For Quick Alerts
  ALLOW NOTIFICATIONS  
  For Daily Alerts

  'ಲಗಾನ್' ಚಿತ್ರಕ್ಕೆ 20 ವರ್ಷ: ಬಜೆಟ್ ಎಷ್ಟು, ಗಳಿಸಿದ್ದೆಷ್ಟು?

  |

  ಬಾಲಿವುಡ್ ಸೂಪರ್ ಹಿಟ್ 'ಲಗಾನ್' ಸಿನಿಮಾ 20 ವರ್ಷ ಪೂರೈಸಿದೆ. 74ನೇ ಆಸ್ಕರ್ ಪ್ರಶಸ್ತಿ ಸಾಲಿನಲ್ಲಿ ಭಾರತದಿಂದ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಲಗಾನ್ ನಾಮಿನೇಟ್ ಆಗಿತ್ತು. ಅಶುತೋಷ್ ಗೋವಾರಿಕರ್ ಈ ಚಿತ್ರ ನಿರ್ದೇಶಿಸಿದ್ದು, ಸ್ವತಃ ಅಮೀರ್ ಖಾನ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿದ್ದರು.

  ಜೂನ್ 15, 2001ರಲ್ಲಿ ಬಿಡುಗಡೆಯಾಗಿದ್ದ ಲಗಾನ್ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಐತಿಹಾಸಿಕ ಕ್ರೀಡಾ ಆಧರಿತ ಕಥೆ ಹೊಂದಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಬಿಸಿನೆಸ್ ಮಾಡಿತ್ತು. ಹಾಗಾದ್ರೆ, ಲಗಾನ್ ಚಿತ್ರದ ಬಂಡವಾಳ ಎಷ್ಟು? ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಗಳಿಸಿತ್ತು? ಮುಂದೆ ಓದಿ...

  ಚಿತ್ರದ ಬಜೆಟ್ ಎಷ್ಟು?

  ಚಿತ್ರದ ಬಜೆಟ್ ಎಷ್ಟು?

  ಅಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಲಗಾನ್ ಚಿತ್ರ ನಿರ್ಮಾಣ ಮಾಡಿದ್ದು ಅವರೇ. ಅಮೀರ್ ಸಂಸ್ಥೆಯಲ್ಲಿ ತಯಾರಾದ ಮೊದಲ ಸಿನಿಮಾ ಇದು. 2001ರಲ್ಲಿ ಈ ಚಿತ್ರಕ್ಕೆ ತಗುಲಿದ ವೆಚ್ಚ 25 ಕೋಟಿ.

  ಹಣ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೆವು: ಅಮೀರ್ ಖಾನ್ಹಣ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೆವು: ಅಮೀರ್ ಖಾನ್

  ಲಗಾನ್ ಗಳಿಕೆ ಎಷ್ಟು?

  ಲಗಾನ್ ಗಳಿಕೆ ಎಷ್ಟು?

  ಲಗಾನ್ ಚಿತ್ರ ಒಟ್ಟು ಗಳಿಸಿದ ಮೊತ್ತ 65 ಕೋಟಿ. ಭಾರತ ಹಾಗೂ ಹೊರದೇಶಗಳಲ್ಲಿ ತೆರೆಕಂಡಿದ್ದ ಸಿನಿಮಾ ಆ ಸಮಯಕ್ಕೆ ಭರ್ಜರಿ ಬಿಸಿನೆಸ್ ಮಾಡಿತ್ತು. ಲಗಾನ್ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಚಿತ್ರ.

  ಆಸ್ಕರ್‌ಗೆ ನಾಮಿನೇಟ್ ಆಗಿದ್ದ ಚಿತ್ರ

  ಆಸ್ಕರ್‌ಗೆ ನಾಮಿನೇಟ್ ಆಗಿದ್ದ ಚಿತ್ರ

  ಲಗಾನ್ ಸಿನಿಮಾ ಭಾರತದಿಂದ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನವಾಗಿತ್ತು. ಮದರ್ ಇಂಡಿಯಾ, ಸಲಾಂ ಬಾಂಬೆ ಚಿತ್ರಗಳ ಬಳಿಕ ಲಗಾನ್ ಚಿತ್ರ ಆಸ್ಕರ್ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತ್ತು. ಆದರೆ ಪ್ರಶಸ್ತಿ ಗೆಲ್ಲಲಿಲ್ಲ.

  ಕೊರೊನಾ ನಡುವೆಯೂ ಆಮೀರ್ ಖಾನ್ ಜೊತೆ ಲಡಾಖ್ ಗೆ ಹೊರಟ ನಟ ನಾಗ ಚೈತನ್ಯಕೊರೊನಾ ನಡುವೆಯೂ ಆಮೀರ್ ಖಾನ್ ಜೊತೆ ಲಡಾಖ್ ಗೆ ಹೊರಟ ನಟ ನಾಗ ಚೈತನ್ಯ

  Sanchari Vijay ಗೆ ಅಕ್ಕಿ ತುಂಬೋದ್ರಲ್ಲು ಅವಾರ್ಡ್ ಕೊಡಬೇಕು ಅಂದಿದ್ರು ಸತೀಶ್ | Filmibeat Kannada
  ಗದಾರ್ ಜೊತೆ ಪೈಪೋಟಿ

  ಗದಾರ್ ಜೊತೆ ಪೈಪೋಟಿ

  ಲಗಾನ್ ತೆರೆಕಂಡಿದ್ದ ದಿನವೇ ಸನ್ನಿ ಡಿಯೋಲ್, ಅಮೀಶಾ ಪಟೇಲ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಗದಾರ್: ಏಕ್ ಪ್ರೇಮ್ ಕಥಾ ಚಿತ್ರ ಬಿಡುಗಡೆಯಾಗಿತ್ತು. ಎರಡು ಸಿನಿಮಾಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು.

  English summary
  Aamir Khan's Lagaan completes 20 years: Know Movie Budget and Collections details in kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X