For Quick Alerts
  ALLOW NOTIFICATIONS  
  For Daily Alerts

  ಕರೀನಾ ಅಲ್ಲ ಸೀತೆ ಪಾತ್ರಕ್ಕೆ ಮತ್ತೋರ್ವ ಖ್ಯಾತ ನಟಿಯ ಹೆಸರು ಸೂಚಿಸಿದ ರಾಜಮೌಳಿ ತಂದೆ

  |

  ಖ್ಯಾತ ನಿರ್ದೇಶಕ ರಾಜಮೌಳಿ ತಂದೆ, ಬರಹಗಾರ ಕೆ.ವಿ ವಿಜಯೇಂದ್ರ ಪ್ರಸಾದ್ ಅವರ 'ಸೀತಾ' ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸೀತೆಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಇತ್ತೀಚಿಗಷ್ಟೆ ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಕರೀನಾ ಪಾತ್ರಕ್ಕಾಗಿ ಬರೋಬ್ಬರಿ 12 ಕೋಟಿ ರೂ. ಬೇಡಿಕೆ ಇದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

  ಕರೀನಾ ಕಪೂರ್ ಸೀತೆ ಅಲ್ಲ ಎಂದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ | Filmibeat Kannada

  ಪೌರಾಣಿಕ ಪಾತ್ರಕ್ಕೆ ಕರೀನಾ ಇಷ್ಟು ಹಣ ಬೇಡಿಕೆ ಇಟ್ಟಿದ್ದಾರಾ ಎಂದು ನೆಟ್ಟಿಗರು ಕರೀನಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಈಗ ಸೀತೆ ಪಾತ್ರಕ್ಕೆ ಮತ್ತೋರ್ವ ನಟಿಯ ಹೆಸರು ಕೇಳಿಬರುತ್ತಿದೆ. ಸೀತೆ ಪಾತ್ರಕ್ಕೆ ವಿಜಯೇಂದ್ರ ಪ್ರಸಾದ್ ಬಾಲಿವುಡ್ ನ ಮತ್ತೋರ್ವ ಖ್ಯಾತ ನಟಿಯ ಹೆಸರನ್ನು ಸೂಚಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಸೀತೆಯಾಗಲು ನಟಿ ಕರೀನಾ ಕಪೂರ್ ಇಷ್ಟೊಂದು ಸಂಭಾವನೆ ಬೇಡಿಕೆ ಇಟ್ಟಿದ್ದಾರಾ?ಸೀತೆಯಾಗಲು ನಟಿ ಕರೀನಾ ಕಪೂರ್ ಇಷ್ಟೊಂದು ಸಂಭಾವನೆ ಬೇಡಿಕೆ ಇಟ್ಟಿದ್ದಾರಾ?

  ಅಂದಹಾಗೆ ವಿಜಯೇಂದ್ರ ಪ್ರಸಾದ್ ಸೂಚಿಸಿದ ಹೆಸರು ಮತ್ಯಾರು ಅಲ್ಲ ನಟಿ ಕಂಗನಾ ರಣಾವತ್. ಸೀತೆ ಪಾತ್ರಕ್ಕಾಗಿ ನಟಿ ಕರೀನಾ ಕಪೂರ್ ಅವರನ್ನು ಸಂಪರ್ಕ ಮಾಡಿಯೇ ಇಲ್ಲ, ಸೀತೆಯಾಗಿ ಕರೀನಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ವದಂತಿ ಅಷ್ಟೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ವಿಜಯೇಂದ್ರ ಪ್ರಸಾದ್ ಸೀತೆಯಾಗಿ ನಟಿ ಕಂಗನಾ ಕಾಣಿಸಿಕೊಳ್ಳಲಿ ಎನ್ನುವ ಬಯಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

  ಆದರೆ ಇತ್ತೀಚಿಗಿನ ವಿವಾದಗಳಿಂದ ಕಂಗನಾ ಸೀತೆಯಾಗಿ ಕಾಣಿಸಿಕೊಂಡರೆ ಚಿತ್ರಾಭಿಮಾನಿಗಳು ಸ್ವೀಕರಿಸುತ್ತಾರಾ ಎನ್ನುವ ಅನುಮಾನ ಮೂಡಿದೆ. ಅಲ್ಲದೆ ಕಂಗನಾ ಕೂಡ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ, ಹಾಗಾಗಿ 'ಸೀತಾ' ಸಿನಿಮಾದಲ್ಲೂ ನಟಿಸಲು ಅತೀ ಹೆಚ್ಚು ಸಂಭಾವನೆ ಬೇಡಿಕೆ ಇಡುವ ಸಾಧ್ಯತೆ ಇದೆ. ಇದೆಲ್ಲದರ ನಡುವೆ ಕಂಗನಾ ಸೀತೆಯಾಗಿ ಮಿಂಚುತ್ತಾರಾ ಎಂದು ಕಾದುನೋಡಬೇಕು.

  KV Vijayendra Prasad suggests Kangana Ranaut name for Sita role?

  'ಸೀತಾ' ಚಿತ್ರಕ್ಕೆ ಅಲೌಕಿಕ್ ದೇಸಾಯಿ ಆಕ್ಷನ್ ಕಟ್ ಹೇಳುತ್ತಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ರಾವಣ ಪಾತ್ರಕ್ಕೆ ನಟ ರಣ್ವೀರ್ ಸಿಂಗ್ ಹೆಸರು ಕೇಳಿಬರುತ್ತಿದೆ. ಆದರೆ ರಣ್ವೀರ್ ಗ್ರೀನ್ ಸಿಗ್ನಲ್ ನೀಡಿದ್ದಾರಾ ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಭಾರಿ ಕುತೂಹಲ ಮೂಡಿಸಿರುವ 'ಸೀತಾ' ಚಿತ್ರದ ಪಾತ್ರಗಳ ಆಯ್ಕೆಗೆ ಯಾವಾಗ ತೆರೆ ಬೀಳಲಿದೆ ಎಂದು ಕಾದು ನೋಡಬೇಕು.

  English summary
  Not kareena Kapoor, KV Vijayendra Prasad suggests Kangana Ranaut name for Sita role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X