For Quick Alerts
  ALLOW NOTIFICATIONS  
  For Daily Alerts

  ಚಪಾಕ್ ವಿರುದ್ಧ ಕೋರ್ಟ್ ಮೊರೆ ಹೋದ ಲಕ್ಷ್ಮಿ ಅಗರ್ವಾಲ್ ವಕೀಲೆ

  |

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಿರುವ ಚಪಾಕ್ ಸಿನಿಮಾ ಜನವರಿ 10ರಂದು ಬಿಡುಗಡೆಯಾಗುತ್ತಿದೆ. ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮಿ ಅಗರ್ವಾಲ್ ಅವರ ಜೀವನ ಆಧಾರಿತ ಸಿನಿಮಾ ಇದಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.

  ಪೋಸ್ಟರ್, ಟ್ರೈಲರ್ ನಲ್ಲಿ ದೀಪಿಕಾ ಪಡುಕೋಣೆ ಅವರನ್ನು ನೋಡಿದ ಚಿತ್ರರಂಗ ಇದು ಒಳ್ಳೆಯ ಸಿನಿಮಾ ಆಗಲಿದೆ, ದೀಪಿಕಾ ಚೆನ್ನಾಗಿ ಅಭಿನಯ ಮಾಡಿರುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದರು.

  Chhapaak Review: ಅದ್ಭುತ ಸಿನಿಮಾ, ಅತ್ಯದ್ಭುತ ನಟನೆChhapaak Review: ಅದ್ಭುತ ಸಿನಿಮಾ, ಅತ್ಯದ್ಭುತ ನಟನೆ

  ಇದೀಗ, ಚಪಾಕ್ ಚಿತ್ರದ ನಿರ್ಮಾಪಕರ ವಿರುದ್ಧ ಲಕ್ಷ್ಮಿ ಅಗರ್ವಾಲ್ ಪರ ವಕೀಲೆ ಅಪರ್ಣ ಭಟ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಿನಿಮಾದಲ್ಲಿ ನನಗೆ ಕ್ರೆಡಿಟ್ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ವಕೀಲೆ ದೆಹಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.

  ಲಕ್ಷ್ಮಿ ಅಗರ್ವಾಲ್ ಮೇಲೆ ಆಸಿಡ್ ದಾಳಿ ಆದ ಬಳಿಕ ಅಪರ್ಣ ಭಟ್ ಅವರ ಪರ ಕೋರ್ಟ್ ನಲ್ಲಿ ವಾದ ಮಾಡಿದ್ದರು. ಲಕ್ಷ್ಮಿ ಜೀವನದಲ್ಲಿ ಅಪರ್ಣ ಭಟ್ ಅವರದ್ದು ಪ್ರಮುಖ ಪಾತ್ರ್. ಸಿನಿಮಾದಲ್ಲೂ ತಮ್ಮ ಪಾತ್ರ ಬಳಸಲಾಗಿದೆ. ಆದರೆ, ಅದಕ್ಕೆ ಯಾವುದೇ ಕ್ರೆಡಿಟ್ ನೀಡಿಲ್ಲ ಎನ್ನುವುದು ವಕೀಲೆಯ ಆರೋಪ.

  ಈ ಕುರಿತು ಫೇಸ್ ಬುಕ್ ನಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದರು. ಬಳಿಕ ಅಪರ್ಣ ಭಟ್ ಅವರ ದೂರು ಆಲಿಸಿದ ದೆಹಲಿ ಕೋರ್ಟ್ ಚಿತ್ರತಂಡಕ್ಕೆ ಕ್ರೆಡಿಟ್ ನೀಡುವಂತೆ ಸೂಚಿಸಿದೆ. ಸಿನಿಮಾ ಬಿಡುಗಡೆಗೂ ಮುಂಚೆ ಕ್ರೆಡಿಟ್ ನೀಡಿ ನಂತರ ಬಿಡುಗಡೆ ಮಾಡಿ ಎಂದು ಆದೇಶಿಸಿದೆ.

  ಮೇಘನಾ ಗುಲ್ಜಾರ್ ಈ ಚಿತ್ರ ನಿರ್ಮಿಸಿದ್ದಾರೆ. ಚಪಾಕ್ ಸಿನಿಮಾವನ್ನ ನಿಷೇಧಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭವಾಗಿತ್ತು. ಜೆ ಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದೀಪಿಕಾ ಸಿನಿಮಾ ನೋಡಬಾರದು ಎಂದು ಟೀಕಿಸಿದ್ದರು. ಸದ್ಯಕ್ಕೆ ಚಪಾಕ್ ಸಿನಿಮಾಗೆ ಯಾವುದೇ ಅಡ್ಡಿ ಆತಂಕ ಇಲ್ಲ. ಕೋರ್ಟ್ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿಂದೆ ನಿರ್ಧರಿಸಿದಂತೆ ಜನವರಿ 10ಕ್ಕೆ ಚಪಾಕ್ ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ.

  English summary
  Lakshmi Agarwal Lawyer Aparna Bhat filed case against deepika padukone's chhapaak movie makers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X