ಸೌಂದರ್ಯ ಸಮರ ; ಕೃತಿ ಶೆಟ್ಟಿಗಾಗಿ ನಿರ್ಮಾಪಕ ಮತ್ತು ನಿರ್ದೇಶಕನ ನಡುವೆ ಮಹಾಯುದ್ಧ

ಚಿತ್ರರಂಗ ಅಂದರೆ ಅದು ಕೇವಲ ಬಣ್ಣದ ಲೋಕ ಮಾತ್ರ ಅಲ್ಲ. ಅವಕಾಶ ಮತ್ತು ಅದೃಷ್ಟದ ಜೂಜಾಟವೂ ಹೌದು. ಇಲ್ಲಿ ಕೇವಲ ಪ್ರತಿಭೆಯಷ್ಟೇ ಇದ್ದರೆ ಗೆಲುವು ಸಿಗುವುದಿಲ್ಲ. ಬದಲಿಗೆ ನಿರ್ಮಾಪಕ ಮತ್ತು ನಿರ್ದೇಶಕರ ಆಶೀರ್ವಾದವೂ ಬೇಕಾಗುತ್ತೆ. ಇವರಿಬ್ಬರ ಕೈ ನೆತ್ತಿಯ ಮೇಲೆ ಇರದಿದ್ದರೆ ಎಷ್ಟೇ ಪ್ರತಿಭಾವಂತರಾದರೂ ಆ ಪ್ರತಿಭೆಗೆ ಇಲ್ಲಿ ಬೆಲೆ ಸಿಗಲ್ಲ.

ಇನ್ನೂ ಅಪ್ಪಿ ತಪ್ಪಿ ಅವಕಾಶ ಸಿಕ್ಕರೂ ಕೂಡ ಇಲ್ಲಿ ಅಡ್ಡಗಾಲು ಹಾಕಲೆಂದೇ ಹಲವರು ಕಾಯುತ್ತಿರುತ್ತಾರೆ. ಒಬ್ಬ ವ್ಯಕ್ತಿಯ ಗೆಲುವಿಗೆ ಹತ್ತು ಜನ ಇಲ್ಲಿ ಶ್ರಮ ಹಾಕಿದರೆ, ಕಾಲೆಳೆದು ಹೂತು ಹಾಕಲು ಒಬ್ಬ ವ್ಯಕ್ತಿ ಸಾಕು. ಕೃತಿ ಶೆಟ್ಟಿ ವಿಚಾರದಲ್ಲಿಯೂ ಸದ್ಯ ಇದೇ ಆಗ್ತಿದೆ. ಹೌದು. ಕೃತಿ ಶೆಟ್ಟಿ .. ನಾಲ್ಕು ವರ್ಷದ ಹಿಂದೆ, ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಬೇಡಿಕೆಯಲ್ಲಿದ್ದ ''ಮಂಗ್ಳೂರು ಮೀನು''.

KRK Leaks Bollywood Scandal Producer and Director at War Over Krithi Shetty s Debut

''ಉಪ್ಪೇನ'' ಚಿತ್ರದ ಮೂಲಕ, ಗೆದ್ದು ಬೀಗಿದ ಕೃತಿ, ಆ ನಂತರ ಎರಡು ಬ್ಲಾಕ್ ಬಸ್ಟರ್ ಚಿತ್ರಗಳನ್ನ ನೀಡುವುದರ ಮೂಲಕ ಬೇಡಿಕೆಯನ್ನ ಹೆಚ್ಚಿಸಿಕೊಂಡಿದ್ದರು. ಎರಡು ಕೋಟಿ ಕಡಿಮೆ ಒಂದು ರೂಪಾಯಿಯನ್ನೂ ತೆಗೆದುಕೊಳ್ಳಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಸುದ್ದಿಯಾಗಿದ್ದರು. ಸಂಚಲನವನ್ನೂ ಸೃಷ್ಟಿಸಿದ್ದರು.

ಇನ್ನೂ.. ''ಬಿಕಿನಿ''ಯಲ್ಲಿ ಕಾಣಿಸಿಕೊಳ್ಳಬೇಕೆಂದರೆ ಎರಡಲ್ಲ ಐದು ಕೋಟಿಯನ್ನ ಕೋಡಬೇಕೆಂದು, ಕೃತಿ ಶೆಟ್ಟಿ ಷರತ್ತು ಹಾಕಿದ್ದರು ಎಂಬ ಸುದ್ದಿ ಹೈದರಾಬಾದ್‌ನಲ್ಲಿ ಕೇಳಿ ಬಂದಿತ್ತು. ಆಂಧ್ರದಲ್ಲಿ ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೀಡಾಗಿತ್ತು. ''ಹಣ''ದ ಮೇಲೆ ಕೃತಿಗೆ ಇರುವ ಪ್ರೀತಿಯನ್ನ ಕಂಡು ಟಾಲಿವುಡ್ಡಿಗೆ ಟಾಲಿವುಡ್ಡೇ ಬೆಚ್ಚಿ ಬಿದ್ದಿತ್ತು. ಆದರೆ ಆ ನಂತರ ಹಣದ ಮೇಲೆ ಕೃತಿ ಶೆಟ್ಟಿಗೆ ಇದ್ದ ಇದೇ ''ಮೋಹ-ದಾಹ'' ಇವರನ್ನು ಮೂಲೆಗುಂಪಾಗಿಸಿತು ಎಂದು ತೆಲುಗು ಉದ್ಯಮ ಕೂಡ ಮಾತನಾಡಿಕೊಂಡಿತ್ತು.

ಇಂಥಾ ಕೃತಿ ಶೆಟ್ಟಿ ಸದ್ಯ ಮತ್ತೊಮ್ಮೆ ಬಾಲಿವುಡ್‌ನ ಬಾಗಿಲು ಬಡಿಯುತ್ತಿದ್ದಾರೆ. ಆದರೆ ಆ ಬಾಗಿಲಿನ ಇನ್ನೊಂದು ಬದಿ ಬಾಲಿವುಡ್‌ನ ಸ್ವಯಂ ಘೋಷಿತ ವಿಮರ್ಷಕ, ಸಿನಿಮಾ ತಜ್ಞ ಕೆ.ಆರ್.ಕೆ (ಕಮಲ್ ರಶೀದ್ ಖಾನ್ ) ಆಗಲೇ ಕೃತಿಯ ಕಾಲೆಳೆಯಲು ಕಾಯುತ್ತಾ ಕುಂತಿದ್ದಾರೆ. ಅಡ್ಡಗಾಲು ಹಾಕಿ ಕೊಂಕು ಮಾತುಗಳನ್ನಾಡಲು ಶುರು ಮಾಡಿದ್ದಾರೆ. ಕೃತಿ ಶೆಟ್ಟಿಗಾಗಿ ನಿರ್ಮಾಪಕ ಮತ್ತು ನಿರ್ದೇಶಕನ ನಡುವೆ ಜಗಳ ನಡೆದಿದೆ ಎಂದು ಹೇಳುವ ಮೂಲಕ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡರುವ ಕೆ ಆರ್ ಕೆ ನಿರ್ಮಾಪಕರೊಬ್ಬರು ತಮ್ಮ ಚಿತ್ರದ ಮೂಲಕ ಕೃತಿ ಶೆಟ್ಟಿಯನ್ನು ಲಾಂಚ್ ಮಾಡಲು ಬಯಸಿದ್ದಾರೆ. ಆದರೆ ನಿರ್ದೇಶಕನಿಗೆ ತನ್ನ ಗೆಳತಿಯನ್ನೇ ನಾಯಕಿಯನ್ನಾಗಿ ಮಾಡುವ ಆಲೋಚನೆ ಇದೆ. ಈ ಹಿನ್ನೆಲೆ ಇಬ್ಬರು ಜಗಳವಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಂದುವರೆದು ಯಾರನ್ನೇ ನಾಯಕಿಯಾಗಿ ಆಯ್ಕೆ ಮಾಡಿದರೂ ಕೂಡ ಪ್ರಯೋಜನ ಇಲ್ಲ ಎಂದು ಹೇಳಿರುವ ಕೆ ಆರ್ ಕೆ ಇಬ್ಬರು ತುಂಬಾನೇ ಭಯಾನಕವಾಗಿದ್ದಾರೆ ಎಂದು ಉಲ್ಲೇಖ ಮಾಡಿದ್ದಾರೆ. ಕೃತಿ ಶೆಟ್ಟಿಯ ಮುಖ ನೂರಕ್ಕೆ ನೂರರಷ್ಟು ಸೌತ್ ಇಂಡಿಯನ್ ಶೈಲಿಯಲ್ಲಿದೆ. ಅವರ ಮುಖ ಹಿಂದಿ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ. ಈ ಮೂಲಕ ಪ್ರತಿಭಾವಂತ ನಟಿಯ ವ್ಯಕ್ತಿತ್ವಕ್ಕೆ ಅವಮಾನ ಮಾಡಿದ್ದಾರೆ.

KRK Leaks Bollywood Scandal Producer and Director at War Over Krithi Shetty s Debut

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಹಿಂದಿ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಇದೆ. ಪಕ್ಷಪಾತ ಇದೆ. ಈ ಕುರಿತು ಮೊದಲಿಂದ ಚರ್ಚೆಗಳಾಗುತ್ತಲೇ ಇವೆ. ಇನ್ನು ಕೃತಿ ಶೆಟ್ಟಿ ದಕ್ಷಿಣದವರೇನು ಅಲ್ಲ. ಅವರು ಹುಟ್ಟಿ ಬೆಳೆದಿದ್ದೆಲ್ಲ ಮುಂಬೈನಲ್ಲಿಯೇ. ದಕ್ಷಿಣ ಭಾರತದ ಕಡೆ ಮುಖ ಮಾಡುವ ಮೊದಲು ಹೃತಿಕ್ ರೋಷನ್ ಅಭಿನಯದ ''ಸೂಪರ್ 30'' ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದರು ಕೃತಿ ಶೆಟ್ಟಿ.

ಆದರೂ ಕೂಡ ಕೃತಿ ಅವರದ್ದು "ಸೌತ್ ಇಂಡಿಯನ್ ಫೇಸ್" ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಈ ಹಿನ್ನೆಲೆ ಪ್ರತಿಭಾವಂತ ನಟಿಯರಿಗೆ ಅವಕಾಶ ಸಿಗದಂತೆ ಮಾಡಲು ಅಥವಾ ತಮ್ಮವರಿಗೆ ಅವಕಾಶ ಕಲ್ಪಿಸಲು ದೊಡ್ಡ ಮಟ್ಟದ ರಾಜಕೀಯ ಬಾಲಿವುಡ್‌ನಲ್ಲಿ ನಡೆಯುತ್ತೆ ಎನ್ನುವುದು ಕೆ ಆರ್ ಕೆ ಅವರ ಈ ಮಾತುಗಳಿಂದ ಸ್ಪಷ್ಟವಾಗುತ್ತಿದೆ. ಹೀಗಾಗಿಯೇ ಹಲವರು ಸದ್ಯ ಕೆ.ಆರ್.ಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂದ್ಹಾಗೇ ಬಾಲಿವುಡ್‌ನಲ್ಲಿ ಸದ್ಯ ಮಿಂಚುತ್ತಿರುವವರೆಲ್ಲ ದಕ್ಷಿಣ ಭಾರತದವರೇ. ರಶ್ಮಿಕಾ ಮಂದಣ್ಣ.. ದೀಪಿಕಾ ಪಡುಕೋಣೆ.. ಸಮಂತಾ.. ಹೀಗೆ ಹಲವರಿಗೆ ಬಾಲಿವುಡ್‌ನಲ್ಲಿ ಸದ್ಯ ಬೇಡಿಕೆ ಇದೆ. ಆಗಲೇ ಹೇಳಿದಂತೆ ಕೃತಿ ಮುಂಬೈನ ಹುಡುಗಿ. ಹಿಂದಿ ಭಾಷೆಯ ಮೇಲೆ ಅವರಿಗೆ ಉತ್ತಮ ಹಿಡಿತ ಇದೆ. ಆದರೂ ಕೂಡ ಅವರನ್ನು ಸೌತ್ ಫೇಸ್ ಎಂದು ಟ್ರೋಲ್ ಮಾಡುವ ಪ್ರಯತ್ನವನ್ನು ಕೆ ಆರ್ ಕೆ ಮಾಡಿದ್ದಾರೆ. ಇದು ಅವರ ಸಂಕುಚಿತ ಮನೋಭಾವಕ್ಕೆ ಹಿಡಿದ ಕೈಗನ್ನಡಿ.

ಒಟ್ನಲ್ಲಿ ಕ್ಷೇತ್ರ ಯಾವುದೇ ಇರಲಿ. ಅಲ್ಲಿ ಪ್ರತಿಭೆಗೆ ಮೊದಲ ಆದ್ಯತೆ ಸಿಗಬೇಕು. ಕೆಆರ್‌ಕೆ ಅಂತಹವರ ಟ್ವೀಟ್‌ಗಳು ಕ್ಷಣಿಕ ಪ್ರಚಾರ ನೀಡಬಹುದು. ವಿವಾದಕ್ಕೆ ಕಾರಣವಾಗಬಹುದು. ಆದರೆ ನಿಜವಾದ ಕಲಾವಿದರನ್ನು ಹತ್ತಿಕ್ಕಲು ಸಾಧ್ಯ ಇಲ್ಲ. ಕೃತಿ ಶೆಟ್ಟಿ ಬಾಲಿವುಡ್‌ನಲ್ಲಿ ಮಿಂಚಲಿ ಮತ್ತು ತಮಗೆ ಎದುರಾದ ಈ ಎಲ್ಲಾ ಟೀಕೆಗಳಿಗೆ ತಮ್ಮ ಯಶಸ್ಸಿನ ಮೂಲಕವೇ ಉತ್ತರ ನೀಡಲಿ ಎನ್ನುವುದೇ ಸಿನಿರಸಿಕರ ಮತ್ತು ಇವರ ಅಭಿಮಾನಿಗಳ ಆಶಯ.

More from Filmibeat

English summary
Is Krithi Shetty the reason for a Producer-Director fight? KRK claims the director rejected her for his girlfriend. Get the full scoop on this Bollywood casting drama.
Read more about: krithi shetty casting call
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X