ನಿಮ್ಮ ಮನೆಯ 'ಲಕ್ಷ್ಮೀ' ಬೇರೆಯವರ ಪಾಲಾಗಬಹುದು, ಸೋನಾಕ್ಷಿ ಸಿನ್ಹಾ ಮದುವೆ ಬಗ್ಗೆ ರಾಜಕಾರಣಿ ವ್ಯಂಗ್ಯ..!
ಪ್ರೀತಿಗೆ ಹುಟ್ಟೋದು ಗೊತ್ತು.. ಸಾಯೋದು ಗೊತ್ತಿಲ್ಲ.. ನಗ್ಸೋದು ಗೊತ್ತು.. ನಗು ಕಸಿಯೋದು ಗೊತ್ತಿಲ್ಲ. ಧರ್ಮ, ಬಣ್ಣ, ಭಾಷೆ, ಮೇಲು-ಕೀಳಿನ ಕಿಂಚಿತ್ತೂ ಅರಿವು ಇದಕ್ಕಿಲ್ಲ. ಕಣ್ಣಲ್ಲ್ ಹುಟ್ಟೋ ಪ್ರೀತಿಗೆ ಮನಸ್ಸೆ ಸಾಕ್ಷಿ.. ಹೃದಯವೇ ಸ್ವರ್ಗ. ಇದಕ್ಕೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ತಾಜಾ ಉದಾಹರಣೆ
ಹೌದು, ಅಂತರ ಧರ್ಮವಾಗಿದ್ದರೂ, ವಯಸ್ಸಿನಲ್ಲಿ ಅಂತರ ಇದ್ದರೂ.. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬಂತೆ ಯಾರಿಗೂ ಕ್ಯಾರೇ ಎನ್ನದೇ ಮದುವೆಯಾದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಸದ್ಯ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಜೀವನದ ಪ್ರತಿಯೊಂದು ಕ್ಷಣಗಳನ್ನು ಖುಷಿ ಖುಷಿಯಾಗಿ ಕಳೆಯುತ್ತಿದ್ದಾರೆ. ಆದರೆ ಕೆಲವರಿಗೆ ಇವರ ಖುಷಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಕುಮಾರ್ ವಿಶ್ವಾಸ್.

ಹೌದು, ಒಂದ್ಕಾಲದಲ್ಲಿ ಆಪ್ ಪಕ್ಷದಲ್ಲಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ, ಕವಿಯಾಗಿ ಕೂಡ ಹೆಸರು ಮಾಡಿರುವ ಕುಮಾರ್ ವಿಶ್ವಾಸ್, ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ಮದುವೆಯ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ಧಾರೆ. ಕವಿತೆಯನ್ನು ಹೇಳಿದ್ದಾರೆ. ಮೀರತ್‌ನಲ್ಲಿ ನಡೆದ ಕವಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿರುವ ಕುಮಾರ್ ವಿಶ್ವಾಸ್ ನಿಮ್ಮ ಮಕ್ಕಳಿಗೆ ರಾಮಾಯಣವನ್ನು ಕಲಿಸಿ ಇಲ್ಲದಿದ್ದರೆ ನಿಮ್ಮ ಮನೆಯ ಹೆಸರು 'ರಾಮಾಯಣ' ಎಂದು ಇದ್ದರೂ ಕೂಡ ನಿಮ್ಮ ಮನೆಯ ಲಕ್ಷ್ಮೀ ಯನ್ನು ಬೇರೆಯವರು ಕೊಂಡೊಯ್ಯಬಹುದು ಎಂದು ಹೇಳಿದ್ದಾರೆ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ಬಾಲಿವುಡ್‌ನ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಮನೆಯ ಹೆಸರು ರಾಮಾಯಣ. ಇಷ್ಟೇ ಅಲ್ಲ ಶತ್ರುಘ್ನ ಸಿನ್ಹಾ ಅವರಿಗೆ ರಾಮ್, ಭರತ್ ಮತ್ತು ಲಕ್ಷ್ಮಣ ಹೆಸರಿನ ಮೂವರು ಸೋದರರಿದ್ದಾರೆ. ಇನ್ನೂ ಶತ್ರುಘ್ನಾ ಸಿನ್ಹಾ ತಮ್ಮ ಇಬ್ಬರು ಮಕ್ಕಳಿಗೆ ಲವ ಮತ್ತು ಕುಶ ಎಂದು ಹೆಸರಿಟಿದ್ದಾರೆ. ಈ ಕಾರಣಕ್ಕೆ ಸೋನಾಕ್ಷಿ ಸಿನ್ಹಾ ಹೆಸರನ್ನು ಕುಮಾರ್ ವಿಶ್ವಾಸ ತಮ್ಮ ಕವಿತೆಯಲ್ಲಿ ಹೇಳದಿದ್ದರೂ ಕೂಡ ಅನೇಕರಿಗೆ ಕುಮಾರ್ ವಿಶ್ವಾಸ್ ಅವರ ಈ ಕವಿತೆ ಅರ್ಥವಾಗಿದೆ.
ಹೀಗಾಗಿಯೇ ಕುಮಾರ್ ವಿಶ್ವಾಸ್ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಮಂಗಳಾರತಿಯನ್ನು ಮಾಡುತ್ತಿರುವ ಅನೇಕರು 'ರಾಮಾಯಣ'ವನ್ನು ನೀವು ಸರಿಯಾಗಿ ಓದಿದ್ದರೆ ಈ ತರಹದ ಮಾತುಗಳನ್ನು ನೀವು ಹೇಳುತ್ತಿರಲಿಲ್ಲ ಎನ್ನುತ್ತಿದ್ದಾರೆ. ಕುಮಾರ್ ವಿಶ್ವಾಸ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ಧಾರೆ.
ಅಂದ್ಹಾಗೇ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ಪ್ರೀತಿಯ ಬಗ್ಗೆ ಮಾತನಾಡಿದವರಲ್ಲಿ ಕುಮಾರ್ ವಿಶ್ವಾಸ್ ಮೊದಲಿಗರನೇಲ್ಲ. ಮೊನ್ನೆ ಮೊನ್ನೆಯಷ್ಟೇ ಮಹಾಭಾರತದ ಭೀಷ್ಮ ಪಾತ್ರದ ಮೂಲಕ ಹೆಸರುವಾಸಿಯಾದ ಒಂದ್ಕಾಲದ ಶಕ್ತಿಮಾನ್ ಮುಖೇಶ್ ಖನ್ನಾ ಕೂಡ ಮಾತನಾಡಿದ್ದರು. ತಮ್ಮ ಮಗಳಿಗೆ ನಮ್ಮ ಸಂಸ್ಕ್ರತಿ ಮತ್ತು ಸಂಪ್ರದಾಯಗಳನ್ನು ಶತ್ರುಘ್ನ ಸಿನ್ಹಾ ಕಲಿಸಿಲ್ಲ ಎಂದು ಹೇಳಿದ್ದರು. ಮನೆಯ ಹೆಸರು ರಾಮಾಯಣ ಎಂದು ಇದ್ದರೂ ಕೂಡ ಸೋನಾಕ್ಷಿ ಸಿನ್ಹಾಗೆ ರಾಮಾಯಣದ ಕಥೆಯೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದರು. ಸೋನಾಕ್ಷಿ ಸಿನ್ಹಾ ಲಾಲನೆ-ಪಾಲನೆಯ ಬಗ್ಗೆ ಮಾತನಾಡಿದ್ದರು.
ಮುಖೇಶ್ ಖನ್ನಾ ಅವರ ಈ ಹೇಳಿಕೆಗೆ ಸೋನಾಕ್ಷಿ ಸಿನ್ಹಾ ಕೂಡಲೇ ತಿರುಗೇಟು ನೀಡಿದ್ದರು. ನನ್ನ ತಂದೆ ನನಗೆ ಕಲಿಸಿದ ಸಂಸ್ಕಾರ ಮತ್ತು ಹೇಳಿಕೊಟ್ಟ ಜೀವನದ ಮೌಲ್ಯದ ಕುರಿತು ಪ್ರಶ್ನಿಸುವ ಹಕ್ಕು ನಿಮಗಿಲ್ಲ ಎಂದಿದ್ದ ಸೋನಾಕ್ಷಿ ಸಿನ್ಹಾ ಮುಂದೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಿ ಎಂದು ಹೇಳಿದ್ದರು. ಈಗ ಮುಖೇಶ್ ಖನ್ನಾ ಮಾತನಾಡಿದ ಕೆಲವೇ ದಿನಗಳಲ್ಲಿ ಕುಮಾರ್ ವಿಶ್ವಾಸ್ ಮಾತನಾಡಿದ್ದಾರೆ.


Click it and Unblock the Notifications











