'ಪೃಥ್ವಿರಾಜ್' ಸಿನಿಮಾದ ವಿರುದ್ಧ ಪ್ರತಿಭಟನೆ: ಅಕ್ಷಯ್ ಕುಮಾರ್ ಪ್ರತಿಕೃತಿ ದಹನ

ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷೆಯ ಪೃಥ್ವರಾಜ್ ಸಿನಿಮಾದ ವಿವಾದ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಚಿತ್ರದ ಟೈಟಲ್ ಬದಲಾವಣೆ ಮಾಡುವಂತೆ ಅನೇಕ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಇತ್ತೀಚಿಗಷ್ಟೆ ಮಹಾರಾಷ್ಟ್ರ ಕರ್ಣಿ ಸೇನಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈಗ ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಕೂಡ ವಿರೋಧ ವ್ಯಕ್ತಪಡಿಸಿ ಚಿತ್ರತಂಡದ ವಿರುದ್ಧ ಪ್ರತಿಭಟನೆ ಮಾಡುತ್ತಿದೆ.

ಚಿತ್ರತಂಡದ ವಿರುದ್ಧ ಚಂಡೀಗಡದಲ್ಲಿ ಪ್ರತಿಭಟನೆ ನಡೆಸಿದ ಕ್ಷತ್ರಿಯ ಮಹಾಸಭಾ ಚಿತ್ರತಂಡದ ವಿರುದ್ಧ ಘೋಷಣೆ ಕೂಗಿ, ನಿರ್ಮಾಪಕ, ನಿರ್ದೇಶಕ ಮತ್ತು ನಟ ಅಕ್ಷಯ್ ಕುಮಾರ್ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

"ಈ ಸಿನಿಮಾದ ಶೀರ್ಷಿಕೆ ಕೇವಲ ಪೃಥ್ವಿರಾಜ್ ಆಗಲು ಸಾಧ್ಯವಿಲ್ಲ. ಪೃಥ್ವಿರಾಜ್ ಅವರ ಸಂಪೂರ್ಣ ಹೆಸರನ್ನು ಇಡಬೇಕು. ಹಿಂದೂ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅಥವಾ ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ ಎಂದು ಶೀರ್ಷಿಕೆ ಇಡಬೇಕು" ಎಂದು ಎಚ್ಚರಿಕೆ ನೀಡಿದೆ.

 Kshtriya Mahasabha Protest Against Actor Akshay Kumars Prithviraj movie

ಪೃಥ್ವಿರಾಜ್ ಚೌಹಾಣ್ ಕೊನೆಯ ಹಿಂದೂ ಚಕ್ರವರ್ತಿ. ಸಿನಿಮಾತಂಡ ಅಪೂರ್ಣ ಹೆಸರನ್ನು ಇಟ್ಟು ಅಗೌರವ ತೋರುತ್ತಿದೆ, ಸಂಪೂರ್ಣ ಹೆಸರಿಡಬೇಕೆಂದು ಒತ್ತಾಯ ಮಾಡಿದೆ. ಜೊತೆಗೆ ಸಿನಿಮಾ ಬಿಡುಗಡೆಗೂ ಮೊದಲು ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಮತ್ತು ರಜಪೂತ್ ಸಮಾಜ ಸಿನಿಮಾ ತೋರಿಸಬೇಕು, ಚಿತ್ರದಲ್ಲಿ ಏನಾದರೂ ವಿವಾದಾಸ್ಪದ ಸಂಗತಿ ಇದೆಯಾ ಅಥವಾ ಇತಿಹಾಸವನ್ನು ತಿರುಚಿದ್ದಾರಾ ಎನ್ನುವುದನ್ನು ನೋಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಒಂದು ವೇಳೆ ಟೈಟಲ್ ಬದಲಾವಣೆ ಮಾಡದಿದ್ದರೆ, ನಮ್ಮ ಬೇಡಿಕೆ ಈಡೇರಿಸದಿದ್ದರೆ ಪದ್ಮಾವತ್ ಮತ್ತು ಜೋಧಾ ಅಕ್ಬರ್ ಸಿನಿಮಾಗೆ ಆದ ಗತಿಯೇ ಆಗಲಿದೆ ಎಂದು ಕ್ಷತ್ರಿಯ ಮಹಾಸಭಾ ಎಚ್ಚರಿಕೆ ನೀಡಿದೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಸಿನಿಮಾ ಬಿಡುಗಡೆ ಸಮಯದಲ್ಲೂ ಕರ್ಣಿ ಸೇನಾ, ಕ್ಷತ್ರಿಯ ಮಹಾಸಭಾ ಸೇರಿದಂತೆ ಕೆಲವು ಸಂಘಟನೆಗಳು ವಿಭಿನ್ನ ಕೃತ್ಯಗಳನ್ನು ಎಸಗಿದ್ದರು. ಸಿನಿಮಾದ ಶೀರ್ಷಿಕೆ ಬದಲಾಯಿಸಬೇಕೆಂದು ಒತ್ತಾಯಿಸಿ ಸಿನಿಮಾ ಸೆಟ್ ಗೆ ಬೆಂಕಿ ಹಾಕಿದ್ದರು. ನಟಿ ದೀಪಿಕಾ ಪಡುಕೋಣೆಗೆ ಬೆದರಿಕೆ ಹಾಕಿದ್ದರು. ಸಿನಿಮಾ ಬಿಡುಗಡೆ ಮಾಡದಂತೆ ದೊಡ್ಡ ಮಟ್ಟದ ಹೋರಾಟ ಮಾಡಿದ್ದರು.

ಇದೀಗ ಪೃಥ್ವಿರಾಜ್ ಚಿತ್ರ ಬಿಡುಗಡೆ ವೇಳೆಯೂ ಅದೇ ಘಟನೆಗಳು ಮರುಕಳುಹಿಸಲಿವೆ ಎಂದು ಎಚ್ಚರಿಕೆ ನೀಡಿದೆ. ಇನ್ನೂ ಕಳೆದ ವರ್ಷ ಬಿಡುಗಡೆಯಾದ ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮೀ ಬಾಂಬ್ ಸಿನಿಮಾಗೂ ಸಂಕಷ್ಟ ಎದುರಾಗಿತ್ತು. ಟೈಟಲ್ ಬದವಲಾವಣೆಗೆ ಒತ್ತಾಯ ಮಾಡಲಾಗಿತ್ತು. ಬಳಿಕ ಶೀರ್ಷಿಕೆಯಲ್ಲಿದ್ದ ಬಾಂಬ್ ಹೆಸರನ್ನು ತೆಗೆದುಹಾಕಲಾಗಿತ್ತು.

ಅಂದಹಾಗೆ ಚಿತ್ರದಲ್ಲಿ ಅಕ್ಷಯ್ ಕುಮಾರ್ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾನುಷಿ ಚಿಲ್ಲರ್ ನಾಯಕಿಯಾಗಿ ಮಿಂಚಿದ್ದಾರೆ. ಈ ಸಿನಿಮಾ ಮೂಲಕ ಮಾನುಷಿ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kshtriya Mahasabha Protest Against Bollywood Actor Akshay Kumar's Prithviraj movie team in Chandigarh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X