For Quick Alerts
  ALLOW NOTIFICATIONS  
  For Daily Alerts

  ರಿಯಾ ಚಕ್ರವರ್ತಿ ಬೆಂಬಲಕ್ಕೆ ನಿಂತ ಇಬ್ಬರು ಟಾಪ್ ನಟಿಯರು

  |

  ಸುಶಾಂತ್ ಆತ್ಮಹತ್ಯೆ ಪ್ರಕರಣ ತನಿಖೆ ಪ್ರಾರಂಭವಾದಾಗಿನಿಂದಲೂ ಸುಶಾಂತ್ ಪ್ರೇಯಸಿ ರಿಯಾ ಆರೋಪಿಯಾಗಿದ್ದಾರೆ.

  ಅಡುಗೆ ಮಾಡೋಕಂತೂ ಬರಲ್ಲ ನೆಟ್ಟುಗೆ ತಿನ್ನು ಅಂತ ಬೈತಿದ್ರು ಸುದೀಪ್ | Filmibeat Kannada

  ರಿಯಾಳ ಕುರಿತು ಥರಹೇವಾರಿ ಸುದ್ದಿಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ, ರಿಯಾ ಚಕ್ರವರ್ತಿಯೇ ಸುಶಾಂತ್ ಕೊಲೆ ಮಾಡಿದ್ದಾಳೆ ಎನ್ನುವವರೆಗೂ ಮಾಧ್ಯಮಗಳಲ್ಲೇ ಚರ್ಚೆಗಳಾಗಿವೆ.

  ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಜೊತೆ ಸಂಪರ್ಕ ಹೊಂದಿದ್ದ ಡ್ರಗ್ ಪೆಡ್ಲರ್ ಗಳ ಬಂಧನಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಜೊತೆ ಸಂಪರ್ಕ ಹೊಂದಿದ್ದ ಡ್ರಗ್ ಪೆಡ್ಲರ್ ಗಳ ಬಂಧನ

  ರಿಯಾಳನ್ನು ಕೊಲೆಗಾರ್ತಿ, ಅವಕಾಶವಾದಿ, ಮಾದಕ ವ್ಯಸನಿ ಹೀಗೆ ಹಲವು ರೀತಿಯಲ್ಲಿ ಬಿಂಬಿಸಲಾಗಿದೆ. ಆದರೆ ಇವೆಲ್ಲವೂ ನಿಜವಾಗಲು ತನಿಖೆ ಪೂರ್ಣಗೊಳ್ಳಬೇಕಿದೆ.

  ಸುಶಾಂತ್ ಸಾವು, ಆ ಬಳಿಕ ನಡೆಯುತ್ತಿರುವ ಘಟನೆಗಳಿಂದ ತೀವ್ರ ಒತ್ತಡದಲ್ಲಿರುವ ರಿಯಾ ಚಕ್ರವರ್ತಿ ಬೆಂಬಲಕ್ಕೆ ಬಾಲಿವುಡ್ ನಟಿ ವಿದ್ಯಾ ಬಾಲನ್ ನಿಂತಿದ್ದಾರೆ.

  'ರಿಯಾಳ ಪರಿಸ್ಥಿತಿ ನೋಡಿದರೆ ಹೃದಯ ಭಾರವಾಗುತ್ತದೆ'

  'ರಿಯಾಳ ಪರಿಸ್ಥಿತಿ ನೋಡಿದರೆ ಹೃದಯ ಭಾರವಾಗುತ್ತದೆ'

  ರಿಯಾಳ ಪರಿಸ್ಥಿತಿ ನೋಡಿದರೆ ಹೃದಯ ಭಾರವಾಗುತ್ತದೆ ಎಂದಿರುವ ವಿದ್ಯಾ ಬಾಲನ್, ರಿಯಾಳ ಹೆಸರು ಕೆಡಿಸುವ ಕಾರ್ಯ ಬೇಡ, ಆಕೆಯ ಹಕ್ಕಿನ ಬಗ್ಗೆ ಗೌರವ ಇರಲಿ, ಕಾನೂನು ಅದರ ಕಾರ್ಯ ಮಾಡಲು ಬಿಡಿ ಎಂದು ಮನವಿ ಮಾಡಿದ್ದಾರೆ ನಟಿ ವಿದ್ಯಾ ಬಾಲನ್.

  ರಿಯಾಳ ಮೇಲೆ ರಾಕ್ಷಸರಂತೆ ಎರಗಿವೆ ಮಾಧ್ಯಮಗಳು: ಲಕ್ಷ್ಮಿ ಮಂಚು

  ರಿಯಾಳ ಮೇಲೆ ರಾಕ್ಷಸರಂತೆ ಎರಗಿವೆ ಮಾಧ್ಯಮಗಳು: ಲಕ್ಷ್ಮಿ ಮಂಚು

  ನಟಿ ಲಕ್ಷ್ಮಿ ಮಂಚು ಸಹ ಈ ಬಗ್ಗೆ ಮಾತನಾಡಿ, 'ಟಿವಿ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳು ರಿಯಾಳ ಮೇಲೆ ರಾಕ್ಷಸರ ರೀತಿ ಎರಗಿವೆ. ರಿಯಾಳನ್ನು ಮಾನಸಿಕವಾಗಿ ಕೊಲ್ಲಲಾಗುತ್ತಿದೆ. ತನಿಖೆ ಮುಗಿದು ಸತ್ಯ ಹೊರಬರುವವರೆಗೂ ಕಾಯಿರಿ' ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ ತಾನು ತಮ್ಮ ಸಹೋದ್ಯೋಗಿ ನಟಿಯ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದರು.

  ಸುಶಾಂತ್ ಸಿಂಗ್ ಕುಟುಂಬದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ರಿಯಾ ಚಕ್ರವರ್ತಿಸುಶಾಂತ್ ಸಿಂಗ್ ಕುಟುಂಬದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ರಿಯಾ ಚಕ್ರವರ್ತಿ

  ಚಿತ್ರೋದ್ಯಮ ಆಕೆಯ ಬೆಂಬಲಕ್ಕೆ ನಿಲ್ಲಬೇಕು: ಲಕ್ಷ್ಮಿ ಮಂಚು

  ಚಿತ್ರೋದ್ಯಮ ಆಕೆಯ ಬೆಂಬಲಕ್ಕೆ ನಿಲ್ಲಬೇಕು: ಲಕ್ಷ್ಮಿ ಮಂಚು

  ರಿಯಾ ಚಕ್ರವರ್ತಿ ಯನ್ನು ಮಾಧ್ಯಮಗಳು ರಾಕ್ಷಸಿಯ ರೀತಿಯಲ್ಲಿ ಬಿಂಬಿಸುತ್ತಿವೆ. ಆಕೆ ಹಾಗೂ ಆಕೆಯ ಕುಟುಂಬ ಎಂಥಹಾ ನೋವಿನಲ್ಲಿದೆ ಎಂಬುದನ್ನು ನಾನು ಊಹಿಸಬಲ್ಲೆ. ಚಿತ್ರೋದ್ಯಮವು ಆಕೆಯ ನೆರವಿಗೆ ನಿಲ್ಲಬೇಕಿದೆ. ನನಗೆ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಸತ್ಯವು ಹೊರಗೆ ಬಂದೇ ಬರಲಿದೆ ಎಂದಿದ್ದಾರೆ ಲಕ್ಷ್ಮಿ ಮಂಚು.

   'ನಿರಪರಾಧ ಸಾಬೀತಾಗುವವರೆಗೂ ಅಪರಾಧಿ'

  'ನಿರಪರಾಧ ಸಾಬೀತಾಗುವವರೆಗೂ ಅಪರಾಧಿ'

  ಲಕ್ಷ್ಮಿ ಮಂಚು ಟ್ವೀಟ್‌ ಗೆ ಪ್ರತಿಕ್ರಿಯಿಸಿರುವ ವಿದ್ಯಾ ಬಾಲನ್, 'ಅಪರಾಧ ಸಾಬೀತಾಗುವವರೆಗೂ ನಿರಪರಾಧಿ' ಎಂಬ ಮಾತಿದೆ. ಆದರೆ ರಿಯಾಳ ಪ್ರಕರಣದಲ್ಲಿ ಅದನ್ನು ಬದಲಿಸಿ, 'ನಿರಪರಾಧ ಸಾಬೀತಾಗುವವರೆಗೂ ಅಪರಾಧಿ' ಎಂದು ಬದಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ತಾಳ್ಮೆ ಕಳೆದುಕೊಂಡ ರಿಯಾ ಚಕ್ರವರ್ತಿ: ಕಾರಿನ ಗ್ಲಾಸ್ ಗೆ ಗುದ್ದಿ ಮಾಧ್ಯಮದ ವಿರುದ್ಧ ಆಕ್ರೋಶತಾಳ್ಮೆ ಕಳೆದುಕೊಂಡ ರಿಯಾ ಚಕ್ರವರ್ತಿ: ಕಾರಿನ ಗ್ಲಾಸ್ ಗೆ ಗುದ್ದಿ ಮಾಧ್ಯಮದ ವಿರುದ್ಧ ಆಕ್ರೋಶ

  English summary
  Lakshmi Manchu and Vidya Balan stand in support of accused Rhea Chakraborthy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X