ಡ್ರಗ್ಸ್ ಪ್ರಕರಣ: 61 ದಿನಗಳ ಬಳಿಕ ಧರ್ಮ ಪ್ರೊಡಕ್ಷನ್ ನ ಕ್ಷಿತಿಜ್‌ಗೆ ಜಾಮೀನು

ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ಧರ್ಮ ಪ್ರೊಡಕ್ಷನ್, ಎಂಟರ್ಟೈನ್‌ಮೆಂಟ್‌ನ ಪ್ರಮುಖ ನೌಕರ ಕ್ಷಿತಜ್‌ ಪ್ರಸಾದ್‌ಗೆ ಇಂದು (ನವೆಂಬರ್ 26) ಜಾಮೀನು ಮಂಜೂರಾಗಿದೆ.

ಸುಶಾಂತ್ ಸಿಂಗ್ ಸಾವಿನ ನಂತರ ಬೆಳಕಿಗೆ ಬಂದ ಡ್ರಗ್ಸ್‌ ಪ್ರಕರಣದ ತನಿಖೆ ನಡೆಸುತ್ತಿದ್ದ ಎನ್‌ಸಿಬಿಯು ಸೆಪ್ಟೆಂಬರ್ 26 ರಂದು ಕ್ಷಿತಿಜ್ ಪ್ರಸಾದ್ ಅನ್ನು ಬಂಧಿಸಿದ್ದರು. ಬರೋಬ್ಬರಿ 61 ದಿನಗಳ ನಂತರ ಇಂದು ಷರತ್ತು ಬದ್ಧ ಜಾಮೀನು ಕ್ಷಿತಿಜ್‌ಗೆ ದೊರೆತಿದೆ.

ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಜಾಮೀನು ನೀಡಿದ್ದು, ಪ್ರಸಾದ್, ತನ್ನ ಪಾಸ್‌ಪೋರ್ಟ್ ಅನ್ನು ಪೊಲೀಸರ ವಶಕ್ಕೆ ನೀಡಬೇಕಿದೆ ಜೊತೆಗೆ 50,000 ಬಾಂಡ್ ಹಾಗೂ ಭದ್ರತೆಯನ್ನು ಒದಗಿಸಬೇಕು ಎಂದು ನ್ಯಾಯಾಲಯವು ಹೇಳಿದೆ. ಮುಂಬೈನಿಂದ ಹೊರಗೆ ಹೋಗಬೇಕಂದರೆ ಕ್ಷಿತಿಜ್ ಎನ್‌ಸಿಬಿಗೆ ಮಾಹಿತಿ ನೀಡಿಯೇ ಹೋಗಬೇಕು ಎಂಬ ಷರತ್ತು ವಿಧಿಸಲಾಗಿದೆ.

 ಜಾಮೀನು ಸಿಕ್ಕರೂ ಹೊರಬರುವಂತಿಲ್ಲ ಕ್ಷಿತಿಜ್

ಜಾಮೀನು ಸಿಕ್ಕರೂ ಹೊರಬರುವಂತಿಲ್ಲ ಕ್ಷಿತಿಜ್

ಜಾಮೀನು ದೊರಕಿದೆಯಾದರೂ ಕ್ಷಿತಿಜ್ ಈಗಲೇ ಜೈಲಿನಿಂದ ಹೊರಗೆ ಬರುವ ಹಾಗಿಲ್ಲ. ಆತನ ಮೇಲೆ ಇನ್ನೂ ಒಂದು ಡ್ರಗ್ಸ್ ಸಂಬಂಧಿತ ಪ್ರಕರಣವನ್ನು ಎನ್‌ಸಿಬಿ ದಾಖಲಿಸಿದ್ದು, ಅದರ ವಿಚಾರಣೆ ಡಿಸೆಂಬರ್ 3 ಕ್ಕೆ ನಡೆಯಲಿದೆ. ಆ ಪ್ರಕರಣದಲ್ಲಿಯೂ ಜಾಮೀನು ದೊರಕಿದರಷ್ಟೆ ಕ್ಷಿತಿಜ್ ಹೊರಗೆ ಬರಬಹುದಾಗಿದೆ.

ತನಿಖಾಧಿಕಾರಿಗಳ ಮೇಲೆ ಕ್ಷಿತಿಜ್ ಆರೋಪ

ತನಿಖಾಧಿಕಾರಿಗಳ ಮೇಲೆ ಕ್ಷಿತಿಜ್ ಆರೋಪ

ಜೈಲಿನಲ್ಲಿದ್ದಾಗ ಕ್ಷಿತಿಜ್, ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದರು. 'ತನಿಖಾ ಅಧಿಕಾರಿಗಳು ಸುಳ್ಳು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ರಣಬೀರ್ ಕಪೂರ್, ಡಿನೊ ಮರಿಯೊ ಹಾಗೂ ಅರ್ಜುನ್ ರಾಮ್‌ಪಾಲ್ ಹೆಸರನ್ನು ಹೇಳುವಂತೆ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ' ಎಂದು ಕ್ಷಿತಿಜ್ ಆರೋಪಿಸಿದ್ದರು. ಆದರೆ ಎನ್‌ಸಿಬಿ ಇದನ್ನು ಅಲ್ಲಗಳೆದಿತ್ತು.

ಶೋವಿಕ್ ಚಕ್ರವರ್ತಿ ಹಾಗೂ ಹಲವರ ಬಂಧನ

ಶೋವಿಕ್ ಚಕ್ರವರ್ತಿ ಹಾಗೂ ಹಲವರ ಬಂಧನ

ಸುಶಾಂತ್ ಸಿಂಗ್ ಸಾವಿನ ನಂತರ ಹೊರಬಿದ್ದ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ, ಸುಶಾಂತ್‌ ನ ಸಹಾಯಕ ದೀಪೇಶ್ ಸಾವಂತ್, ಸುಶಾಂತ್‌ ನ ಮ್ಯಾನೇಜರ್ ಹಾಗೂ ಕೆಲವು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದೆ.

Recommended Video

ಭಾರಿ ಮೊಟ್ಟಕ್ಕೆ ಮಾರಾಟವಾಯ್ತು Pogaru Hindi ರೈಟ್ಸ್ | Dhruva Sarja | Filmibeat Kannada
ರಿಯಾ ಚಕ್ರವರ್ತಿ ಸಹ ಬಂಧನಕ್ಕೆ ಒಳಗಾಗಿದ್ದರು

ರಿಯಾ ಚಕ್ರವರ್ತಿ ಸಹ ಬಂಧನಕ್ಕೆ ಒಳಗಾಗಿದ್ದರು

ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಸಹ ಬಂಧಿಸಲಾಗಿತ್ತು. ಆದರೆ ಒಂದು ತಿಂಗಳ ನಂತರ ರಿಯಾ ಗೆ ಜಾಮೀನು ದೊರಕಿತು. ಶೋವಿಕ್‌ಗೆ ಇನ್ನೂ ಜಾಮೀನು ದೊರೆತಿಲ್ಲ. ಇವರಿಬ್ಬರು ಡ್ರಗ್ಸ್ ಖರೀದಿಸಿದ್ದರು ಎನ್ನುವ ಆರೋಪವನ್ನು ಎನ್‌ಸಿಬಿ ಮಾಡಿದೆ.

More from Filmibeat

English summary
Dharma production employee Kshtij Prasad gets conditional bail in drug case related to Sushant Singh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X