22ರ ಹರೆಯದ ಅಪರಿಚಿತ ಚೆಲುವೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಗಾಳ ಹಾಕಿದ 51 ವರ್ಷದ ನಟ; ಸಾಕ್ಷಿ ಸಮೇತ ಮಾನ ಹರಾಜು

ಸಾಮಾಜಿಕ ಜಾಲತಾಣ ತುಂಬಾ ಬಲಿಷ್ಠವಾದ ಅಸ್ತ್ರ. ಬದಲಾದ ಈ ಕಾಲಘಟ್ಟದಲ್ಲಿ ಈ ಸಾಮಾಜಿಕ ಜಾಲತಾಣ, ಮನುಷ್ಯನನ್ನ ಹೆಚ್ಚು ನಿಯಂತ್ರಣ ಮಾಡುತ್ತಿದೆ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ.ಇಲ್ಲಿ ಒಳ್ಳೇಯವರು ಇದ್ದಾರೆ. ಕೆಟ್ಟವರು ಇದ್ದಾರೆ. ಆದರೆ ಈಗೀಗ ಈ ಸಾಮಾಜಿಕ ಜಾಲತಾಣವನ್ನು ತಮ್ಮ ವ್ಯೆಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಅನೇಕರು ಬಳಸುತ್ತಿಲ್ಲ.ಒಳ್ಳೆಯ ಕೆಲಸಕ್ಕೆ ಈ ಸೋಶಿಯಲ್ ಮೀಡಿಯಾವನ್ನು ಉಪಯೋಗ ಮಾಡುತ್ತಿಲ್ಲ.

ಬದಲಿಗೆ ಹಲವರು ಈ ಸಾಮಾಜಿಕ ಜಾಲತಾಣವನ್ನು ಅವಾಚ್ಯ ಶಬ್ದಗಳಿಂದ ಮತ್ತೊಬ್ಬರನ್ನು ನಿಂದಿಸಲು .. ದ್ವೇಷ - ಅಸೂಯೆಯನ್ನು ಬಿತ್ತಲು .. ಬಳಸುತ್ತಿದ್ದಾರೆ. ಇನ್ನು ಇವರ ನಡುವೆ ಇಲ್ಲಿ ಮತ್ತೊಂದು ವರ್ಗ ಇದೆ. ಈ ವರ್ಗ ಹೆಣ್ಣು ಮಕ್ಕಳಿಗೆ.. ಮಹಿಳೆಯರಿಗೆ.. ಚಿತ್ರರಂಗದಲ್ಲಿನ ನಾಯಕಿಯರಿಗೆ.. ಲೈಂ*ಗಿಕ ಶೋ‍ಷಣೆ.. ಕಿರುಕುಳ ಕೊಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದೆ. ಸ್ತ್ರೀಯರ ಪಾಲಿಗೆ ಕಗ್ಗಂಟಾಗಿ ಉಳಿದಿದೆ. ದುರಂತ ಅಂದರೆ ಚಿತ್ರರಂಗದಲ್ಲಿ ಕೂಡ ಈ ಆನ್‌ಲೈನ್‌ ಕಾ*ಮುಕರು ಇದ್ದಾರೆ. ಈ ಸಾಲಿನಲ್ಲಿ ''ಕೆಆರ್‌ಕೆ'' ಅಲಿಯಾಸ್ ''ಕಮಲ್ ಆರ್ ಖಾನ್'' ಕೂಡ ಇದ್ದಾರೆ ಎಂಬ ಆರೋಪವನ್ನು 22 ವರ್ಷದ ಚೆಲುವೆ ಮಾಡಿದ್ದಾರೆ.

KRK Exposed 22-Year-Old Woman Leaks Shocking Chat Screenshots Igniting Social Media Firestorm

ಹೌದು, ''ಕೆ.ಆರ್‌.ಕೆ'' ಅಲಿಯಾಸ್ ''ಕಮಲ್ ರಶೀದ್‌ ಖಾನ್''. ಬಾಲಿವುಡ್‌ನ ನಿರುದ್ಯೋಗಿ. ಸ್ವಯಂ ಘೋಷಿತ ವಿಮರ್ಷಕ. ಸರಿ ಸುಮಾರು ಒಂದೂವರೆ ದಶಕದ ಹಿಂದೆ ''ದೇಶದ್ರೋಹಿ'' ಎಂಬ ಪರಮ ತೋಪು ಚಿತ್ರವನ್ನು ಮಾಡಿದ್ದೇ ಈ ವ್ಯಕ್ತಿಯ ಸಾಧನೆ. ಅಲ್ಲಿಂದ.. ಇಲ್ಲಿಯವರೆಗೆ.. ಹಿಂದಿ ಉದ್ಯಮದಲ್ಲಿ ನಯಾ ಪೈಸಾ ಕೆಲಸ ಮಾಡದ ಈ ''ಕೆಆರ್‌ಕೆ'' ಹಿಂದಿ ಚಿತ್ರರಂಗದಲ್ಲಿ ಕಂಡ ಕಂಡವರ ಜೊತೆ ಕಾಲ್ ಕೆರೆದುಕೊಂಡು ಜಗಳಕ್ಕೆ ನಿಲ್ಲುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ.

ಖುದ್ದು ಬಾಲಿವುಡ್‌ನವರೇ ಈ ವ್ಯಕ್ತಿಯ ಮುಖಕ್ಕೆ ಮಂಗಳಾರತಿ ಮಾಡಿ ಮೂಲೆ ಗುಂಪು ಮಾಡಿದ್ದಾರೆ. ಆದರೂ ಬುದ್ದಿ ಕಲಿಯದ ಕೆ.ಆರ್.ಕೆ ಸದಾ ಸುದ್ದಿಯಾಗುವುದು ವಿವಾದಗಳಿಂದಲೇ. ಇಂಥಾ ''ಕೆಆರ್‌ಕೆ'' ಸದ್ಯ ಸುಂದರವಾದ ಯುವತಿಯ ಹಿಂದೆ ಬಿದ್ದಿದ್ದಾರೆ. ಗುರುತು ಪರಿಚಯ ಇಲ್ಲದ, ಕೇವಲ 3214 ಜನ ಫಾಲೋವರ್ಸ್‌ಗಳನ್ನು ಹೊಂದಿರುವ ಚೆಲುವೆಯನ್ನು ಭೇಟಿಯಾಗುವಂತೆ ಪೀಡಿಸುತ್ತಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಕೆಆರ್‌ಕೆ ತಮಗೆ ಕಳುಹಿಸಿದ್ದ ಮೆಸೇಜ್‌ಗಳ ಸ್ಕ್ರೀನ್ ಶಾಟ್‌ನ್ನು ಯುವತಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

KRK Exposed 22-Year-Old Woman Leaks Shocking Chat Screenshots Igniting Social Media Firestorm

ಆ ಪ್ರಕಾರ ಸಿಮ್ರನ್ ( ಸಿಮ್ಹೋಲಿಕ್) ಹೆಸರಿನ 22 ವರ್ಷದ ಯುವತಿಗೆ ಕೆಆರ್‌ಕೆ ತಮ್ಮನ್ನೂ ಭೇಟಿ ಮಾಡುವಂತೆ ಮೆಸೇಜ್ ಮಾಡಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸಿಮ್ರನ್ ಮೆಸೇಜ್ ಮಾಡುವುದು ತಪ್ಪಲ್ಲ. ಆದರೆ 50 ವರ್ಷದ ವ್ಯಕ್ತಿ 22 ವರ್ಷದ ಅಪಚಿರಿತ ಯುವತಿಯನ್ನು ಕೆಲಸದ ನೆಪದಲ್ಲಿ ಯಾಕೆ ಭೇಟಿಯಾಗಲು ಕರೆಯುತ್ತಿದ್ದಾರೆ ಎನ್ನುವುದೇ ನನ್ನ ಪ್ರಶ್ನೆ ಎಂದು ಹೇಳಿದ್ದಾರೆ. ಕೆಲಸವೇನು ಎಂದು ಸ್ಪಷ್ಟವಾಗಿ ಹೇಳದೇ ಬಂದು ಭೇಟಿಯಾಗಿ ಅಂದರೆ ಏನರ್ಥ ಎಂದಿದ್ದಾರೆ.

ಮುಂದುವರೆದು ಸಾಮಾನ್ಯವಾಗಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಈ ಸೆಲೆಬ್ರೆಟಿಗಳ ಬಳಿ ಅವರದ್ದೇ ಆದ ಏಜೆನ್ಸಿ ಇರುತ್ತೆ ಅಥವಾ ಮ್ಯಾನೇಜರ್ ಇರುತ್ತಾರೆ ಎಂದು ಹೇಳಿರುವ ಸಿಮ್ರನ್ ನಿಜಕ್ಕೂ ಕೆಲಸದ ಆಫರ್ ಇದ್ದಿದ್ದರೆ ಅದರ ಸಂಪೂರ್ಣ ವಿವರಗಳನ್ನು ಅವರು ಮೆಸೇಜ್ ಮಾಡಬೇಕು ಅಥವಾ ಇಮೇಲ್ ಮೂಲಕ ಕಳುಹಿಸಬೇಕು ಎಂದು ಹೇಳಿದ್ದಾರೆ. ನಿಜಾ ಹೇಳಬೇಕು ಅಂದರೆ ನಾವೆಲ್ಲರೂ ಇದೇ ಜನರೇಷನ್‌ನವರು, ಭೇಟಿಯಾಗೋಣ ಎನ್ನುವುದರ ಹಿಂದಿನ ಉದ್ದೇಶ ನಮಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ. ಸ್ಕ್ರೀನ್ ಶಾಟ್‌ಗಳನ್ನು ಹಂಚಿಕೊಂಡು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

KRK Exposed 22-Year-Old Woman Leaks Shocking Chat Screenshots Igniting Social Media Firestorm

ಸದ್ಯ ಸಿಮ್ರನ್ ಹಂಚಿಕೊಂಡ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೇವಲ 21 ಗಂಟೆಯಲ್ಲಿ 101,873 ಲೈಕ್ಸ್‌ಗಳು ಬಂದಿವೆ. 2000ಕ್ಕೂ ಅಧಿಕ ಜನ ಕಾಮೆಂಟ್ ಮಾಡಿದ್ದು ಅದರಲ್ಲಿ ಮತ್ತೆ ಇಬ್ಬರು ಕೆಆರ್‌ಕೆ ವಿರುದ್ಧ ಇಂತಹದ್ದೇ ಆರೋಪ ಮಾಡಿದ್ದಾರೆ. ಅವರು ನನಗೂ ಕೂಡ ಮೆಸೇಜ್ ಮಾಡಿದ್ದರು. ಆದರೆ ನಾನು ಉತ್ತರ ನೀಡಲು ಮರೆತೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು ನನಗೂ ಅವರಿಂದ ಮೆಸೇಜ್ ಬಂದಿತ್ತು. ಇಂತಹ ಅಂಕಲ್‌ಗಳು ಹೇಗೆ ಇರುತ್ತಾರೆ ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಹೀಗಾಗಿ ನಾನು ಅವರ ಮೆಸೇಜ್‌ಗೆ ರಿಪ್ಲೈ ಮಾಡಲಿಲ್ಲ ಎಂದಿದ್ದಾರೆ. ಈ ಕುರಿತು ಕೆಆರ್‌ಕೆ ಇನ್ನೂ ಪ್ರತಿಕ್ರಿಯೆ ನೀಡಬೇಕಿದೆ. ಬಾಲಿವುಡ್‌ನಲ್ಲಿ ಯುವತಿ ಹಂಚಿಕೊಂಡ ವಿಡಿಯೋ ಸಂಚಲನವನ್ನು ಸೃಷ್ಟಿಸಿದೆ.

More from Filmibeat

English summary
Actor and critic KRK faces serious allegations after a 22-year-old woman shares private chat screenshots online. Stay updated on the KRK controversy, the leaked messages, and the latest developments in this trending story.
Read more about: social media harassment viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X