ಗರ್ಭಪಾತ ಮಾಡಿಸಿಕೊಂಡಿದ್ದ ವಿಷಯ ಬಹಿರಂಗಪಡಿಸಿದ ಕರ್ನಾಟಕ ಮೂಲದ ನಟಿ!
'ಸೇಕ್ರೆಡ್ ಗೇಮ್ಸ್' ವೆಬ್ ಸರಣಿಯ ಕೂಕು ಪಾತ್ರದ ಮೂಲಕ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ ನಟಿ ಕುಬ್ರಾ ಸೇಠ್ ಬೆಂಗಳೂರಿನ ಹುಡುಗಿ.
ಬೆಂಗಳೂರಿನಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದಿರುವ ನಟಿ ಕುಬ್ರಾ ಸೇಠ್, ಕನ್ನಡದಲ್ಲಿ ಕೆಲವಾರು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟ ದಾನಿಶ್ ಸೇಠ್‌ರ ಸ್ವಂತ ಸಹೋದರಿ.
ತಮ್ಮ ದಿಟ್ಟತನದ ಹೇಳಿಕೆಗಳಿಂದ, ಗ್ಲಾಮರಸ್ ಪಾತ್ರಗಳು ಹಾಗೂ ಫೋಟೊಶೂಟ್‌ಗಳಿಂದ ಬಹಳ ಜನಪ್ರಿಯರಾಗಿರುವ ಕುಬ್ರಾ ಸೇಠ್, ತಾವು ಹದಿವಯಸ್ಸಿನಲ್ಲಿದ್ದಾಗ ವ್ಯಕ್ತಿಯೊಬ್ಬರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ವಿಷಯವನ್ನು ಬಹಿರಂಗಗೊಳಿಸಿದ್ದರು, ಇದೀಗ ತಮ್ಮ ಖಾಸಗಿ ಬದುಕಿನ ಮತ್ತೊಂದು ಆಘಾತಕಾರಿ ವಿಷವನ್ನು ಹಂಚಿಕೊಂಡಿದ್ದಾರೆ.
'ದಿ ಓಪನ್ ಬುಕ್: ನಾಟ್ ಎ ಮೆಮೈರ್' ಹೆಸರಿನ ಪುಸ್ತಕ ಬರೆದಿರುವ ಕುಬ್ರಾ ಸೇಠ್, ತಾವು ಒಮ್ಮೆ ಗೆಳೆಯನೊಬ್ಬನಿಂದ ಗರ್ಭಿಣಿ ಆಗಿ ಬಳಿಕ ಗರ್ಭಪಾತ ಮಾಡಿಸಿಕೊಂಡ ವಿಷಯವನ್ನು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಅಂಡಮಾನ್‌ಗೆ ಹೋಗಿದ್ದಾಗ ಗೆಳೆಯನೊಟ್ಟಿಗೆ ಸೆಕ್ಸ್!
''ನಾನೊಮ್ಮೆ ಅಂಡಮಾನ್‌ಗೆ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿ ರಾತ್ರಿ ಸಮಯ ಸ್ಕೂಬಾ ಡೈವಿಂಗ್‌ಗೆ ಹೋಗಿದ್ದೆ. ಬಳಿಕ ಚೆನ್ನಾಗಿ ಕುಡಿದೆ. ಜೊತೆಯಲ್ಲಿದ್ದ ಗೆಳೆಯನೊಟ್ಟಿಗೆ ಹೆಚ್ಚು ಆತ್ಮೀಯವಾಗಿ ಅಂದು ಇಬ್ಬರೂ ಕೂಡಿದೆವು. ಅದಾದ ಕೆಲವು ದಿನಗಳ ನಂತರ ನಾನು ಗರ್ಭಿಣಿ ಆಗಿರುವುದು ಗೊತ್ತಾಯಿತು. ಕೂಡಲೇ ನಾನು ಗರ್ಭಪಾತ ಮಾಡಿಸಿದೆ. ಆಗ ನನಗೆ 30 ವರ್ಷ ವಯಸ್ಸು. ಆದರೆ ನಾನು ಆಗಿನ್ನೂ ತಾಯಿಯಾಗಲು ತಯಾರಾಗಿರಲಿಲ್ಲ ಎನ್ನಿಸಿತು. ಅಲ್ಲದೆ ನನ್ನ ಜೀವನದ ಯೋಜನೆಯಲ್ಲಿ ಇಷ್ಟು ಬೇಗ ತಾಯಿಯಾಗಬೇಕು ಎಂದುಕೊಂಡಿರಲಿಲ್ಲ'' ಎಂದು ಬರೆದುಕೊಂಡಿದ್ದಾರೆ ನಟಿ.

ತಾಯಿಯಾಗಲು ತಯಾರಾಗಿರಲಿಲ್ಲ: ಕುಬ್ರಾ ಸೇಠ್
ಅದೇ ವಿಷಯವಾಗಿ ಮಾಧ್ಯಮದೊಟ್ಟಿಗೆ ಮಾತನಾಡಿರುವ ಕುಬ್ರಾ ಸೇಠ್, ''ನಾನು ತಾಯಿಯಾಗಲು ಆಗ ತಯಾರಾಗಿರಲಿಲ್ಲ. ಈಗಲೂ ನಾನು ತಯಾರಾಗಿಲ್ಲ. ಮಹಿಳೆಯರ ಮೇಲೆ ಒತ್ತಡವೊಂದಿದೆ. 23ನೇ ವರ್ಷಕ್ಕೆ ಮದುವೆಯಾಗಿಬಿಡು, 30 ವರ್ಷಕ್ಕೆ ಇಬ್ಬರು ಮಕ್ಕಳನ್ನು ಹೆರು ಎಂದು ಆದರೆ ನನಗೆ ಆ ರೀತಿಯ ಒತ್ತಡಕ್ಕೆ ಒಳಪಡುವುದು ನನಗೆ ಬೇಕಿರಲಿಲ್ಲ. ನನಗೆ ಆ ಸಮಯದಲ್ಲಿ ಮಗು ಬೇಡ ಎಂದು ಸ್ಪಷ್ಟವಾಗಿ ಅನ್ನಿಸಿತು'' ಎಂದಿದ್ದಾರೆ ಕುಬ್ರಾ ಸೇಠ್.

ಆ ಬಗ್ಗೆ ಬೇಸರವಿಲ್ಲ: ಕುಬ್ರಾ ಸೇಠ್
ಗರ್ಭಪಾತ ಮಾಡಿಸಿದ ಬಗ್ಗೆ ಬೇಸರ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಕುಬ್ರಾ ಸೇಠ್, ''ಖಂಡಿತವಾಗಿ ಯಾವುದೇ ಬೇಸರ ಇಲ್ಲ. ನಾನು ಮಾಡಿದ ನಿರ್ಧಾರದಿಂದ ನಾನೊಬ್ಬ ಅತಿ ಕೆಟ್ಟ ವ್ಯಕ್ತಿ ಎಂದು ಅನಿಸಬಹುದು. ಆದರೆ ನನ್ನ ಆ ನಿರ್ಧಾರ ನನಗಾಗಿ ಬಂದಿದ್ದಿಲ್ಲ ಬದಲಿಗೆ ಸಮಾಜದ ಬಗ್ಗೆ ಯೋಚಿಸಿ ಬಂದಿದ್ದು. ನನ್ನ ಬಗ್ಗೆಗಿಂತಲೂ, ಮದುವೆಯಾಗದೆ ತಾಯಿಯಾದರೆ ಸಮಾಜ ಏನೆಂದು ಮಾತನಾಡಬಹುದು ಎಂದು ಯೋಚಿಸಿ ನಾನು ಗರ್ಭಪಾತಕ್ಕೆ ಮುಂದಾದೆ'' ಎಂದು ವಿವರಿಸಿದ್ದಾರೆ ಕುಬ್ರಾ ಸೇಠ್.

ಲೈಂಗಿಕ ದೌರ್ಜನ್ಯ ವಿಷಯ ಹಂಚಿಕೊಂಡಿದ್ದ ಕುಬ್ರಾ
ತಮ್ಮ ಮೇಲೆ 18 ನೇ ವಯಸ್ಸಿನಲ್ಲಿಯೇ ಫ್ಯಾಮಿಲಿ ಫ್ರೆಂಡ್ ಆಗಿದ್ದ ವ್ಯಕ್ತಿಯೊಬ್ಬನಿದ್ದ ಲೈಂಗಿಕ ದೌರ್ಜನ್ಯ ಆಗಿದ್ದ ವಿಷಯವನ್ನು ಬಹಿರಂಗಪಡಿಸಿದ್ದರು. ತನ್ನ ತಾಯಿಗೂ ಆ ವಿಷಯ ಗೊತ್ತಿದ್ದೆಂದು ಕುಬ್ರಾ ಸೇಠ್ ಹೇಳಿಕೊಂಡಿದ್ದಾರೆ. ಆ ವ್ಯಕ್ತಿ ನಮ್ಮ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದ, ಹಾಗಾಗಿ ನಮ್ಮ ಅಮ್ಮನೂ ಸಹ ಎಲ್ಲ ಗೊತ್ತಿದ್ದರೂ ಸುಮ್ಮನೇ ಇದ್ದರು ಎಂದಿದ್ದಾರೆ ಕುಬ್ರಾ ಸೇಠ್.


Click it and Unblock the Notifications











