ಮದುವೆಯಾದ 5 ವರ್ಷಗಳ ಬಳಿಕ ಮದುವೆ ವಿಡಿಯೋ ಬಿಡುಗಡೆ ಮಾಡಿದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್
ಬಾಲಿವುಡ್‌ನ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾಗಿ ಐದು ವರ್ಷಗಳಾಗಿವೆ. ಅಭಿಮಾನಿಗಳು ಇಬ್ಬರ ಮದುವೆ ವಿಡಿಯೋಗಾಗಿ ಕಾತುರದಿಂದ ಕಾಯುತ್ತಿದ್ದರು. ಆದರೆ ವಿಡಿಯೋ ಬಿಡುಗಡೆಯಾಗಿರಲಿಲ್ಲ. ಕೊನೆಗೂ ಕಾಫಿ ವಿತ್ ಕರಣ್ ಶೋ ಮೂಲಕ ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018ರ ನವೆಂಬರ್ 14ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯ ವಿಡಿಯೋ ಬಿಡುಗಡೆಯಾಗಿರಲಿಲ್ಲ. ಈಗ ಸುಮಾರು ಐದು ವರ್ಷಗಳ ನಂತರ, ದೀಪಿಕಾ - ರಣವೀರ್ ಸಿಂಗ್ ತಮ್ಮ ಮದುವೆಯ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ದೀಪಿಕಾ-ರಣವೀರ್ ಮದುವೆ ವಿಡಿಯೋ ಬಿಡುಗಡೆ
ನಿರ್ದೇಶಕ ಕರಣ್ ಜೋಹಾರ್ ಹೋಸ್ಟ್ ಮಾಡುವ ಕಾಫಿ ವಿತ್ ಕರಣ್ ಶೋನ ಎಂಟನೇ ಸೀಸನ್‌ನಲ್ಲಿ ದಂಪತಿ ಕಾಣಿಸಿಕೊಂಡಿದ್ದು, ಇಲ್ಲಿ ಮದುವೆಯ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡಿದ್ದಾರೆ. ರಣವೀರ್ ಸಿಂಗ್ ಅವರು ಮಾಲ್ಡೀವ್ಸ್‌ನಲ್ಲಿ ದೀಪಿಕಾ ಅವರಿಗೆ ಹೇಗೆ ಪ್ರಪೋಸ್ ಮಾಡಿದರು..? ಅವರ ಹೆತ್ತವರನ್ನು ಭೇಟಿ ಮಾಡಲು ಮತ್ತು ಅವರ ಬಗ್ಗೆ ವಿಷಯ ತಿಳಿಸಲು ಅವರು ಬೆಂಗಳೂರಿಗೆ ಹೇಗೆ ಹೋಗಿದ್ದರು ಎಂಬುದನ್ನು ವಿವರಿಸುವ ಮೂಲಕ ವಿಡಿಯೋ ಪ್ರಾರಂಭವಾಗುತ್ತದೆ.
ಮೊದ ಮೊದಲು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸಂಬಂಧದ ಬಗ್ಗೆ ದಿಪೀಕಾ ಅವರ ತಾಯಿ ಅಷ್ಟೊಂದು ಒಲವು ತೋರಿಸಿರಲಿಲ್ಲ. ಆದರೆ, ನಿಧಾನವಾಗಿ ಅವರು ಮನೆಯವರಿಗೆ ಹತ್ತಿರವಾದರು ಎಂಬುದನ್ನು ತಿಳಿಸಲಾಗಿದೆ. ಮದುವೆಯ ವಿಡಿಯೋದಲ್ಲಿ ರಣವೀರ್ ತಮ್ಮ ನಿಶ್ಚಿತಾರ್ಥದ ಪಾರ್ಟಿಯಲ್ಲಿ ದೀಪಿಕಾ ಬಗ್ಗೆ ಮಾತನಾಡುವುದರೊಂದಿಗೆ ಪ್ರಾರಂಭವಾಗುತ್ತದೆ.

ದೀಪಿಕಾ ಅವರ ತಂದೆ, ಮಾಜಿ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ ಕೂಡ ರಣವೀರ್ ಸಿಂಗ್ ತಮ್ಮ ನಾಲ್ವರ ಬೋರಿಂಗ್ ಕುಟುಂಬಕ್ಕೆ ಸ್ವಲ್ಪ ಉತ್ಸಾಹ ತುಂಬಿದ್ದಾರೆ ಎಂದು ಖುಷಿಯಿಂದ ಹೇಳುತ್ತಾರೆ. ಮೆಹೆಂದಿ ಕಾರ್ಯಕ್ರಮದಲ್ಲಿ ರಣವೀರ್ ನೃತ್ಯ ಮಾಡುತ್ತಿರುವುದು, ಮದುವೆಗೆ ಆಭರಣಗಳಿಂದ ಅಲಂಕಾರಗೊಂಡ ಮದುಮಗಳು ದೀಪಿಕಾ, ಮಂಟಪದಲ್ಲಿ ಪ್ರತಿಜ್ಞೆ ವಿನಿಮಯ ಮಾಡಿಕೊಳ್ಳುವುದು... ತಾನು ದೀಪಿಕಾರನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳುವ ತುಣುಕುಗಳು ಅಭಿಮಾನಿಗಳನ್ನು ಮೌನವಾಗಿಸಿವೆ.
ಮದುವೆ ವಿಡಿಯೋ ನೋಡಿ ಭಾವುಕರಾದ ಕರಣ್ ಜೋಹಾರ್
ರಣವೀರ್ ಸಿಂಗ್ ಮತ್ತು ದೀಪಿಕಾ ಅವರ ಮದುವೆ ವಿಡಿಯೋ ನೋಡಿದ ಕರಣ್ ಜೋಹಾರ್ ಭಾವುಕರಾಗಿದ್ದಾರೆ. ತಕ್ಷಣ ರಣವೀರ್ ಮತ್ತು ದೀಪಿಕಾ ಅವರನ್ನು ಅಪ್ಪಿಕೊಂಡು ಮುತ್ತು ನೀಡಿದ್ದಾರೆ. ಮದುವೆಯ ವೀಡಿಯೋ ಮತ್ತು ಇಬ್ಬರ ನಡುವೆ ಇರುವ ಪ್ರೀತಿಯನ್ನು ನೋಡಿದಾಗ ಮನಸ್ಸು ತುಂಬಿ ಬರುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ನಾನು ಒಂಟಿಯಾಗಿದ್ದೇನೆ ಹೀಗಾಗಿ ಜೀವನದಲ್ಲಿ ನಾನು ಏನನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ಗೊತ್ತಾಗುತ್ತಿದೆ ಎಂದಿದ್ದಾರೆ.
"ನಿಮ್ಮ ದಿನವನ್ನು ಹಂಚಿಕೊಳ್ಳಲು ನಿಮ್ಮ ಸಂಗಾತಿ ಇಲ್ಲ. ನನಗೆ ನನ್ನ ಮಕ್ಕಳು ಮತ್ತು ತಾಯಿ ಇದ್ದಾರೆ. ಆದರೂ, ನನ್ನ ಹಲವು ವಿಷಯಗಳನ್ನು ಹಂಚಿಕೊಳ್ಳುವ ಸೋಲ್‌ಮೇಟ್ ಇರಬೇಕು. ಇದನ್ನು ನೋಡಿದಾಗ ಸಂಬಂಧಗಳ ಜೊತೆಗೆ ನಡೆಯುವುದು ಕಷ್ಟವೇ. ಆದರೆ ನೀವು ಎಚ್ಚರಗೊಳ್ಳುವ, ಅವರ ಕೈ ಹಿಡಿದುಕೊಳ್ಳುವ ಮತ್ತು ನಿಮ್ಮ ದಿನದ ಕಷ್ಟದ ಸಮಯದಲ್ಲಿ ಇಬ್ಬ ಆತ್ಮ ಸಂಗಾತಿ ಇರಬೇಕು" ಎಂದು ಹೇಳಿದ್ದಾರೆ. ತಮ್ಮ ಜೀವನದಲ್ಲಿ ಇರುವ ಒಂಟಿತನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.


Click it and Unblock the Notifications











