ಅಂದು 'KGF' ಮುಂದೆ ಮಂಡಿಯೂರಿದ್ದ ಶಾರುಖ್: ಇಂದು 'KGF-2' ಮುಂದೆ ನಿಲ್ತಾರಾ ಆಮೀರ್?

By ಫಿಲ್ಮಿಬೀಟ್ ಡೆಸ್ಕ್

ಇಡೀ ಭಾರತೀಯ ಸಿನಿಮಾರಂಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ಕನ್ನಡದಲ್ಲೂ ಇಂಥ ಅದ್ಭುತ, ಚಮತ್ಕಾರ ಸೃಷ್ಟಿಸುವ ಸಿನಿಮಾಗಳು ಬರುತ್ತೆ ಎನ್ನುವುದನ್ನು ಸಾಬೀತು ಮಾಡಿದ ಸಿನಿಮಾ ಕೆಜಿಎಫ್. ಪ್ರಶಾಂತ್ ನೀಲ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ನಟನೆ, ಚಿತ್ರ ಕಥೆ, ಸಂಗೀತ ಹೀಗೆ ಪ್ರತಿಯೊಂದು ವಿಚಾರದಲ್ಲೂ ಕೆಜಿಎಫ್ ಇಡೀ ದೇಶದ ಗಮನ ಸೆಳೆದಿತ್ತು. ಪಾರ್ಟ್ 1 ಬಳಿಕ ಇದೀಗ ಕೆಜಿಎಫ್-2 ಮೇಲಿನ ನಿರೀಕ್ಷೆ ದುಪ್ಪಟ್ಟು ಹೆಚ್ಚಾಗಿದೆ.

ಕೆಜಿಎಫ್ ಬಿಡುಗಡೆಯ ಮೊದಲು ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತೆ ಎಂದು ಭಾರತೀಯ ಸಿನಿಮಾರಂಗ ಊಹೆ ಕೂಡ ಮಾಡಿರಲಿಲ್ಲ. ಆದರೆ ಬಿಡುಗಡೆ ಬಳಿಕ ಕೆಜಿಎಫ್ ಕ್ರೇಜ್ ಗೆ ಇಡೀ ದೇಶ ಬೆರಗಾಗಿತ್ತು. ಕನ್ನಡ ಸಿನಿಮಾನಾ? ಅದು ಯಾವ ಲೆಕ್ಕ ನಮಗೆ ಎನ್ನುವ ಲೆಕ್ಕಾಚಾರದಲ್ಲಿದ್ದ ಬಾಲಿವುಡ್ ಮಂದಿಗೆ ಯಶ್ ಕೆಜಿಎಫ್ ಸಿನಿಮಾ ನಡುಕ ಹುಟ್ಟಿಸಿತ್ತು. ಮುಂದೆ ಓದಿ...

ಕೆಜಿಎಫ್ ಮುಂದೆ ಸೋಲೊಪ್ಪಿದ ಶಾರುಖ್

ಕೆಜಿಎಫ್ ಮುಂದೆ ಸೋಲೊಪ್ಪಿದ ಶಾರುಖ್

ದೊಡ್ಡ ಕಲಾವಿದರು, ಸೂಪರ್ ಸ್ಟಾರ್ ಎನಿಕೊಂಡವರೇ ಯಶ್ ಕೆಜಿಎಫ್ ಹವಾದ ಮುಂದೆ ಮಕಾಡೆಮಲಗಿದ್ದರು. ಕೆಜಿಎಫ್ ಸಿನಿಮಾಗೆ ಸವಾಲು ಹಾಕಿ ಶಾರುಖ್ ಖಾನ್ ಝೀರೋ ಸಿನಿಮಾವನ್ನು ಬಿಡುಗಡೆ ಮಾಡಿದ್ದರು. ಆದರೆ ಕೆಜಿಎಫ್ ಕ್ರೇಜ್ ಮುಂದೆ ಶಾರುಖ್ 'ಝೀರೋ' ಸಿನಿಮಾ ಝೀರೋ ಆಗಿಯೇ ಕಳೆದುಹೋಯಿತು. ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಗೆ ಝಿರೋ ಸಿನಿಮಾದ ಸೋಲು ಮತ್ತಷ್ಟು ಕುಗ್ಗಿಸಿತು. ಈ ಸಿನಿಮಾ ಬಳಿಕ ಶಾರುಖ್ ಮತ್ತೆ ಅಭಿಮಾನಿಗಳ ಮುಂದೆ ಬಂದಿಲ್ಲ.

ಕನ್ನಡ ಸಿನಿಮಾಗೆ ಬೆರಗಾಗಿದ್ದ ಭಾರತೀಯ ಸಿನಿಮಾರಂಗ

ಕನ್ನಡ ಸಿನಿಮಾಗೆ ಬೆರಗಾಗಿದ್ದ ಭಾರತೀಯ ಸಿನಿಮಾರಂಗ

ಅದೇ ದಿನ ಅಂದರೆ 2018 ಡಿಸೆಂಬರ್ 21ರಂದು ಬಂದ ಕೆಜಿಎಫ್ ಮೂಲಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ದೇಶ-ವಿದೇಶಗಳಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದರು. ಕನ್ನಡ ಸಿನಿಮಾನಾ ಎಂದು ಮೂಗುಮುರಿಯುತ್ತಿದ್ದವರೆಲ್ಲ ಕೆಜಿಎಫ್ ನೋಡಿ ಬೆರಗಾಗಿದ್ದರು. ಮೊದಲ ಭಾಗ ನೋಡದ ವೀಕ್ಷಕರು ಈಗ ಪಾರ್ಟ್-2ಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಕೆಜಿಎಫ್-2 ಎಷ್ಟರ ಮಟ್ಟಿಗೆ ನಿರೀಕ್ಷೆ ಹುಟ್ಟು ಹಾಕಿದೆ ಎಂದರೆ ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ ಪುಟ್ಟ ಟೀಸರ್ ಗೆ ಸಿಕ್ಕ ಪ್ರತಿಕ್ರಿಯೇ ಸಾಕ್ಷಿ. ದೇಶ-ವಿದೇಶಗಳಲ್ಲಿ ಕೆಜಿಎಫ್-2 ಗಾಗಿ ಕಾದುಕುಳಿದ್ದಾರೆ.

ಕೆಜಿಎಫ್-2 ಮುಂದೆ ನಿಲ್ತಾರಾ ಆಮೀರ್ ಖಾನ್?

ಕೆಜಿಎಫ್-2 ಮುಂದೆ ನಿಲ್ತಾರಾ ಆಮೀರ್ ಖಾನ್?

ಕೆಜಿಎಫ್-2 ಮುಂದೆ ಬೇರೆ ಭಾಷೆಯ ಸಿನಿಮಾಗಳನ್ನು ಬಿಡುಗಡೆ ಮಾಡಲು ಸ್ಟಾರ್ ನಟರು ಸಹ ಹಿಂದೇಟು ಹಾಕುವಂತೆ ಆಗಿದೆ. ಅಂದಹಾಗೆ ಕೆಜಿಎಫ್-2 ಈ ವರ್ಷದ ಕೊನೆಯಲ್ಲಿ, ಯಶ್ ಲಕ್ಕಿ ತಿಂಗಳು ಡಿಸೆಂಬರ್ ನಲ್ಲಿ ಅಂದರೆ ಕ್ರಿಸ್ಮಸ್ ಗೆ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅದೇ ಸಮಯಕ್ಕೆ ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಕೂಡ ಬಿಡುಗಡೆಯಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಅಂದು ಶಾರುಖ್ ಇಂದು ಆಮೀರ್?

ಅಂದು ಶಾರುಖ್ ಇಂದು ಆಮೀರ್?

ಒಂದು ವೇಳೆ ಕೆಜಿಎಫ್-2 ಎದುರು ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾದರೆ 2018ರ ಚಿತ್ರಣ ಮತ್ತೆ ಮರುಕಳಿಸುವ ಸಾಧ್ಯತೆ ಇದೆ. ಆಮೀರ್ ಖಾನ್ ಕೂಡ ಗೆಲುವಿಗಾಗಿ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಕೆಜಿಎಫ್-2 ಎದುರು ನಿಲ್ಲುವ ಧೈರ್ಯ ಮಾಡುವುದು ಅನುಮಾನ. ಒಂದು ಕೆಜಿಎಫ್-2 ಮತ್ತು ಲಾಲ್ ಸಿಂಗ್ ಚಡ್ಡಾ ಒಟ್ಟಿಗೆ ಬಂದರೆ ಮತ್ತೆ ಬಾಲಿವುಡ್ ವರ್ಸಸ್ ಮತ್ತು ಸ್ಯಾಂಡಲ್ ವುಡ್ ರೋಚಕ ಪೈಪೋಟಿ ನಡೆಯಲಿದೆ.

ಕೆಜಿಎಫ್-2 ಬಿಡುಗಡೆ ದಿನಾಂಕ ಅಧಿಕೃತ ಘೋಷಣೆಯಾಗಿಲ್ಲ

ಕೆಜಿಎಫ್-2 ಬಿಡುಗಡೆ ದಿನಾಂಕ ಅಧಿಕೃತ ಘೋಷಣೆಯಾಗಿಲ್ಲ

ಕೆಜಿಎಫ್-2 ಬಿಡುಗಡೆ ದಿನಾಂಕ ಇನ್ನು ಘೋಷಣೆಯಾಗಲಿಲ್ಲ. ಮೂಲಗಳ ಪ್ರಕಾರ ಕೆಜಿಎಫ್-2 ಡಿಸೆಂಬರ್ ಬರಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಅಕ್ಟೋಬರ್ ತಿಂಗಳಿಗೆ ಬರುನಿರೀಕ್ಷೆಯ ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ಆರ್ ಆರ್ ಆರ್ ಬರುವ ಸಾಧ್ಯತೆ ಇದೆ. ಈ ಸಿನಿಮಾ ಬಿಡುಗಡೆ ಬಳಿಕ ಯಶ್ ಕೆಜಿಎಫ್-2 ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಕ್ರಿಸ್ಮಸ್ ಬರ್ತಿದೆ ಅಲ್ಲು ಅರ್ಜುನ್ 'ಪುಷ್ಪ'

ಕ್ರಿಸ್ಮಸ್ ಬರ್ತಿದೆ ಅಲ್ಲು ಅರ್ಜುನ್ 'ಪುಷ್ಪ'

ಇನ್ನು ಕೆಜಿಎಫ್ ಮತ್ತು ಲಾಲ್ ಸಿಂಗ್ ಚಡ್ಡಾ ನಡುವೆ ತೆಲುಗಿನ ಪುಷ್ಪ ಸಿನಿಮಾ ಕೂಡ ಕ್ರಿಸ್ಮಸ್ ಗೆ ಬಿಡುಗಡೆಯಾಗುತ್ತಿದೆ. ಸಿನಿಮಾ ವಿಶ್ಲೇಶಕ ತರಣ್ ಆದರ್ಶ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಆಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಮತ್ತು ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಕ್ರಿಸ್ಮಸ್ ಗೆ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ. ಹೀಗಿರುವಾಗ ಈ ಎರಡು ಸಿನಿಮಾಗಳ ನಡುವೆ ಕೆಜಿಎಫ್-2 ಕೂಡ ಎಂಟ್ರಿ ಕೊಡುತ್ತಾ ಎನ್ನುವುದು ಕುತೂಹಲ ಮೂಡಿಸಿದೆ. ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಕೂಡ ಭಾರಿ ನಿರೀಕ್ಷೆಯೊಂದಿಗೆ ಪ್ಯಾನ್ ಇಂಡಿಯಾ ಸಿನಿಮಾ ಆಗಿ ತೆರೆಗೆ ಬರುತ್ತಿದೆ. ಒಂದು ವೇಳೆ ಮೂರು ಸಿನಿಮಾಗಳು ಒಟ್ಟಿಗೆ ಎಂಟ್ರಿ ಕೊಟ್ಟರೆ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕ್ಲ್ಯಾಶ್ ಆಗುವುದು ಪಕ್ಕ ಎನ್ನುಲಾಗುತ್ತಿದೆ.

ಜುಲೈಗೆ ಬರಬೇಕಿತ್ತು ಕೆಜಿಎಫ್-2

ಜುಲೈಗೆ ಬರಬೇಕಿತ್ತು ಕೆಜಿಎಫ್-2

ಈ ಹಿಂದೆ ಪ್ರಕಟಿಸಿದಂತೆ ಜುಲೈ 16 ರಂದು 'ಕೆಜಿಎಫ್ ಚಾಪ್ಟರ್ 2' ಸಿನಿಮಾ ರಿಲೀಸ್ ಆಗಬೇಕಿತ್ತು. ಈ ಚಿತ್ರದ ಬಳಿಕ ಆಗಸ್ಟ್ 13 ರಂದು 'ಪುಷ್ಪ' ಬರುವುದಾಗಿ ದಿನಾಂಕ ಘೋಷಣೆ ಮಾಡಿತ್ತು. ಆದರೆ, ಕೊರೊನಾ ವೈರಸ್ ಎರಡನೇ ಲಾಕ್‌ಡೌನ್ ಕಾರಣದಿಂದ ರಿಲೀಸ್ ದಿನಾಂಕಗಳು ಮುಂದೂಡಿಕೆಯಾಗಿದ್ದವು. ಈಗ ಹೊಸ ದಿನಾಂಕ ಘೋಷಣೆ ಮಾಡುವುದರಲ್ಲಿ ಹೆಚ್ಚು ತಲೆಕೆಡಿಸಿಕೊಂಡಿರುವ ಚಿತ್ರತಂಡಗಳು ಅಧಿಕೃತವಾಗಿ ಏನು ಹೇಳಿಲ್ಲ.

ಸಂಕ್ರಾಂತಿಗೆ ಸ್ಟಾರ್ ವಾರ್

ಸಂಕ್ರಾಂತಿಗೆ ಸ್ಟಾರ್ ವಾರ್

ಹಾಗ್ನೋಡಿದ್ರೆ, ಕೆಜಿಎಫ್ ಚಿತ್ರ ಪುಷ್ಪ ಸಿನಿಮಾಗಳಿಗೆ ರಿಲೀಸ್ ದಿನಾಂಕ ಸದ್ಯಕ್ಕೆ ತಲೆನೋವು ಆಗಿದೆ. ಅಕ್ಟೋಬರ್ ತಿಂಗಳ ಮೇಲೆ RRR ಸಿನಿಮಾ ಕಣ್ಣಿಟ್ಟಿದೆ. ನವೆಂಬರ್ ತಿಂಗಳು ಸೂಪರ್ ಸ್ಟಾರ್ ರಜನಿಯ 'ಅಣ್ಣಾತ್ತೆ' ಸಿನಿಮಾ ಬರಲಿದೆ. ಸಂಕ್ರಾಂತಿ ಹಬ್ಬಕ್ಕೆ ಮಹೇಶ್ ಬಾಬು ಅವರ 'ಸರ್ಕಾರು ವಾರಿ ಪಾಟ', ಪ್ರಭಾಸ್ 'ರಾಧೆ ಶ್ಯಾಮ್' ಬರ್ತಿದೆ. ಈಗಾಗಲೇ ಈ ಎರಡು ಸಿನಿಮಾಗಳು ದಿನಾಂಕ ಘೋಷಣೆಗೆ ಮಾಡಿ ಬಾಕ್ಸ ಆಫೀಸ್ ವಾರ್ ಗೆ ಸಿದ್ಧವಾಗಿ ನಿಂತಿವೆ. ಈ ಎಲ್ಲಾ ಸಿನಿಮಾಗಳ ನಡುವೆ ಲಾಲ್ ಸಿಂಗ್ ಚಡ್ಡಾ, ಕೆಜಿಎಫ್-2 ಮತ್ತು ಪುಷ್ಪ ಯಾವಾಗ ಎಂಟ್ರಿ ಕೊಡಲಿದೆ ಎನ್ನುವುದು ಚಿತ್ರಾಭಿಮಾನಿಗಳಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

More from Filmibeat

English summary
Aamir Khan starrer Lal Singh Chadha and Yash's KGF-2 likely to release same day on Christmas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X