For Quick Alerts
  ALLOW NOTIFICATIONS  
  For Daily Alerts

  ಇದೇ ವರ್ಷವೇ ನಡೆದಿತ್ತು ಸಲ್ಮಾನ್ ಕೊಲೆ ಯತ್ನ!

  |

  ಸಲ್ಮಾನ್ ಖಾನ್‌ಗೆ ಬಂದಿದ್ದ ಜೀವ ಬೆದರಿಕೆ ಪತ್ರದ ತನಿಖೆಯಿಂದ ಹಲವು ಆಘಾತಕಾರಿ ಅಂಶಗಳು ಹೊರಗೆ ಬರುತ್ತಿವೆ.

  ಸಲ್ಮಾನ್ ಖಾನ್‌ ಗೆ ಬಂದಿದ್ದ ಬೆದರಿಕೆ ಪತ್ರದ ಕುರಿತು ತನಿಖೆ ನಡೆಸಿದ ಪೊಲೀಸರು, ಸಲ್ಮಾನ್ ಖಾನ್ ಅನ್ನು ಕೊಲ್ಲವುದಾಗಿ ಈ ಹಿಂದೆಯೇ ಬಹಿರಂಗ ಬೆದರಿಕೆ ಹಾಕಿದ್ದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ವಿಚಾರಣೆ ನಡೆಸಿದ್ದು, ಆತನಿಂದ ಮತ್ತೊಂದು ಆಘಾತಕಾರಿ ವಿಷಯ ಬಹಿರಂಗಗೊಂಡಿದೆ.

  ಈ ಹಿಂದೆ ಹಲವು ಬಾರಿ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯತ್ನಿಸಿದ್ದಾಗಿ ಈಗಾಗಲೇ ಪೊಲೀಸರ ಬಳಿ ಹೇಳಿರುವ ಲಾರೆನ್ಸ್ ಬಿಶ್ಣೋಯಿ, ಇದೀಗ ಈ ವರ್ಷವೇ ಸಲ್ಮಾನ್ ಖಾನ್ ಅನ್ನು ಕೊಲ್ಲುವ ಯತ್ನ ಮಾಡಿದ್ದಾಗಿಯೂ ಒಪ್ಪಿಕೊಂಡಿದ್ದಾನೆ.

  ಲಾರೆನ್ಸ್ ಬಿಶ್ಣೋಯಿ ನೇಮಿಸಿದ್ದ ಕೆಲವರು ಸಲ್ಮಾನ್ ಖಾನ್‌ರ ಪನ್ವೇಲ್‌ನ ಫಾರ್ಮ್‌ ಹೌಸ್‌ ಬಳಿ ಹಲವು ಬಾರಿ ಗಸ್ತು ತಿರುಗಿದ್ದರಂತೆ. ಸಲ್ಮಾನ್ ಖಾನ್ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಆತನ ಫಾರ್ಮ್‌ ಹೌಸ್‌ನ ಸೆಕ್ಯುರಿಟಿಯವರೊಟ್ಟಿಗೆ ಸಹ ಗೆಳೆತನ ಬೆಳೆಸಿದ್ದರಂತೆ ಲಾರೆನ್ಸ್ ಬಿಶ್ಣೋಯಿ ನೇಮಿಸಿದ್ದ ಕೆಲ ಗೂಂಡಾಗಳು.

  ಸಲ್ಮಾನ್ ಖಾನ್ ರ ಫಾರ್ಮ್‌ ಹೌಸ್‌ಗೆ ಹೋಗುವ ದಾರಿಯಲ್ಲಿ ಸುಮಾರು 25 ಕಿ.ಮೀ ದೂರ ಅವರ ಕಾರು ನಿಧಾನಕ್ಕೆ ಚಲುಸುವುದನ್ನು ಗುರುತಿಸಿದ್ದ ಲಾರೆನ್ಸ್ ಗ್ಯಾಂಗ್‌ನವರು ಕಾರನ್ನು ಅಟ್ಯಾಕ್ ಮಾಡಲು ಕೆಲವು ಸ್ಥಳಗಳನ್ನು ಸಹ ಗುರುತಿಸಿದ್ದರಂತೆ. ಸಲ್ಮಾನ್ ಖಾನ್‌ ಹತ್ಯೆಗಾಗಿ ನಾಡ ಪಿಸ್ತೂಲುಗಳನ್ನು ಸಹ ಖರೀದಿಸಿದ್ದರಂತೆ. ಆದರೆ ಕಾರಣಾಂತರಗಳಿಂದ ಸಲ್ಮಾನ್ ಅನ್ನು ಕೊಲ್ಲುವ ಯೋಜನೆ ಸಫಲವಾಗಿಲ್ಲ. ಗಾಯಕ ಸಿಧು ಮೂಸೆವಾಲಾ ಅನ್ನು ಹತ್ಯೆ ಮಾಡುವ ಮುನ್ನವೇ ಸಲ್ಮಾನ್ ಖಾನ್ ಹತ್ಯೆಗೆ ಯತ್ನಿಸಲಾಗಿತ್ತಂತೆ.

  ಸಲ್ಮಾನ್ ಖಾನ್ ಅನ್ನು ಹತ್ಯೆ ಮಾಡಲು ಲಾರೆನ್ಸ್ ಬಿಶ್ಣೋಯಿ ಗ್ಯಾಂಗ್‌ನವರು ಹಲವು ಬಾರಿ ಯತ್ನಿಸಿದ್ದ ವಿಷಯ ಇದೀಗ ಬಹಿರಂಗವಾಗಿದೆ. ಸಲ್ಮಾನ್ ಖಾನ್ ಹತ್ಯೆಗೆ ಲಕ್ಷಾಂತರ ಹಣ ತೆತ್ತು ದುಬಾರಿ ಬಂದೂಕನ್ನು ಸಹ ಲಾರೆನ್ಸ್ ಬಿಶ್ಣೋಯಿ ಗ್ಯಾಂಗ್ ಖರೀದಿಸಿತ್ತು. ಆದರೆ ಬೇರೊಂದು ಪ್ರಕರಣದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಆ ಬಂದೂಕು ಪೊಲೀಸರ ವಶವಾಗಿತ್ತು.

  ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಬಂದ ನಂತರ ಅವರ ಬಂದೋಬಸ್ತ್‌ ಅನ್ನು ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ ಸಹ ಬಹಿರಂಗ ಸಭೆಗಳಲ್ಲಿ ಕಾಣಿಸಿಕೊಳ್ಳುವುದನ್ನು ಬಹಳ ಕಡಿಮೆ ಮಾಡಿದ್ದಾರೆ.

  English summary
  Lawrence Bishnoi's gang tried to kill Salman Khan in this year only. But some how they did not attack on Salman for various reasons.
  Friday, September 16, 2022, 22:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X