ದೀಪಿಕಾ ಪಡುಕೋಣೆಯನ್ನು ಕೆಣಕಿದ ರಾಜಾ ಹಿಂದೂಸ್ತಾನಿ ಕುನಾಲ್ ಖೇಮು ; ಸ್ತ್ರೀದ್ವೇಷಿನಾ ಸೈಫ್ ಅಲಿ ಖಾನ್ ತಂಗಿ ಗಂಡ ?

ಇಂದು ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ. ಸಾಮಾಜಿಕವಾಗಿ.. ಆರ್ಥಿಕವಾಗಿ... ರಾಜಕೀಯವಾಗಿ.. ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಕ್ಷೇತ್ರ.. ಈ ಕ್ಷೇತ್ರ ಎಂದಲ್ಲ. ಹಲವು ಕ್ಷೇತ್ರಗಳಲ್ಲಿ ಪುರುಷನನ್ನೇ ಮಹಿಳೆ ಮೀರಿ ನಿಂತಿದ್ದಾಳೆ.

ವಿಶೇಷ ಅಂದರೆ ಕೇವಲ ಉದ್ಯೋಗ ಮಾಡುವುದಲ್ಲ. ಮನೆಯ ಜವಾಬ್ಧಾರಿಯನ್ನು ಕೂಡ ಸಮರ್ಥವಾಗಿ ಮಹಿಳೆ ನಿಭಾಯಿಸುತ್ತಿದ್ದಾಳೆ. ಉದ್ಯೋಗ ಮತ್ತು ಕುಟುಂಬ ಈ ಎರಡು ಜವಾಬ್ಧಾರಿಯನ್ನು ಸಮತೋಲನದಲ್ಲಿಡುತ್ತಿದ್ದಾಳೆ. ಪ್ರಾಮಾಣಿಕ ಉದ್ಯೋಗಿ ಮತ್ತು ಜವಾಬ್ಧಾರಿಯುತ ಕುಟುಂಬದ ಸದಸ್ಯೆಯಾಗುತ್ತಿದ್ದಾಳೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಹಲವರು ಮದುವೆಯಾಗಿ ಮಕ್ಕಳಾದ ನಂತರವೂ ಮನೆ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಆ ಪೈಕಿ ದೀಪಿಕಾ ಪಡುಕೋಣೆ ಕೂಡ ಒಬ್ಬರು.

kunal-kemmu-branded-misogynist-over-pregnancy-remark-amid-deepika-padukone-s-8-hour-row

ಮಗಳು ದುವಾ ಹುಟ್ಟಿದ ನಂತರವೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ದೀಪಿಕಾ ಪಡುಕೋಣೆ ಸದ್ಯ ಒಂದಾದ ಮೇಲೊಂದು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕೆಲ ಸಿನಿಮಾಗಳಿಂದ ಹೊರ ಬರುತ್ತಿದ್ದಾರೆ. ಹೀಗೆ ಹೊರ ಬರಲು ತಮ್ಮ ತಾಯ್ತನದ ಸುಖಕ್ಕೆ ಕೆಲಸ ಅಡ್ಡಿಯಾಗುತ್ತಿದೆ ಎಂಬ ಕಾರಣವನ್ನು ದೀಪಿಕಾ ನೀಡುತ್ತಿದ್ದಾರೆ. 8 ಗಂಟೆ ಮಾತ್ರ ಕೆಲಸ ಮಾಡುವ ಷರತ್ತು ಕೂಡ ಹಾಕುತ್ತಿದ್ದಾರೆ.

ಇವರ ಈ ಷರತ್ತು ಕೆಲವರ ಕಣ್ಣು ಕೆಂಪಾಗಿಸಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ದೀಪಿಕಾ ಈ ಹೇಳಿಕೆ ನೀಡಿ ಹಲವು ತಿಂಗಳಾದರೂ ಈ ಕುರಿತ ಚರ್ಚೆ ಕಡಿಮೆಯಾಗುತ್ತಿಲ್ಲ. ಸದ್ಯ ಇಂತಹದ್ದೇ ಒಂದು ಚರ್ಚೆಯ ಭಾಗವಾಗಿ ಕುನಾಲ್ ಖೇಮು ಹಲವರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಹೌದು, ಅಸಲಿಗೆ ಕುನಾಲ್ ಖೇಮು ಇತ್ತೀಚೆಗೆ ತಮ್ಮ ಪತ್ನಿ ಸೋಹಾ ಅಲಿ ಖಾನ್‌ ಅವರ ಪಾಡ್‌ಕಾಸ್ಟ್‌ನಲ್ಲಿ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ದೀಪಿಕಾ ಪಡುಕೋಣೆಯ 8 ಗಂಟೆಯ ಶಿಫ್ಟ್ ಬೇಡಿಕೆಯ ವಿಚಾರದ ಕುರಿತು ಕೂಡ ಮಾತನಾಡಿದ್ದಾರೆ. ಕೆಲಸದ ಸಮಯದ ಕುರಿತು ದೂರುವ ಬದಲು ಜೀವನ ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಿಕೊಳ್ಳಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿರುವ ಕುನಾಲ್ ಖೇಮು ಬೇರೆಯವರು ಹಣ ಹೂಡಿದಾಗ ಅವರ ನೋವು ನಿಮಗೆ ಅರ್ಥ ಆಗಲ್ಲ. ಆದರೆ, ಅದೇ ನೀವು ನಿರ್ಮಾಪಕರಾದರೆ, ನೀವು ಕಷ್ಟ ಪಟ್ಟು ಸಂಪಾದನೆ ಮಾಡಿದ ಹಣ ಹೂಡಿದ್ದರೆ, ನೀವು ಎರಡು ಗಂಟೆಯಷ್ಟೇ ಕೆಲಸ ಮಾಡಬಹುದು, ಆಗ ನಿಮ್ಮನ್ನು ಯಾರು ಕೇಳಲ್ಲ, ಯಾಕೆಂದರೆ ನಿಮಗೆ ನೀವು ಬಾಸ್ ಆಗಿರುತ್ತೀರಾ ಎಂದು ಹೇಳಿದ್ಧಾರೆ.

kunal-kemmu-branded-misogynist-over-pregnancy-remark-amid-deepika-padukone-s-8-hour-row

ಚಿತ್ರ ನಿರ್ಮಾಣಕ್ಕೆ ಇಳಿದಾಗಲೇ ನಿರ್ಮಾಪಕರ ಕಷ್ಟ ಗೊತ್ತಾಗುತ್ತೆ ಎಂದು ಹೇಳಿರುವ ಕುನಾಲ್ ಖೇಮು ಅವರಿಂದ ಹಣ ಪಡೆದು, ಕೆಲಸ ಪಡೆದು, ನಾನು ಹೇಳಿದ ಸಮಯಕ್ಕೆ ಮಾತ್ರ ಬರುವುದು, ಕೆಲಸ ಮಾಡುವುದು, ಎಂದು ಹೇಳುವುದೆಲ್ಲ ಸರಿ ಅಲ್ಲ ಎಂದು ಹೇಳಿದ್ದಾರೆ. ಇಷ್ಟೇ ಮಾತನಾಡಿ ಕುನಾಲ್ ಸುಮ್ಮನಾಗಿದ್ದರೆ ವಿವಾದ ಭುಗಿಲೇಳುತ್ತಿರಲಿಲ್ಲ.

ಆದರೆ.. ಸುಮ್ಮನಾಗದ ಕುನಾಲ್ ಖೇಮು ಮುಂದುವರೆದು ಗರ್ಭಾವಸ್ಥೆಯ ಅವಧಿ ಅವಧಿ ಒಂಬತ್ತು ತಿಂಗಳು ಇರುತ್ತೆ. ನೀವು ನಿಮ್ಮ ಈ ಗರ್ಭದಾರಣೆಯನ್ನು ಸರಿಯಾಗಿ ಪ್ಲಾನ್ ಮಾಡಬೇಕು ಎಂದು ಹೇಳಿದ್ಧಾರೆ. ಆಕಸ್ಮಿಕವಾಗಿ ತಾಯಿಯಾಗದೇ ಎಲ್ಲವನ್ನೂ ಯೋಚಿಸಿ-ಯೋಜನೆ ಮಾಡಿ ಮಾಡಬೇಕು ಎಂದು ಹೇಳಿದ್ಧಾರೆ.

ಕುನಾಲ್ ಖೇಮು ಅವರ ಈ ಹೇಳಿಕೆ ಸದ್ಯ ಹಲವರನ್ನು ಕೆರಳಿಸಿದೆ. ಸ್ತ್ರೀ ವಿರೋಧಿ.. ಮಹಿಳಾ ದ್ವೇಷಿ.. ಎಂದು ಒಂದು ವರ್ಗ ಸೋಶಿಯಲ್ ಮೀಡಿಯಾದಲ್ಲಿ ಕುನಾಲ್ ಖೇಮು ವಿರುದ್ಧ ಕಿಡಿ ಕಾರುತ್ತಿದೆ. ಮಗುವನ್ನು ಹೊರುವುದು, ಹೆರುವುದು ಮತ್ತು ಸಾಕುವ ನೋವು ಒಬ್ಬ ಪುರುಷನಿಗೆ ಹೇಗೆ ತಾನೇ ಅರ್ಥವಾಗಲು ಸಾಧ್ಯ? ಎಂದು ಹಲವರು ಪ್ರಶ್ನಿಸಿದ್ದಾರೆ. 8 ವರ್ಷದ ಮಗಳಿರುವ ತಂದೆಯ ಬಾಯಿಂದ ಬರುವ ಮಾತುಗಳಾ ಇವು ಎಂದು ತಪರಾಕಿ ಹಾಕುತ್ತಿದ್ಧಾರೆ.

ಒಟ್ನಲ್ಲಿ ಕುನಾಲ್ ಖೇಮು ಅವರ ಈ ಹೇಳಿಕೆಯ ಹಿಂದಿನ ಉದ್ದೇಶವೇನಾಗಿತ್ತು ಎನ್ನುವುದು ಅವರಿಗೆ ಗೊತ್ತಾದರು ಸದ್ಯ ಕುನಾಲ್ ಖೇಮು ಬಳಸಿದ ಭಾಷೆ ಮತ್ತು ತಾಯ್ತನದ ಬಗ್ಗೆ ಅವರಿಗಿರುವ ತಿಳುವಳಿಕೆ ಈಗ ದೊಡ್ಡ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Never knew he is such a misogynist
byu/ProfitAccording4178 inBollyBlindsNGossip

More from Filmibeat

English summary
The internet brands Kunal Kemmu a "misogynist" following his controversial remarks on Deepika Padukone’s workplace boundaries. We break down the 8-hour shift row and the comment that sparked a firestorm.
Read more about: deepika padukone motherhood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X