ಲಾಲ್ ಸಿಂಗ್ ಚಡ್ಡ: ಚಿತ್ರಮಂದಿರ ಕೈಬಿಟ್ಟರು ಸೋಲಲಿಲ್ಲ ಆಮಿರ್ ಖಾನ್
ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲವಾಗಿದೆ. ಸಿನಿಮಾ ಸೋತಿದ್ದಕ್ಕೆ ಹಲವು ಕಾರಣಗಳಿವೆ. ಸಿನಿಮಾವನ್ನು ಬಾಯ್‌ಕಾಟ್ ಮಾಡುವಂತೆ ರಚ್ಚೆ ಹಿಡಿದಿದ್ದ ಕೆಲವರಿ ಖುಷಿಯಾಗಿರಬಹುದು. ಸಿನಿಮಾ ಚಿತ್ರಮಂದಿರದಲ್ಲಿ ಅಷ್ಟೊಳ್ಳೆ ಪ್ರದರ್ಶನ ಕಾಣದಿದ್ದರೂ ಸಹ ಆಮಿರ್ ಖಾನ್ ಸೋತಿಲ್ಲ.
'ಲಾಲ್ ಸಿಂಗ್ ಚಡ್ಡ' ಸಿನಿಮಾ ತೀರ ಕಳಪೆ ಓಪನಿಂಗ್ ಅನ್ನು ಚಿತ್ರಮಂದಿರದಲ್ಲಿ ಪಡೆದುಕೊಂಡಿತ್ತು. ಆ ನಂತರದ ದಿನಗಳಲ್ಲಿ ಸಹ ಸಿನಿಮಾ ಹೆಚ್ಚೇನು ಚೆನ್ನಾಗಿ ಪ್ರದರ್ಶನ ತೋರಲಿಲ್ಲ.
ಸಿನಿಮಾ ಬಿಡುಗಡೆ ಆಗಿ 16 ದಿನಗಳಾಗಿವೆ. ಈ ವರೆಗೆ ಈ ಸಿನಿಮಾ ಭಾರತದಲ್ಲಿ ಸುಮಾರು 60 ಕೋಟಿಯಷ್ಟೆ ಗಳಿಸಿದೆ. ಆದರೆ ವಿದೇಶದಲ್ಲೂ ಸಹ ಈ ಸಿನಿಮಾ ಸುಮಾರು ಇಷ್ಟೇ ಮೊತ್ತದ ಹಣವನ್ನು ಗಳಿಸಿದೆ. ಚೀನಾ ಸೇರಿದಂತೆ ವಿದೇಶಗಳಲ್ಲಿ ಆಮಿರ್ ಖಾನ್ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ ಹಾಗಾಗಿ ಅಲ್ಲಿ ಉತ್ತಮ ಪ್ರದರ್ಶನವನ್ನೇ ತೋರಿದೆ ಈ ಸಿನಿಮಾ.

'ಲಾಲ್ ಸಿಂಗ್ ಚಡ್ಡ' ಗಳಿಸಿದ್ದೆಷ್ಟು?
ಭಾರತದಲ್ಲಿ ಹಾಗೂ ವಿದೇಶದಲ್ಲಿ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಸುಮಾರು 120 ಕೋಟಿ ರುಪಾಯಿ ಹಣ ಗಳಿಸಿದೆ. ಚಿತ್ರಮಂದಿರದಲ್ಲಿ ಇದು ಅತ್ಯಂತ ಕಳಪೆ ಪ್ರದರ್ಶನವೇ ಆದರೆ ಸಿನಿಮಾವನ್ನು ಕಾಪಾಡಿರುವುದು ಒಟಿಟಿ. ಹೌದು, ಸಿನಿಮಾವನ್ನು ಒಟಿಟಿಗೆ ಮಾರಾಟ ಮಾಡಲಾಗಿದೆ. ಅದೂ ಒಂದಲ್ಲ ಎರಡು ಒಟಿಟಿಗೆ ಸಿನಿಮಾವನ್ನು ಮಾರಾಟ ಮಾಡಲಾಗಿದೆ. ನೆಟ್‌ಫ್ಲಿಕ್ಸ್ ಹಾಗೂ ವೂಟ್ ಒಟಿಟಿಗೆ ಸಿನಿಮಾವನ್ನು ಮಾರಲಾಗಿದ್ದು, ಎರಡರಿಂದ ಬರೋಬ್ಬರಿ 100 ಕೋಟಿ ರುಪಾಯಿ ಪಡೆದುಕೊಂಡಿದೆ ಚಿತ್ರತಂಡ.

ಒಟ್ಟು ಬಜೆಟ್ ಮತ್ತು ರಿಕವರಿ
ಇದು ಮಾತ್ರವೇ ಅಲ್ಲದೆ, ಸಿನಿಮಾದ ಆಡಿಯೋ ಹಕ್ಕುಗಳಿಂದ ಹದಿನೈದು ಕೋಟಿ ಲಾಭ ಪಡೆಯಲಾಗಿದೆ. ಆ ಬಳಿಕ ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ಸೋನಿಗೆ ಮಾರಾಟ ಮಾಡಲಾಗಿದ್ದು, ಅದರಿಂದ 40 ಕೋಟಿ ಹಣ ಪಡೆಯಲಾಗಿದೆ. ಅಲ್ಲಿಗೆ ಒಟ್ಟು ಸುಮಾರು 260 ಕೋಟಿ ಹಣವನ್ನು ಈ ಸಿನಿಮಾ ಗಳಿಸಿದೆ. ಸಿನಿಮಾಕ್ಕೆ ಹಾಕಿರುವ ಬಂಡವಾಳ 220 ಕೋಟಿ ಪ್ರಚಾರಕ್ಕಾಗಿ ಸುಮಾರು 35 ಕೋಟಿ ಹೆಚ್ಚುವರಿಯಾಗಿ ಖರ್ಚು ಮಾಡಲಾಗಿದೆ. ಅಲ್ಲಿಗೆ ಸಿನಿಮಾಕ್ಕಾಗಿ ಖರ್ಚು ಮಾಡಿದಷ್ಟು ಹಣವನ್ನು ಸಿನಿಮಾ ಗಳಿಸಿಕೊಟ್ಟಿದೆ.

ಸಂಭಾವನೆ ಸೇರಿಸಿಲ್ಲ ಆಮಿರ್ ಖಾನ್
ಸಿನಿಮಾವನ್ನು ಆಮಿರ್ ಖಾನ್ ನಿರ್ಮಾಣ ಮಾಡಿರುವ ಕಾರಣ ಅವರು ತಮ್ಮ ಸಂಭಾವನೆಯನ್ನು ಸಿನಿಮಾದ ನಿರ್ಮಾಣ ವೆಚ್ಚದಲ್ಲಿ ಸೇರಿಸಿಲ್ಲ. ಒಂದೊಮ್ಮೆ ಅವರು ತಮ್ಮ ಸಂಭಾವನೆಯಾದ 100 ಕೋಟಿ ಮೊತ್ತವನ್ನು ಸಿನಿಮಾ ನಿರ್ಮಾಣ ವೆಚ್ಚಕ್ಕೆ ಸೇರಿಸಿದರೆ ಸಿನಿಮಾದ ಒಟ್ಟು ಬಜೆಟ್ 355 ಕೋಟಿ ಆಗುತ್ತದೆ. ಆಗ ಸಿನಿಮಾ ಸೋತಂತಾಗುತ್ತದೆ. ಆದರೆ ಆಮಿರ್ ಖಾನ್ ತಮ್ಮ ಸಂಭಾವನೆಯನ್ನು ಸೇರಿಸಿಲ್ಲವಾದ್ದರಿಂದ ಸಿನಿಮಾ ಇದೀಗ ಬ್ರೇಕ್ ಇವನ್‌ನಲ್ಲಿ ನಿಂತಿದೆ.

ಫಾರೆಸ್ಟ್ ಗಂಫ್ ಸಿನಿಮಾದ ರೀಮೇಕ್
ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಇಂಗ್ಲೀಷ್‌ನ 'ಫಾರೆಸ್ಟ್ ಗಂಪ್' ಸಿನಿಮಾದ ರೀಮೇಕ್ ಆಗಿದೆ. ಸಿನಿಮಾದಲ್ಲಿ ಕರೀನಾ ಕಪೂರ್ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಆಮಿರ್ ಖಾನ್ ಬಂಡವಾಳ ಹೂಡಿದ್ದು ಸಿನಿಮಾ ನಿರ್ದೇಶನ ಮಾಡಿರುವುದು ಅದ್ವೈತ್. ಚಿತ್ರಕತೆ ಬರೆದಿರುವುದು 'ಆ ದಿನಗಳು' ಖ್ಯಾತಿಯ ಅತುಲ್ ಕುಲಕರ್ಣಿ. ಸಿನಿಮಾ ಬಿಡುಗಡೆ ಆಗುವ ಮುನ್ನವೆ ಸಿನಿಮಾವನ್ನು ಬಾಯ್‌ಕಾಟ್ ಮಾಡುವಂತೆ ಅಭಿಯಾನ ನಡೆಸಲಾಗಿತ್ತು.


Click it and Unblock the Notifications











