For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆಸ್ಪತ್ರೆಗೆ ದಾಖಲು

  |

  ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎದೆ ಭಾಗದಲ್ಲಿ ಸೋಂಕು ಇರುವ ಕಾರಣ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

  ಸೋಮವಾರ ಮಧ್ಯರಾತ್ರಿ 2 ಗಂಟೆಗೆ ಲತಾ ಮಂಗೇಶ್ಕರ್ ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆ ಸಮಯದಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಇತಂತೆ. ಹೀಗಾಗಿ ಐ ಸಿ ಯು ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

  ಚಿಕಿತ್ಸೆ ಪಡೆದು, ಲತಾ ಮಂಗೇಶ್ಕರ್ ಮನೆಗೆ ಮರಳಿದ್ದಾರೆ ಎಂದು ಎ ಎನ್ ಐ ಸುದ್ದಿ ಪ್ರಕಟಿಸಿದೆ. ಆದರೆ, ಅಧಿಕೃತವಾಗಿ ಕುಟುಂಬ ಅಥವಾ ಆಸ್ಪತ್ರೆ ಮೂಲಗಳು ತಿಳಿಸಿಲ್ಲ. ಲತಾ ಮಂಗೇಶ್ಕರ್ ಕಳೆದ ಸಪ್ಟೆಂಬರ್ 28ಕ್ಕೆ ತಮ್ಮ 90ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದರು.

  ಲತಾ ಮಂಗೇಶ್ಕರ್ ಸಾವಿರಾರೂ ಹಾಡುಗಳನ್ನು ಹಾಡಿದ್ದಾರೆ. ಭಾರತ ಚಿತ್ರರಂಗ ಕಂಡ ಅದ್ಭುತ ಗಾಯಕಿ ಇವರಾಗಿದ್ದಾರೆ. 36 ಭಾಷೆಗಳ ಹಾಡಿಗಳಿಗೆ ಧ್ವನಿ ನೀಡಿದ್ದಾರೆ. ಮಾಧುರ್ಯದ ರಾಣಿಯ ಸಂಗೀತ ಲೋಕದ ಸಾಧನೆಗೆ
  ಭಾರತ ರತ್ನ ನೀಡಿ ಗೌರವಿಸಲಾಗಿದೆ.

  ಭಾರತ ರತ್ನ, ದಾದಾ ಸಾಹೇಬ್ ಫಾಲ್ಕೆ, ಮೂರು ರಾಷ್ಟ್ರ ಪ್ರಶಸ್ತಿ ಸೇರಿದಂತೆ ನೂರಾರೂ ಪ್ರತಿಷ್ಟಿತ ಪ್ರಶಸ್ತಿಗಳು ಲತಾ ಮಂಗೇಶ್ಕರ್ ರಿಗೆ ಸಿಕ್ಕಿವೆ. ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದರಿಂದ 1974 ರಲ್ಲಿ ಗಿನ್ನಿಸ್ ದಾಖಲೆಗೆ ಇವರ ಹೆಸರು ಸೇರಿಕೊಂಡಿತು.

  English summary
  Singer Lata Mangeshkar admitted to breach candy hospital Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X