ತಂದೆ-ತಾಯಿಯ ಜಾಡು ಹಿಡಿದು ಬಣ್ಣದ ಲೋಕಕ್ಕೆ ಬಂದ ರಿತೇಶ್ ದೇಶಮುಖ್-ಜೆನಿಲಿಯಾ ಮಗ ; ಪಾತ್ರ ಯಾವುದು ?

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಆದರೆ, ಹೀಗೆ ಚಿತ್ರರಂಗಕ್ಕೆ ಬರುವ ಎಲ್ಲರಿಗೆ ಇಲ್ಲಿ ಗೆಲುವು ಸಿಗುವುದಿಲ್ಲ. ತೀರಾ ಅಪರೂಪಕ್ಕೆ ಎಂಬಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಗೆಲ್ಲುತ್ತಾರೆ. ಮಿಕ್ಕಂತೆ ಕೆಲವರು ಎಡವುತ್ತಾರೆ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾರೆ.

ಇನ್ನೂ ಕೆಲವರು ಬಂದ ದಾರಿಗೆ ಸುಂಕ ಇಲ್ಲ ಎಂದು ಮನೆಗೆ ಮರಳುತ್ತಾರೆ. ಮತ್ತೂ ಕೆಲವರು ಆಗಿದ್ದಾಗಲಿ ಎಂದು ತಮ್ಮ ವಂಶದ ಕುಡಿಯನ್ನು ಚಿತ್ರರಂಗಕ್ಕೆ ಕರೆತರುತ್ತಾರೆ. ಈ ವರ್ಷ ಕೂಡ ಬಾಲಿವುಡ್‌ ಇದೆಲ್ಲದರಿಂದ ಹೊರತಾಗಿಲ್ಲ.

legacy-in-making-rahyl-deshmukh-debuts-in-riteish-and-genelia-s-epic-raja-shivaji

ಹೌದು, ರಿತೇಶ್ ದೇಶಮುಖ್ ಕೇವಲ ಅತ್ಯುತ್ತಮ ನಾಯಕ ಮಾತ್ರ ಅಲ್ಲ. ನಿರ್ದೇಶಕ ಕೂಡ ಹೌದು.‌ನಿರ್ಮಾಪಕ ಕೂಡ ಹೌದು. ಈಗಾಗಲೇ "ವೇಡ್" ಎಂಬ ಬ್ಲಾಕ್ ಬಸ್ಟರ್ ಚಿತ್ರವನ್ನು ತಮ್ಮ ಪತ್ನಿ ಜೊತೆಗೂಡಿ ರಿತೇಶ್ ದೇಶಮುಖ್ ಮರಾಠಿ ಚಿತ್ರರಂಗಕ್ಕೆ ನೀಡಿದ್ದಾರೆ. ಇಂಥಾ ರಿತೇಶ್ ದೇಶಮುಖ್ ಸದ್ಯ ಮತ್ತೊಂದು ಚಿತ್ರ ನಿರ್ದೇಶಿಸಿದ್ದಾರೆ. ಆ ಚಿತ್ರದ ಹೆಸರು ''ರಾಜಾ ಶಿವಾಜಿ''.

ಇನ್ನು ರಿತೇಶ್ ಪಾಲಿಗೆ ಇದು ಕೇವಲ ಸಿನಿಮಾ ಅಲ್ಲ. ಬದಲಿಗೆ ದಶಕದ ಕನಸು. ವಿಶೇಷ ಅಂದರೆ ಇದೇ ಕನಸಿಗೆ ಇವರ ಕಿರಿಯ ಮಗ ರಾಹಿಲ್ ಕೂಡ ಜೊತೆಯಾಗಿದ್ದಾರೆ. ಶಿವಾಜಿ‌ ಮಹಾರಾಜರ ಬಾಲ್ಯದ ಪಾತ್ರವನ್ನು ನಿರ್ವಹಿಸಿದ್ದಾರೆ.

ಸದ್ಯ ರಿತೇಶ್ ದೇಶಮುಖ್ ಅವರ ಅಭಿಮಾನಿಗಳ ಕುತೂಹಲಕ್ಕೆ ಈ ವಿಷಯ ಕಾರಣವಾಗಿದ್ದು, ರಾಹಿಲ್ ಅಭಿನಯವನ್ನು ಬೆಳ್ಳಿಪರದೆಯಲ್ಲಿ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಸೋಶಿಯಾ ಮೀಡಿಯಾ ಮೂಲಕ ಚಿತ್ರರಂಗಕ್ಕೆ ಸ್ವಾಗತ ಕೋರುತ್ತಿದ್ದಾರೆ.

ಅಂದ್ಹಾಗೇ ಮೊನ್ನೆ‌ ಮೊನ್ನೆಯಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆಗಲೇ ಹೇಳಿದಂತೆ ರಿತೇಶ್ ಪಾಲಿಗೆ ಇದು ಕೇವಲ ಸಿನಿಮಾ ಅಲ್ಲ ಕನಸು. ತಮ್ಮ ಈ ಕನಸು ನನಸಾಗುತ್ತಿರುವ ಹಿನ್ನೆಲೆ ರಿತೇಶ್ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಣ್ಣೀರು ಹಾಕಿದ್ದಾರೆ. ಜನರ ಆಶೀರ್ವಾದ ಬೇಡಿದ್ದಾರೆ. ಪತಿಯ ಕಣ್ಣೀರಿಗೆ ಜೆನಿಲಿಯಾ ಕೂಡ ವೇದಿಕೆಯಲ್ಲಿ ಭಾವುಕರಾಗಿ ಬಿಕ್ಕಿದ್ದಾರೆ.

legacy-in-making-rahyl-deshmukh-debuts-in-riteish-and-genelia-s-epic-raja-shivaji

ಇನ್ನುಳಿದಂತೆ ''ರಾಜಾ ಶಿವಾಜಿ'' ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ. ಅಫ್ಜಲ್ ಖಾನ್ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಂಡಿದ್ದರೆ, ಶಿವಾಜಿಯ ಅಣ್ಣ ಸಂಭಾಜಿ ಶಹಾಜಿ ಭೋಸಲೆ ಪಾತ್ರದಲ್ಲಿ ಅಭಿಷೇಕ ಬಚ್ಚನ್ ಮಿಂಚಿದ್ದಾರೆ. ವಿದ್ಯಾ ಬಾಲನ್ (ಬಡಿ ಬೇಗಂ), ಭಾಗ್ಯಶ್ರೀ (ಜೀಜಾಬಾಯಿ) ಮತ್ತು ಫರ್ದೀನ್ ಖಾನ್ (ಶಹಜಹಾನ್) ಪಾತ್ರವನ್ನು ನಿರ್ವಹಿಸಿದ್ದಾರೆ.

ಇವರಷ್ಟೇ ಅಲ್ಲ ಮಹೇಶ್ ಮಾಂಜ್ರೇಕರ್, ಸಚಿನ್ ಖೆಡೇಕರ್, ಕೂಡ ಚಿತ್ರದಲ್ಲಿದ್ದಾರೆ. ಇನ್ನು ಸಲ್ಮಾನ್ ಖಾನ್ ಕೂಡ ಚಿತ್ರದಲ್ಲಿ ವಿಶೇ‍ಷವಾದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ ಎನ್ನುವ ಸುದ್ದಿ ಇದೆ. ನಿಜಕ್ಕೂ ಸಲ್ಮಾನ್ ಖಾನ್ ಈ ಚಿತ್ರದಲ್ಲಿದ್ದಾರಾ..? ಈ ಪ್ರಶ್ನೆಗೆ ಉತ್ತರ ಚಿತ್ರ ತೆರೆಗೆ ಬಂದ ನಂತರವಷ್ಟೇ ಗೊತ್ತಾಗಲಿದೆಯಾದರೂ ಸಲ್ಮಾನ್ ಮತ್ತು ರಿತೇಶ್ ನಡುವೆ ಒಳ್ಳೆಯ ಬಾಂಧವ್ಯ ಇದೆ. ಹೀಗಾಗಿ ಸಲ್ಮಾನ್ ಖಾನ್ ಆಕ್ಟ್ ಮಾಡಿದ್ದರೂ ಮಾಡಿರಬಹುದು. ಆ ಸಾಧ್ಯತೆ ಖಂಡಿತವಾಗಿಯೂ ಇದೆ.

ಇನ್ನೂ ಟ್ರೇಲರ್ ನೋಡಿದರೆ ನಿಮಗೆ ಚಿತ್ರಕ್ಕೆ ಸುರಿದ ಹಣದ ಅಂದಾಜು ಲೆಕ್ಕ ಸಿಗುತ್ತೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿ ಬಂದಿರುವ ಈ ಚಿತ್ರವನ್ನು ಸಂತೋಷ್ ಶಿವನ್ ತಮ್ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ. ಹೆಸರಾಂತ ಸಂಗೀತ ಜೋಡಿ ಅಜಯ್-ಅತುಲ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಹೀಗೆ ಹತ್ತಾರು ವಿಶೇಷತೆಗಳನ್ನೊತ್ತು ಬರುತ್ತಿರುವ ''ರಾಜಾ ಶಿವಾಜಿ'' ಇದೇ ಮೇ 1ರಂದು ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕರ ದಿನದ ಪ್ರಯುಕ್ತ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ರಿತೇಶ್ ದೇಶಮುಖ್ ಅವರ ಈ ಪ್ರಯತ್ನಕ್ಕೆ ಜನ ಮನ್ನಣೆ ಸಿಗುತ್ತಾ..? ಬಾಕ್ಸಾಫೀಸ್‌ನಲ್ಲಿ ಈ ''ರಾಜಾ ಶಿವಾಜಿ'' ಅಬ್ಬರಿಸುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

English summary
Like father, like son! Rahyl Deshmukh joins parents Riteish and Genelia in the historical saga Raja Shivaji. Discover the details behind his powerful debut as the young warrior king and the Deshmukh family's dream project.
Read more about: ritesh deshmukh nepotism
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X