Don't Miss!
- News
ಬೆಂಗಳೂರು ಏರ್ಪೋರ್ಟ್ ಭದ್ರತೆಗೆ; 1,700 ಹೆಚ್ಚುವರಿ ಸಿಬ್ಬಂದಿ
- Sports
ನ್ಯೂಜಿಲೆಂಡ್ ವಿರುದ್ಧ ಗೆದ್ದು ಸರಣಿ ಸಮಬಲಗೊಳಿಸಿದರೂ ಅಚ್ಚರಿ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸುಶ್ಮಿತಾ ಸೇನ್, ಲಲಿತ್ ಮೋದಿ ವಯಸ್ಸಿನ ಅಂತರ ಎಷ್ಟು? ಇದೇ ವಿಚಾರಕ್ಕೆ ಟ್ರೋಲ್ ಆಗ್ತಿರುವ ಜೋಡಿ!
ಬಾಲಿವುಡ್ ನಟಿ ಸುಶ್ಮಿತಾ ಸೇನ್ ಹೆಸರು ಸದ್ಯ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಐಪಿಎಲ್ ಮೊದಲ ಆವೃತ್ತಿಯ ಚೇರ್ಮನ್ ಲಲಿತ್ ಮೋದಿ. ಇವರಿಬ್ಬರು ಡೇಟಿಂಗ್ ಮಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಅಧಿಕೃತವಾಗಿ ಲಲಿತ್ ಮೋದಿಯೇ ಡೇಟಿಂಗ್ ಸಮಾಚಾರ ಹಂಚಿಕೊಂಡಿದ್ದಾರೆ.
ಇನ್ನು ಇದಕ್ಕೂ ಮೊದಲು ನಟಿ ಸುಶ್ಮಿತಾ ಸೇನ್ ಇತ್ತೀಚೆಗೆ ಹೆಚ್ಚಾಗಿ ಸುದ್ದಿಯಾಗಿದ್ದು ತಮ್ಮ ವೈಯಕ್ತಿಕ ವಿಚಾರದಲ್ಲಿ. ಗೆಳೆಯನೊಂದಿಗೆ ಸುಶ್ಮಿತಾ ಸೇನ್ ಬ್ರೇಕಪ್ ಮಾಡಿಕೊಂಡಿದ್ದರು. ಈ ವಿಚಾರ ಬೆಳಕಿಗೆ ಬಂದ ನಂತ್ರ ಈ ಬಗ್ಗೆ ವಿಚಾರವಾಗಿ ಸುಶ್ಮಿತಾ ಸೇನ್ ಮುಕ್ತವಾಗಿ ಮಾತಾಡಿದ್ದರು.
ಬ್ರೇಕಪ್
ಬಳಿಕ
ಲಲಿತ್
ಮೋದಿ
ಜೊತೆ
ಸುಶ್ಮಿತಾ
ಸೇನ್
ಡೇಟಿಂಗ್:
ಮದುವೆ
ಬಗ್ಗೆ
ಹೇಳಿದ್ದೇನು?
ಈಗ ನಟಿ ಸುಶ್ಮಿತಾ ಸೇನ್ ಐಪಿಎಲ್ ಮೊದಲ ಆವೃತ್ತಿಯ ಚೇರ್ಮನ್ ಲಲಿತ್ ಮೋದಿ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಹಲ್ ಚಲ್ ಎಬ್ಬಿಸಿದೆ. ಇನ್ನು ಲಲಿತ್ ಮೋದಿ ಸುಶ್ಮಿತಾ ಸೇನ್ ಜೊತೆಗಿನ ಫೋಟೋ ಹಂಚಿಕೊಂಡು ವಿಚಾರ ರಿವೀಲ್ ಮಾಡಿದ್ದಾರೆ. ಆದರೆ ಈಗ ಇವರ ವಯಸ್ಸಿನ ವಿಚಾರವಾಗಿ ಟ್ರೋಲ್ ಆಗ್ತಿದ್ದಾರೆ.
ನಟಿ
ಕಾವ್ಯಾ
ಶಾ
ಮದುವೆಯಲ್ಲಿ
ಮಿಂಚಿದ
ಮೋಹಕ
ತಾರೆ:
ಅಪ್ಪು
ಅಭಿಮಾನಿ
ಜೊತೆ
ಸ್ಪೆಲ್ಫಿ!
|
ಟ್ವೀಟ್ ಮಾಡಿದ ಲಲಿತ್ ಮೋದಿ!
ಲಲಿತ್ ಮೋದಿ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಸುಶ್ಮಿತಾ ಸೇನ್ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ. " ಕುಟುಂಬದೊಂದಿಗೆ ಮಾಲ್ಡೀವ್ಸ್ ಹಾಗೂ ಸರ್ದೀನಿಯಾ ಟೂರ್ ಮುಗಿಸಿ ಈಗತಾನೇ ಲಂಡನ್‌ಗೆ ಮರಳಿದ್ದೇನೆ. ನನ್ನ ಅರ್ಧಾಂಗಿ ಸುಶ್ಮಿತಾ ಸೇನ್. ಕೊನೆಗೂ ನನ್ನ ಬದುಕಿನಲ್ಲಿ ಹೊಸ ಅಧ್ಯಾಯ ಶುರುವಾಗಿದೆ." ಎಂದು ಲಲಿತ್ ಮೋದಿ ನಟಿ ಸುಶ್ಮಿತಾ ಸೇನ್‌ರೊಂದಿಗೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
|
ಮದುವೆ ಅಲ್ಲ, ಜಸ್ಟ್ ಡೇಟಿಂಗ್!
ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಸುದ್ದಿ ಬಿರಿಗಾಳಿ ಎಬ್ಬಿಸುತ್ತಿದ್ದಂತೆ, ಲಲಿತ್ ಮೋದಿ ಈ ವಿಚಾರದ ಬಗ್ಗೆ ಮಯತ್ತಷ್ಟು ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಮತ್ತೊಂದು ಟ್ವೀಟ್ ಮಾಡುವ ಮೂಲಕ ಇನ್ನೂ ಮದವೆ ಆಗಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. " ಇದು ಕೇವಲ ಕ್ಲಾರಿಟಿ ನೀಡುವುದಕ್ಕಾಗಿ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದೇವೆ. ಮದುವೆ ಕೂಡ ಶೀಘ್ರದಲ್ಲಿಯೇ ನೆರೆವೇರುತ್ತದೆ." ಎಂದು ಮೋದಿ ಮತ್ತೆ ಟ್ವೀಟ್ ಮಾಡಿ ಸಮಜಾಯಿಷಿ ನೀಡಿದ್ದಾರೆ.

ಸುಶ್ಮಿತಾ 46, ಲಲಿತ್ ಮೋದಿ 56!
ಈ ವಿಚಾರ ಬಹಿರಂಗ ಆಗುತ್ತಲೇ ಈ ಜೋಡಿ ಟ್ರೋಲ್‌ಗೆ ತುತ್ತಾಗಿದ್ದಾರೆ. ಇಬ್ಬರ ವಯಸ್ಸಸಿನ ಕಾರಣಕ್ಕೆ ಟ್ರೋಲ್ ಮಾಡಲಾಗುತ್ತಿದೆ. ಅಷ್ಟಕ್ಕೂ ನಟಿ ಸುಶ್ಮಿತಾ ಸೇನ್ ವಯಸ್ಸು 46, ಹಾಗೆ ಲಲಿತ್ ಮೋದಿ ವಯಸ್ಸು 56. ಇಬ್ಬರ ನಡುವೆ ಹತ್ತು ವರ್ಷದ ವಯಸ್ಸಿನ ಅಂತರವಿದೆ. ಹತ್ತು ವರ್ಷ ವಯಸ್ಸಿನ ಅಂತರದಲ್ಲಿ ಮದುವೆ ಮದುವೆ ಆದ ಹಲವು ಜೋಡಿಗಳಿವೆ. ಆದರೆ ಇವರು ಈ ವಯಸ್ಸಿನಲ್ಲಿ ಡೇಟಿಂಗ್ ನಡೆಸಿರುವ ಕಾರಣಕ್ಕೆ ಟ್ರೋಲ್‌ಗೆ ತುತ್ತಾಗಿದ್ದಾರೆ. ಅಜ್ಜ, ಅಜ್ಜಿ ಎನ್ನುವ ಕಮೆಂಟ್‌ಗಳು ಕೂಡ ಬಂದಿವೆ.

ಸುಶ್ಮಿತಾ, ರೋಹನ್ ನಡುವೆ 15 ವರ್ಷದ ಅಂತರ!
ನಟಿ ಸುಶ್ಮಿತಾ ಸೇನ್ ಮತ್ತು ರೋಹನ್ 2018ರಿಂದ ಜೊತೆಗೆ ಇದ್ದಾರೆ. ರೋಹನ್ ಒಬ್ಬ ಮಾಡಲ್, ಸಾಕಷ್ಟು ಸೆಲೆಬ್ರೆಟಿ ವಿನ್ಯಾಸಕರ ಉಡುಪುಗಳಿಗೆ ರೋಹನ್ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಸುಶ್ಮಿತಾ ಜೊತೆಗೆ ರೋಹನ್ ಹೆಸರು 2018ರಿಂದ ಕೇಳಿ ಬರುತ್ತಿದೆ. ಸುಶ್ಮಿತಾ ಸೇನ್ ರೋಹನ್‌ಗಿಂತಲೂ ವಯಸ್ಸಿನಲ್ಲಿ 15 ವರ್ಷ ದೊಡ್ಡವರು. ಈ ಬಗ್ಗೆ ಸಾಕಷ್ಟು ಟ್ರೋಲ್ ಆಗಿದ್ದವು. ಆದರೆ ಅವರು ಮದುವೆ ಆಗುತ್ತಾರೆ ಎನ್ನಲಾಗಿತ್ತು. ಆದರೆ ಇವರ ಸಂಬಂಧ ಬ್ರೇಕಪ್‌ನಲ್ಲಿ ಕೊನೆಯಾಗಿದೆ.