ಖರ್ಚಾಗಿದ್ದು ನಾಲ್ಕು ಕೋಟಿ.. 'ಲಾಪತಾ ಲೇಡೀಸ್' ಮೂಲಕ ಆಮೀರ್ ಖಾನ್ ಗಳಿಸಿದ್ದೆಷ್ಟು ಕೋಟಿ..?

ಸಿನಿಮಾ ಮಾಡಲು ಕಾಸು ಮುಖ್ಯ ಅಲ್ಲ. ಕಥೆ ಮುಖ್ಯ. ಶ್ರದ್ಧೆ ಹಾಗೂ ಭಕ್ತಿ ಮುಖ್ಯ. ಇದಕ್ಕೆ ಉದಾಹರಣೆ ಅನ್ನುವಂತೆ ನೀರಿನಂತೆ ಕೋಟ್ಯಂತರ ಹಣ ಚೆಲ್ಲಿ ಇಲ್ಲಿ ಪಾಪರ್ ಆದವರು ಇದ್ದಾರೆ. ಏನೆಂದರೆ ಏನೂ ಇಲ್ಲದೇ, ಸಾಲ-ಸೋಲ ಮಾಡಿ ಚಿತ್ರವನ್ನ ನಿರ್ಮಿಸಿ, ಆ ನಂತರ ಕೋಟ್ಯಾಧಿಪತಿಗಳಾದವರು ಇದ್ದಾರೆ. ಇದಕ್ಕೆ ಮತ್ತೊಂದು ಸಾಕ್ಷಿ ಲಾಪತಾ ಲೇಡೀಸ್ .

ಹೌದು, ಲಾಪತಾ ಲೇಡೀಸ್ , ಆಮೀರ್ ಖಾನ್ ನಿರ್ಮಾಣದ ಸಿನಿಮಾ. ನಿಮಗೆ ಗೊತ್ತಿರಲಿ ಆಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ಈ ಸಿನಿಮಾ ತಯಾರಾಗಿದ್ದು ಕೇವಲ ನಾಲ್ಕು ಕೋಟಿಯಲ್ಲಿ. ಆದರೆ ಬಿಡುಗಡೆಯಾದ ಈ ಹತ್ತು ದಿನದಲ್ಲಿ ಚಿತ್ರ ಗಳಿಸಿದ್ದು ಒಂಬತ್ತು ಕೋಟಿ.

Laapataa Ladies box office collection Kiran Rao film witnesses growth

ಅಂದರೆ ದಿನವೊಂದಕ್ಕೆ ಹತ್ ಹತ್ರ ಒಂದು ಕೋಟಿಯ ವ್ಯಾಪಾರ ವಹಿವಾಟವನ್ನ ಈ ಚಿತ್ರ ಮಾಡಿದೆ. ಹೀಗಾಗಿಯೇ ಈ ಚಿತ್ರದ ಮೇಲೆ ಹಿಟ್ ಎಂಬ ಮುದ್ರೆಯನ್ನ, ಬಾಲಿವುಡ್ ಪಂಡಿತರು ಸದ್ಯಕ್ಕೆ ಒತ್ತಿದ್ದಾರೆ. ಲಾಪತಾ ಲೇಡೀಸ್ ಗಳಿಕೆಯನ್ನ ಕಂಡು ಕೆಲವರು ನಿಬ್ಬೇರಗಾಗಿದ್ದಾರೆ. ಯಾಕೆಂದರೆ ಇಲ್ಲಿ ಆಮೀರ್ ಖಾನ್ ಹಾಗೂ ಕಿರಣ್ ಹೆಸರನ್ನ ಹೊರತು ಪಡಿಸಿದರೆ ಇಲ್ಲಿ ಇರುವುದೆಲ್ಲ ಅಪರಿಚಿತ ಹೆಸರುಗಳೇ.

ಸ್ಪರ್ಶ್ ಶ್ರೀವಾಸ್ತವ, ಪ್ರತಿಭಾ ರಂಟಾ, ನಿತಾಂಶಿ ಗೋಯಲ್ ಚಿತ್ರದ ಮೂರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಶೇಷ ಅಂದರೆ ಎಲ್ಲರಿಗೂ ಇದು ಮೊದಲ ಅನುಭವ. ಒಂದರ್ಥದಲ್ಲಿ ಇದು ಹಳೇ ಬೇರು ಮತ್ತು ಹೊಸ ಚಿಗುರು ಎಂಬಂತ ಸಿನಿಮಾ. ಇಂಥಹ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಪವಾಡ ಮಾಡುತ್ತಿರುವುದು ನಿಜಕ್ಕೂ ಅಚ್ಚರಿ ಅನ್ನುವ ಅಭಿಪ್ರಾಯ ಸದ್ಯಕ್ಕೆ ಹಿಂದಿ ಉದ್ಯಮದಲ್ಲಿ ಕೇಳಿ ಬರುತ್ತಿದೆ.

Laapataa Ladies box office collection Kiran Rao film witnesses growth

ಲಾಪತಾ ಲೇಡೀಸ್' ಕಥಾ ಹಂದರ ;

ಮದುವೆ ಮಾಡಿಕೊಂಡು ಹತ್ತು ಹಲವು ಕನಸುಗಳ ಜೊತೆ ಗಂಡನ ಮನೆಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಇಬ್ಬರು ಹುಡುಗಿಯರು ಕಾಣೆಯಾಗ್ತಾರೆ. ಹೆಂಡತಿಯರನ್ನು ಕಳೆದುಕೊಂಡ ಗಂಡಂದಿರಿಗೆ ತಮ್ಮ ಪತ್ನಿಯರನ್ನ ಹುಡುಕುವುದೇ ದೊಡ್ಡ ಸವಾಲು. ಹೆಂಡತಿಯನ್ನು ಕಳೆದುಕೊಂಡವನು ಎಂಬ ಅವಮಾನ ಒಂದು ಕಡೆಯಾದರೆ, ಕಳೆದು ಹೋದ ಹೆಂಡತಿಯ ಪರಿಸ್ಥಿತಿ ಹೇಗಿದೆಯೋ ಎಂಬ ಚಿಂತೆ ಇನ್ನೊಂದು ಕಡೆ.

ಇಂಥ ಸಂಕಟದ ಸಂದರ್ಭವನ್ನು ಬಹಳ ಅಚ್ಚುಕಟ್ಟಾಗಿ ವಿವರಿಸುತ್ತಲೇ ಹತ್ತಾರು ವಿಚಾರಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ 'ಲಾಪತಾ ಲೇಡೀಸ್' ಸಿನಿಮಾ. ಮೇಲ್ನೋಟಕ್ಕೆ ಇದು ಗೋಳಿನ ಕಥೆಯ ರೀತಿ ಕಾಣಿಸಿದರೂ ತುಂಬ ಹಾಸ್ಯಮಯವಾಗಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಭಾವನೆಗಳ ಮೆರವಣಿಗೆ ಇದೆ. ಈ ಮೆರವಣಿಗೆಗೆ ಸಿನಿಪ್ರಿಯರು ಸದ್ಯಕ್ಕೆ ಉಘೇ ಉಘೇ ಅನ್ನುತ್ತಿದ್ದಾರೆ.

Laapataa Ladies box office collection Kiran Rao film witnesses growth

ಉಳಿದಂತೆ ಆಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ಲಾಪತಾ ಲೇಡೀಸ್' ಸಿನಿಮಾದಲ್ಲಿ ರಾಮ್​ ಸಂಪತ್​ ಅವರ ಸಂಗೀತ, ಎಲ್ಲರ ಹೃದಯ ಗೆಲ್ತಿದೆ. ಅದರಲ್ಲಿಯೂ 'ಸಜನಿ..' ಹಾಡು ಸದ್ಯಕ್ಕೆ ಎಲ್ಲರ ಫೇವರೆಟ್. ಇನ್ನೂ ಪುರುಷ ಪ್ರಧಾನ ಜಗತ್ತಿನಲ್ಲಿ ಕಿರಣ್ ರಾವ್ ಮಹಿಳಾ ಪ್ರಧಾನ ಸಿನಿಮಾ ಮಾಡಿದ್ದಾರೆ.

ನಕ್ಕು ನಗಿಸಿ ಕಣ್ಣೀರು ಹಾಕುವಲ್ಲಿಯೂ ಯಶಸ್ವೀಯಾಗಿದ್ದಾರೆ. ಇದೆಲ್ಲದರ ಪ್ರತಿಫಲವೆನ್ನುವಂತೆ ನಾಲ್ಕು ಕೋಟಿಯಲ್ಲಿ ನಿರ್ಮಾಣವಾದ ಸಿನಿಮಾ ಹತ್ತು ಕೋಟಿಯ ಗಡಿಯತ್ತ ಮುನ್ನುಗ್ಗುತ್ತಿದೆ. ಇದಕ್ಕಿಂತ ಇನ್ನೇನು ಬೇಕು. ಆಮೀರ್ ಖಾನ್ ಕುಣಿಯಲು. ಬಾಲಿವುಡ್ ಸಂಭ್ರಮಿಸಲು

More from Filmibeat

English summary
The film, directed by Kiran Rao, witnessed a jump in its collection at the domestic box office on its second Saturday. As per Sacnilk.com, Laapataa Ladies has minted nearly ₹8 crore so far in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X