ಅಬ್ಬಬ್ಬಾ ಅಕ್ಷಯ್ : ಕಾಂಚನಾ ಗೆಟಪ್ ನಲ್ಲಿ 'ಮಿಷನ್ ಮಂಗಲ್' ಹೀರೋ

ಕೆಂಪು ಸೀರೆ, ಕೆಂಪು ಬಳೆ, ಹಣೆಗೆ ದೊಡ್ಡದಾದ ಕೆಂಪು ಕುಂಕುಮ, ಮುಖದಲ್ಲಿ ವೈರಿಯನ್ನು ಸೀಳಿ ಬಿಡುವ ಸೇಡು ಇದು ನಟ ಅಕ್ಷಯ್ ಕುಮಾರ್ ಮುಂದಿನ ಸಿನಿಮಾದ ಲುಕ್.

ಅಕ್ಷಯ್ ಕುಮಾರ್ ಒಂದರ ನಂತರ ಒಂದು ವಿಭಿನ್ನ ಪಾತ್ರಗಳನ್ನು ಮಾಡುತ್ತಿದ್ದಾರೆ. ಈಗ ಮತ್ತೊಂದು ಸವಾಲಿನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಮುಂದಿನ ಸಿನಿಮಾದ ಫೋಟೋವನ್ನು ಹಂಚಿಕೊಂಡಿದ್ದಾರೆ.

ತಮಿಳಿನ 'ಕಾಂಚನಾ' (ಮುನಿ 2) ಸಿನಿಮಾ ಇದೀಗ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಈ ಸಿನಿಮಾದ ನಾಯಕನಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನಲ್ಲಿ ರಾಘವ ಲಾರೆನ್ಸ್ ಈ ಪಾತ್ರವನ್ನು ನಿರ್ವಹಿಸಿದ್ದರು.

Laxmmi Bomb Movie First Look Out

ಕನ್ನಡದಲ್ಲಿಯೂ ಈ ಸಿನಿಮಾ ಈಗಾಗಲೇ ರಿಮೇಕ್ ಆಗಿದ್ದು, ಉಪೇಂದ್ರ ಹಾಗೂ ಸಾಯಿ ಕುಮಾರ್ ನಟಿಸಿದ್ದರು. ಕಾಲಿವುಡ್, ಸ್ಯಾಂಡಲ್ ವುಡ್ ನಂತರ ಈಗ ಬಾಲಿವುಡ್ ನಲ್ಲಿ ಕಾಂಚನಾ ಅಬ್ಬರಿಸಲು ಸಿದ್ಧವಾಗುತ್ತಿದ್ದಾಳೆ. ಹಿಂದಿಯಲ್ಲಿ ಈ ಸಿನಿಮಾವನ್ನು ರಾಘವ ಲಾರೆನ್ಸ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾಗೆ 'ಲಕ್ಷ್ಮಿ ಬಾಂಬ್' ಎಂದು ಶೀರ್ಷಿಕೆ ಇಡಲಾಗಿದೆ. ನವರಾತ್ರಿ ವಿಶೇಷವಾಗಿ ತಮ್ಮ ಲಕ್ಷ್ಮಿ ವೇಷದ ಫೋಟೋ ಹಂಚಿಕೊಂಡಿರುವ ಅಕ್ಷಯ್ ಕುಮಾರ್ ಈ ಬಗ್ಗೆ ಬರೆದುಕೊಂಡಿದ್ದಾರೆ. ಈ ಪಾತ್ರದ ಬಗ್ಗೆ ಅಕ್ಷಯ್ ಉತ್ಸುಕ ಹಾಗೂ ಭಯ ಹೊಂದಿದ್ದಾರಂತೆ. ಜೀವನ ನಮ್ಮ ಕಂಫರ್ಟ್ ಜೋನ್ ನಿಂದ ಆಚೆ ಬರುವುದು ಎಂದು ಈ ಪ್ರಯೋಗವನ್ನು ವಿವರಿಸಿದ್ದಾರೆ.

ಜೂನ್ 5, 2020 ರಲ್ಲಿ 'ಲಕ್ಷ್ಮಿ ಬಾಂಬ್' ಸಿನಿಮಾ ಬಿಡುಗಡೆ ಆಗುತ್ತಿದೆ. ತಮಿಳು ಮತ್ತು ಕನ್ನಡದಲ್ಲಿ ಹಿಟ್ ಆದ ಈ ಸಿನಿಮಾ ಹಿಂದಿಯಲ್ಲಿ ಏನಾಗುತ್ತದೆ ಎನ್ನುವ ಕುತೂಹಲ ಇದೆ.

More from Filmibeat

English summary
Akshay Kumar's Laxmmi Bomb movie first look out. The movie is a remake of 'Muni 2 Kanchana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X