ಕಿರುತೆರೆಯ ಸ್ಟಾರ್ ನಟಿಗೆ ಎಂತಹ ದುಸ್ಥಿತಿ ಬಂತು

By Bharath Kumar

ಹಿಂದಿಯ 'ಕ್ಯೂಂಕಿ ಸಾಸ್ ಭೀ ಕಭಿ ಬಹು ಥಿ' ಧಾರಾವಾಹಿಯಲ್ಲಿ ನೆಗಿಟೀವ್ ಪಾತ್ರದ ಮೂಲಕ ಹಿಂದಿ ಪ್ರೇಕ್ಷಕರ ಮನಗೆದ್ದಿದ್ದ ಜನಪ್ರಿಯ ನಟಿ ಜಯಾ ಭಟ್ಟಾಚಾರ್ಯ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ತೀವ್ರ ಅಸಹಾಯರಾಗಿದ್ದಾರೆ.

79 ವರ್ಷದ ಜಯಾ ಅವರ ತಾಯಿಗೆ ಹೃದಯ ಸಂಬಂಧಿ ಕಾಯಿಲೆಯಿದ್ದು, ನವೆಂಬರ್ 26 ರಿಂದ ಆಸ್ಪತ್ರೆಯಲ್ಲಿದ್ದಾರಂತೆ. ಅಮ್ಮನ ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವಂತಹ ಸ್ಥಿತಿ ನಟಿ ಜಯಾ ಭಟ್ಟಾಚಾರ್ಯಗೆ ಬಂದಿದೆ. ಇದನ್ನ ಸ್ವತಃ ಜಯಾ ಅವರೇ ಹೇಳಿಕೊಂಡಿದ್ದಾರೆ.

Kyunki Saas Bhi Kabhi Bahu Thi actress Jaya Bhattacharya needs help

ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಜಯಾ ಭಟ್ಟಾಚಾರ್ಯ ''ನನ್ನ ತಾಯಿಯನ್ನ ಆಸ್ಪತ್ರೆಗೆ ಸೇರಿಸಿದ್ದೀನಿ. ನನ್ನ ಬಳಿ ಬಿಡುಕಾಸು ಕೂಡ ಇಲ್ಲ. ನಾನು ವಾಸವಾಗಿದ್ದ ಮನೆಯನ್ನ ನವೀಕರಣ ಮಾಡುತ್ತಿದ್ದು, ಅಲ್ಲಿಯೂ ಹಣದ ಕೊರತೆಯಿಂದ ಬೀದಿ ಪಾಲಾಗುವಂತೆ ಮಾಡಿದೆ. ನನಗೆ ಯಾರೂ ಇಲ್ಲ. ನಾನೊಬ್ಬ ಒಂಟಿ ಮಹಿಳೆ. ನನ್ನ ಕಷ್ಟವನ್ನ ಯಾರಿಗೆ ಹೇಳಲಿ. ನನಗೆ ಕೆಲಸ ಬೇಕಿದೆ'' ಎಂದು ಕಣ್ಣಿರಿಟ್ಟಿದ್ದಾರೆ.

46 ವರ್ಷದ ಈ ನಟಿ 'ಕ್ಯೂಂಕಿ ಸಾಸ್ ಭೀ ಕಭಿ ಬಹು ಥಿ' ಧಾರಾವಾಹಿ ನಂತರ ಹಲವು ಸೀರಿಯಲ್ ನಲ್ಲಿ ನಟಿಸಿ ಖ್ಯಾತಿಗಳಿಸಿಕೊಂಡಿದ್ದರು. ಜಯಾ ಅವರಿಗೆ ಇನ್ನು ಮದುವೆ ಆಗಿಲ್ಲ.

More from Filmibeat

English summary
Kyunki Saas Bhi Kabhi Bahu Thi actor Jaya Bhattacharya is in dire need of work right now. Her mother is ill and her financial situation is not well either.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X