ಶ್ರೀದೇವಿ 3ನೇ ಪುತ್ರಿ ಪ್ರಭಾಸ್‌ಗೆ ನಾಯಕಿ? ಪಾಕಿಸ್ತಾನದಲ್ಲಿ ನೆಲೆಸಿರುವ ಆಕೆ ಯಾರು ಗೊತ್ತೇ?

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್‌ನಲ್ಲಿ ಲೇಡಿ ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದ ನಟಿ ಶ್ರೀದೇವಿ. ದುರಾದೃಷ್ಟವಶಾತ್ ಈ ನಟಿ ಇಂದು ನಮ್ಮೊಂದಿಗೆ ಇಲ್ಲ. ಆದರೆ, ಇವರ ಸಿನಿಮಾಗಳನ್ನು ಮರೆಯೋಕೆ ಸಾಧ್ಯವೇ..? ಈಗ ಶ್ರೀದೇವಿಯ ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರೂ ಹೆಣ್ಣು ಮಕ್ಕಳೂ ಚಿತ್ರರಂಗಕ್ಕೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲಿ ಜಾಹ್ನವಿ ಕಪೂರ್ ಸಿನಿಮಾ ಪ್ರೇಮಿಗಳ ಫೇವರಿಟ್ ಆಗಿ ಹೊರ ಹೊಮ್ಮಿದ್ದಾರೆ.

ಇತ್ತೀಚೆಗೆ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಜಾಹ್ನವಿ ಕಪೂರ್ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಿದ್ದಾರೆ. ಎರಡನೇ ಪುತ್ರಿ ಖುಷಿ ಕಪೂರ್ ಕೂಡ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇವರಿಬ್ಬರನ್ನು ಇನ್ನೊಬ್ಬ ಪುತ್ರಿ ಯಾರು? ಆಕೆ ಪಾಕಿಸ್ತಾನದಲ್ಲಿ ಇರುವುದು ಏಕೆ? ಅನ್ನುವ ಗೊಂದಲ ಸಹಜ. ದಿವಂಗತ ನಟಿ ಶ್ರೀದೇವಿಗೆ ವಾಸ್ತವದಲ್ಲಿ ಇರೋದು ಇಬ್ಬರು ಪುತ್ರಿಯರೇ. ಆದರೆ, ಮೂರನೇ ಪುತ್ರಿ ನಿಜಕ್ಕೂ ಸ್ಪೆಷಲ್.

pakistani actress Sajal ali in prabhas movie

ಹೌದು, ಶ್ರೀದೇವಿಯ ಮೂರನೇ ಮಗಳು ಅಂತಲೇ ಜನಪ್ರಿಯವಾಗಿರುವ ನಟಿಯೊಬ್ಬರು ಇದ್ದಾರೆ. ಆಕೆ ಭಾರತದ ನಟಿಯಲ್ಲ. ಆದರೆ, ಇಲ್ಲಿನ ಹಲವು ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದಾರೆ. ಇದೇ ನಟೀಗ ಮತ್ತೆ ಭಾರತಕ್ಕೆ ಮರಳುತ್ತಿದ್ದು, ಪ್ರಭಾಸ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಷ್ಟಕ್ಕೂ ಶ್ರೀದೇವಿಯ ಮೂರನೇ ಪುತ್ರಿ ಯಾರು? ತಿಳಿಯಲು ಮುಂದೆ ಓದಿ..

2017ರಲ್ಲಿ ತೆರೆಕಂಡಿದ್ದ ಶ್ರೀದೇವಿಯ ಸಿನಿಮಾದಲ್ಲಿ ಈ ಪಾಕಿಸ್ತಾನದ ನಟಿ ಕಾಣಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ಶ್ರೀದೇವಿಯ ಮಗಳ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಆಕೆಯ ಹೆಸರು ಸಜಲ್ ಅಲಿ. ಅಷ್ಟಕ್ಕೂ ಸ್ವತ: ಶ್ರೀದೇವಿಯೇ ಈಕೆಯನ್ನು ತನ್ನ ಮೂರನೇ ಮಗಳು ಎಂದು ಹೇಳಿಕೊಂಡಿದ್ದರು. ಈ ನಟಿ ಶ್ರೀದೇವಿಯೊಂದಿಗೆ 2017ರಲ್ಲಿ ತೆರೆಕಂಡಿದ್ದ 'ಮಾಮ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಆ ವೇಳೆ ಇಬ್ಬರ ನಡುವೆ ಒಂದೊಳ್ಳೆ ಬಾಂಧವ್ಯ ಬೆಳೆದಿತ್ತು.

ಶ್ರೀದೇವಿ ಸಂದರ್ಶನವೊಂದರಲ್ಲಿ "ನನಗೆ ಇನ್ನೊಬ್ಬ ಮಗಳು ಇದ್ದಾಳೆ" ಎಂದು ಪಾಕಿಸ್ತಾನದ ಸಜಲ್ ಅಲಿ ಬಗ್ಗೆ ಹೇಳಿದ್ದರು. 2018ರಲ್ಲಿ ಶ್ರೀದೇವಿ ನಿಧನರಾದಾಗ ಪಾಕಿಸ್ತಾನದ ಈ ನಟಿ ಭಾವಕರಾಗಿದ್ದರು. "ನಾನು ಈ ವಿಷಯ ಕೇಳಿ ಶಾಕ್ ಆಗಿದೆ. ನಾನು ಮತ್ತೆ ನನ್ನ ತಾಯಿಯನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ" ಎಂದು ಹೇಳಿದ್ದರು. 2017ರಲ್ಲಿ ಸಜಲ್ ಅಲಿಯ ತಾಯಿ ಕೂಡ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು.

ಸಜಲ್ ಅಲಿ ಪಾಕಿಸ್ತಾನದಲ್ಲಿ ಜನಪ್ರಿಯ ನಟಿ. ಅಲ್ಲಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಜಿಂದಗಿ ಕಿತನಿ ಹಸೀನ್ ಹೇ', 'ಖೇಲ್ ಖೇಲ್ ಮೇ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೇ ಹಿಂದಿ ಸಿನಿಮಾ 'ಮಾಮ್'ನಲ್ಲಿ ನಟಿಸಿದ್ದಾರೆ. ಸಿನಿಮಾ ಅಷ್ಟೇ ಅಲ್ಲ. ಪಾಕಿಸ್ತಾನದ ಹಲವು ಟಿವಿ ಸೀರಿಯಲ್‌ನಲ್ಲಿಯೂ ಸಜಲ್ ಅಲಿ ಕಾಣಿಸಿಕೊಂಡಿದ್ದು, ಅಲ್ಲಿನ ಜನಪ್ರಿಯ ನಟಿಯರ ಸಾಲಿನಲ್ಲಿ ಸೇರಿಕೊಂಡಿದ್ದಾರೆ.

ಇದೇ ನಟಿಯೀಗ ಮತ್ತೆ ಭಾರತಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ನಟಿಸುತ್ತಿರುವ 'ಫೌಜಿ' ಸಿನಿಮಾದಲ್ಲಿ ಸಜಲ್ ಅಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಈ ಬಗ್ಗೆ ಅಧಿಕೃತ ಸುದ್ದಿ ಹೊರಬೀಳಬೇಕಿದೆ. ಕಳೆದ ಕೆಲವು ದಿನಗಳಿಂದ ಈ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ.

More from Filmibeat

Read more about: sridevi bollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X