ್ಟಿನೇಷನ್ ವೆಡ್ಡಿಂಗ್, ಪ್ರೀ-ವೆಡ್ಡಿಂಗ್ ಫೋಟೋಶೂಟ್...

ಹೀಗೆ ಉಳ್ಳವರ ಪಾಲಿಗೆ ಮದುವೆ ಪ್ರತಿಷ್ಠೆಯ ಸಂಕೇತವಾಗಿದೆ. ತಮ್ಮ ಆರ್ಥಿಕ ಸಾಮರ್ಥ್ಯವನ್ನು ತೋರಿಸಲು ದೊಡ್ಡ ಹೋಟೆಲ್‌ಗಳು, ಐದು ದಿನಗಳ ಕಾರ್ಯಕ್ರಮ, ನೂರಾರು ಅತಿಥಿಗಳು, ವೈಭವಯುತ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿಷ್ಠೆಯ ಹೆಸರಿನಲ್ಲಿ ದುಂದುವೆಚ್ಚ ಹೆಚ್ಚಾಗುತ್ತಿದೆ. ಹಾಗಂಥ ಎಲ್ಲರೂ ಈ ಅದ್ಧೂರಿತನಕ್ಕೆ ಜೋತು ಬೀಳುವುದಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಲಕ್ಷಾಂತರ ರೂಪಾಯಿ ವ್ಯಯಿಸುವ ಅದ್ಧೂರಿ ವಿವಾಹಗಳು ಮಾಧ್ಯಮಗಳಲ್ಲಿ ಸದ್ದು ಮಾಡುವ ಹೊತ್ತಿನಲ್ಲೇ ಸರಳ ವಿವಾಹಗಳು ಕೂಡ ಅಲ್ಲಲ್ಲಿ ಗಮನ ಸೆಳೆಯುತ್ತವೆ.

Kritika Kamra Gaurav Kapur Wedding Photos Mumbai Home

ಮದುವೆ ಎಂಬ ಮೂರಕ್ಷರದ ನಂಟಿನ ಜತೆ ಎರಡು ಜೀವ ಬೆಸೆದುಕೊಳ್ಳಲು ಅಲ್ಲಲ್ಲಿ ಕೆಲವರು ಸರಳ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ, ದೇಗುಲದಲ್ಲಿ ನಡೆಯುವ ಸರಳ ವಿವಾಹ, ರಿಜಿಸ್ಟರ್ಡ್‌ ಮದುವೆ, ಸಾಮೂಹಿಕ ವಿವಾಹ, ಗೋ ಗ್ರೀನ್‌ ಜಾಗೃತಿಯ ಪರಿಸರ ಮದುವೆಗಳು, ಹಳ್ಳಿಗಳಲ್ಲಿ ನಡೆಯುವ ಸರಳ ರೈತ ಮದುವೆಗಳು...

ಹೀಗೆ ಹಲವು ರೀತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಕೇವಲ ಜನಸಾಮಾನ್ಯರು ಮಾತ್ರ ಅಲ್ಲ. ಈ ಸಾಲಿನಲ್ಲಿ ಸೆಲೆಬ್ರೆಟಿಗಳು ಕೂಡ ಇದ್ದಾರೆ ಎನ್ನುವುದೇ ಸಮಾಧಾನದ ವಿಷಯ. ಉದಾಹರಣೆಗೆ ಕೃತಿಕಾ ಕಾಮ್ರಾ ಮತ್ತು ಗೌರವ್ ಕಪೂರ್.

ಹೌದು, ಕೃತಿಕಾ ಕಾಮ್ರಾ ಹಿಂದಿ ಬೆಳ್ಳಿ ತೆರೆ ಮತ್ತು ಕಿರುತೆರೆಯ ಖ್ಯಾತ ಹೆಸರು.''ಕಿತನಿ ಮೊಹಬ್ಬತ್ ಹೈ''.. ''ಕುಚ್ ತೋ ಲೋಗ್ ಕೆಹೆಂಗೆ''.. ''ರಿಪೋಟರ್ಸ್‌''.. ''ಪ್ರೇಮ್ ಯಾ ಪಹೇಲಿ''.. ಧಾರಾವಾಹಿಗಳಲ್ಲಿ ಅಭಿನಯಿಸಿರುವ ಕೃತಿಕಾ ''ಬಂಬಯಿ ಮೇರಿ ಜಾನ್''.. ''ತಾಂಡವ್''.. ''ಭೀಡ್''.. ''ಹುಶ್ ಹುಶ್''.. ''ಗ್ಯಾರಾ ಗ್ಯಾರಾ'' ಅಂತಹ ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಇನ್ನೂ ಗೌರವ್ ಕಪೂರ್ ಅವರ ಕುರಿತು ಹೆಚ್ಚಿನ ಪರಿಚಯದ ಅವಶ್ಯಕತೆ ಇಲ್ಲ. ಯಾಕೆಂದರೆ ''ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್'' ಸೇರಿ ಹಲವು ಕ್ರಿಕೆಟ್ ಚಾಟ್ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟವರು ಇವರು. ಇಷ್ಟೇ ಯಾಕೆ.. 2008 ರಿಂದ 2017 ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ''ಎಕ್ಸ್ಟ್ರಾ ಇನಿಂಗ್ಸ್ ಟಿ20'' ನಿರೂಪಣೆ ಇವರ ಸಾರಥ್ಯದಲ್ಲಿಯೇ ಮೂಡಿ ಬಂದಿತ್ತು.

Kritika Kamra Gaurav Kapur Wedding Photos Mumbai Home

ನಿರೂಪಕನಾಗಿ ಮಾತ್ರವಲ್ಲದೇ ವಿಜೆ ಮತ್ತು ಆರ್‌ಜೆ ಆಗಿ ಕೂಡ ಹೆಸರು ಮಾಡಿರುವ ಗೌರವ್ ಕಪೂರ್, ''ಡರ್ನಾ ಮನಾ ಕೈ''.. ''ಎ ವೆಡ್ನಸ್‌ ಡೇ'' .. '' ಬ್ಯಾಡ್‌ ಲಕ್ ಗೋವಿಂದ'' ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ.

ಇಂಥಾ ಗೌರವ್ ಕಪೂರ್ ಮತ್ತು ಕೃತಿಕಾ ಕಾಮ್ರಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ವಿಷಯ ಕಳೆದ ವರ್ಷಾಂತ್ಯದಲ್ಲಿ ಜಗಜ್ಜಾಹೀರಾಗಿತ್ತು. ಗೌರವ್ ಕಪೂರ್ ಮತ್ತು ಕೃತಿಕಾ ಕಾಮ್ರಾ ಅವರ ಕೆಲ ಫೋಟೊಗಳು ಕೂಡ ವೈರಲ್ ಆಗಿದ್ದವು. ಸದ್ಯ ಇಬ್ಬರು ಸದ್ದಿಲ್ಲದೇ ಸರಳವಾಗಿ ಮದುವೆಯಾಗಿದ್ದಾರೆ.

ರಾಜಸ್ಥಾನ-ಗೋವಾ ಹೀಗೆ ಎಲ್ಲಿಯೂ ಹೋಗದೇ ನಿನ್ನೆ (ಮಾರ್ಚ್ 11) ಮುಂಬೈನ ಬಾಂದ್ರಾದಲ್ಲಿನ ತಮ್ಮ ಮನೆಯಲ್ಲಿಯೇ ಕೃತಿಕಾ ಕಾಮ್ರಾ ಮತ್ತು ಗೌರವ್ ಕಪೂರ್ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಮದುವೆಯಲ್ಲಿ ಕೃತಿಕಾ ಕಮ್ರಾ ತಮ್ಮ ತಾಯಿ ಉಡುಗೊರೆಯಾಗಿ ನೀಡಿದ್ದ ಕೆಂಪು ಚಂದೇರಿ ಸಿಲ್ಕ್-ಸ್ಯಾಟಿನ್ ಸೀರೆ ಮತ್ತು ವಿಕ್ಟೋರಿಯನ್ ಶೈಲಿಯ ಪೋಲ್ಕಿ ಹಾರ ಮತ್ತು ಪಚ್ಚೆ ಹರಳುಗಳ ಆಭರಣಗಳನ್ನು ಧರಿಸಿ ಕಂಗೊಳಿಸಿದರೆ, ರಾಘವೇಂದ್ರ ರಾಥೋಡ್ ವಿನ್ಯಾಸದ ಕಾಸ್ಟೂಮ್‌ನಲ್ಲಿ ಗೌರವ್ ಖನ್ನಾ ಮಿಂಚಿದರು.

ಇನ್ನೂ ಇವರ ಈ ಸರಳ ವಿವಾಹಕ್ಕೆ ಬಾಲಿವುಡ್ ಮಾತ್ರವಲ್ಲದೇ ಕ್ರಿಕೆಟ್ ಲೋಕದ ಹಲವು ತಾರೆಯರು ಸಾಕ್ಷಿಯಾಗಿದ್ದು ವಿಶೇಷ. ಮಲೈಕಾ ಅರೋರಾ.. ಫರ್ಹಾನ್ ಅಖ್ತರ್.. ಸೋಹಾ ಅಲಿ ಖಾನ್.. ಹೀಗೆ ಹಿಂದಿ ಉದ್ಯಮದಿಂದ ಹಲವರು ಮದುವೆಗೆ ಹಾಜರಾದರೆ, ಕ್ರಿಕೆಟ್ ಪ್ರೇಮಿಗಳ ಪಾಲಿನ ಫೇವರೆಟ್ ನಿರೂಪಕನ ಮದುವೆಗೆ ಕ್ರಿಕೆಟ್ ಮೈದಾನದಿಂದ ಯುವರಾಜ್ ಸಿಂಗ್, ಜಹೀರ್ ಖಾನ್, ವೀರೇಂದ್ರ ಸೆಹ್ವಾಗ್ ಸೇರಿ ಹಲವರು ಬಂದಿದ್ದರು. ನವ ಜೋಡಿಗೆ ಆಶೀರ್ವಾದ ಮಾಡಿ ಮನೆಯ ಟೆರೇಸ್ ಮೇಲೆ ಕುಣಿದು ಕುಪ್ಪಳಿಸಿದರು.

ಅಂದ್ಹಾಗೇ ಗೌರವ್ ಕಪೂರ್ ಈ ಹಿಂದೆ ಮಾಡೆಲ್ ಮತ್ತು ನಟಿ ಆಗಿ ಗುರುತಿಸಿಕೊಂಡ ಕಿರಾತ್ ಭಾಟ್ಟಲ್‌ ಅವರನ್ನು 2014ರಲ್ಲಿ ಮದುವೆಯಾಗಿದ್ದರು. ಆದರೆ 2021 ರಲ್ಲಿ ಇವರ ಸಂಬಂಧ ಮುರಿದು ಬಿತ್ತು. ಇನ್ನು ಕೃತಿಕಾ ಈ ಹಿಂದೆ ಕಿರುತೆರೆ ನಟ ಗೌರವ್ ಜೊತೆ ಸುತ್ತಾಡಿದ್ದರು. ಕರಣ್ ಕುಂದ್ರಾ ಜೊತೆ ಓಡಾಡಿದ್ದರು. ರಕುಲ್ ಪ್ರೀತ್ ಸಿಂಗ್ ಗಂಡ ಜಾಕಿ ಭಗ್ನಾನಿ ಅವರ ಜೊತೆ ಕೂಡ ಇವರ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಮದುವೆಯ ಮುದ್ರೆ ಯಾವ ಸಂಬಂಧದ ಮೇಲೂ ಬೀಳಲಿಲ್ಲ. ಸದ್ಯ ಗೌರವ್ ಕಪೂರ್ ಅವರ ಜೊತೆ ಕೃತಿಕಾ ಮದುವೆಯಾಗಿದ್ದಾರೆ. ಇಬ್ಬರ ನಡುವೆ 7 ವರ್ಷಗಂತ ಅಂತರ ಇದೆ. ಗೌರವ್ ಕಪೂರ್ 1981ರಲ್ಲಿ ಜನಿಸಿದ್ದರೆ ಕೃತಿಕಾ 1988ರಲ್ಲಿ ಜನಿಸಿದ್ದಾರೆ.

ಒಟ್ನಲ್ಲಿ ಮದುವೆ ಎಂಬುದು ಗಂಡು ಮತ್ತು ಹೆಣ್ಣು ಬದುಕಿನುದ್ದಕ್ಕೂ ಒಟ್ಟಿಗೆ ಸಾಗಬೇಕಿರುವ ದಾರಿ. ಈ ಪ್ರಯಾಣ ತುಂಬಾ ಪರಸ್ಪರ ಪ್ರೀತಿ, ನಂಬಿಕೆ, ಮತ್ತು ವಿಶ್ವಾಸಗಳೇ ಗಟ್ಟಿ ಬೇರುಗಳಾಗಬೇಕು. ಮದುವೆ ಖಾಸಗಿ ಮತ್ತು ಭಾವಾನಾತ್ಮಕ ವಿಚಾರವೇನೋ ಸರಿ. ಆದರೆ, ಅದು ಧ್ವನಿಸುವ ಸಂದೇಶ ಸಮಾಜದ ಮಟ್ಟಿಗೆ ದೊಡ್ಡದು. ಅದೇ ಕಾರಣಕ್ಕೆ ಪ್ರತಿಷ್ಠೆ, ಅಂತಸ್ತನ್ನು ಪ್ರದರ್ಶನಕ್ಕೆ ಇಡುವಂತೆ ಅದ್ಧೂರಿ ಮದುವೆಗಳು ನಡೆಯುತ್ತಿರುವ ಹೊತ್ತಲ್ಲೇ ಹೀಗೆ ನಡೆಯುವ ಸರಳ ಮದುವೆಗಳು ಮಹತ್ವ ಪಡೆದುಕೊಳ್ಳುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ.

More from Filmibeat

English summary
"Love wins! Kritika Kamra and Gaurav Kapur step out hand-in-hand for the first time since their private wedding ceremony. Explore the dreamy inside pictures of the couple’s beautiful new beginning."
Read more about: marriage secret marriage cricket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X