4 ರೊಮ್ಯಾನ್ಸ್, 2 ಲಿವ್-ಇನ್ ಸಂಬಂಧ, 2 ಡಿವೋರ್ಸ್ ; 62ನೇ ವರ್ಷದಲ್ಲಿ 3ನೇ ಮದುವೆಗೆ ರೆಡಿಯಾದ ಖ್ಯಾತ ನಟಿ

ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು. ಇದಕ್ಕೆ ಕುನಿಕಾ ಸದಾನಂದ್ ಅವರ ವೈಯಕ್ತಿಕ ಬದುಕು ಅತ್ಯುತ್ತಮ ಉದಾಹರಣೆ.

ಹೌದು ಕುನಿಕಾ ಸದಾನಂದ್. ಒಂದ್ಕಾಲದ ಅಪ್ರತಿಮ ಸುಂದರಿ. ಆದರೆ.. ದುರಾದೃಷ್ಟ ನಾಯಕಿಯಾಗಿ ಮಿಂಚುವಲ್ಲಿ ವಿಫಲವಾದ ಕುನಿಕಾ ಆ ನಂತರ ''ಬೇಟಾ''.. ''ಖಿಲಾಡಿ''.. ''ಗುಮ್ರಾಹ್''.. ''ಕೊಯ್ಲಾ''.. ''ಪ್ಯಾರ್ ಕಿಯಾ ತೋ ಡರನಾ ಕ್ಯಾ''.. ''ಹಮ್ ಸಾಥ್ ಸಾಥ್ ಹೈ''.. ''ಪೇಜ್ 3''..

Kunickaa Sadanand s Bold Reveal on 6 Heartbreaks 2 Divorces and Finding Love Again at 62

ಹೀಗೆ ನೂರಕ್ಕೂ ಅಧಿಕ ಚಿತ್ರಗಳಲ್ಲಿ ಪ್ರಮುಖವಾದ ಪಾತ್ರಗಳನ್ನು ನಿರ್ವಹಿಸಿದರು. ಕಿರುತೆರೆಯಲ್ಲಿ ಕೂಡ ಕೆಲಸ ಮಾಡಿದರು. ವೃತ್ತಿಯಲ್ಲಿ ವಕೀಲೆ ಕೂಡ ಆಗಿರುವ ಕುನಿಕಾ ಸಾಮಾಜಿಕ ಕಾರ್ಯಕರ್ತೆ ಕೂಡ ಹೌದು. "ಬಿಗ್ ಬಾಸ್ " ಸ್ಫರ್ಧಿಯೂ ಹೌದು.

ಇಂಥಾ ಕುನಿಕಾ ಸದಾನಂದ್, ತಮ್ಮ 18ರ ಪ್ರಾಯದಲ್ಲಿ ದೆಹಲಿ ಮೂಲದ ಉದ್ಯಮಿಯೊಂದಿಗೆ ಅಭಯ್ ಕೊಠಾರಿ ಅವರ ಜೊತೆ ಮದುವೆಯಾಗಿದ್ದರು. ಆದರೆ ಈ ಸಂಬಂಧ ಕೇವಲ ಎರಡೂವರೆ ವರ್ಷಕ್ಕೆ ಮುರಿದು ಬಿತ್ತು. ತಮ್ಮ ಮಗನ ಲಾಲನೆ ಪಾಲನೆಯ ಹಕ್ಕು ತಮಗೆ ನೀಡಬೇಕೆಂದು ಕಾನೂನು ಹೋರಾಟವನ್ನು ಕೂಡ ಕುನಿಕಾ ಮಾಡಿದ್ದರು. ಆದರೆ ಈ ಹೋರಾಟದಲ್ಲಿ ಇವರಿಗೆ ಸೋಲಾಗಿತ್ತು.

ಆ ನಂತರ ಅಮೆರಿಕ ಮೂಲದ ಎನ್‌ಆರ್‌ಐ ವಿನಯ್ ಲಾಲ್ ಅವರ ಜೊತೆ ಕುನಿಕಾ ಮದುವೆಯಾದರು. ಈ ಪ್ರೀತಿಯ ಸಂಕೇತವಾಗಿ ಕೂಡ ಇವರಿಗೆ ಅಯಾನ್ ಲಾಲ್ ಎಂಬ ಮಗ ಇದ್ದಾನೆ. ಈ ಸಂಬಂಧವೂ ಕೂಡ ವಿಚ್ಛೇದನದಲ್ಲಿ ಮುಕ್ತಾಯವಾಯ್ತು.

1990 ರ ಸುಮಾರು ಬಾಲಿವುಡ್‌ನ ಪ್ರಖ್ಯಾತ ಗಾಯಕ ಕುಮಾರ್ ಸಾನು ಖ್ಯಾತಿಯ ತುತ್ತ ತುದಿಯಲ್ಲಿದ್ದಾಗ ಕುಮಾರ್ ಸಾನು ಜೊತೆ ಕುಣಿಕಾ ಸಂಬಂಧದಲ್ಲಿದ್ದರು. ಒಂದೇ ಮನೆಯಲ್ಲಿ ಇಬ್ಬರು ವಾಸ ಕೂಡ ಮಾಡುತ್ತಿದ್ದರು. ಖುದ್ದು ಕುನಿಕಾ ಅವರೇ ಸಿದ್ಧಾರ್ಥ್ ಕಣ್ಣನ್ ಅವರಿಗೆ ಕಳೆದ ವರ್ಷದ ಜನವರಿಯಲ್ಲಿ ನೀಡಿದ್ದ ಸಂದರ್ಶನದಲ್ಲಿ ಈ ಮಾತು ಹೇಳಿದ್ದರು. ಈ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವೂ ಆಗಿತ್ತು.

Kunickaa Sadanand s Bold Reveal on 6 Heartbreaks 2 Divorces and Finding Love Again at 62

ಇದರ ನಡುವೆ ಬಾಲಿವುಡ್‌ನ ದಂತಕಥೆಯಲ್ಲಿ ಒಬ್ಬರಾದ ಪ್ರಾಣ್ ಅವರ ಮಗ ಸುನಿಲ್ ಸಿಕಂದ್ ಜೊತೆ ಕೂಡ ಪ್ರೇಮದ ಅಮಲನ್ನೇರಿಸಿಕೊಂಡಿದ್ದ ಕುನಿಕಾ, ಇವರ ಜೊತೆ ಕೂಡ ಒಂದೇ ಸೂರಿನಡಿ ವಾಸ ಮಾಡುತ್ತಿದ್ದರು. ಆದರೆ.. ಹೊಂದಾಣಿಕೆ ಕೊರತೆ, ಈ ಸಂಬಂಧ ಕೂಡ ಮುರಿದು ಬಿತ್ತು. ಇವರಲ್ಲದೇ ಇನ್ನೂ ಇಬ್ಬರ ಜೊತೆ ಪ್ರೇಮಪಾಶದಲ್ಲಿ ಸಿಲುಕಿದ್ದರು ಕುನಿಕಾ.

ಹೀಗೆ ಕಾಲ, ಕಾಲಕ್ಕೆ ವೈಯಕ್ತಿಕ ವಿಚಾರದಿಂದ ಸದ್ದು ಮಾಡುತ್ತಾ, ಸುದ್ದಿಯಾಗುತ್ತಾ, ಬದಲಾದ ಕಾಲದಲ್ಲಿ ಟ್ರೋಲಿಗರಿಗೆ ಆಹಾರವೂ ಆಗುತ್ತಾ ಬಂದ ಕುನಿಕಾ ಸದಾನಂದ್ ಅವರಿಗೆ ಈಗ 62 ವರ್ಷ. ಆದರೆ, ಜೀವನೋತ್ಸಾಹ ಮಾತ್ರ ಇನ್ನೂ ಹಾಗೇ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕುನಿಕಾ ಸದಾನಂದ್ 62ನೇ ವರ್ಷದಲ್ಲಿ 3ನೇ ಮದುವೆಯಾಗಲು ತಾವು ರೆಡಿ ಎಂದು ಹೇಳಿದ್ಧಾರೆ. ಪ್ರೀತ್ಸೋದು ತಪ್ಪಾ..? ಎಂಬ ಪ್ರಶ್ನೆಯನ್ನು ಕೂಡ ಕೇಳಿದ್ಧಾರೆ.

ಈ ಕುರಿತು ''ಫಿಲ್ಮಿಜ್ಞಾನ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕುನಿಕಾ ಸದಾನಂದ್, ನಮ್ಮ ಸಮಾಜದಲ್ಲಿ ಐಷಾರಾಮಿ ಜೀವನಕ್ಕೆ ಕೇವಲ ಪುರುಷರಿಗೆ ಮಾತ್ರ ಅರ್ಹರು ಎಂದು ಬಿಂಬಿಸಲಾಗುತ್ತೆ, ಆದರೆ ಆ ಹಕ್ಕು ನಮ್ಮದು ಕೂಡ ಹೌದು ಎಂದು ಹೇಳಿದ್ಧಾರೆ. ನಮ್ಮಲ್ಲಿಯೂ ಕೂಡ ಆಸೆ-ಆಕಾಂಕ್ಷೆಗಳಿರುತ್ತಾವೆ ಎಂದು ಹೇಳಿರುವ ಕುನಿಕಾ ಈಗಲೂ ಕೂಡ ನನಗೆ ಇಷ್ಟವಾಗುವ, ನನ್ನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ವ್ಯಕ್ತಿ ಸಿಕ್ಕರೆ ನಾನು ಮದುವೆಗೆ ಸಿದ್ದ ಎಂದು ಹೇಳಿದ್ದಾರೆ.

ಸದ್ಯ ಕುನಿಕಾ ಸದಾನಂದ್ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿಗೆ ವಯಸ್ಸಿನ ಹಂಗಿಲ್ಲ, ಮನಸ್ಸಿದ್ದರೆ ಸಾಕು ಎನ್ನುವ ಮಾತು ಕುನಿಕಾ ಸದಾನಂದ್ ಅವರ ವಿಷಯದಲ್ಲಿ ಅಕ್ಷರಶಃ ನಿಜಾ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮತ್ತೂ ಕೆಲವರು ಕುನಿಕಾ ಸದಾನಂದ್ ಅವರನ್ನು ಈ ವಿಚಾರದಲ್ಲಿ ಮತ್ತೊಮ್ಮೆ ಟ್ರೋಲ್ ಮಾಡುತ್ತಿದ್ಧಾರೆ.

More from Filmibeat

English summary
Actress Kunickaa Sadanand reveals the truth about her 6 relationships and 2 divorces. From her early marriage to her viral Bigg Boss 19 confessions, learn why the 62-year-old star refuses to give up on romance. Read the full, bold reveal here.
Read more about: marriage biggboss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X