Dua Padukone: ದೀಪಿಕಾ- ರಣ್ವೀರ್ ನಿಮ್ಮ ಮಗಳಿಗೆ ಬೇರೆ ಹೆಸರು ಸಿಗಲಿಲ್ವಾ? ಫುಲ್ ಟ್ರೋಲ್
ಸಿನಿಮಾ ತಾರೆಯರು ನಿಂತರೂ ಕುಂತರೂ ಜನ ಮಾತನಾಡುತ್ತಾರೆ. ಪ್ರತಿಯೊಂದನ್ನು ತಮ್ಮ ಮೂಗಿನ ನೇರಕ್ಕೆ ಆಲೋಚಿಸಿ ಕಾಮೆಂಟ್ ಮಾಡುತ್ತಾರೆ. ಈ ಸೋಶಿಯಲ್ ಮೀಡಿಯಾದಿಂದ ಪ್ರತಿಯೊಬ್ಬರ ಕಾಮೆಂಟ್ ಕೂಡ ಸೆಲೆಬ್ರೆಟಿಗಳನ್ನು ತಲುಪುವಂತಾಗಿದೆ. ಇನ್‌ಸ್ಟಾ, ಫೇಸ್‌ಬುಕ್, ಟ್ವಿಟರ್‌ನಿಂದ ತಾರೆಯರು ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಬಹುದು ಎನ್ನುವುದು ನಿಜ. ಆದರೆ ಕೆಲವೊಮ್ಮೆ ಅದೇ ಸಮಸ್ಯೆ ಆಗಿಬಿಡುತ್ತದೆ.
ಬಾಲಿವುಡ್ ನಟ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ತಮ್ಮ ಮಗಳ ಹೆಸರನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. ದೀಪಾವಳಿ ಸಂಭ್ರಮದಲ್ಲಿ ಮಗಳ ಕಾಲಿನ ಫೋಟೊ ಹಂಚಿಕೊಂಡಿದ್ದರು. ಮಗಳಿಗೆ ದುವಾ ಪಡುಕೋಣೆ ಸಿಂಗ್ ಎಂದು ಹೆಸರು ಇಟ್ಟಿರುವುದಾಗಿ ಡಿಪ್ಪಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು. ದುವಾ ಎಂದರೆ ಪ್ರಾರ್ಥನೆ ಎನ್ನುವ ಅರ್ಥ ಇದೆ. ಯಾಕಂದರೆ ನಮ್ಮ ಪ್ರಾರ್ಥನೆಯ ಫಲವಾಗಿ ಅವಳು ನಮ್ಮ ಬಾಳಿಗೆ ಬಂದಿದ್ದಾಳೆ ಎಂದು ಪೋಸ್ಟ್ ಮಾಡಿದ್ದರು.

ದೀಪಿಕಾ ಪಡುಕೋಣೆ ಪೋಸ್ಟ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಹಳ ವಿಭಿನ್ನವಾದ ಹೆಸರು, ಒಳ್ಳೆ ಅರ್ಥ ಇದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ದಿಢೀರನೆ ಈ ಹೆಸರಿನ ಕಾರಣಕ್ಕೆ ರಣ್ವೀರ್- ದೀಪಿಕಾ ದಂಪತಿಯನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಕಾರಣ ದುವಾ ಎನ್ನುವ ಪದದ ಮೂಲ.
ದುವಾ ಎನ್ನುವುದು ಅರಾಬಿಕ್ ಮೂಲದ ಪದ. ಅರಾಬಿಕ್‌ನಲ್ಲಿ ಪ್ರಾರ್ಥನೆಗೆ ದುವಾ ಎಂದು ಹೇಳಲಾಗುತ್ತದೆ. ಅಂದರೆ ಇದು ಇಸ್ಲಾಂ ಹೆಸರು ಎಂದು ಕೆಲವರು ಚಕಾರ ಎತ್ತಿದ್ದಾರೆ. ದೀಪಿಕಾ-ರಣ್ವೀರ್ ನಿಮಗೆ ಬೇರೆ ಹೆಸರು ಸಿಗಲಿಲ್ವಾ? ಪ್ರಾರ್ಥನಾ ಎಂದು ಹೆಸರು ಇಡಬಹುದಿತ್ತು ಅಲ್ವಾ? ಅದು ಬಿಟ್ಟು ಇಸ್ಲಾಂ ಹೆಸರು ಬೇಕಿತ್ತಾ? ಹಿಂದಿ ಬೇಡ್ವಾ, ಉರ್ದು ಬೇಕಾ? ಎಂದು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಇದು ವಿಚಾದಕ್ಕೆ ಕಾರಣವಾಗಿದೆ.
ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ ಹಿಂದೂ ಹೆಸರುಗಳಿಗೆ ಕೊರತೆ ಇದ್ಯಾ? ಇಲ್ಲಾ ಅಲ್ವಾ? ಎಂದು ಪ್ರಶ್ನಿಸಿದ್ದಾರೆ. ಖಾನ್ ಎನ್ನುವ ಪದವನ್ನು ಸೇರಿಸಿಬಿಡಿ, ದೀಪಿಕಾ ನಿಮಗೆ ಹಿಂದೂ ದೇವತೆ ಹೆಸರ ಸಿಗಲಿಲ್ಲವೇ? ಎಂದು ಮತ್ತೊಂದು ಕೇಳಿದ್ದಾರೆ. ದೀಪಿಕಾ ನನಗೆ ಇಷ್ಟ, ದುವಾ ನನಗೆ ಇಷ್ಟವಿಲ್ಲ, ಧುರ್ವ ಎನ್ನುವ ಹೆಸರು ಹೇಗಿದೆ? ಎನ್ನುವುದು ಮತ್ತೊಬ್ಬರ ಕಾಮೆಂಟ್. ಹೀಗೆ ಸಾಕಷ್ಟು ಜನ ಕಾಮೆಂಟ್ ಮಾಡಿ ಪ್ರಶ್ನಿಸಿದ್ದಾರೆ.
ರಣ್ವೀರ್- ದೀಪಿಕಾ ಇಬ್ಬರೂ ಕೂಡ ಹಿಂದೂ ಧರ್ಮಕ್ಕೆ ಸೇರಿದವರು. ಹಾಗಿದ್ದ ಮೇಲೆ ಮಗಳಿಗೆ ಇಸ್ಲಾಂ ಹೆಸರು ಯಾಕೆ ಬೇಕಿತ್ತು? ಎಂದು ಪ್ರಶ್ನಿಸುತ್ತಿದ್ದಾರೆ. ನೀವು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದೀರಾ ಎಂದು ಬೇಸರ ವ್ಯಕ್ತಪಡಿಸುತ್ತಿದ್ಧಾರೆ. ಆದರೆ ಈ ವಿಚಾರದಲ್ಲಿ ಕೆಲವರು ದಂಪತಿಯ ಬೆಂಬಲಕ್ಕೆ ಬಂದಿದ್ದಾರೆ. ಮಗಳಿಗೆ ಇಷ್ಟದ ಹೆಸರು ಇಡುವುದಕ್ಕೂ ಈ ದೇಶದಲ್ಲಿ ಸ್ವಾತಂತ್ರ್ಯ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.
ದೀಪಿಕಾ ಮಾತೃಭಾಷೆ ಕೊಂಕಣಿ. ಮಗಳನ್ನು ಕೊಂಕಣಿ ಭಾಷೆಯಲ್ಲಿ ದುವಾ ಎಂದು ಕರೆಯುತ್ತಾರೆ. ಹಾಗಾಗಿ ಈ ಅರ್ಥದಲ್ಲಿ ಕೂಡ ಡಿಪ್ಪಿ ಮಗಳಿಗೆ ಈ ಹೆಸರು ಇಟ್ಟಿರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಗುವಿಗೆ ಹೆಸರು ಹುಡುಕಲು ಪೋಷಕರು ಸಾಕಷ್ಟು ಹುಡುಕಾಟ ನಡೆಸುತ್ತಾರೆ. ಬಹಳ ಯೂನಿಕ್ ಆದ, ಹೆಚ್ಚು ಪ್ರಚಲಿತದಲ್ಲಿ ಇಲ್ಲದ, ಒಳ್ಳೆ ಅರ್ಥ ಇರುವ ಹೆಸರುಗಳಿಗಾಗಿ ತಲಾಶೆ ನಡೆಸುತ್ತಾರೆ. ಹೀಗೆ ದೀಪ್‌ವೀರ್ ದಂಪತಿ ಸಹ ಬಹಳ ಹುಡುಕಾಟ ನಡೆಸಿ ದುವಾ ಎನ್ನುವ ಹೆಸರು ಫೈನಲ್ ಮಾಡಿದ್ದಾರೆ.
ಸದ್ಯ ದೀಪಿಕಾ- ರಣ್ವೀರ್ ತಮ್ಮ ಮಗಳಿಗೆ ಇಷ್ಟ ಹೆಸರಿನ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವುದು ಅಭಿಮಾನಿಗಳಿಗೂ ಬೇಸರ ತಂದಿದೆ. ಸೆಪ್ಟೆಂಬರ್ 8ರಂದು ನಟಿ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಸಿನಿಮಾಗಳಿಂದ ಬಿಡುವುದು ಪಡೆದು ಮಗಳ ಲಾಲನೆ, ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











