ಅಕ್ಷಯ್ ಕುಮಾರ್ ನಟನೆಯ 'ಲಕ್ಷ್ಮಿ ಬಾಂಬ್' ಟ್ರೈಲರ್ ಬಿಡುಗಡೆ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮಿ ಬಾಂಬ್ ಟ್ರೈಲರ್ ಬಿಡುಗಡೆಯಾಗಿದ್ದು, ಬಿಟೌನ್ ಗಲ್ಲಿಯಲ್ಲಿ ಸಖತ್ ಸದ್ದು ಮಾಡ್ತಿದೆ.
3 ನಿಮಿಷ 40 ಸೆಕೆಂಡ್‌ನ ಟ್ರೈಲರ್ ಭರಪೂರ ಮನರಂಜನೆಯಿಂದ ಕೂಡಿದ್ದು, ಫ್ಯಾಮಿಲಿ ಆಡಿಯೆನ್ಸ್ ಸಖತ್ ಎಂಜಾಯ್ ಮಾಡುವ ನಿರೀಕ್ಷೆ ಹುಟ್ಟಿಸಿದೆ.
ಅಂದ್ಹಾಗೆ, ಲಕ್ಷ್ಮಿ ಬಾಂಬ್ ತಮಿಳಿನ ಕಾಂಚನಾ ಚಿತ್ರದ ರೀಮೇಕ್. ರಾಘವ ಲಾರೆನ್ಸ್ ನಟಿಸಿ, ನಿರ್ದೇಶಿಸಿದ್ದ ಈ ಚಿತ್ರವನ್ನು ಯಥಾವತ್ತಾಗಿ ಹಿಂದಿಗೆ ತರಲಾಗಿದೆ. ವಿಶೇಷ ಅಂದ್ರೆ ಹಿಂದಿಯಲ್ಲಿ ರಾಘವ ಲಾರೆನ್ಸ್ ಅವರೇ ಆಕ್ಷನ್ ಕಟ್ ಹೇಳಿದ್ದಾರೆ.

ಲಾರೆನ್ಸ್ ಮಾಡಿದ್ದ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ಬೇಜಾರಿನಲ್ಲಿದ್ದ ಜನರಿಗೆ ಲಕ್ಷ್ಮಿ ಬಾಂಬ್ ನಕ್ಕು ನಗಿಸಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ನವೆಂಬರ್ 9 ರಂದು ಲಕ್ಷ್ಮಿ ಬಾಂಬ್ ಸಿನಿಮಾ ತೆರೆಕಾಣಲಿದೆ.
Recommended Video
ಮೇಕಪ್ ಇಲ್ಲದೆ ಬಂದು ಒಂದೊಳ್ಳೆ ಸಂದೇಶ ಕೊಟ್ಟ Madhubala | Filmibeat Kannada
More from Filmibeat
English summary
Laxmmi Bomb trailer: Akshay Kumar, Kiara Advani starrer horror comedy in remake of Kanchana 2


Click it and Unblock the Notifications











