For Quick Alerts
    ALLOW NOTIFICATIONS  
    For Daily Alerts

    ದಿಲೀಪ್ ಕುಮಾರ್ ಪತ್ನಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದ ಮೋದಿ

    |

    ಬಾಲಿವುಡ್ ಹಿರಿಯ ನಟ, ದಂತಕತೆ ದಿಲೀಪ್ ಕುಮಾರ್ ನಿನ್ನೆ (ಜುಲೈ 07) ನಿಧನ ಹೊಂದಿದ್ದಾರೆ. ದಿಲೀಪ್‌ ನಿಧನಕ್ಕೆ ಸಿನಿಮಾ ಗಣ್ಯರು ಮಾತ್ರವೇ ಅಲ್ಲದೆ ರಾಜಕಾರಣಿಗಳು ಸಹ ಸಂತಾಪ ಸೂಚಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್ ಮಾಡಿ, ''ದಿಲೀಪ್ ಕುಮಾರ್ ಸಿನಿಮಾರಂಗದ ದಂತಕತೆಯಾಗಿದ್ದರು. ಸಾಟಿಯಿಲ್ಲದ ಪ್ರತಿಭೆ ಅವರದ್ದು. ಅದರಿಂದಾಗಿಯೇ ವಿವಿಧ ವಯೋಮಾನದ ಪ್ರೇಕ್ಷಕರು ಅವರತ್ತ ಸೆಳೆಯಲ್ಪಟ್ಟಿದ್ದರು. ದಿಲೀಪ್ ಕುಮಾರ್ ಅಗಲಿಕೆ ಸಾಂಸ್ಕೃತಿಕ ಜಗತ್ತಿಗೆ ಆದ ದೊಡ್ಡ ನಷ್ಟ. ದಿಲೀಪ್ ಅವರ ಕುಟುಂಬ, ಸ್ನೇಹಿತರು, ಹಿತೈಷಿಗಳು ಹಾಗೂ ಅವರ ಅಸಂಖ್ಯ ಅಭಿಮಾನಿಗಳಿಗೆ ನನ್ನ ಸಂತಾಪಗಳು'' ಎಂದಿದ್ದರು.

    ಮೋದಿ ಅವರು ಟ್ವೀಟ್ ಮಾಡುವ ಮುನ್ನವೇ ದಿಲೀಪ್ ಕುಮಾರ್ ಪತ್ನಿ ಸಾಯಿರಾ ಬಾನು ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಈ ಬಗ್ಗೆ ಸಾಯಿರಾ ಬಾನು ಇಂದು ಹೇಳಿಕೊಂಡಿದ್ದಾರೆ.

    ದಿಲೀಪ್ ಕುಮಾರ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿರುವ ಸಾಯಿರಾ ಬಾನು, ''ಬೆಳಿಗ್ಗೆಯೇ ಕರೆ ಮಾಡಿ ಹೇಳಿದ ಸಾಂತ್ವನದ ನುಡಿಗಳಿಗೆ ಗೌರವಾನ್ವಿತ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು'' ಎಂದಿದ್ದಾರೆ.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಸಾಯಿರಾ ಬಾನು ಅವರಿಗೆ ಸಂತಾಪ ಸೂಚಕ ಪತ್ರವನ್ನು ಬರೆದು ದಿಲೀಪ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಸಹ, ದಿಲೀಪ್ ಕುಮಾರ್ ಜೊತೆಗಿನ ಆತ್ಮೀಯ ಕ್ಷಣಗಳ ಚಿತ್ರಗಳನ್ನು ಹಂಚಿಕೊಂಡು ಭಾರತದ ಜಾತ್ಯಾತೀತ ಸಂಸ್ಕೃತಿಯ ರೂಪಕದಂತೆ ಇದ್ದರು'' ಎಂದಿದ್ದಾರೆ.

    Rockline Venkatesh : ಅಂಬರೀಶ್ ಬಗ್ಗೆ ಮಾತನಾಡೋದಕ್ಕೆ ಅವರು ಯಾರು? | Filmibeat Kannada

    ದಿಲೀಪ್ ಕುಮಾರ್ ಅವರು ಭಾರತ ಸಿನಿಮಾರಂಗದ ಮಿನುಗು ತಾರೆಯಾಗಿದ್ದವು. 1940 ರ ದಶಕದಿಂದಲ್ಲೇ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ದಿಲೀಪ್ ಕುಮಾರ್ ಭಾರತದಲ್ಲಿ ಸಿನಿಮಾ ಉದ್ಯಮ ಗಟ್ಟಿಯಾಗಿ ನೆಲೆ ನಿಲ್ಲಲು ಕಾರಣೀಭೂತರಾದವರಲ್ಲಿ ಒಬ್ಬರು.

    English summary
    Dilip Kumar's wife Saira Banu thanked prime minister Narendra Modi for his early morning call and condolence.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X