For Quick Alerts
  ALLOW NOTIFICATIONS  
  For Daily Alerts

  'ಇಂದಿರಾ' ಪಾತ್ರಕ್ಕಾಗಿ ಲಾರಾ ದತ್ತಾ ಮೇಕ್ ಓವರ್ ನೋಡಿ ಗಂಡ-ಮಗಳು ಹೇಳಿದ್ದೇನು?

  |

  ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಮ್ ಟ್ರೈಲರ್ ಟ್ರೆಂಡಿಗ್‌ನಲ್ಲಿದೆ. 80ರ ದಶಕದ ಭಾರತೀಯ ಸ್ಪೈ ಏಜೆಂಟ್ ಪಾತ್ರದಲ್ಲಿ ಬಾಲಿವುಡ್ ಖಲಾಡಿ ಕುತೂಹಲ ಹೆಚ್ಚಿಸಿದ್ದು, ಇಂದಿರಾ ಗಾಂಧಿ ಪಾತ್ರದಲ್ಲಿ ಲಾರಾ ದತ್ತಾ ಗಮನ ಸೆಳೆದಿದ್ದಾರೆ.

  ಬೆಲ್ ಬಾಟಮ್ ಸಿನಿಮಾದಲ್ಲಿ ಲಾರಾ ದತ್ತಾ ಮೇಕ್ ಓವರ್ ಬಗ್ಗೆ ಹೆಚ್ಚು ಚರ್ಚೆ ಆಗ್ತಿದೆ. ಲಾರಾ ದತ್ತಾ ಥೇಟ್ ಭಾರತದ ಮಾಜಿ ಪ್ರಧಾನಿಯಂತೆ ಕಾಣಿಸ್ತಿದ್ದಾರೆ. ಆ ಪಾತ್ರಕ್ಕಾಗಿ ಅವರು ಮಾಡಿಕೊಂಡಿರುವ ಮೇಕ್ ಓವರ್ ನಿಜಕ್ಕು ಅದ್ಭುತ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  'ಬೆಲ್ ಬಾಟಮ್' ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ಮಾಡಿರೋದು ಯಾರು?'ಬೆಲ್ ಬಾಟಮ್' ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ಮಾಡಿರೋದು ಯಾರು?

  ಲಾರಾ ದತ್ತಾಗೆ ಮೇಕಪ್ ಮಾಡಿದ ಆರ್ಟಿಸ್ಟ್‌ಗೆ ಸಿನಿಮಾ ರಿಲೀಸ್ ಆಗುವುದಕ್ಕೂ ಮುಂಚೆಯೇ ರಾಷ್ಟ್ರ ಪ್ರಶಸ್ತಿ ಕೊಡಿ ಎಂದು ಕೆಲವರು ಆಗ್ರಹಿಸಿದ್ದಾರೆ. ಲಾರಾ ದತ್ತಾ ಅವರ ಇಂದಿರಾ ಗಾಂಧಿ ಪಾತ್ರಕ್ಕೆ ಸಿಕ್ಕ ಜನಮನ್ನಣೆಗೆ ಬಗ್ಗೆ ಮೊದಲ ಸಲ ಲಾರಾ ಪ್ರತಿಕ್ರಿಯೆ ನೀಡಿದ್ದಾರೆ.

  ಇಂದಿರಾ ಗಾಂಧಿ ಪಾತ್ರಕ್ಕೆ ಮೇಕ್ ಓವರ್ ಮಾಡಿಕೊಳ್ಳಲು ಮತ್ತು ಸೂಕ್ತವಾಗಿ ನಿಭಾಯಿಸಲು ಸಹಕಾರಿಯಾದ ಅಂಶದ ಬಗ್ಗೆ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

  ಇಂದಿರಾ ಗಾಂಧಿ ಮತ್ತು ಸಿನಿಮಾರಂಗ: ತೆರೆಮೇಲೆ 'ಉಕ್ಕಿನ ಮಹಿಳೆ' ಗತ್ತುಇಂದಿರಾ ಗಾಂಧಿ ಮತ್ತು ಸಿನಿಮಾರಂಗ: ತೆರೆಮೇಲೆ 'ಉಕ್ಕಿನ ಮಹಿಳೆ' ಗತ್ತು

  ಇಂದಿರಾಗೆ ಖಾಸಗಿ ಪೈಲಟ್ ಆಗಿದ್ದರು ತಂದೆ

  ಇಂದಿರಾಗೆ ಖಾಸಗಿ ಪೈಲಟ್ ಆಗಿದ್ದರು ತಂದೆ

  ಲಾರಾ ದತ್ತಾ ಅವರ ತಂದೆ ಎಲ್‌ಕೆ ದತ್ತಾ ಪೈಲಟ್ ಆಗಿದ್ದರು. ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರಿಗೆ ಖಾಸಗಿ ಪೈಲಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು ಎಂದು ಲಾರಾ ಹೇಳಿಕೊಂಡಿದ್ದಾರೆ. ಪಿಂಕ್ ವಿಲ್ಲಾ ವೆಬ್‌ಸೈಟ್ ಜೊತೆ ಈ ಬಗ್ಗೆ ಮಾತನಾಡಿರುವ ಲಾರಾ ದತ್ತಾ, ''ನಮ್ಮ ತಂದೆ ಇಂದಿರಾ ಗಾಂಧಿ ಅವರಿಗೆ ಖಾಸಗಿ ಪೈಲಟ್ ಆಗಿದ್ದರು. ಅವರ ಬಗ್ಗೆ ಚೆನ್ನಾಗಿ ತಿಳಿದಿದ್ದರು. ಅವರ ಬಗ್ಗೆ ನನಗೆ ಹಲವು ಬಾರಿ ಹೇಳಿದ್ದಾರೆ. ಅವರ ಕಥೆಗಳನ್ನು ಕೇಳಿ ಬೆಳೆದಿದ್ದೇನೆ. ಹಾಗಾಗಿ, ಇಂದಿರಾ ಗಾಂಧಿ ಜೊತೆ ನಾನು ಪರೋಕ್ಷವಾಗಿ ತಿಳಿದಿದ್ದೆ. ಇದು ನನಗೆ ಸಹಕಾರಿಯಾಗಿದೆ'' ಎಂದು ತಿಳಿಸಿದ್ದಾರೆ.

  ಮೇಕ್ ಓವರ್ ನೋಡಿ ಪತಿ ಶಾಕ್

  ಮೇಕ್ ಓವರ್ ನೋಡಿ ಪತಿ ಶಾಕ್

  ಇಂದಿರಾ ಗಾಂಧಿ ಅವತಾರದಲ್ಲಿ ನನ್ನ ಮೇಕ್ ಓವರ್ ನೋಡಿ ಪತಿ ಮಹೇಶ್ ಭೂಪತಿ ಮತ್ತು ಮಗಳು ಅಚ್ಚರಿಯಾಗಿದ್ದರು ಎಂದು ಲಾರಾ ದತ್ತಾ ವಿವರಿಸಿದ್ದಾರೆ. ಲಾಕ್‌ಡೌನ್ ಇದ್ದ ಕಾರಣ ಇಂದಿರಾ ಗಾಂಧಿ ಪಾತ್ರಕ್ಕಾಗಿ ಮನೆಯಿಂದಲೇ ಲುಕ್ ಟೆಸ್ಟ್ ಮಾಡಲಾಯಿತು. ಈ ವೇಳೆ ನನ್ನ ಮೇಕ್ ಓವರ್‌ ಅನ್ನು ಪತಿ ಮತ್ತು ಮಗಳು ಬಹಳ ಹತ್ತಿರದಿಂದ ನೋಡಿ ಅಚ್ಚರಿಯಾಗಿದ್ದರು ಎಂದು ಲಾರಾ ಹೇಳಿದ್ದಾರೆ.

  ಮಗಳು ಭಯಗೊಂಡಿದ್ದಳು

  ಮಗಳು ಭಯಗೊಂಡಿದ್ದಳು

  ಝೂಮ್ ಟಿವಿ ಸಂದರ್ಶನದಲ್ಲಿ ಹೇಳಿರುವಂತೆ, ಲಾರಾ ದತ್ತಾ ಅವರ ಮೇಕ್ ಓವರ್ ನೋಡಿ ಮಗಳು ಭಯಗೊಂಡಿದ್ದರಂತೆ. 'ನನ್ನ ಮಗಳು ಕುತೂಹಲದಿಂದ ಶಾಕ್ ಆಗಿದ್ದಳು. ಜೀವಂತವಾಗಿ ಇಂದಿರಾ ಗಾಂಧಿ ಬಂದ್ರಾ ಎಂದು ದಿಗ್ಬ್ರಮೆಗೊಂಡ ನೋಡಿದಳು. ನನ್ನ ಮುಖದಲ್ಲಿದ್ದ ಸಿಲಿಕಾನ್ ನೋಡಿ ''ಅಮ್ಮ ಅವರು ನಿನ್ನನ್ನು ಸಾಯಿಸ್ತಾರೆ ಅಷ್ಟೇ, ನಿನಗೆ ಉಸಿರಾಡುವುದಕ್ಕೂ ಕಷ್ಟ ಆಗ್ತಿದೆ'' ಎಂದಳು. ಆದರೂ ಕುತೂಹಲದಿಂದ ಹತ್ತಿರ ಬಂದು, ಅಮ್ಮ ನಿನ್ನ ಮೂಗು ಮುಟ್ಟುತ್ತೇನೆ, ಹುಬ್ಬುಗಳನ್ನು ಮುಟ್ಟಬಹುದೇ' ಕೇಳಿದಳು' ಎಂದು ವಿವರಿಸಿದರು. ಮಹೇಶ್ ಸಹ ಲುಕ್ ನೋಡಿ ಅಚ್ಚರಿಯಾದರು.

  ಆಗಸ್ಟ್ 19ಕ್ಕೆ 'ಬೆಲ್ ಬಾಟಮ್' ಬಿಡುಗಡೆ

  ಆಗಸ್ಟ್ 19ಕ್ಕೆ 'ಬೆಲ್ ಬಾಟಮ್' ಬಿಡುಗಡೆ

  ಟ್ರೈಲರ್ ಮೂಲಕ ಪ್ರೇಕ್ಷಕರಲ್ಲಿ ಥ್ರಿಲ್ ಹೆಚ್ಚಿಸಿರುವ ಬೆಲ್ ಬಾಟಮ್ ಸಿನಿಮಾ ಆಗಸ್ಟ್ 19 ರಂದು ವರ್ಲ್ಡ್‌ವೈಡ್ ರಿಲೀಸ್ ಆಗುತ್ತಿದೆ. ರಂಜಿತ್ ಎಂ ತಿವಾರಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ವಾಣಿ ಕಪೂರ್, ಲಾರಾ ದತ್ತಾ ಹಾಗೂ ಹುಮಾ ಖುರೇಶಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Bollywood Actress Lara Dutta has speaks about how she prepared to play ex Prime minister Indira Gandhi role in Bell Bottom film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X