50 ಕೋಟಿ ಗಳಿಸದೇ ಮೊದಲ ವೀಕೇಂಡ್ ದಾಟಿದ 'ಲಾಲ್ ಸಿಂಗ್ ಚಡ್ಡ'!

ಬಾಲಿವುಡ್‌ನ ಸೋಲಿನ ಸಾಲಿಗೆ ಈಗ ಮತ್ತೊಂದು ಸಿನಿಮಾ ಸೇರಿಕೊಂಡಿದೆ. ನಿರೀಕ್ಷೆಯೊಂದಿಗೆ ರಿಲೀಸ್ ಆದ ಲಾಲ್ ಸಿಂಗ್ ಚೆಡ್ಡ ಸಿನಿಮಾ, ರಿಲೀಸ್ ಬಳಿಕ ಅಂದುಕೊಂಡ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡಿಲ್ಲ.

ರಿಲೀಸ್ ದಿನ ಏನು ಚಮತ್ಕಾರ ಮಾಡದ ಈ ಸಿನಿಮಾ, ಬಾಕ್ಸಾಫೀಸ್‌ನಲ್ಲಿ ಮೇಲೇಳುವ ಯಾವುದೇ ಸೂಚನೆ ಇಲ್ಲ. ದಿನ ಕಳೆದಂತೆ ಸಿನಿಮಾ ಕುಂಟುತ್ತಾ ಸಾಗುತ್ತಿದೆ. ಈ ಸಿನಿಮಾ ಗೆಲ್ಲುವುದು, ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುವುದು ಅನುಮಾನ ಎಂದು, ಬಾಲಿವುಡ್‌ ವಿಶ್ಲೇಷಕರು ಇದಕ್ಕೆ ಫ್ಲಾಪ್ ಹಣೆಪಟ್ಟಿ ಕಟ್ಟಿದ್ದಾರೆ.

ಆಮೀರ್ ಖಾನ್, ಕರೀನಾ ಕಪೂರ್ ಅಂತಹ ದೊಡ್ಡ ಸ್ಟಾರ್‌ಗಳು ಅಭಿನಯಿಸಿರುವ ಈ ಚಿತ್ರವೇ ಹೀಗೆ ಮಕಾಡೆ ಮಲಗಿದೆ. ಸಿನಿಮಾ ಮೊದಲ ದಿನ ದೊಡ್ಡ ಮಟ್ಟಿಗಿನ ಓಪನಿಂಗ್ ಪಡೆದುಕೊಳ್ಳದೇ ಹೋದರೂ, ವೀಕೆಂಡ್ ಗಳಿಕೆ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು.

'ಲಾಲ್ ಸಿಂಗ್ ಚಡ್ಡ' 4ನೇ ದಿನದ ಗಳಿಕೆ!

'ಲಾಲ್ ಸಿಂಗ್ ಚಡ್ಡ' 4ನೇ ದಿನದ ಗಳಿಕೆ!

ವಿವಾದಗಳ ಜೊತೆ ಜೊತೆಗೆ ರಿಲೀಸ್ ಆದ ಬಾಲಿವುಡ್ ಸಿನಿಮಾ. 'ಲಾಲ್ ಸಿಂಗ್ ಚಡ್ಡ' ಅಂತಹ ದೊಡ್ಡ ಮಟ್ಟದಲ್ಲಿ ಓಪನಿಂಗ್ ಕಾಣಲಿಲ್ಲ. ರಿಲೀಸ್‌ಗೂ ಮೊದಲೇ ಸೃಷ್ಟಿ ಆಗಿದ್ದ ವಿವಾದಗಳು ಸಿನಿಮಾದ ಗಳಿಕೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಇನ್ನು ಸಿನಿಮಾ ರಿಲೀಸ್ ದಿನ ಸಾಧಾರಣ ಗಳಿಕೆ ಕಂಡಿತ್ತು. ದಿನ ಕಳೆದಂತೆ ಗಳಿಕೆ ಹೆಚ್ಚಾಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಅಂತೆಯೇ ಈ ಸಿನಿಮಾ ನಾಲ್ಕನೇ ದಿನದಂದು 10 ಕೋಟಿ ರೂ. ಕಲೆ ಹಾಕಿದೆ.

ಆಮಿರ್ ಸಿನಿಮಾ 50 ಮುಟ್ಟಲಿಲ್ಲ!

ಆಮಿರ್ ಸಿನಿಮಾ 50 ಮುಟ್ಟಲಿಲ್ಲ!

ಮೊದಲ ವೀಕೆಂಡ್ ಬಳಿಕ ಸಿನಿಮಾದ ಗಳಿಕೆಯಲ್ಲಿ ದೊಡ್ಡ ಮಟ್ಟದ ಬಲದಲಾವಣೆಯಾಗಲಿದೆ. ಸಿನಿಮಾ ವಾರಂತ್ಯದಲ್ಲಿ ಹೆಚ್ಚು ಕಲೆಹಾಕಲಿದೆ ಎನ್ನಲಾಗಿತ್ತು. ಆದರೆ 'ಲಾಲ್ ಸಿಂಗ್ ಚಡ್ಡ' ಚಿತ್ರಕ್ಕೆ ಸಾಧ್ಯವಾಗಿಲ್ಲ. ಭಾನುವಾರ 10 ಕೋಟಿ ಗಳಿಸುವ ಮೂಲಕ ಸಿನಿಮಾದ ಒಟ್ಟಾರೆ ಅಂದಾಜು ಗಳಿಕೆ 37 ಕೋಟಿ ರೂ. ಆಗಿದೆ ಎನ್ನಲಾಗಿದೆ. ಈ ಸಿನಿಮಾ ಮೊದಲ ವೀಕೆಂಡ್‌ನಲ್ಲಿ 50 ಕೋಟಿ ರೂ. ತನಕ ಗಳಿಕೆ ಕಾಣುತ್ತೆ ಎನ್ನಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಆಮಿರ್ ಖಾನ್ ಸಿನಿಮಾ 50 ಕೋಟಿಯ ಗಡಿ ಮುಟ್ಟದೇ ಮೊದಲ ವಾರ ಮುಗಿಸಿದೆ.

3ನೇ ದಿನಕ್ಕೆ 27 ಕೋಟಿ!

3ನೇ ದಿನಕ್ಕೆ 27 ಕೋಟಿ!

ಆಮಿರ್ ಖಾನ್ 'ಲಾಲ್ ಸಿಂಗ್ ಚಡ್ಡ' ಈ ವರ್ಷ ಬಾಲಿವುಡ್‌ನ ಅತೀ ಹೆಚ್ಚು ಗಳಿಕೆ ಮಾಡುವ ಸಿನಿಮಾ ಮಾಡಬಹುದು ಅನ್ನೋ ನಿರೀಕ್ಷೆ 3ನೇ ದಿನವೂ ಹುಸಿಯಾಗಿದೆ. ಮೊದಲ ದಿನವೇ ಈ ಸಿನಿಮಾದ ಕಲೆಕ್ಷನ್ ಶಾಕ್ ಕೊಟ್ಟಿತ್ತು. ಮೊದಲ ಎರಡು ದಿನ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಮೋಡಿ ಮಾಡಿರಲಿಲ್ಲ. ಆದರೆ ಮೂರನೇ ದಿನ 'ಲಾಲ್ ಸಿಂಗ್ ಚಡ್ಡ' ಕಲೆಕ್ಷನ್‌ನಲ್ಲಿ ಕೊಂಚ ಏರಿಕೆ ಕಂಡಿತು. ಸುಮಾರು 8.74 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಎರಡನೇ ದಿನಕ್ಕೆ ಹೋಲಿಸಿದರೆ ಶೇ.20ರಷ್ಟು ಏರಿಕೆ ಆಗಿತ್ತು. ನಾಲ್ಕನೇ ದಿನವೂ ಈ ಏರಿಕೆ ಮುಂದುವರೆದು 10 ಕೋಟಿಗೆ ಸೀಮಿತವಾಗಿದೆ.

ಮೊದಲ ದಿನ ಗಳಿಸಿದ್ದೆಷ್ಟು?

ಮೊದಲ ದಿನ ಗಳಿಸಿದ್ದೆಷ್ಟು?

ಈ ವರ್ಷ ಬಾಲಿವುಡ್‌ನಲ್ಲಿ ಈ ವರ್ಷ ಕೊಂಚ ಹೆಚ್ಚು ಗಳಿಕೆಯೊಂದಿಗೆ ಓಪನಿಂಗ್ ಪಡೆದ ಸಿನಿಮಾ ಎನ್ನುವ ಹೆಗ್ಗಳಿಕೆ ಮಾತ್ರ ಪಾತ್ರವಾಗಿದೆ. ಆಗಸ್ಟ್ 11ಕ್ಕೆ ತೆರೆಕಂಡ 'ಲಾಲ್ ಸಿಂಗ್ ಚಡ್ಡಾ' ಮೊದಲನೆಯ ದಿನ 12 ಕೋಟಿ ರೂ. ಗಳಿಕೆಯನ್ನು ಕಂಡಿದೆ. ಈ ವರ್ಷ ತೆರೆಕಂಡ ಬಾಲಿವುಡ್‌ನ ಬಿಗ್ ಸಿನಿಮಾಗಳಲ್ಲಿ 'ಭೂಲ್ ಭುಲಯ್ಯ', 'ಬಚ್ಚನ್ ಪಾಂಡೆ' ನಂತರ ಹೆಚ್ಚು ಗಳಿಕೆ ಕಂಡ ಸಿನಿಮಾ 'ಲಾಲ್ ಸಿಂಗ್ ಚಡ್ಡ'. ಹಾಗಾಗಿ ಚಿತ್ರದ ಗಳಿಕೆ ಸುಧಾರಿಸಬಹುದು ಎನ್ನುವ ಲೆಕ್ಕಾಚಾರ ಇತ್ತು. ಇದೀಗ ಎರಡನೇ ದಿನದ ಗಳಿಕೆಯ ಲೆಕ್ಕಾಚಾರ ಹೊರಬಂದಿದ್ದು, ಮೊದಲ ದಿನದ ಗಳಿಕೆಯಲ್ಲಿ ಶೇಕಡ 40ರಷ್ಟು ಕುಸಿತ ಕಂಡಿದ್ದು ಭಾರತದಾದ್ಯಂತ ಕೇವಲ ಏಳು ಕೋಟಿ ಕಲೆ ಹಾಕಿದೆ.

More from Filmibeat

English summary
Laal Singh Chaddha Day 4 Collection, Aamir Khan First Weekend Without 50 crore Collection, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X